Company MD and CEO murdered: ಹಾಡಹಗಲೇ ಡಬಲ್ ಮರ್ಡರ್ ಗೆ ಬೆಚ್ಚಿ ಬಿದ್ದ ಬೆಂಗಳೂರು, ಐಟಿ ಕಂಪನಿಗೆ ನುಗ್ಗಿ ತಲ್ವಾರ್ ನಿಂದ ಎಂ.ಡಿ ಸಹಿತ ಸಿ.ಇ.ಓ ಬರ್ಬರ ಹತ್ಯೆ !
ಬೆಂಗಳೂರು: ಹಾಡಹಗಲೇ ನಡೆದ ಕೌರ್ಯವೊಂದಕ್ಕೆ ಬೆಂಗಳೂರು ಬೆಚ್ಚಿಬಿದ್ದಿದೆ. ಖಾಸಗಿ ಸಂಸ್ಥೆಯೊಂದಕ್ಕೆ ನುಗ್ಗಿದ ದುಷ್ಕರ್ಮಿಗಳ ತಂಡ ಆ ಕಂಪನಿಯ ಎಂಡಿ ಮತ್ತು ಸಿಇಓನನ್ನು ಬರ್ಬರವಾಗಿ ಹತ್ಯೆ ನಡೆಸಿ ಪರಾರಿ ಆಗಿದ್ದಾರೆ.
ಹತ್ಯೆಗೊಳಗಾದ ವ್ಯಕ್ತಿಗಳನ್ನು ಎರೋನಿಕ್ಸ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಇದರ ಮ್ಯಾನೇಜಿಂಗ್ ಡೈರೆಕ್ಟರ್ ಫಣೀಂದ್ರ ಸುಬ್ರಮಣ್ಯ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿನುಕುಮಾರ್ ಎಂದು ಗುರುತಿಸಲಾಗಿದೆ. ಆರೋಪಿಗಳ ಮೂರು ಜನರ ತಂಡ ಚಾಕು ಮತ್ತು ತಲ್ವಾರ್ ಹಿಡಿದುಕೊಂಡು ಕಂಪನಿ ಪ್ರವೇಶಿಸಿದ್ದರು. ತದನಂತರ ಕಂಪನಿಯ ಎಂಡಿ ಮತ್ತು ಸಿಇಓವನ್ನು ಕೊಚ್ಚಿ ಕೊಲೆ ಮಾಡಿ ಕಾಂಪೌಂಡ್ ಹಾರಿ ಪರಾರಿಯಾಗಿದ್ದಾರೆ.
ಈ ಮೊದಲು ಅದೇ ಕಂಪನಿಯಲ್ಲಿ ಸ್ಟಾಫ್ ಆಗಿದ್ದ ಫೆಲಿಪ್ಸ್ ಎಂಬಾತ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಈತ ಕಳೆದ ಕೆಲ ಸಮಯಗಳ ಹಿಂದೆ ಸುಬ್ರಮಣ್ಯ ಕಂಪನಿಯನ್ನು ತ್ಯಜಿಸಿ ಸ್ವಂತ ಉದ್ಯಮಕ್ಕೆ ಕೈ ಹಾಕಿದ್ದ. ಆದರೆ ಅಲ್ಲಿ ಇದೇ ಏರಾನಿಕ್ಸ್ ಕಂಪನಿಯಿಂದ ತೀವ್ರ ಪೈಪೋಟಿ ಎದುರಿಸಿದ್ದ. ಎಲ್ಲಿ ತನ್ನ ಉದ್ಯಮಕ್ಕೆ ಎರೋನಿಕ್ಸ್ ಮೀಡಿಯಾ ಅಡ್ಡಿಯಾಗುತ್ತದೆಯೋ ಎಂದು ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಫಿಲಿಪ್ಸ್ ಜೋಕರ್ ಫಿಲಿಪ್ಸ್ ಹಿಂದಿ ಖ್ಯಾತಿ ಹೊಂದಿದ್ದು ತನ್ನದೇ ಯೂಟ್ಯೂಬ್ ಕೂಡ ನಡೆಸುತ್ತಿದ್ದ.
ಹಂತಕ ಹತ್ಯೆ ಮಾಡೋದಕ್ಕೂ ಮುನ್ನವೇ ತನ್ನ ಇನ್ಸ್ಟಾ
ಖಾತೆಯಲ್ಲಿ ಸ್ಟೇಟಸ್ ಹಾಕಿದ್ದ ಅನ್ನೋ ಸತ್ಯ ಬಯಲಾಗಿದೆ. ಫಣೀಂದ್ರ, ವಿನು ಕುಮಾರ್ ಹಾಗೂ ಫೆಲಿಕ್ಸ್ ಈ ಹಿಂದೆ ಬನ್ನೇರುಘಟ್ಟ ರಸ್ತೆಯ ಜಿ ನೆಟ್ ಅನ್ನೊ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಕೆಲ ದಿನಗಳ ಹಿಂದೆ ಕೆಲಸ ಬಿಟ್ಟು ಫಣೀಂದ್ರ ಪ್ರತ್ಯೇಕವಾಗಿ ಕಂಪನಿ ತೆರೆದಿದ್ದರು. ವಿನುಕುಮಾರ್ ಆಲ್ಲಿ ಸಿಇಒ ಆಗಿ ನೇಮಕವಾಗಿದ್ದರು.
ಟಿಕ್‌ಟಾಕ್ ಸ್ಟಾರ್ ಆಗಿ ಫೇಮಸ್ ಆಗಿದ್ದ ಫೆಲಿಕ್ಸ್ ಅಲಿಯಾಸ್ ಜೋಕರ್ ಫೆಲಿಕ್ಸ್ ಕೊಲೆ ಮಾಡುವುದಕ್ಕೂ ಕೆಲವೇ ಸಮಯದ ಮುನ್ನ ಸ್ಟೇಟಸ್ ಹಾಕಿದ್ದಾನೆ. ʻಈ ಪ್ರಪಂಚದಲ್ಲಿ ನಂಬಿಕೆ ದ್ರೋಹಿಗಳು ಹೆಚ್ಚಾಗಿದ್ದಾರೆ. ದ್ರೋಹಿಗಳನ್ನು ಗಾಯ ಪಡಿಸುತ್ತೇನೆ, ಕೆಟ್ಟ ವ್ಯಕ್ತಿಗಳನ್ನ ಹರ್ಟ್ ಮಾಡುತ್ತೇನೆ ;ಒಳ್ಳೆ ವ್ಯಕ್ತಿಗಳನ್ನು ಹರ್ಟ್ ಮಾಡೋದಿಲ್ಲ ಅಂತಾ ಸ್ಟೇಟಸ್ ಹಾಕಿದ್ದ ಫೆಲಿಕ್ಸ್ !
ಒಂದು ಕೊಲೆ ಮೂರನೇ ಮಹಡಿಯಲ್ಲಿ ನಡೆದಿದೆ. ಇನ್ನೊಂದು ಕೊಲೆ ತಳ ಮಹಡಿಯಲ್ಲಿ ನಡೆದಿದೆ. ಮೊದಲ ಕೊಲೆಯನ್ನು ಮೂರನೇ ಮಹಡಿಯಲ್ಲಿ ಮಾಡಿದ ಆರೋಪಿಗಳು ನಂತರ ತಳಮಹಡಿಗೆ ಓಡಿ ಬಂದಿದ್ದರು. ಅಲ್ಲಿ ಎರಡನೆಯ ಕೊಲೆಯನ್ನು ಮಾಡಿ ಕಾಂಪೌಂಡ್ ಹಾರಿ ಪರಾರಿಯಾಗಿದ್ದಾರೆ.
ಘಟನಾ ಸ್ಥಳಕ್ಕೆ ಅಮೃತಹಳ್ಳಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹೆಚ್ಚಿನ ಮಾಹಿತಿ ಇನ್ನಷ್ಟೇ ಹೊರ ಬರಬೇಕಿದ್ದು, ಪೊಲೀಸರು ಆರೋಪಿಯ ಪತ್ತೆಗೆ ತಂಡಗಳನ್ನು ರಚಿಸಿ ತನಿಖೆ ಆರಂಭಿಸಿದ್ದಾರೆ.