Viral news: ರೀಲ್ಸ್ ಮಾಡಲು 68 ನೇ ಮಹಡಿ ಹತ್ತಿದ ವ್ಯಕ್ತಿ! ಅದೇ ಕೊನೆ, ದುರಂತ ಅಂತ್ಯಗೀಡಾದ!
Viral news young man died after falling from the 68th floor To make reels
Viral news: ಸಾಹಸ ಮಾಡಲು ಸಾವಿರಾರು ದಾರಿಗಳು ಇವೆ. ಸಾಹಸ ಮಾಡುವುದು ತಪ್ಪೇನು ಅಲ್ಲ. ಆದರೆ ಹುಚ್ಚು ಸಾಹಸ ಯಾವತ್ತಿಗೂ ಒಳ್ಳೆಯದಲ್ಲ. ಉದಾಹರಣೆಗೆ ಗಗನಚುಂಬಿ ಕಟ್ಟಡವನ್ನು ಏರುವ ವಿಡಿಯೋಗಳನ್ನು ಮಾಡಿರುವ ಬಗ್ಗೆ (Viral news) ಕೇಳಿರಬಹುದು ಮತ್ತು ನೋಡಿರಬಹುದು.
ಹಾಗೆಯೇ ಫ್ರಾನ್ಸ್‌ನ ಡೇರ್‌ಡೆವಿಲ್ ರೆಮಿ ಲುಸಿಡಿ ಅವರು, ನೋಡಲು ಕೂಡ ಕಷ್ಟವಾಗುತ್ತಿದ್ದ ಕಟ್ಟಡಗಳನ್ನು ನೋಡನೋಡುತ್ತಿದ್ದಂತೆಯೇ ಸರಸರವಾಗಿ ಏರಿ ಅದರ ವಿಡಿಯೋಗಳು ಹಾಗೂ ಫೋಟೋಗಳನ್ನು ಇನ್ಸ್‌ಟಾಗ್ರಾಮ್‌ನಲ್ಲಿ 30 ವರ್ಷದ ರೆಮಿ ಲುಸಿಡಿ ಪೋಸ್ಟ್ ಮಾಡುತ್ತಿದ್ದ. ಇನ್ನು ಇನ್ಸ್‌ಟಾಗ್ರಾಮ್‌ನಲ್ಲಿ ರೆಮಿ ಲುಸಿಡಿ 3 ಸಾವಿರಕ್ಕಿಂತ ಅಧಿಕ ಫಾಲೋವರ್‌ಗಳನ್ನು ಹೊಂದಿದ್ದು, ತಮ್ಮೆಲ್ಲಾ ಫೋಟೋ ವಿಡಿಯೋಗಳು ಇಂಥ ಸಾಹಸದ ಕುರಿತಾಗಿಯೇ ಇದೆ.
ಸದ್ಯ ತನ್ನ ಹೈ ರೈಸ್ ಕಟ್ಟಡಗಳ ಸ್ಟಂಟ್‌ಗಳ ಮೂಲಕವೇ ಹೆಸರುವಾಸಿಯಾಗಿದ್ದ ರೆಮಿ ಲುಸಿಡಿ, ಹಾಂಕಾಂಗ್‌ನಲ್ಲಿ ಅಂಥದ್ದೇ ಪ್ರಯತ್ನ ಮಾಡುವ ಯತ್ನದಲ್ಲಿ 68ನೇ ಮಹಡಿಯಿಂದ ಅಂದಾಜು 721 ಫೀಟ್ ಎತ್ತರಿಂದ ಬಿದ್ದು ಸಾವು ಕಂಡಿದ್ದಾರೆ.
ಹೌದು, ಹಾಂಕಾಗ್‌ನಲ್ಲಿನ ಟ್ರಗುಂಟರ್ ಟವರ್ ಸಂಕೀರ್ಣವನ್ನು ಏರುವಾಗ ರೆಮಿ ಲುಸಿಡಿ ಆಯತಪ್ಪಿ ಬಿದ್ದು ಸಾವು ಕಂಡಿದ್ದಾರೆ ಎಂದು ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ.
ರೆಮಿ ಲುಸಿಡಿ ಸ್ಥಳದಲ್ಲಿಯೇ ಸಾವು ಕಂಡಿದ್ದಾರೆ. ಕಟ್ಟದ ಟಾಪ್ ಫ್ಲೋರ್‌ನಲ್ಲಿದ್ದ ಪೆಂಟ್‌ಹೌಸ್ ತನಕ ತಲುಪಿದ್ದ ರೆಮಿ ಲುಸಿಡಿ ಅಲ್ಲಿನ ಕಿಟಕಿಯನ್ನು ಬಡಿದು ಮನೆಯ ಒಳಗಿನವರನ್ನು ಕರೆದಿದ್ದರು. ಆದರೆ, ಒಳಗಿನ ವ್ಯಕ್ತಿ ಹೊರಗೆ ಬಂದು ಸಹಾಯ ಮಾಡಲು ವೇಳೆಗಾಗಲೇ ರೆಮು ಲುಸಿಡಿ ಆಯತಪ್ಪಿ ಕೆಳಗೆ ಬಿದ್ದಿದ್ದಾರೆ ಎನ್ನಲಾಗಿದೆ.
ಜಗತ್ತಿನ ಸಾಕಷ್ಟು ಗಗನಚುಂಬಿ ಕಟ್ಟಡಗಳನ್ನು ಏರಿದ ದಾಖಲೆ ಹೊಂದಿರುವ ರೆಮಿ ಲುಸಿಡಿ, ಕ್ರೇನ್‌ಗಳು, ವಿದ್ಯುತ್ ಟ್ರಾನ್ಸಮಿಟರ್ ಟವರ್‌ಗಳು, ರೇಡಿಯೋ ಟವರ್‌ಗಳನ್ನು ಏರಿದ ದಾಖಲೆ ಹೊಂದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ರೆಮಿ ಎಂಜಿಮಾ ಎನ್ನುವ ಹೆಸರಿನಿಂದ ಗುರುತಿಸಿಕೊಂಡಿದ್ದ ರೆಮಿ ಲುಸಿಡಿ, ಟಾಪ್ ಫ್ಲೋರ್‌ನ ಪೆಂಟ್‌ಹೌಸ್‌ಗೆ ಒಳಗೆ ಹೋಗುವ ಯತ್ನದಲ್ಲಿ ವಿಫಲವಾಗಿ ಸಾವು ಕಂಡಿದ್ದಾರೆ.
ಮಾಹಿತಿ ಪ್ರಕಾರ, ವಸತಿ ಸಂಕೀರ್ಣದ ಸಮೀಪ ಬಂದಿದ್ದ ರೆಮಿ ಲುಸಿಡಿ, ಅಲ್ಲಿನ ಭದ್ರತಾ ಸಿಬ್ಬಂದಿಗೆ 40ನೇ ಮಹಡಿಯಲ್ಲಿರುವ ತನ್ನ ಸ್ನೇಹಿತನ ಭೇಟಿಗೆ ಬಂದಿದ್ದಾಗಿ ತಿಳಿಸಿದ್ದರು. 68ನೇ ಮಹಡಿಗೆ ಹೋಗಿ ಅಲ್ಲಿಂದ ಫೋಟೋ ತೆಗೆದುಕೊಳ್ಳುವ ಪ್ರಯತ್ನದಲ್ಲಿ ರೆಮಿ ಕುಸಿದು ಬಿದ್ದಿದ್ದಾರೆ. ಆದರೆ, 40ನೇ ಮಹಡಿಯಲ್ಲಿದ್ದ ತನ್ನ ಸ್ನೇಹಿತ ಎಂದಿರುವ ವ್ಯಕ್ತಿಗೆ ರೆಮಿ ಲುಸಿಡಿಯ ಪರಿಚಯವೇ ಇದ್ದಿರಲಿಲ್ಲ. ಭದ್ರತಾ ಸಿಬ್ಬಂದಿಯ ವಿಚಾರಣೆಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ರೆಮಿ ಸುಳ್ಳು ಹೇಳಿರಬಹುದು ಎನ್ನಲಾಗಿದೆ.
ಇನ್ನು ಬಿಲ್ಡಿಂಗ್‌ನ ಸಿಸಿಟಿವಿ ಫೂಟೇಜ್‌ಗಳ ಪ್ರಕಾರ, ಎಲವೇಟರ್‌ನಿಂದ 49ನೇ ಮಹಡಿಯಲ್ಲಿ ಹೊರಬರುವ ರೆಮಿ, ಬಳಿ, ಮೆಟ್ಟಿಲುಗಳ ಮೂಲಕ 68ನೇ ಮಹಡಿಗೆ ಏರುವ ಪ್ರಯತ್ನ ಮಾಡಿದ್ದರು.
ಆದರೆ 68ನೇ ಮಹಡಿಗೆ ಏರಿದಾಗ, ಮೇಲ್ಛಾವಣಿಯ ಬಾಗಿಲು ಲಾಕ್ ಆಗಿತ್ತು. ಆದರೆ ಲುಸಿಡಿ ಅದನ್ನು ಬಲವಂತವಾಗಿ ತೆರೆದಿದ್ದರು. ರೂಫ್‌ಟಾಪ್‌ನಿಂದ ಮತ್ತೊಂದು ಛಾಯಾಚಿತ್ರವನ್ನು ತೆಗೆದುಕೊಳ್ಳಲು ನಿರ್ಧಾರ ಮಾಡಿದ್ದರು. ಅವರ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಲಾದ ಅನೇಕ ಫೋಟೋಗಳಲ್ಲಿ ಅವರು ಕಟ್ಟಡ ತುತ್ತತುದಿಯಲ್ಲಿ ನಿಂತು ತೆಗೆದುಕೊಂಡಿರುವ ಫೋಟೋಗಳನ್ನು ಕಾಣಬಹುದು. ಇಲ್ಲಿಯೂ ಕೂಡ ಅದೇ ಪ್ರಯತ್ನ ಮಾಡುತ್ತಿದ್ದರು.
ಮೂಲಗಳ ಪ್ರಕಾರ, ಅವರ ದೇಹ ನೆಲಕ್ಕೆ ಬೀಳುವವರೆಗೂ, ವಸತಿ ಸಂಕೀರ್ಣದಲ್ಲಿ ಯಾವ ಮನೆಯವರಿಗೂ ಈತ ಕೆಳಕ್ಕೆ ಬೀಳುತ್ತಿರುವುದು ಕಂಡಿರಲಿಲ್ಲ ಎಂಬ ಮಾಹಿತಿ ದೊರೆತಿದೆ.
ಇದನ್ನು ಓದಿ: Conjunctivitis: ಕರ್ನಾಟಕದಲ್ಲಿ ಹೆಚ್ಚಾಯ್ತು ಮದ್ರಾಸ್ ಐ ರೋಗ! ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಪ್ರಕಟ!!!