Liquor Brands: ಭಾರತೀಯರಿಗೆ ಅತ್ಯಂತ ಪ್ರಿಯವಾಗೋ ಮದ್ಯ ಯಾವುದು ಗೊತ್ತಾ?! ಇಂಟೆರೆಸ್ಟಿಂಗ್ ಮಾಹಿತಿ ಇಲ್ಲಿದೆ

Latest news intresting news Do you know which liquor is most loved by Indians

Liquor Brands: ಮದ್ಯ ಅಂದರೆ ಸಾಕು ಜನರಿಗೆ ಎಲ್ಲಿಲ್ಲದ ವ್ಯಾಮೋಹ. ಮದ್ಯದ ಮಾಯೆ ಎಷ್ಟರಮಟ್ಟಿಗಿದೆ ಎಂದರೆ ಮನೆ ಮಾರಿಯಾದ್ರೂ ಕೊಳ್ಳೋ ಜನರು ನಮ್ಮ ನಡುವೆ ಇದ್ದಾರೆ. ದುಡ್ಡು ಎಷ್ಟೇ ಇರಲಿ, ಸಂಜೆ ಆಗುತ್ತಿದ್ದಂತೆ ಒಂದು ಎರಡು ಮೂರು- ಹೀಗೆ ಭಟ್ಟಿ ಇಳಿಸಿದಂತೆ ಬಾರ್ ಗೆ ದೌಡಾಯಿಸಿ ಫ್ರೆಂಡ್ಸ್ ಜೊತೆಗೆ ತಮ್ಮ ಮನಸೋ ಇಚ್ಛೆ ಹೊಟ್ಟೆಗೆ ಪರಮಾತ್ಮ ಇಳಿದರೆ ಮಾತ್ರ ಮದ್ಯ ಪ್ರಿಯರಿಗೆ ಏನೋ ಒಂದು ಸಮಾಧಾನ. ಎಣ್ಣೆ ಪ್ರಿಯರ ಬಳಿ ಯಾವುದೆಲ್ಲ ಬ್ರಾಂಡ್ ಇದೆ (Liquor Brands) ಅಂತ ಕೇಳಿದ್ರೆ ಸಾಕು ಪಟಾಪಟ್ ಅಂತ ಉದ್ದದ ಲಿಸ್ಟ್ ಕೊಟ್ಟು ಬಿಡ್ತಾರೆ!.

ಕುಡಿಯೋದು ಒಂದು ರೀತಿಯ ಚಟ ಎಂದರೆ ತಪ್ಪಾಗಲಾರದು. ಇದು ಭಾರತೀಯರ ಜೀವನ ಶೈಲಿಯ ಒಂದು ಭಾಗ ಎಂದೇ ಹೇಳಬಹುದು. ಕೆಲವರು ದಿನನಿತ್ಯ ಮದ್ಯಪಾನ (While drinking alcohol) ಮಾಡಿದರೆ, ಇನ್ನು ಕೆಲವರು ಅಪರೂಪಕ್ಕೆ ಮಾಡುವುದುಂಟು. ಆದರೆ, ಭಾರತದ ಮದ್ಯಪ್ರಿಯರಿಗೆ ಇಷ್ಟವಾಗುವ ಮದ್ಯ ಯಾವುದು ಗೊತ್ತಾ ?! ಇಲ್ಲಿದೆ ನೋಡಿ ಇಂಟರ್‌ಸ್ಟಿಂಗ್ ಮಾಹಿತಿ

ಇತ್ತೀಚಿನ ವರ್ಷಗಳಲ್ಲಿ ವೈನ್ ಮತ್ತು ಜಿನ್ ಸೇವನೆಯು ಭಾರೀ ಹೆಚ್ಚಳವಾಗಿದೆ. ಆದರೂ ಭಾರತದ ಮದ್ಯ ಮಾರುಕಟ್ಟೆಯಲ್ಲಿ ವಿಸ್ಕಿಯಿಂದ ಪ್ರಾಬಲ್ಯ ಇದೆ ಎನ್ನಲಾಗಿದೆ. ಭಾರತದಲ್ಲಿ ಸ್ಪಿರಿಟ್ ಮಾರಾಟದ ಸುಮಾರು ಮೂರನೇ ಎರಡರಷ್ಟು ಭಾಗವನ್ನು ವಿಸ್ನಿಯಿಂದ ಲೆಕ್ಕಹಾಕಲಾಗುತ್ತದೆ. ಅದರೊಳಗೆ, ಮಾರುಕಟ್ಟೆಯ 85% ಅನ್ನು ಬೆಲೆ ಸ್ಪೆಕ್ಟ್ರಮ್ನ ಕೆಳತುದಿಯಲ್ಲಿ 10 ದೇಶೀಯವಾಗಿ ಬೆಳೆದ ಬ್ರಾಂಡ್ಗಳು ನಿಯಂತ್ರಿಸುತ್ತವೆಯಂತೆ. ಸಂಶೋಧನೆಗಳ ಪ್ರಕಾರ, ಅತಿ ಹೆಚ್ಚು ವೋಡ್ಕಾ ಮತ್ತು ವೈನ್ ಅನ್ನು ಸೇವನೆ ಮಾಡುತ್ತಾರೆ ಎಂದು ಹೇಳಲಾಗಿದೆ.

ಆಮದು ಮಾಡಿದ ವಿಸ್ಕಿಯ ಪಾಲು ಪೈನ 3.3% ಎಂದು ಅಂದಾಜಿಸಲಾಗಿದೆ. ವಿಸ್ಕಿ ಮಾರುಕಟ್ಟೆಯಲ್ಲಿ 2027 ರ ವೇಳೆಗೆ 3.7% ಕ್ಕೆ ಏರುವ ನಿರೀಕ್ಷೆಯಿದೆ ಎನ್ನಲಾಗಿದೆ. ಮುಂದಿನ ಐದು ವರ್ಷಗಳಲ್ಲಿ 3.8%ಕ್ಕೆ ತಲುಪಬಹುದು ಅಂದಾಜಿಸಲಾಗಿದೆ. ಆದರೂ ಭಾರತೀಯ ನಿರ್ಮಿತ ವಿಸ್ಕಿ ಮಾರುಕಟ್ಟೆಯ 96% ಅನ್ನು ನಿಯಂತ್ರಿಸುತ್ತದೆ ಎಂದು ತಿಳಿದುಬಂದಿದೆ.‌ ಪೋಡಾ ಮಾರಾಟದಲ್ಲಿ 34% ಬಂದಿದ್ದು, ಇದು ರುಚಿಗಳಿಂದ ಪ್ರೇರಿತವಾಗಿದೆಯಂತೆ.

 

ಇದನ್ನು ಓದಿ: Baby Born: ವಿಶ್ವದ ಅತ್ಯಂತ ಪುಟಾಣಿ ಮಗು, 5 ತಿಂಗಳಲ್ಲೇ ಹುಟ್ಟಿದ ಇದರ ತೂಕ ಕೆಲವೇ ಗ್ರಾಂಗಳು ! 

Leave A Reply

Your email address will not be published.