Bipasha Basu: ಬಾಲಿವುಡ್‌ ನಟಿ ಬಿಪಾಶ ಬಸು ಮಗುವಿನ ಹೃದಯದಲ್ಲಿ ಎರಡು ರಂಧ್ರ! ಈ ಕಾಯಿಲೆ ಸಂಭವಿಸಲು ಕಾರಣವೇನು? ತಿಳಿಯಿರಿ

Bollywood news Actress Bipasha Basu Reveals Daughter Devi Was Born With Two Holes In Her Heart

Bipasha Basu: ಬಾಲಿವುಡ್‌ ಚಿತ್ರರಂಗದ ಖ್ಯಾತ ನಟಿ ಬಿಪಾಶಾ ಬಸು (Bipasha Basu) ಹಾಗೂ ಆಕೆಯ ಪತಿ ಕರಣ್‌ ಸಿಂಗ್‌ ಗ್ರೋವರ್‌ ಅವರು ಇತ್ತೀಚೆಗೆ ತಮ್ಮ ಮಗಳ ಬಗ್ಗೆ ಕೆಲವೊಂದು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹೇಳಿದ್ದಾರೆ. ಇದರಲ್ಲಿ ಮುಖ್ಯವಾಗಿರುವುದು ನಟಿ ಬಿಪಾಶ ಬಸು ಮಗು ಹುಟ್ಟುವ ಸಂದರ್ಭದಲ್ಲಿ ಹೃದಯದಲ್ಲಿ ಎರಡು ರಂಧ್ರಗಳಿತ್ತು ಎಂದು. ಈ ಕುರಿತು ಬಿಪಾಶ ಅವರೇ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಿದ್ದಾರೆ. ಮಗಳು ದೇವಿ ಹುಟ್ಟಿದ ಮೂರೇ ದಿನದಲ್ಲಿ ಆಕೆಗೆ ಈ ವಿಷಯ ಗೊತ್ತಾಗಿದ್ದು, ಈ ವಿಷಯ ಕೇಳಿ ತೀವ್ರ ಕುಸಿದು ಹೋಗಿದ್ದೆ ಎಂದು ಹೇಳಿದ್ದಾರೆ.

ಈ ಸುದ್ದಿ ಹಂಚಿಕೊಳ್ಳಲು ಇಷ್ಟವಿರಲಿಲ್ಲ. ಆದರೂ ಹೇಳಿದೆ ಎಂದು ನಟಿ ಹೇಳಿದ್ದಾರೆ. ಈ ಹೃದ್ರೋಗಕ್ಕೆ ಕಾರಣವೇನು? ಮತ್ತು ಇದನ್ನು ತಡೆಯುವ ರೀತಿ ಹೇಗೆ ? ಬನ್ನಿ ತಿಳಿಯೋಣ.

ದೆಹಲಿಯ ರಾಜೀವ್‌ ಗಾಂಧಿ ಕ್ಯಾನ್ಸರ್‌ ಆಸ್ಪತ್ರೆಯ ಡಾ.ಅಜಿತ್‌ ಜೈನ್‌ ಅವರು ಹೇಳಿರುವ ಪ್ರಕಾರ, ಯಾವಾಗ ಮಗುವಿನ ಅಂಗಾಂಗ ಗರ್ಭದಲ್ಲಿ ರೂಪುಗೊಳ್ಳುತ್ತದೆಯೋ, ಅದೇ ಸಮಯ ಹೃದಯ ಕೂಡಾ ರೂಪುಗೊಳ್ಳುತ್ತದೆ. ಈ ಬೆಳವಣಿಗೆಯ ಸಂದರ್ಭದಲ್ಲಿ ಯಾವುದೇ ರೀತಿಯ ದೋಷವಿದ್ದರೆ ಇದರ ಪರಿಣಾಮವನ್ನು ಹೃದಯ ಅಥವಾ ಇತರ ಖಾಯಿಲೆಗಳಲ್ಲಿ ರಂಧ್ರದ ರೂಪದಲ್ಲಿ ಕಾಣಬಹುದು, ಈ ಸಮಸ್ಯೆಗೆ ಶಸ್ತ್ರಚಿಕಿತ್ಸೆ ಮಾತ್ರ ಮದ್ದು ಎಂದು ಹೇಳಿದ್ದಾರೆ ತಜ್ಞರು.

ಈ ರೀತಿಯ ಸಮಸ್ಯೆಯನ್ನು ವೆಂಟ್ರಿಕುಲರ್‌ ಸೆಪ್ಟಲ್‌ ಡಿಫೆಕ್ಟ್‌ (ventricular septal defect) ಎಂದು ಕರೆಯಲಾಗುತ್ತದೆ. ಬೆಳವಣಿಗೆಯ ಸಮಯದಲ್ಲಿ ಕಾಣುವ ದೋಷಗಳು ಹೃದಯದ ರಂಧ್ರಕ್ಕೆ ಕಾರಣವಾಗುತ್ತದೆ. ಹೃದಯದ ಬೆಳವಣಿಗೆ ನಾಲ್ಕು ಕೋಣೆಗಳನ್ನು ಒಳಗೊಂಡಿದ್ದು, ಎರಡೂ ಬದಿಗಳಿಗೆ ಸಂಪರ್ಕ ಉಂಟು ಮಾಡುತ್ತದೆ. ಅವುಗಳು ಸರಿಯಾಗಿ ಸಂಪರ್ಕಿಸದಿದ್ದರೆ ಈ ರೀತಿಯ ಹೃದಯ ಸಂಬಂಧಿ ಸಮಸ್ಯೆಗಳು ಕೂಡಾ ಕಾಣಿಸಿಕೊಳ್ಳುತ್ತದೆ. ಪೌಷ್ಠಿಕಾಂಶದ ಕೊರತೆ ಅಥವಾ ಇನ್ನಿತರ ಕಾರಣಗಳು ಹೃದಯದಲ್ಲಿ ರಂಧ್ರ ಉಂಟು ಮಾಡಬಹುದು ಎಂದು ತಜ್ಞರು ಹೇಳುತ್ತಾರೆ.

ಇತ್ತೀಚಿನ ದಿನಗಳಲ್ಲಿ ಗರ್ಭಿಣಿಯರಿಗೆ ಟೈಪ್‌ 1 ಮತ್ತು ಟೈಪ್‌ 2 ಡಯಾಬಿಟಿಸ್‌ ಸಾಮಾನ್ಯವಾಗಿ ಕಂಡು ಬರುತ್ತದೆ. ಸಕ್ಕರೆಯನ್ನು ನಿಯಂತ್ರಣ ಮಾಡದಿದ್ದರೆ, ಮಗುವಿಗೆ ಹುಟ್ಟಿನಿಂದ ಹೃದಯ ಸಂಬಂಧಿ ಸಮಸ್ಯೆಗಳು ಕಾಣಿಸುತ್ತದೆ. ಮಹಿಳೆಯ ದೇಹದಲ್ಲಿ ಇನ್ಸುಲಿನ್‌ ಮಟ್ಟ ಏರಿದರೆ ಮಗುವಿನ ಬೆಳವಣಿಗೆಗೆ ಅಡಚಣೆಯಾಗುತ್ತದೆ ಎಂದು ವೈದ್ಯರು ಹೇಳುತ್ತಾರೆ.

ಗರ್ಭಾವಸ್ಥೆಯಲ್ಲಿ ಮದ್ಯಪಾನ ಮಾಡುವುದು ಮಗುವಿನಲ್ಲಿ ಸಿಎಚ್‌ಡಿ ಸಮಸ್ಯೆ ಹೆಚ್ಚಿಸುತ್ತದೆ. ಇದು ಹೃದಯ ಸಂಬಂಧಿ ದೋಷಕ್ಕೆ ಸಂಬಂಧಿಸಿದೆ. ವಂಶವಾಹಿಯಾಗಿಯೂ ಈ ಹೃದಯದಲ್ಲಿ ರಂಧ್ರಗಳು ಕಾಣಸಿಗುತ್ತದೆ ಎಂದು ತಜ್ಞರು ಹೇಳುತ್ತಾರೆ. ಹಾಗಾಗಿ ಇದೆಲ್ಲ ಬರದಂತೆ ತಡೆಯಲು ಗರ್ಭಾವಸ್ಥೆಯಲ್ಲಿ ಅನೇಕ ವಿಷಯಗಳ ಕುರಿತು ಬಹಳಷ್ಟು ಕಾಳಜಿ ವಹಿಸುವುದು ಮುಖ್ಯ.

ಇದನ್ನೂ ಓದಿ: “ಕರಿಯರ್‌ನಲ್ಲಿ ಪ್ರಮೋಷನ್ ಬೇಕಂದ್ರೆ ಅದು ಬ್ರಾಡ್‌ ಆಗಿ ಇರಬೇಕು ಎಂದ ನಾಯಕಿ ನಟಿ ” ಅಬ್ಬ….ಹೀಗೂ ಉಂಟಾ ?!

Comments are closed.