Free current Scheme: ಫ್ರೀ ಕರೆಂಟ್ ಜಾರಿ ಬೆನ್ನಲ್ಲೇ ರಾಜ್ಯದ ಜನರಿಗೆ ಮತ್ತೊಂದು ಗುಡ್ ನ್ಯೂಸ್ !! ಸಚಿವ ಜಾರ್ಜ್ ಘೋಷಣೆ !!

Good news for Karnataka people no deadline for Congress guarantee gruha jyoti registration clarified by minister KJ George

Gruha Jyoti registration: ಕಾಂಗ್ರೆಸ್ ಸರ್ಕಾರ (Congress Govt) ವಿಧಾನಸಭೆ ಚುನಾವಣೆಗೂ(Assembly election) ಮುನ್ನ ಘೋಷಣೆ ಮಾಡಿದ್ದ ಐದು ಗ್ಯಾರಂಟಿಗಳನ್ನು (Five Guarantees) ಒಂದೊಂದಾಗೇ ಅನುಷ್ಠಾನ ಮಾಡುತ್ತಿದೆ. ಶಕ್ತಿ ಯೋಜನೆ ಆಯಿತು ಇದೀಗ ನಿನ್ನೆಯಿಂದ(ಜುಲೈ 1) ಗೃಹಜ್ಯೋತಿ ಅಡಿ ರಾಜ್ಯದ ಜನರಿಗೆ ಫ್ರೀ ಕರೆಂಟ್ ಕೂಡ ಲಭ್ಯವಾಗಲಿದೆ. ಆದರೆ ಈ ಬೆನ್ನಲ್ಲೇ ಇಂಧನ ಸಚಿವ ಕೆ ಜೆ ಜಾರ್ಜ್(K J George) ಗುಡ್ ನ್ಯೂಸ್ ಒಂದನ್ನು ನೀಡಿದ್ದಾರೆ.

ಹೌದು, 200 ಯೂನಿಟ್ ಉಚಿತ ವಿದ್ಯುತ್‌ (200 Unit Electricity) ಪಡೆಯುವ ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಕೆ ಜೂನ್‌ 18 ರಿಂದಲೇ ಆರಂಭವಾಗಿದ್ದು, ಆನ್‌ಲೈನ್‌ನಲ್ಲಿಯೂ ಅರ್ಜಿ ಸಲ್ಲಿಸಬಹುದಾಗಿದೆ. ಅಲ್ಲದೆ ಸೇವಾಸಿಂಧು ಪೋರ್ಟಲ್ ನಲ್ಲೂ ಅರ್ಜಿ ಸಲ್ಲಿಸಬಹುದು. ಇದರಿಂದಾಗಿ ಜನರು ಮುಗಿಬಿದ್ದು ಅರ್ಜಿ ಸಲ್ಲಿಸುತ್ತಿದ್ದಾರೆ. ಈ ನಡುವೆ ‘ಗೃಹಜ್ಯೋತಿ’(Gruhajyoti) ಯೋಜನೆಗೆ ಅರ್ಜಿ ಸಲ್ಲಿಸಲು(Gruha Jyoti registration) ಯಾವುದೇ ಕೊನೆಯ ದಿನಾಂಕ ಇಲ್ಲ, ನೀವು ಯಾವಾಗ ಬೇಕಾದರೂ ಸಲ್ಲಿಕೆ ಮಾಡಹುದು ಎಂದು ಇಂಧನ ಸಚಿವ ಕೆಜೆ ಜಾರ್ಜ್ ಜನರಿಗೆ ತಿಳಿಸಿದ್ದಾರೆ.

ಅಂದಹಾಗೆ ಚಿಕ್ಕಮಗಳೂರು(Chikkamagalure) ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಗೃಹಜ್ಯೋತಿ ಗೊಂದಲಗಳು ಬಗೆಹರಿದಿವೆ. ಸುಮಾರು 85 ರಿಂದ 86 ಲಕ್ಷ ಜನರು ಅರ್ಜಿ ಸಲ್ಲಿಸಿದ್ದಾರೆ. ಪ್ರತಿ ದಿನ ಅರ್ಜಿಗಳು ಬರುತ್ತಿವೆ. ಮುಂದಿನ ತಿಂಗಳು 25 ರ ವರೆಗೆ ಅರ್ಜಿ ಸಲ್ಲಿಸಬಹುದು ಒಂದೊಮ್ಮೆ ಅವರು ಅರ್ಜಿ ಸಲ್ಲಿಸದೇ ಇದ್ದಲ್ಲಿ ಒಂದು ತಿಂಗಳ ಬಿಲ್ ಕಟ್ಟಬೇಕಾಗುತ್ತದೆ. ಮತ್ತೆ ಅವರು ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ. ಆದಷ್ಟು ಬೇಗ ಎಲ್ಲರೂ ಅರ್ಜಿ ಸಲ್ಲಿಸಬೇಕು ಎಂದರು.

ಅಲ್ಲದೆ ಸದ್ಯಕ್ಕೆ ಅರ್ಜಿ ಸಲ್ಲಿಸಲು ಗಡುವನ್ನು ವಿಧಿಸಿಲ್ಲ. ಎರಡರಿಂದ ಮೂರು ತಿಂಗಳು ಸಮಯಾವಕಾಶ ಕೊಡುತ್ತೇವೆ. ಅಷ್ಟರಲ್ಲಿ ಯಾರೂ ಅರ್ಜಿ ಹಾಕದಿದ್ದರೆ ಅರ್ಜಿ ಪಡೆಯುವುದನ್ನು ನಿಲ್ಲಿಸಬೇಕಾಗುತ್ತದೆ. ಭಾಗ್ಯ ಜ್ಯೋತಿ ಯೋಜನೆಯ ಫಲಾನುಭವಿಗಳು ಸಹ ಗೃಹ ಜ್ಯೋತಿ ಲಾಭ ಪಡೆಯಲು ಅರ್ಜಿಯನ್ನು ಸಲ್ಲಿಸಲೇ ಬೇಕಾಗುತ್ತದೆ ಎಂದರು.

ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು ಹಾಗೂ ವಿಧಾನ :
ಬೇಕಾಗುವ ದಾಖಲೆಗಳು-
ವಿದ್ಯುತ್ ಬಿಲ್
ಆಧಾರ್ ಸಂಖ್ಯೆ
ಆಧಾರ್ ಕಾರ್ಡ್ ನಲ್ಲಿರುವ ಪೋನ್ ಸಂಖ್ಯೆಯಿರುವ ಮೊಬೈಲ್.. ಈ ಮೂರು ಇದ್ದರೆ ಸಾಕು..

• Step 1. ಮೊದಲು https://sevasindhugs.karnataka.gov.in/ ಗೆ ಭೇಟಿ ನೀಡಿದರೆ ಗೃಹ ಜ್ಯೋತಿ ಅರ್ಜಿ ತೆರೆದುಕೊಳ್ಳುತ್ತದೆ.
• Step 2. ನಂತರ ಯಾವ ಎಸ್ಕಾಂ- ESCOM ಅಂತ ಟಿಕ್ ಮಾಡಿ
• Step 3. ನಿಮ್ಮ ವಿದ್ಯುತ್ ಬಿಲ್ ನಲ್ಲಿರುವ 10 ಸಂಖ್ಯೆಯ Account ID ಟೈಪ್ ಮಾಡಿ.
• Step 4. ಸ್ವಂತ ಮನೆನಾ ಅಥವಾ ಬಾಡಿಗೆ ಮನೆನಾ ಅಂತ ಟಿಕ್ ಮಾಡಿ
• Step 5. ಆಧಾರ್ ಕಾರ್ಡ್ ನ 12 ಸಂಖ್ಯೆ ಟೈಪ್ ಮಾಡಿ
• Step 6. ನಂತರ ಹೆಚ್ಚಿನ ಸಂಪರ್ಕಕ್ಕಾಗಿ ಫೋನ್ ಸಂಖ್ಯೆ ಟೈಪಿಸಿ.. ಈ ಸಂಖ್ಯೆಗೆ OTP (ಒಟಿಪಿ) ಬರುತ್ತದೆ.. ಅದನ್ನ ಟೈಪಿಸಿ OK ಮಾಡಿದರೆ ಸಾಕು

ನಿಮ್ಮ ಅರ್ಜಿಯ ಒಟ್ಟು ಮಾಹಿತಿಯ ಹೊಸ ಪೇಜ್ ತೆರೆದುಕೊಳ್ಳುತ್ತದೆ. ನಿಮ್ಮ ಅರ್ಜಿಯ ಸಂಖ್ಯೆಯೊಂದಿಗೆ ಸ್ವೀಕೃತಿ ಪ್ರತಿಯ ಪಿಡಿಎಫ್ ಬರುತ್ತದೆ.. ಅದನ್ನ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.

ಇದನ್ನೂ ಓದಿ: Krithi shetty: ಕರಾವಳಿ ಬೆಡಗಿ ಕೃತಿ ಶೆಟ್ಟಿಗೆ ಸ್ಟಾರ್ ನಟನ ಮಗನಿಂದ ಕಿರುಕುಳ.. !! ತೆಲುಗು ಇಂಡಸ್ಟ್ರಿಯಲ್ಲಿ ಏನಿದು ಹೊಸ ಸಮಾಚಾರ..?

Leave A Reply

Your email address will not be published.