Keto Diet : ಕೀಟೋ ಡಯಟ್ ಎಂದರೇನು ? ಫಿಗರ್ ಮೆಂಟೇನ್ ಮಾಡಲು ಮೊರೆ ಹೋಗುವ ಕೀಟೋ ಎಷ್ಟು ಸೇಫ್ ?

Keto Diet: ನೋಡಲು ಸ್ಲಿಮ್ ಆಗಿರಬೇಕು ಎಂಬ ಕಾರಣಕ್ಕೆ ಜನರು ಡಯಟ್ ನ ಮೊರೆ ಹೋಗುತ್ತಾರೆ. ಹಲವರು ಜಿಮ್​ನತ್ತ ಮುಖ ಮಾಡಿದರೆ, ಮತ್ತೆ ಕೆಲವರು ಡಯಟ್​ನತ್ತ ಸಾಗುತ್ತಾರೆ. ಅದರಲ್ಲೂ ಸಿನಿತಾರೆಯರು ಒಳ್ಳೆ ಲುಕ್ ಹಾಗೂ ಸಿನಿಮಾ ಆಫರ್ ಗಾಗಿ ಡಯಟ್ ಮಾಡಿ ಸ್ಲಿಮ್ ಆಗಿರುತ್ತಾರೆ. ಡಯಟ್ ಗಳಲ್ಲಿ ಭಾರೀ ಫೇಮಸ್ ಆಗೀರೋದು ಕೀಟೊ ಡಯಟ್ (Keto Diet). ಈ ಡಯಟ್ ಬಗ್ಗೆ ನಿಮಗೆಷ್ಟು ಗೊತ್ತು? ಈ ಲೇಖನದ ಮೂಲಕ ಮಾಹಿತಿ ತಿಳಿಯಿರಿ

 

ಅಂದಹಾಗೆ, ಸ್ಯಾಂಡಲ್‌ವುಡ್‌ (sandalwood) ನಟ ವಿಜಯರಾಘವೇಂದ್ರ (Vijaya raghavendra) ಪತ್ನಿ ಸ್ಪಂದನಾ ಅವರು ಹೃದಯಾಘಾತದಿಂದ (heart attack) ಮೃತಪಟ್ಟಿರುವುದಕ್ಕೆ ಕೀಟೊ ಡಯಟ್ ಕಾರಣ ಎಂಬ ಮಾತು ಕೇಳಿಬರುತ್ತಿದೆ. ಹೌದು, ಸ್ಪಂದನ (Spandan) ಅವರು 40 ವರ್ಷದ ಆಸುಪಾಸಲ್ಲಿ ಇರುವ ಕಾರಣ ಆಹಾರ ಮತ್ತು ಲೈಫ್ ಸ್ಟೈಲ್ (life style) ಕಾರಣದಿಂದ ಅವರ ತೂಕ ಏರಿತ್ತು. ಇತ್ತೀಚೆಗೆ ಸ್ಪಂದನ ಅವರು ತಮ್ಮ ತೂಕ ಇಳಿಸಿಕೊಂಡಿದ್ದರು. ಅವರು ತೂಕ ಇಳಿಸಿಕೊಳ್ಳಲು (weight loss) ಮೊರೆ ಹೋದದ್ದು ಕೀಟೋ ಡಯಟ್. ಮತ್ತು ಜಿಮ್ಮಿನಲ್ಲಿ ಹೆಚ್ಚು ಕಾಲ ಕಳೆಯುತ್ತಿದ್ದರು. ಹಾಗೆ ಕಾಲ ಕಳೆದು ಬರೋಬ್ಬರಿ 16 ಕೆಜಿ ತೂಕ ಇಳಿಸಿಕೊಂಡಿದ್ದರು ಎನ್ನುವ ಮಾಹಿತಿ ಲಭ್ಯ ಆಗಿದೆ. ಇದುವೇ ಅವರ ಸಾವಿಗೆ ಮುನ್ನುಡಿ ಬರೆದಿತ್ತಾ ಎನ್ನುವ ಬಲವಾದ ಶಂಕೆ ಇದೀಗ ವ್ಯಕ್ತವಾಗುತ್ತಿದೆ.

 

ಕೀಟೋ ಡಯಟ್ ಎಂದರೇನು ?

 

ಕೀಟೊ ಡಯಟ್ ಅನ್ನು ಕಡಿಮೆ ಕಾರ್ಬ್ ಕೀಟೊ ಡಯಟ್ (Low-Carb Keto Diet) ಎಂದು ಕರೆಯಲಾಗುತ್ತದೆ. ಕಡಿಮೆ ಕಾರ್ಬೋಹೈಡ್ರೇಟ್ ಇರುವ ಹೆಚ್ಚಿನ ಕೊಬ್ಬಿನ ಮತ್ತು ಹೆಚ್ಚಿನ ಪ್ರೋಟೀನ್ ಅಂಶಗಳನ್ನು ಉಳ್ಳ ಆಹಾರ ಪದ್ಧತಿಯೇ ಕಿಟೋ ಡಯಟ್.

 

ಈ ಆಹಾರ ಕ್ರಮಗಳನ್ನು ಅನುಸರಿಸುವುದರಿಂದ ನಮ್ಮ ಯಕೃತ್ತಿನಲ್ಲಿ ಕೀಟೋನ್ ಉತ್ಪತ್ತಿಯಾಗುತ್ತದೆ. ದೇಹದ ಕೊಬ್ಬನ್ನು ಕರಗಿಸುವಲ್ಲಿ ಇದು ತುಂಬಾ ಪರಿಣಾಮಕಾರಿ. ಇದರಿಂದ ಕೇವಲ 10 ದಿನಗಳಲ್ಲಿ ಗರಿಷ್ಠ ತೂಕವನ್ನು ಕಳೆದುಕೊಳ್ಳಬಹುದು ಎನ್ನಲಾಗಿದೆ. ಈ ಆಹಾರ ಕ್ರಮದಲ್ಲಿ ಸಂಪೂರ್ಣ ಕೊಬ್ಬಿನ ಆಹಾರಗಳನ್ನು ಹೆಚ್ಚು ಸೇವಿಸಲಾಗುತ್ತದೆ. ಕಡಿಮೆ ಪ್ರೋಟೀನ್ ಮತ್ತು ಅತೀ ಕಡಿಮೆ ಕಾರ್ಬೋಹೈಡ್ರೇಟ್‌ ಆಹಾರಗಳನ್ನು ಸೇವಿಸಲಾಗುತ್ತದೆ. ಈ ಡಯಟ್‌ನಲ್ಲಿ ಸಂಪೂರ್ಣವಾಗಿ ಸಕ್ಕರೆಯಂಶವಿರುವ ಆಹಾರಗಳನ್ನು ಬಿಡುವುದರಿಂದ ರಕ್ತದಲ್ಲಿ ಸಕ್ಕರೆ ಮತ್ತು ಇನ್ನುಲಿನ್‌ ಮಟ್ಟದಲ್ಲಿ ಇಳಿಕೆಯಾಗುತ್ತದೆ. ಹಾಗಾಗಿ ತೂಕ ಇಳಿಸಿಕೊಳ್ಳುವವರಿಗೆ ಡಯಾಬಿಟೀಸ್‌ ಇರುವವರಿಗೆ ನೆಚ್ಚಿನ ಡಯಟ್‌ ಇದಾಗಿದೆ.

 

ಪರ್ಯಾಯ ಔಷಧ ಅಡಿಯಲ್ಲಿ ಕೀಟೋಜೆನಿಕ್ ಅಥವಾ ಕೀಟೋ ಆಹಾರವನ್ನು ವಿವಿಧ ರೋಗಗಳ ಚಿಕಿತ್ಸೆಯಲ್ಲಿ ಬಳಕೆ ಮಾಡಲಾಗುತ್ತದೆ. ಅಮೆರಿಕಾದಲ್ಲಿ ಮಧುಮೇಹ ನಿಯಂತ್ರಿಸಲು ಮತ್ತು ಮಕ್ಕಳಲ್ಲಿ ಅಪಸ್ಮಾರ ಚಿಕಿತ್ಸೆಗಾಗಿ ಈ ಆಹಾರ ಬಳಸಲಾಗುತ್ತಿತ್ತು. ಈ ಆಹಾರವು ಕ್ಯಾನ್ಸರ್, ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ ಮತ್ತು ಆಲ್ಝೈಮರ್ನ ಕಾಯಿಲೆಯಲ್ಲೂ ಪರಿಣಾಮಕಾರಿ ಎನ್ನಲಾಗಿದೆ.

 

ಕೀಟೊ ಡಯಟ್‌ ಪಾಲಿಸಬೇಕಿದ್ದರೆ ಏನು ಮಾಡಬೇಕು?

 

• ಕಡಿಮೆ ಕಾರ್ಬೋಹೈಡ್ರೇಟ್ ತರಕಾರಿಗಳಾದ ಕೋಸುಗಡ್ಡೆ, ಹೂಕೋಸು, ಎಲೆಕೋಸುಗಳನ್ನು ಹೆಚ್ಚು ತಿನ್ನಬೇಕು.

• ಬಟರ್​ಫ್ರೂಟ್ ಗಳನ್ನು ಹೆಚ್ಚಾಗಿ ಸೇವಿಸಿ.

• ಮೀನು, ಸೀಗಡಿಗಳು, ಏಡಿ (ಸೀಫುಡ್​) ಇತ್ಯಾದಿಗಳನ್ನು ಹೆಚ್ಚು ಸೇವಿಸಿ.

• ಚಿಕನ್, ಮಾಂಸಹಾರಗಳು ಕಾರ್ಬೋಹೈಡ್ರೇಟ್ ಪ್ರಮಾಣವು ತುಂಬಾ ಕಡಿಮೆಯಾಗಿದೆ.

• ಮೊಟ್ಟೆಯಲ್ಲಿ ಕಾರ್ಬೋಹೈಡ್ರೇಟ್ ತುಂಬಾ ಕಡಿಮೆ ಇರುತ್ತದೆ.

• ಗ್ರೀಕ್ ಮೊಸರು. 150 ಗ್ರಾಂ ಗ್ರೀಕ್​ ಮೊಸರಿನಲ್ಲಿ 5 ಗ್ರಾಂ ಕಾರ್ಬೋಹೈಡ್ರೇಟ್‌ ಹೊಂದಿರುತ್ತದೆ.

• ಈ ಆಹಾರಗಳಲ್ಲಿ ಫ್ಯಾಟ್ (ಕೊಬ್ಬು) ಅಂಶ ಹೆಚ್ಚಿದ್ದರೂ ಕಾರ್ಬೋಹೈಡ್ರೇಟ್​ ಅಂಶಗಳು ಕಡಿಮೆ ಪ್ರಮಾಣದಲ್ಲಿದೆ.

• ಕೆಟೋಜೆನಿಕ್ ಆಹಾರವು ಸರಾಸರಿ 70 ರಿಂದ 80 ಪ್ರತಿಶತ ಕೊಬ್ಬು, 5 ರಿಂದ 10 ಪ್ರತಿಶತ ಕಾರ್ಬೋಹೈಡ್ರೇಟ್ ಮತ್ತು ಒಟ್ಟು ದೈನಂದಿನ ಕ್ಯಾಲೊರಿಗಳಲ್ಲಿ 10 ರಿಂದ 20 ಪ್ರತಿಶತ ಪ್ರೋಟೀನ್‌ ಬೇಕು.

• ಆಹಾರದಲ್ಲಿ 2000 ಕ್ಯಾಲೋರಿ ಅಗತ್ಯವಿದ್ದರೆ, ಅದು ಸುಮಾರು 165 ಗ್ರಾಂ ಕೊಬ್ಬು, 40 ಗ್ರಾಂ ಕಾರ್ಬೋಹೈಡ್ರೇಟ್ಗಳು ಮತ್ತು 75 ಗ್ರಾಂ ಪ್ರೋಟೀನ್ ಹೊಂದಿರಬೇಕು.

 

ತೂಕ ನಷ್ಟಕ್ಕೆ ಕೀಟೋ ಡಯಟ್ ಹೇಗೆ ಕೆಲಸ ಮಾಡುತ್ತದೆ?

 

ಕಿಟೋ ಡಯಟ್‌ನಲ್ಲಿ ದಿನಕ್ಕೆ 50 ಗ್ರಾಂಗಿಂತ ಕಡಿಮೆ ಕಾರ್ಬೋಹೈಡ್ರೇಟ್‌ಗಳನ್ನು ಸೇವಿಸಿದಾಗ, ದೇಹದಲ್ಲಿ ಗ್ಲುಕೋಸ್‌ ಅಂಶ ಖಾಲಿಯಾಗುತ್ತದೆ. ಅಲ್ಲದೇ ಸಕ್ಕರೆಯ ಅಂಶ ಬೇಗನೇ ಬಳಸಲ್ಪಡುತ್ತದೆ. ನಂತರ ದೇಹವು ಶಕ್ತಿಗಾಗಿ ಪ್ರೋಟೀನ್ ಮತ್ತು ಕೊಬ್ಬನ್ನು ವ್ಯಯಿಸಲು ಆರಂಭಿಸುತ್ತದೆ. ದೇಹದಲ್ಲಿ ಕೊಬ್ಬಿನ ಅಂಶ ಕಡಿಮೆಯಾಗುತ್ತಾ ಬಂದಾಗ ನೀವು ತೂಕವನ್ನು ತೂಕವನ್ನು ಕಳೆದುಕೊಳ್ಳಬಹುದು. ಇದನ್ನು ಕೆಟೋಸಿಸ್ ಎಂದು ಕರೆಯಲಾಗುತ್ತದೆ.

 

ಕಿಟೋ ಡಯಟ್ ಅಡ್ಡಪರಿಣಾಮಗಳೇನು ? (Keto diet effects)

 

• ಈ ಕಿಟೋ ಆಹಾರ ಕ್ರಮವು ಕೆಲವರಿಗೆ ಮಾತ್ರ ಹಿಡಿಸುತ್ತದೆ. ಇನ್ನು ಕೆಲವರಲ್ಲಿ ವ್ಯತಿರಿಕ್ತ ಪರಿಣಾಮ ಬೀರುವುದು ಎಂದು ಹೇಳಲಾಗುತ್ತಿದೆ.

• ಕಿಟೋ ಆಹಾರ ಕ್ರಮ ಪಾಲನೆ ಮಾಡುವುದರಿಂದ ದೇಹಕ್ಕೆ ಪ್ರಮುಖವಾಗಿ ಬೇಕಾಗಿರುವಂತಹ ನಿದ್ರೆಯ ಮೇಲೆ ಪರಿಣಾಮವಾಗುತ್ತದೆ.

• ಕೊಬ್ಬು ಅತಿಯಾಗಿ ಸೇವನೆ ಮಾಡುವ ಪರಿಣಾಮದಿಂದ ಜೀರ್ಣಕ್ರಿಯೆ ಮೇಲೂ ಪರಿಣಾಮ ಬೀರಬಹುದು.

• ದೇಹದಲ್ಲಿ ಕಾರ್ಬೋಹೈಡ್ರೇಟ್‌ಗಳ ಕೊರತೆಯಿಂದಾಗಿ ಇದು ದೇಹದ ಸ್ನಾಯುಗಳಲ್ಲಿ ಸಮಸ್ಯೆಗಳನ್ನು ಉಂಟುಮಾಡುತ್ತದೆ.

• ತಲೆನೋವು, ಭಾರ ಅಥವಾ ವಾಂತಿ ಭಾವನೆ ಕೂಡ ಕೀಟೋ ಡಯಟ್‌ನ ಅಡ್ಡಪರಿಣಾಮಗಳಾಗಬಹುದು.

• ಕೀಟೊ ಆಹಾರದಿಂದ ನಿಮಗೆ ಕಡಿಮೆ ಹಸಿವಾಗುತ್ತದೆ.

• ಈ ಡಯಟ್‌ನಲ್ಲಿ ದೇಹದಲ್ಲಿ ಸಂಗ್ರಹಣೆಯಾದ ಹೆಚ್ಚುವರಿ ಕೊಬ್ಬನ್ನು ದೇಹವು ಕರಗಿಸಿಕೊಳ್ಳುವಾಗ ನಿಮ್ಮ ಮೂತ್ರಪಿಂಡಗಳ ಮೇಲೆ ಹೆಚ್ಚು ಒತ್ತಡ ಉಂಟಾಗಬಹುದು.

• ಪೌಷ್ಟಿಕಾಂಶದ ಕೊರತೆ ಉಂಟಾಗಬಹುದು.

ಇದನ್ನೂ ಓದಿ : ಸ್ಪಂದನಾ ಚಾಡಿ ಬುರುಕಿ ಎಲ್ಲರ ಮುದ್ದಿನ ಅಚ್ಚು – ಅಣ್ಣ ಕಾಂಗ್ರೆಸ್ ನಾಯಕ ರಕ್ಷಿತ್ ಶಿವರಾಂ ಬಾಲ್ಯ ಹೇಗಿತ್ತು ಗೊತ್ತೇ ?

Comments are closed.