Titanic ship: ಭಾರಿ ದುರಂತದ ನಂತರ ಮತ್ತೊಮ್ಮೆ ಟೈಟಾನಿಕ್ ಯಾತ್ರೆಗೆ ಜಾಹೀರಾತು ನೀಡಿದ ಸಂಸ್ಥೆ, ಧಮ್ ಇದ್ದವರು ಅಪ್ಲೈ ಮಾಡ್ಬೋದು!

latest news Titanic ship Again the agency that advertised the Titanic voyage

Share the Article

Titanic ship: ಟೈಟಾನ್ ಸಬ್‌ಮರ್ಸಿಬಲ್ ನೌಕೆಯು ಸ್ಫೋಟಗೊಂಡು ಐವರು ಪ್ರಯಾಣಿಕರು ಮೃತಪಟ್ಟ ಭಾರಿ ದುರಂತದ ನಂತರವೂ, ಅದೇ ಸಂಸ್ಥೆ ಇನ್ನೂ ತನ್ನ ವೆಬ್‌ಸೈಟ್‌ನಲ್ಲಿ ಟೈಟಾನಿಕ್ (Titanic ship) ನೌಕಯಾನದ ಬಗ್ಗೆ ಜಾಹೀರಾತು ನೀಡುತ್ತಿದೆ ಎಂದು ವರದಿಯಾಗಿದೆ.

ಹೌದು, ಸುಮಾರು ಒಂದು ವಾರಗಳ ಹಿಂದೆಯಷ್ಟೆ ಟೈಟಾನಿಕ್ ನೌಕಾಘಾತವನ್ನು ವೀಕ್ಷಿಸಲೆಂದು ಹೋಗಿದ್ದ ಓಷನ್​ಗೇಟ್​ ಕಂಪನಿಯ ನೌಕೆಯು ಸ್ಪೋಟಗೊಂಡು ಭಾರಿ ದುರಂತ ಸಂಭವಿಸಿದರೂ, ಮತ್ತೆ ತನ್ನ ವೆಬ್‌ಸೈಟ್‌ನಲ್ಲಿ ಟೈಟಾನಿಕ್ ಪ್ರಯಾಣಕ್ಕೆ ಜಾಹೀರಾತನ್ನು ನೀಡುತ್ತಿದೆ. ವೆಬ್‌ಸೈಟ್ ಪ್ರಕಾರ, ಮುಂದಿನ ವರ್ಷ ಟೈಟಾನಿಕ್‌ಗೆ ಹೋಗಲು ಓಷನ್​ಗೇಟ್​ ಕಂಪನಿಯು ಎರಡು ನೌಕಯಾತ್ರೆಗಳನ್ನು ನಿಗದಿಪಡಿಸಲಾಗಿದೆ. ಇದು ಜೂನ್ 12ರಿಂದ ಜೂನ್ 20 ಮತ್ತು ಜೂನ್ 21ರಿಂದ ಜೂನ್ 29ರವರೆಗೆ ನಡೆಯಲಿದೆ.

ಒಬ್ಬ ವ್ಯಕ್ತಿಗೆ $250,000 (ಸುಮಾರು2 ಕೋಟಿ ರೂ.) ವೆಚ್ಚವಾಗುತ್ತದೆ. ಒಂದು ಸಬ್‌ಮರ್ಸಿಬಲ್ ಡೈವ್, ಖಾಸಗಿ ವಸತಿಗೃಹಗಳು, ಅಗತ್ಯವಿರುವ ಎಲ್ಲಾ ತರಬೇತಿ, ಯಾತ್ರೆಯ ಉಪಕರಣಗಳು ಮತ್ತು ನೌಕೆಯಲ್ಲಿರುವಾಗಿನ ಎಲ್ಲಾ ಊಟದ ಖರ್ಚನ್ನು ಒಳಗೊಂಡಿರುತ್ತದ. ಸಬ್‌ಮರ್ಸಿಬಲ್‌ನಲ್ಲಿ ವೈ-ಫೈ ಸಂಪರ್ಕದ ಲಭ್ಯತೆಯ ಜೊತೆಗೆ ಸ್ಟೇಟ್‌ರೂಮ್ ಬೆಡ್‌ರೂಮ್‌ಗಳು ಮತ್ತು ಹಂಚಿಕೆಯ ಸ್ನಾನಗೃಹಗಳು ಸೇರಿದಂತೆ ವಸತಿಗಳ ಕುರಿತು ವೆಬ್​ಸೈಟ್​ನಲ್ಲಿ ಉಲ್ಲೇಖಿಸಲಾಗಿದೆ.

OceanGate ವೆಬ್​ಸೈಟ್​ನಲ್ಲಿ ಉಲ್ಲೇಖವಾಗಿರುವಂತೆ, “ಮೊದಲ ದಿನ, ಪ್ರಯಾಣಿಕರು ತಮ್ಮ ನೌಕೆಯ ಸಿಬ್ಬಂದಿಯನ್ನು ಭೇಟಿ ಮಾಡಿ ಅಂತರ್ಜಲ ನೌಕೆಯನ್ನು ಹತ್ತಲು ಕಡಲತೀರದ ನಗರವಾದ ಸೇಂಟ್ ಜಾನ್ಸ್‌ಗೆ ಬರಬೇಕು. ಅಲ್ಲಿಂದ ನಿಮ್ಮನ್ನು RMS ಟೈಟಾನಿಕ್‌ನ ಅವಶೇಷಗಳು ಇರುವ ಸ್ಥಳಕ್ಕೆ ಕೊಂಡೊಯ್ಯುತ್ತದೆ.” ಎಂದು ತಿಳಿಸಿದೆ.

ದುರಂತದ ಸ್ಫೋಟದ ಸಮಯದಲ್ಲಿ ಟೈಟಾನ್ ಸಬ್‌ಮರ್ಸಿಬಲ್‌ನಲ್ಲಿದ್ದ ಇತರ ಪ್ರಯಾಣಿಕರೆಂದರೆ ಓಷನ್‌ಗೇಟ್ ಸಿಇಒ ಸ್ಟಾಕ್‌ಟನ್ ರಶ್,, ಬ್ರಿಟಿಷ್ ಬಿಲಿಯನೇರ್ ಹಮೀಶ್ ಹಾರ್ಡಿಂಗ್, ಫ್ರೆಂಚ್ ಡೈವಿಂಗ್ ತಜ್ಞ ಪಾಲ್-ಹೆನ್ರಿ ನಾರ್ಜಿಯೊಲೆಟ್ ಮತ್ತು ಪಾಕಿಸ್ತಾನಿ ಉದ್ಯಮಿ ಶಹಜಾದಾ ದಾವೂದ್ ಮತ್ತು ಅವರ ಹದಿಹರೆಯದ ಮಗ ಸುಲೇಮಾನ್ ಅವರು ಸಂಸ್ಥೆಯ ಸಬ್ ಜೂನ್ 18 ರಂದು ಸ್ಫೋಟಗೊಂಡಾಗ ಸಾವನ್ನಪ್ಪಿದ್ದರು.ಇದಾದ ನಂತರ “ಅನಿರ್ದಿಷ್ಟವಾಗಿ” ಈ ಯಾತ್ರೆಗಳನ್ನು ಮುಚ್ಚಿತ್ತು.

 

ಇದನ್ನು ಓದಿ: PGCIL Recruitment 2023: ಪವರ್ ಗ್ರಿಡ್ ಕಾರ್ಪೊರೇಷನ್ ನಲ್ಲಿ 1000 ಕ್ಕೂ ಅಧಿಕ ವಿವಿಧ ಹುದ್ದೆಗಳು, ಆಸಕ್ತರು ಕೊನೆಯ ದಿನಾಂಕ ನೋಟ್ ಮಾಡ್ಕೊಳ್ಳಿ 

Leave A Reply