CT Ravi: ಸಿ ಟಿ ರವಿ ಬಿಜೆಪಿ ರಾಜ್ಯಾಧ್ಯಕ್ಷ ಆಸೆ ಲಗಾಟಿ, ಕಾರಣ ಹೇಳದೆಯೇ ಕಾರಣ ತೋರಿಸಿದೆ ಹೈ ಕಮಾಂಡ್
Latest news CT Ravi's name is often heard for the post of BJP state president
CT Ravi: ಕರ್ನಾಟಕ ಚುನಾವಣೆ (Assembly Election)ಮುಕ್ತಾಯಗೊಂಡು, ರಾಜ್ಯದಲ್ಲಿ ಜಯಭೇರಿ ಬಾರಿಸಿದ ಕಾಂಗ್ರೆಸ್ ಸರ್ಕಾರ ರಚನೆಯಾಗಿ 3 ತಿಂಗಳಾಗುತ್ತಿದ್ದರೂ, ಬಿಜೆಪಿ ಇನ್ನೂ ವಿಪಕ್ಷ ನಾಯಕ (Opposition Party leader) ಹಾಗೂ ರಾಜ್ಯಾಧ್ಯಕ್ಷರನ್ನ (BJP State President) ಘೋಷಿಸಿಲ್ಲ. ಕಳೆದ ಎರಡು ಮೂರು ದಿನಗಳಿಂದ ಹಿರಿಯ ನಾಯಕ ಸಿ.ಟಿ. ರವಿ( CT Ravi) ಹೆಸರು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಹೆಚ್ಚಾಗಿ ಕೇಳಿಬರುತ್ತಿದೆ. ಆದರೆ ಇದೀಗ ಸಿಟಿ ರವಿ ಅವರ ಬಹುದೊಡ್ಡ ಕನಸಿಗೆ ಹೈಕಮಾಂಡ್ ತಣ್ಣೀರೆರೆಚಿದೆ ಎಂಬ ಮಾತು ಕೇಳಿ ಬಂದಿದೆ.
ರಾಜ್ಯ ಬಿಜೆಪಿಯು ಸದ್ಯಕ್ಕೆ ರಾಜ್ಯಾಧ್ಯಕ್ಷರ(State president ) ಘೋಷಣೆ ಮಾಡಲ್ಲ ಎಂದಿದೆ. ವಿಪಕ್ಷ ನಾಯಕನ ಆಯ್ಕೆ ಬಳಿಕವೇ ರಾಜ್ಯಾಧ್ಯಕ್ಷರ ಆಯ್ಕೆ ಆಗಲಿದೆ ಎಂಬ ಮಾಹಿತಿ ಲಭಿಸಿದೆ. ಪದಾಧಿಕಾರಿಗಳು, ಶಾಸಕರು, ಸಂಸದರ ಜೊತೆ ಚರ್ಚೆ ಮಾಡಿ ಅಂತಿಮವಾಗಿ ಕೋರ್ ವಿಪಕ್ಷ ನಾಯಕನ ಆಯ್ಕೆ ಬಗ್ಗೆ ಕಮಿಟಿ ಸಭೆಯಲ್ಲಿ ತೀರ್ಮಾನ ಮಾಡಲಾಗುತ್ತೆ ಎನ್ನಲಾಗಿದೆ.
ಕರ್ನಾಟಕದಿಂದ ಏಕೈಕ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಸಿಟಿ ರವಿ ಅವರನ್ನು ರಾಷ್ಟ್ರೀಯ ಮಂಡಳಿಯಿಂದ ಕೈಬಿಡಲಾಗಿದೆ. ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲಿನ ಬಳಿಕ ಈ ನಿರ್ಧಾರ ಹೊರಬಿದ್ದಿದೆ. ಆದರೆ ಈ ವೇಳೆ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ನೀಡಲಾಗುತ್ತದೆ ಎನ್ನಲಾಗಿತ್ತು.
ರಾಜ್ಯದಲ್ಲಿ ತಮ್ಮದೇ ಸರ್ಕಾರವಿದ್ದರು ಸಿಟಿ ರವಿ ಅವರು ಚಿಕ್ಕಮಗಳೂರಿನಲ್ಲಿ ಸೋಲುಂಡಿದ್ದರು. ತಮಿಳುನಾಡು ಬಿಜೆಪಿ ಪ್ರಬಾರಿಯಾಗಿಯೂ ಸಿಟಿ ರವಿ ಅವರು ನಿರೀಕ್ಷಿತ ಸಾಧನೆ ತೊರಲು ಆಗಲಿಲ್ಲ ಎಂಬ ಅಂಶವೂ ಇದೆ ಎನ್ನಲಾಗಿದೆ. ಬಿಜೆಪಿ ಭದ್ರಕೋಟೆಯಂತೆ ಕಾಣುತ್ತಿದ್ದ ಜಿಲ್ಲೆಯಲ್ಲಿ ಒಂದು ಕ್ಷೇತ್ರದಲ್ಲಿಯೂ ಬಿಜೆಪಿ ಗೆಲ್ಲಲು ಸಾಧ್ಯವಾಗದಿರುವುದು ಬಿಜೆಪಿಗೆ ಮುಖಭಂಗವನ್ನು ಉಂಟು ಮಾಡಿತ್ತು.
ಈ ಎಲ್ಲದರ ನಡುವೆ ಮಾಜಿ ಶಾಸಕ ಸಿಟಿ ರವಿ ಅವರು ದೆಹಲಿಗೆ ಭೇಟಿ ನೀಡಿದ್ದಾರೆ. ಅವರು ಹೈಕಮಾಂಡ್ ಭೇಟಿಗೂ ಅವಕಾಶ ಕೇಳಿದ್ದಾರೆ ಎನ್ನಲಾಗಿದೆ. ಆದರೆ ಇದುವರೆಗೂ ಹೈಕಮಾಂಡ್ ಭೇಟಿಗೆ ಸಾಧ್ಯವಾಗಿಲ್ಲ. ಸೋಲುಂಡಿರುವ ಸಿಟಿ ರವಿ ಅವರಿಗೆ ರಾಜ್ಯದಲ್ಲಿ ರಾಜ್ಯಾಧ್ಯಕ್ಷದ ಸ್ಥಾನದ ಬದಲಾಗಿ ಬೇರೆ ಒಂದು ಸ್ಥಾನ ನೀಡುವ ಬಗ್ಗೆಯೂ ಚರ್ಚೆ ನಡೆದಿದೆಯಂತೆ ಎಂದು ತಿಳಿದು ಬಂದಿದೆ.
ವಿರೋಧ ಪಕ್ಷದ ನಾಯಕ ಆಯ್ಕೆ ಮಾಡಿ ಆ ಬಳಿಕ ರಾಜ್ಯಾಧ್ಯಕ್ಷ ಸ್ಥಾನ ಆಯ್ಕೆ ಮಾಡುವ ನಿರ್ಧಾರ ಕೈಗೊಂಡಿದೆ. ಏಕೆಂದರೆ ನೂತನವಾಗಿ ಆಯ್ಕೆಯಾಗುವ ರಾಜ್ಯಾಧ್ಯಕ್ಷರಿಗೆ ಲೋಕಸಭಾ ಚುನಾವಣೆಯೂ ಬಹುದೊಡ್ಡ ಸವಾಲಾಗಬಹುದು. ಈ ಹಿನ್ನೆಲೆಯಲ್ಲಿ ಹೈಕಮಾಂಡ್ ನಾನಾ ಆಯಾಮಗಳಲ್ಲಿ ಚಿಂತನೆ ನಡೆಸಿ ಆಯ್ಕೆಯನ್ನು ಅಂತಿಮ ಗೊಳಿಸುವ ಅವಕಾಶವಿದೆ. ಸಿ ಟಿ ರವಿ ಸೇರಿದಂತೆ ಹಲವು ನಾಯಕರು ರಾಜ್ಯದ್ಯಕ್ಷ ರೇಸ್ನಲ್ಲಿದ್ದು, ಯಾರಿಗೆ ಹೈಕಮಾಂಡ್ ಮಣೆ ಹಾಕುತ್ತದೆ ಎಂಬುದನ್ನು ಮುಂದೆ ಕಾದುನೋಡಬೇಕಿದೆ.
ಇದನ್ನು ಓದಿ: Accident: ವೇಗವಾಗಿ ಚಾಲನೆ ಮಾಡಿದ ಪರಿಣಾಮ 8 ಬೈಕ್ಗೆ ಗುದ್ದಿ, ಮರಕ್ಕೆ ಡಿಕ್ಕಿ ಹೊಡೆದ ಕಾರು, ಚಾಲಕ ಪರಾರಿ
Comments are closed.