RBI: ಒಂದಕ್ಕಿಂತ ಹೆಚ್ಚು ಬ್ಯಾಂಕ್‌ಗಳಲ್ಲಿ ಅಕೌಂಟ್ ಹೊಂದಿದ್ದೀರಾ? ಹಾಗಿದ್ರೆ RBI ನಿಂದ ಬಂತು ಹೊಸ ರೂಲ್ಸ್!!
latest news New rules from RBI for Multiple bank account holders
RBI: ಭಾರತದ ಪ್ರತಿಯೊಂದು ಬ್ಯಾಂಕು(Bank)ಗಳಿಗೂ ಕೂಡ ಪ್ರಮುಖ ಕೇಂದ್ರ ಬಿಂದು ಆಗಿರುವಂತಹ ಬ್ಯಾಂಕ್ ಎಂದರೆ(RBI) RBI. ಇನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಅಧೀನದಲ್ಲಿ ಇರುವಂತಹ ಬ್ಯಾಂಕುಗಳಲ್ಲೇ ಅಂದರೆ ರಾಷ್ಟ್ರೀಕೃತ ಬ್ಯಾಂಕ್(National banks)ಗಳಲ್ಲಿಯೇ ಜನ ತಮ್ಮ ಖಾತೆಗಳನ್ನು ತೆರೆಯಲು ಬಯಸುತ್ತಾರೆ. ಅಲ್ಲದೆ ಹೆಚ್ಚಿನ ಹಣವನ್ನು ಇಲ್ಲೇ ಠೇವಣಿ ಇಡುತ್ತಾರೆ. ಆದರೀಗ RBI ಕೆಲವು ನಿಯಮಗಳನ್ನು ಜಾರಿಗೊಳಿಸಿದ್ದು, ಒಂದಕ್ಕಿಂತ ಹೆಚ್ಚು ಬ್ಯಾಂಕ್ ಅಕೌಂಟ್ ಹೊಂದಿದವರಿಗೆ ಕೆಲವು ನಿರ್ಬಂಧಗಳನ್ನು ಹೇರಿದೆ.
ಹೌದು, ಇಂದು ಅನೇಕ ಬ್ಯಾಂಕ್‌ಗಳು ಶಾಖೆಗೆ ಭೇಟಿ ನೀಡದೆ ಆನ್‌ಲೈನ್‌ನಲ್ಲಿ ಖಾತೆ ತೆರೆಯುವ ಸೌಲಭ್ಯವನ್ನು ಒದಗಿಸಿವೆ. ಬ್ಯಾಂಕ್ ಖಾತೆ ತೆರೆಯುವ ಪ್ರಕ್ರಿಯೆಯನ್ನೂ ಬ್ಯಾಂಕರ್‌ಗಳು ಸರಳಗೊಳಿಸಿದ್ದಾರೆ. ಅಲ್ಲದೆ ಕೆಲವು ಬ್ಯಾಂಕುಗಳು ಹಲವು ವಿಶೇಷ ಸೌಲಭ್ಯಗಳನ್ನು ಒದಗಿಸುತ್ತವೆ. ಹೀಗಾಗಿ ಬಹುತೇಕ ಮಂದಿ ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳನ್ನು ಹೊಂದಲು ಇಷ್ಟಪಡುತ್ತಾರೆ. ಈ ವೇಳೆ ಒಬ್ಬ ವ್ಯಕ್ತಿಯು ಎಷ್ಟು ಖಾತೆಗಳನ್ನು ಹೊಂದಬಹುದು. ಇದಕ್ಕೇನಾದರೂ ಮಿತಿ ಇದೆಯೇ? ಈ ಬಗ್ಗೆ ರಿಸರ್ವ್ ಬ್ಯಾಂಕ್ ನಿಯಮಗಳು (RBI) ಏನು ಹೇಳುತ್ತವೆ ಗೊತ್ತಾ?
ಎಷ್ಟು ಖಾತೆ ಹೊಂದಬಹುದು?
ಭಾರತೀಯ ರಿಸರ್ವ್ ಬ್ಯಾಂಕ್ ಪ್ರಕಾರ ಪ್ರತಿಯೊಬ್ಬ ವ್ಯಕ್ತಿಯು ನಾಲ್ಕರಿಂದ ಐದು ಖಾತೆಗಳನ್ನು ಹೊಂದಬಹುದು. ಆದರೆ ಅವು ಐದು ಪ್ರತ್ಯೇಕ ಬ್ಯಾಂಕುಗಳಾಗಿರಬೇಕು. ಅಲ್ಲದೆ ಈ ಸಮಯದಲ್ಲಿ ನೀವು ಕೆಲವು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕಾಗುತ್ತದೆ.
ಹೆಚ್ಟು ಖಾತೆ ಹೊಂದಿದ್ದರೆ ಏನಾಗುತ್ತದೆ?
ಬಹು ಬ್ಯಾಂಕ್ ಖಾತೆಗಳನ್ನು ಹೊಂದಿರುವುದು ಹಣಕಾಸಿನ ಯೋಜನೆಯನ್ನು(Economic plan) ಅಸಾಧ್ಯವಾಗಿಸಬಹುದು. ಏಕೆಂದರೆ ಎಲ್ಲಾ ಖಾತೆಗಳಲ್ಲಿ ನಗದು ಬ್ಯಾಲೆನ್ಸ್(Amount balance) ಮತ್ತು ಹಿಂಪಡೆಯುವಿಕೆಯ ಬಗ್ಗೆ ನಿಗಾ ಇಡಲು ನಿಮಗೆ ಕಷ್ಟವಾಗುತ್ತದೆ. ನಿಮ್ಮ ಹಣಕಾಸಿನ ಗುರಿಗಳಿಗೆ ಮೀಸಲಾಗಿರುವ ಒಂದೇ ಖಾತೆಯನ್ನು ಹೊಂದಿರುವ ನೀವು ನಿಮ್ಮ ಯೋಜನೆ ಅಥವಾ ಗುರಿಗಳನ್ನು ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ.
ಯಾವ ಸಮಯದಲ್ಲಿ ಹೆಚ್ಚು ಖಾತೆ ಹೊಂದಿದ್ದರೆ ಉತ್ತಮ:
ಬ್ಯಾಂಕ್ ನೀಡುವ ಪ್ರಯೋಜನಗಳ ಪಟ್ಟಿಯನ್ನು ಹೊಂದುವುದು ಮತ್ತು ವೆಚ್ಚಗಳನ್ನು ಹೋಲಿಸುವುದು ಯಾವಾಗಲೂ ಉತ್ತಮ ಅಭ್ಯಾಸವಾಗುತ್ತದೆ. ಪ್ರಯೋಜನಗಳು ವೆಚ್ಚಕ್ಕಿಂತ ಹೆಚ್ಚಿದ್ದರೆ, ಬ್ಯಾಂಕ್ ಖಾತೆಗಳನ್ನು ನಿರ್ವಹಿಸಲು ಯಾವುದೇ ಅಡ್ಡಿ ಆತಂಕ ಇರುವುದಿಲ್ಲ.
ಹೆಚ್ಟು ಖಾತೆ ಹೊಂದಿದ್ದರೆ ಆಗುವ ಅನಾನುಕೂಲ :
ಬಹು ಬ್ಯಾಂಕ್ ಖಾತೆಗಳನ್ನು ಹೊಂದಿರುವ ನೀವು ನಿಮ್ಮ ಎಲ್ಲಾ ಖಾತೆಗಳಲ್ಲಿ ಕನಿಷ್ಠ ಬ್ಯಾಲೆನ್ಸ್ ನಿರ್ವಹಿಸಲು ಕಷ್ಟವಾಗಬಹುದು. ಪ್ರತಿಯೊಂದು ಉಳಿತಾಯ ಖಾತೆಯು ನಿಮ್ಮ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ನಿರ್ವಹಿಸಲು ತನ್ನದೇ ಆದ ಮಿತಿಯನ್ನು ಹೊಂದಿದೆ. ನೀವು ಆ ಮೊತ್ತವನ್ನು ನಿರ್ವಹಿಸದಿದ್ದರೆ, ಬ್ಯಾಂಕ್ ನಿಮಗೆ ದಂಡದ ಮೊತ್ತವನ್ನು ವಿಧಿಸುತ್ತದೆ. ಇದು ನಿಮಗೆ ಹೆಚ್ಚುವರಿ ಹೊರೆಯಾಗಬಹುದು.
ಇದನ್ನು ಓದಿ: Viral Video: ಕಾರೊಳಗೆ ನಾಯಿಯನ್ನು ಬಿಟ್ಟು ತಾಜ್‌ಮಹಲ್ ವೀಕ್ಷಣೆ, ಉಸಿರುಕಟ್ಟಿ ಪ್ರಾಣ ಬಿಡ್ತು ಶ್ವಾನ