Free bus travel: ರಾಜ್ಯದಲ್ಲಿನ್ನೂ ಮಹಿಳೆಯರಂತೆ ಇವರಿಗೂ ಉಚಿತ ಬಸ್ ಪ್ರಯಾಣ !! ಸರ್ಕಾರದ ಹೊಸ ಆದೇಶ!!

latest news political news Free bus travel for them like women in the state also new rules of government

Free bus travel: ದೇಶಾದ್ಯಂತ ಕರ್ನಾಟಕವೂ(Karnataka) ಸೇರಿದಂತೆ ಈಗಾಗಲೇ ಕೆಲವು ರಾಜ್ಯಗಳಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಆದರೀಗ ಈ ಬೆನ್ನಲ್ಲೇ ಕೆಲವು ರಾಜ್ಯಗಳು ಹಿರಿಯನಾಗರಿಗೂ ಉಚಿತ ಬಸ್ ಪ್ರಯಾಣವನ್ನು(Free bus travel) ಕಲ್ಪಿಸಿ ಆದೇಶ ಹೊರಡಿಸಿದೆ.

ಹೌದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಹಿಳೆಯರು ಮತ್ತು ಹಿರಿಯ ನಾಗರಿಕರಿಗಾಗಿ ಹಲವಾರು ಮಹತ್ವದ ಯೋಜನೆಗಳನ್ನು ಜಾರಿಗೊಳಿಸಿದೆ.ಕರ್ನಾಟಕ ಸೇರಿದಂತೆ ಕೆಲವು ರಾಜ್ಯಗಳು ಮಹಿಳೆಯರಿಗೆ ಫ್ರೀ ಬಸ್(Free bus) ಯೋಜನೆ ಜಾರಿಗೆ ತಂದಿವೆ. ಈ ಬೆನ್ನಲ್ಲೇ ಇದೀಗ ಹಿರಿಯ ನಾಗರಿಕರಿಗೆ ಮತ್ತೊಂದು ಗುಡ್​ ನ್ಯೂಸ್​ ದೊರೆತಿದೆ.

ಅದೇನೆಂದರೆ ಇದೀಗ ಹಿರಿಯ ನಾಗರಿಕರು ಬಸ್ ನಲ್ಲಿ ಪ್ರಯಾಣ ಮಾಡುವಾಗ ಪೂರ್ತಿ ಟಿಕೆಟ್(Ticket) ಕೊಳ್ಳವಂತಿಲ್ಲ. ಬದಲಿಗೆ ಅರ್ಧ ಟಿಕೆಟ್ ಮಾತ್ರ ತೆಗೆದುಕೊಳ್ಳಬೇಕು. ಯಾಕೆಂದರೆ ರಾಜ್ಯ ಸರ್ಕಾರ ಟಿಕೆಟ್ ದರವನ್ನು ಕಡಿತಗೊಳಿಸಿದೆ. ಇನ್ಮುಂದೆ ಪ್ರಯಾಣದ ವೇಳೆ ಕೇವಲ ಶೇ.50ರಷ್ಟು ಅಂದರೆ ಅರ್ಧದಷ್ಟು ದರವನ್ನು ಮಾತ್ರ ಪಾವತಿಸಬೇಕಾಗುತ್ತದೆ.

ಆದರೆ ಮುಖ್ಯವಾದ ವಿಚಾರ ಅಂದ್ರೆ ಈ ಹೊಸ ಯೋಜನೆ ಜಾರಿಯಾಗಿರೋದು ಕರ್ನಾಟಕದಲಲ್ಲ. ಹೌದು, ನಮ್ಮ ನೆರೆಯ ರಾಜ್ಯವಾದ ಮಹರಾಷ್ಟ್ರ(Maharasta) ಮತ್ತು ಹರಿಯಾಣಲ್ಲಿ(Hariyana) ಮಾತ್ರ ಈ ಸೇವೆಗಳು ಜಾರಿಗೆ ಬಂದಿವೆ. ಅಲ್ಲಿನ ಸರ್ಕಾರಗಳು ಏಪ್ರಿಲ್ ತಿಂಗಳಲ್ಲಿ ಈ ಸೌಲಭ್ಯವನ್ನು ಪ್ರಾರಂಭಿಸಿವೆ. ನಮ್ಮ ಕರ್ನಾಟಕದಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಕಲ್ಪಿಸಿದಂತೆ ಮಹಾರಾಷ್ಟ್ರದಲ್ಲಿ ‘ಮಹಿಳಾ ಸಮ್ಮಾನ್ ಯೋಜನೆ’ ಅಡಿಯಲ್ಲಿ ಮಹಿಳೆಯರಿಗೆ ಬಸ್ ಟಿಕೆಟ್ ದರವನ್ನು ಶೇ.50ರಷ್ಟು ಕಡಿಮೆ ಮಾಡಲಾಗಿದೆ. ಇದೇ ವೇಳೆ ಹಿರಿಯ ನಾಗರಿಕರಿಗೂ ಈ ಸೌಲಭ್ಯ ನೀಡಲಾಗುತ್ತಿದೆ.

ಹರಿಯಾಣವೂ ಈ ಯೋಜನೆಯನ್ನು ಜಾರಿಗೆ ತಂದಿದೆ. ಈ ಹಿಂದೆ ಹರಿಯಾಣದಲ್ಲಿ 60 ವರ್ಷ ವಯಸ್ಸಿನ ಮಹಿಳೆಯರು ಮಾತ್ರ ಈ ಸೌಲಭ್ಯದ ಪ್ರಯೋಜನವನ್ನು ಪಡೆಯುತ್ತಿದ್ದರು. ಆದರೆ ಇನ್ನು ಮುಂದೆ 65 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ಹಿರಿಯ ನಾಗರಿಕರು ಈ ಪ್ರಯೋಜನವನ್ನು ಪಡೆಯಲಿದ್ದಾರೆ.

ಇನ್ನು ಕರ್ನಾಟಕದಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ಶಕ್ತಿ ಯೋಜನೆ (Shakthi Yojana) ಆರಂಭವಾದಾಗಿನಿಂದಲೂ ಕೂಡ ಸಾರಿಗೆ ಇಲಾಖೆ ಆದಾಯದಲ್ಲಿ 18.01 ಪ್ರತಿಶತ ಹೆಚ್ಚಳ ಕಂಡಿದೆ ಎಂಬುದಾಗಿ ತಿಳಿದು ಬಂದಿದೆ. ಇದನ್ನು ಸಾರಿಗೆ ಇಲಾಖೆಯೇ ಖಚಿತಪಡಿಸಿದೆ. ಅಲ್ಲದೆ ಸಾರಿಗೆ ಇಲಾಖೆಯ ಪ್ರಮುಖ ನಾಲ್ಕು ಅಂಗ ಸಂಸ್ಥೆಗಳಾಗಿರುವ KSRTC, NWKRTC, BMTC ಹಾಗೂ KKRTC ಲಾಭದಲ್ಲಿವೆ ಎಂಬುದಾಗಿ ಕೂಡ ಸುದ್ದಿಗಳು ಕೇಳಿಬಂದಿವೆ.

ಅಂದಹಾಗೆ ಶಕ್ತಿಯೋಜನೆ ಜಾರಿಗೂ ಮುನ್ನ ನಿತ್ಯ 42 ಲಕ್ಷ ಪುರುಷರು ಸಾರಿಗೆ ಬಸ್‍ನಲ್ಲಿ (Male Passengers In Govt Bus) ಸಂಚರಿಸುತ್ತಿದ್ದರು. ಆದರೆ ಶಕ್ತಿ ಯೋಜನೆ ಜಾರಿ ಬಳಿಕ ನಿತ್ಯ ಸರಾಸರಿ 55 ಲಕ್ಷ ಪುರುಷರ ಓಡಾಟ ಜಾಸ್ತಿಯಾಗಿದೆ. ಅಂದರೆ ದಿನಕ್ಕೆ ಸರಾಸರಿ 13 ಲಕ್ಷ ಹೆಚ್ಚಳವಾಗಿದ್ದು, ಗಮನಾರ್ಹ ಬೆಳವಣಿಗೆಯಾಗಿದೆ.

Leave A Reply

Your email address will not be published.