ಹಾಸನ: ಕಾರು-ಲಾರಿ ಮಧ್ಯೆ ಭೀಕರ ಅಪಘಾತ!! ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಮೃತ್ಯು

Latest news Hassan Four people died on the spot in accident between a car and a lorry

Share the Article

ಕಾರು ಮತ್ತು ಲಾರಿ ಮಧ್ಯೆ ಭೀಕರ ಅಪಘಾತ ಸಂಭವಿಸಿ ನಾಲ್ವರು ಯುವಕರು ಸ್ಥಳದಲ್ಲೇ ಮೃತಪಟ್ಟ ಘಟನೆಯು ಮಂಗಳೂರು-ಬೆಂಗಳೂರು ರಾಷ್ಟೀಯ ಹೆದ್ದಾರಿಯ ಹಾಸನ ಆಲೂರು ತಾಲೂಕಿನ ಈಶ್ವರಹಳ್ಳಿ ಕೂಡಿ ಎಂಬಲ್ಲಿ ಶುಕ್ರವಾರ ಸಂಜೆ ನಡೆದಿದೆ.

ಇಲ್ಲಿನ ರಾಷ್ಟೀಯ ಹೆದ್ದಾರಿಯ ಕಾಮಗಾರಿಯ ಗುತ್ತಿಗೆದಾರರಿಗೆ ಸೇರಿದ್ದ ಲಾರಿ ಹಾಗೂ ಇನ್ನೋವಾ ಕಾರು ಮುಖಾಮುಖಿಯಾಗಿ ಘಟನೆ ಸಂಭವಿಸಿದೆ.

ಮೃತ ಯುವಕರನ್ನು ಕುಪ್ಪಳಿ ಗ್ರಾಮದ ಚೇತನ್, ಅಶೋಕ್, ತಟ್ಟಿಕೆರೆ ಪುರುಷೋತ್ತಮ, ಆಲೂರು ಚಿಗಳೂರು ಗ್ರಾಮದ ದಿನೇಶ್ ಎಂದು ಗುರುತಿಸಲಾಗಿದೆ.

 

 

ಇದನ್ನು ಓದಿ: Nandini Milk: ನಂದಿನಿ ಹಾಲಿನ ದರ 3 ರೂ. ಹೆಚ್ಚಳ ! ಇದೇ ದಿನಾಂಕದಿಂದ ಜಾರಿ 

Leave A Reply