Flaying Car: ಬಂದೇ ಬಿಡ್ತು ಹಾರುವ ಕಾರು, ವರ್ಷಗಳ ಸ್ಕೈ-ಫೈ ಕನಸಿಗೆ ಸಿಕ್ಕೇ ಬಿಡ್ತು ಅನುಮೋದನೆ

latest news Flaying Car new technology fully equipped electric car that can fly in the sky

Flaying Car: ಇನ್ನು ಮುಂದೆ ಕಾರಿನ ಮೂಲಕ ಆಕಾಶದಲ್ಲೂ ಹಾರಡಬಹುದಾಗಿದೆ. ನೀವು ರಸ್ತೆಗಳಲ್ಲಿ ಓಡಿಸಬಹುದಾದ ಮತ್ತು ಆಕಾಶದಲ್ಲಿ ಹಾರಿಸಬಹುದಾದ ಸಂಪೂರ್ಣವಾಗಿ ತಯಾರಾಗಿರುವ ಇಲೆಕ್ಟಿಕ್ ಕಾರು (Flaying Car) ಯುಎಸ್ ಸರ್ಕಾರದಿಂದ ಹಾರಲು ಕಾನೂನು ಅನುಮೋದನೆಯನ್ನು ಪಡೆದಿದೆ.

ಹೌದು, ಟ್ರಾಫಿಕ್ ಸಮಸ್ಯೆ ತಪ್ಪಿಸಲು ಅಮೆರಿಕದಲ್ಲಿ ನೂತನವಾಗಿ ಹಾರುವ ಕಾರು ಸಿದ್ಧಪಡಿಸಲಾಗಿದ್ದು, ಪ್ರಸ್ತುತ ಡ್ರೋನ್​ಗಳು ಹಾರಾಡುತ್ತಿರುವ ಈ ಪಟ್ಟಿಗೆ ಸದ್ಯದಲ್ಲೇ ಹಾರುವ ಕಾರುಗಳು ಸೇರ್ಪಡೆಯಾಗಲಿವೆ.

ಅಮೆರಿಕ ಮೂಲದ ಅಲೆಫ್ ಏರೋನಾಟಿಕ್ಸ್ ಸ್ಥಾಪಿಸಿರುವ ಈ ಹಾರುವ ಕಾರಿಗೆ ಅಮೆರಿಕ ಸರ್ಕಾರದಿಂದ ಅನುಮೋದನೆ ಸಿಕ್ಕಿದೆ. ‘ಮಾಡೆಲ್ ಎ’ ಎಂದು ಹೆಸರಾದ ತನ್ನ ಕಾರು ಯುಎಸ್ ಬಾಂಡಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (ಎಫ್‌ಎಇ) ನಿಂದ ವಿಶೇಷ ಏ‌ವರ್ಡಿನೆಸ್ ಪ್ರಮಾಣೀಕರಣವನ್ನು ಪಡೆದಿದೆ ಎಂದು ಘೋಷಿಸಿತು. ಈ ಬೆಳವಣಿಗೆಯು ಬಹುದೊಡ್ಡ ಐತಿಹಾಸಿಕವಾಗಿದೆ.

ಗಾಳಿಯಲ್ಲಿ ಹಾರುವ ವಿಶ್ವದ ಮೊದಲ ಎಲೆಕ್ಟ್ರಿಕ್ ಕಾರು ಇದಾಗಿದೆ. ಬೆಲೆ 3 ಲಕ್ಷ ಡಾಲರ್. ಅಂದ್ರೆ, ನಮ್ಮ ರೂಪಾಯಿ ಲೆಕ್ಕಾಚಾರದಲ್ಲಿ ಇದರ ಮೌಲ್ಯ 2.46 ಕೋಟಿ ರೂಪಾಯಿಗೂ ಹೆಚ್ಚು!.

ಸದ್ಯ 2025ರ ಅಂತ್ಯದ ವೇಳೆಗೆ ಇಂಥ ಕಾರುಗಳು ಗ್ರಾಹಕರಿಗೆ ಲಭ್ಯವಾಗಲಿದೆ ಎಂದು ‘ಅಲೆಫ್’ ಕಂಪನಿ ಹೇಳಿದೆ. ಕ್ಯಾಲಿಫೋರ್ನಿಯಾದ ಸ್ಯಾನ್ ಮಾಟಿಯೊದಲ್ಲಿ ಕಾರನ್ನು ತಯಾರಿಸಲಾಗುತ್ತಿದೆ. ಇದು ಎರಡು ಜನರ ಪ್ರಯಾಣಕ್ಕೆ ಅವಕಾಶ ಕಲ್ಪಿಸುತ್ತದೆ. ಫೆಡರಲ್ ಏವಿಯೇಷನ್ ​​ಅಡ್ಮಿನಿಸ್ಟ್ರೇಷನ್(FAA)ನಿಂದ ಪ್ರಮಾಣೀಕರಿಸಲಾಗಿದೆ ಎಂದು ತಯಾರಕರು ಹೇಳಿದ್ದಾರೆ.

ಟ್ರಾಫಿಕ್ ಸಮಸ್ಯೆ ಮತ್ತು ಅಪಘಾತಗಳನ್ನು ತಡೆಗಟ್ಟಲು ಇದನ್ನು ವಿನ್ಯಾಸಗೊಳಿಸಲಾಗಿದೆ. ಹಾರುವ ಕಾರುಗಳಿಗೆ ಈವರೆಗೆ 440ಕ್ಕೂ ಹೆಚ್ಚು ಆರ್ಡರ್‌ಗಳು ಬಂದಿವೆ ಎಂದು ಕಂಪನಿ ಹೇಳಿಕೊಂಡಿದೆ. ವಿಶ್ವದ ಮೊದಲ ಹಾರುವ ಎಲೆಕ್ಟ್ರಿಕ್ ಕಾರನ್ನು ಒದಗಿಸುವ ಉದ್ದೇಶದಿಂದ ಅಲೆಫ್ ವಿನ್ಯಾಸಗೊಳಿಸಿದೆ.

ಈಗಾಗಲೇ ಸಾಕಷ್ಟು ಮುಂಗಡ ಆರ್ಡರ್​ಗಳು ಬಂದಿವೆ. ಲಂಬವಾಗಿ ಟೇಕ್-ಆಫ್ ಮತ್ತು ಲ್ಯಾಂಡಿಂಗ್ ಸಾಮರ್ಥ್ಯಗಳನ್ನು ಇದು ಹೊಂದಿದೆ. ಗ್ರಾಮೀಣ ಹಾಗೂ ನಗರದ ರಸ್ತೆಗಳಲ್ಲಿ ಓಡಿಸುವ ನಿಟ್ಟಿನಲ್ಲಿ ವಿನ್ಯಾಸಗೊಳಿಸಲಾಗಿದೆ. ಸಾಮಾನ್ಯ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಬಹುದು. ರಸ್ತೆಯಲ್ಲಿ ಗಂಟೆಗೆ 25 ಮೈಲುಗಳಷ್ಟು ದೂರ ಮಾತ್ರ ಚಲಿಸುತ್ತದೆ. ನೀವು ವೇಗವಾಗಿ ಹೋಗಲು ಬಯಸಿದರೆ, ಅದರಲ್ಲಿರುವ ವೈಮಾನಿಕ ಸಾಮರ್ಥ್ಯಗಳನ್ನು ಬಳಸಬಹುದು ಎಂದು ಕಂಪನಿಯ ಸಿಇಒ ಜಿಮ್ ಡುಕೊವ್ನಿ ತಿಳಿಸಿದರು.

ಇದು ವಿಮಾನಗಳಿಗೆ ಹೋಲಿಸಿದರೆ ಒಂದು ಸಣ್ಣ ಹೆಜ್ಜೆ. ಆದ್ರೆ, ಕಾರುಗಳಿಗೆ ಹೋಲಿಕೆ ಮಾಡೋದಾದರೆ ಒಂದು ದೊಡ್ಡ ಹೆಜ್ಜೆಯೇ” ಎಂದು ಜಿಮ್ ಡುಕೊವ್ನಿ ಹೇಳಿದರು. ಒಟ್ಟಿನಲ್ಲಿ ಮಾಡೆಲ್- ಎ ಉತ್ಪಾದನೆಯು 2025ರಲ್ಲಿ ಪ್ರಾರಂಭವಾಗುತ್ತದೆ ಎಂದು ಅಲೆಫ್ ತಿಳಿಸಿದೆ.

ಒಟ್ಟಿನಲ್ಲಿ ಸ್ಕೈ-ಫೈ ಸಿನಿಮಾಗಳಲ್ಲಿ ನೀವು ನೋಡಿದಂತೆಯೇ ಇದೀಗ ಹಾರುವ ಕಾರುಗಳಿಗೆ ಅಧಿಕೃತವಾಗಿ ಅನುಮೋದನೆ ಸಿಕ್ಕಿರುವುದು ಸಂತಸದ ಸಂಗತಿಯಾಗಿದೆ.

 

ಇದನ್ನು ಓದಿ: Anna bhagya Scheme: ಅನ್ನಭಾಗ್ಯದ ಅಕ್ಕಿ ದುಡ್ಡು ಸದ್ಯಕ್ಕಿಲ್ಲ, ಕೊನೆಗೂ ಮಾತು ತಪ್ಪಿದ ಗೌರ್ಮೆಂಟ್.. !! ಅಚ್ಚರಿ ಮೂಡಿಸಿದ ಸಿಎಂ ಹೇಳಿಕೆ? 

Leave A Reply

Your email address will not be published.