Home News Rahul Gandhi: ರಾಹುಲ್ ಗಾಂಧಿ ಬಳಿ ನಿಮ್ಮ ಮದುವೆ ಯಾವಾಗ ಎಂದು ಕೇಳಿದ ಬೈಕ್ ಮೆಕ್ಯಾನಿಕ್,...

Rahul Gandhi: ರಾಹುಲ್ ಗಾಂಧಿ ಬಳಿ ನಿಮ್ಮ ಮದುವೆ ಯಾವಾಗ ಎಂದು ಕೇಳಿದ ಬೈಕ್ ಮೆಕ್ಯಾನಿಕ್, ರಾಹುಲ್ ಕೊಟ್ಟ ಉತ್ತರ ಏನು ?

Rahul Gandhi
image source: Twitter

Hindu neighbor gifts plot of land

Hindu neighbour gifts land to Muslim journalist

Rahul Gandhi: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ದಿಲ್ಲಿಯ ಕರೋಲ್ ಬಾಗ್ ನಲ್ಲಿರುವ ಗ್ಯಾರೇಜ್ ಗಳಿಗೆ ದಿಢೀರ್ ಭೇಟಿ ನೀಡಿದರು. ಅಷ್ಟೇ ಅಲ್ಲ ಅಲ್ಲಿ ನೆರದಿದ್ದ ಜನರೊಂದಿಗೆ ಸಂವಾದ ನಡೆಸಿದ್ದಾರೆ.ಇದೀಗ ರಾಹುಲ್ ಗಾಂಧಿ ಬೈಕ್‌ ಸರ್ವಿಸ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ.

ಕರೋಲ್ ಬಾಗ್ ನಲ್ಲಿ ಮೆಕ್ಯಾನಿಕ್ ಶಾಪ್ ಗೆ ಭೇಟಿ ನೀಡಿದ ರಾಹುಲ್ ಗಾಂಧಿಯು ಅಂಗಡಿಗಳಲ್ಲಿ ಕೆಲಸ ಮಾಡುವವರಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಆಲಿಸಿದ್ದಾರೆ. ಹಾಗೂ ಮೆಕ್ಯಾನಿಕ್‌ಗಳೊಂದಿಗೆ ಸಂವಾದ ನಡೆಸಿರುವ ಸಂಪೂರ್ಣ ವಿಡಿಯೋ ಬಿಡುಗಡೆಯಾಗಿದೆ.

ರಾಹುಲ್ ಗಾಂಧಿ ಮದುವೆ ಯಾವಾಗ?
ಇದೇ ವೇಳೆ ‘ಯಾವಾಗ ಮದುವೆಯಾಗುತ್ತೀರಾ’ ಎಂದು ಬೈಕ್ ಸರ್ವಿಸ್ ಮಾಡುತ್ತಿದ್ದಾಗ ಮೆಕ್ಯಾನಿಕ್ ಒಬ್ಬರು ಕೇಳಿದ ಪ್ರಶ್ನೆಗೆ ಮುಗುಳ್ನಕ್ಕ ರಾಹುಲ್‌ “ನೋಡೋಣ” ಎಂದು ಉತ್ತರಿಸಿದ ಅವರು, “ನಿಮ್ಮ ಮದುವೆ ಯಾವಾಗ ಎಂದು” ಮೆಕ್ಯಾನಿಕ್ ಗೆ ಪ್ರತಿ ಪ್ರಶ್ನೆ ಮಾಡಿದ್ದಾರೆ. ತಮ್ಮ ಮದುವೆ (Marriage) ಬಗ್ಗೆ ಯಾವುದೇ ಹೆಚ್ಚಿನ ಮಾತುಗಳನ್ನಾಡಿಲ್ಲ.

ರಾಹುಲ್ ಗಾಂಧಿಯ ಫೇವರೆಟ್ ಬೈಕ್ ಯಾವುದು ಗೊತ್ತಾ?
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೂ ಇಷ್ಟದ ಬೈಕ್ ಇದೆ. ರಾಹುಲ್ ಗಾಂಧಿಗೆ ಯಾವ ಬೈಕ್ ಇಷ್ಟ ಎಂಬುದರ ಬಗ್ಗೆ ಮಾಹಿತಿಯು ಈ ವಿಡಿಯೋದಲ್ಲಿ ಬಹಿರಂಗವಾಗಿದೆ. ನಿಮ್ಮಬಳಿ ಯಾವ ಬೈಕ್ ಇದೆ ಎಂದು ರಾಹುಲ್‌ಗೆ ಮೆಕ್ಯಾನಿಕ್ ಒಬ್ಬರು ಪ್ರಶ್ನಿಸಿದರು. ‘ನನ್ನ ಬಳಿ ಕೆಟಿಎಂ390 ಬೈಕ್‌ ಇದೆ. ಆದರೆ ಅದನ್ನು ಓಡಿಸಲು ನನಗೆ ನನ್ನ ಭದ್ರತಾ ಸಿಬ್ಬಂದಿಗಳು ಅನುಮತಿಸದ ಕಾರಣ ಅದು ಬಳಕೆಯಾಗದೇ ಹಾಗೇ ನಿಂತಿದೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಉತ್ತರಿಸಿದ್ದಾರೆ.

ಇನ್ನು ಈ ಕೆಟಿಎಂ 390ಯ ವಿಶೇಷತೆಯ ಬಗ್ಗೆ ನೋಡುವುದಾದರೆ, KTM 390 ಅಡ್ವೆಂಚರ್ ಅನ್ನು ಒರಟಾದ ಭೂಪ್ರದೇಶವನ್ನು ನಿಭಾಯಿಸಲು ವಿನ್ಯಾಸಗೊಳಿಸಲಾಗಿದ್ದು, ಇದರ ಎಂಜಿನ್ ಆರು-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಬರುತ್ತದೆ ಮತ್ತು 9,000rpm ನಲ್ಲಿ 42.9bhp ಗರಿಷ್ಠ ಶಕ್ತಿಯನ್ನು ಮತ್ತು 7,000rpm ನಲ್ಲಿ 37Nm ಗರಿಷ್ಠ ಟಾರ್ಕನ್ನು ಹೊರಹಾಕುತ್ತದೆ. ಇದು 13.7-ಲೀಟರ್ ಇಂಧನ ಟ್ಯಾಂಕ್ ಹೊಂದಿದೆ.

ಇದು 373cc, ಲಿಕ್ವಿಡ್-ಕೂಲ್ಡ್(liquid cold), ಸಿಂಗಲ್-ಸಿಲಿಂಡರ್(single cylinder), OBD-2 ಕಂಪ್ಲೈಂಟ್ ಮೋಟಾರ್‌(complete motor)ನಿಂದ ಚಾಲಿತವಾಗಿದ್ದು, ಇಂಜಿನ್ ಸ್ಲಿಪ್ಪರ್ ಕ್ಲಚ್‌(engine sliper clutch)ನೊಂದಿಗೆ 6-ಸ್ಪೀಡ್ ಟ್ರಾನ್ಸ್‌ಮಿಷನ್(speed transmission) ಮತ್ತು ಇಂಡಿಯಾ-ಸ್ಪೆಕ್ ಮಾದರಿಗೆ ಪ್ರಮಾಣಿತ ಕ್ವಿಕ್‌ಶಿಫ್ಟರ್‌(quick shifter) ಸಂಯೋಗದೊಂದಿಗೆ ಕಾರ್ಯನಿರ್ವಹಿಸುತ್ತದೆ.

ಕೆಟಿಎಂ 390 ಬೈಕ್ ಆರೆಂಜ್, ಫ್ಯಾಕ್ಟರಿ ರೇಸಿಂಗ್ ಬ್ಲೂ ಎಂಬ ಎರಡು ಬಣ್ಣಗಳಲ್ಲಿ ಲಭ್ಯವಿದೆ. ಈ ಬೈಕ್ 28.9 km/l ಮೈಲೇಜ್ ನೀಡುತ್ತದೆ. KTM390 ಬೈಕ್‌ನ ಬೆಲೆ ₹3.14 ಲಕ್ಷ (ಎಕ್ಸ್-ಶೋರೂಂ) ಆಗಿದ್ದು, ಇದು ಹೊಸ ಸ್ಟೈಲಿಂಗ್ ಜೊತೆಗೆ ಹೆಚ್ಚಿನ ಕಾರ್ಯಕ್ಷಮತೆಯನ್ನು ನೀಡುತ್ತದೆ.