Free Metro Travel: ಬಸ್ಸಲ್ಲಿ ಫ್ರೀ ಆಯ್ತು, ಇನ್ನು ಮೆಟ್ರೋದಲ್ಲೂ ಮಹಿಳೆಯರಿಗೆ ಉಚಿತ ಪ್ರಯಾಣ !? ಯಾವಾಗಿಂದ ಜಾರಿ ಗೊತ್ತಾ.. ?

Latest Karnataka news Congress guarantee After free bus travel scheme now free metro travel for women

Free Metro Travel: ಕಾಂಗ್ರೆಸ್ ಸರ್ಕಾರ (Congress Govt) ವಿಧಾನಸಭೆ ಚುನಾವಣೆಗೂ(Assembly election) ಮುನ್ನ ಘೋಷಣೆ ಮಾಡಿದ್ದ ಐದು ಗ್ಯಾರಂಟಿಗಳ (Five Guarantees) ಪೈಕಿ ಒಂದಾಗಿರುಧ ಮಹಿಳೆಯರ ಉಚಿತ ಬಸ್ ಪ್ರಯಾಣ (ಶಕ್ತಿ ಯೋಜನೆ) ಯೋಜನೆ ಈಗಾಗಲೇ ರಾಜ್ಯಾದ್ಯಂತ ಜಾರಿಯಾಗಿದ್ದು ಭರ್ಜರಿ ರೆಸ್ಪಾನ್ಸ್(Responce) ಸಿಗುತ್ತಿದೆ. ಆದರೆ ಈ ಬೆನ್ನಲ್ಲೇ ಮೆಟ್ರೋದಲ್ಲೂ ಮಹಿಳೆಯರಿಗೆ ಉಚಿತ ಪ್ರಯಾಣ ಎನ್ನುವ ಸುದ್ಧಿಯೊಂದು ಹರಿದಾಡುತ್ತಿದೆ.

ಉಚಿತ ಪ್ರಯಾಣದ ಅನುಕೂಲಕ್ಕಾಗಿ ಮಹಿಳೆಯರು ಮೆಟ್ರೋ ಪ್ರಯಾಣವನ್ನು ತೊರೆಯುತ್ತಿದ್ದಾರೆ. ಒಂದು ನಿಲ್ದಾಣದಿಂದ ಇನ್ನೊಂದು ನಿಲ್ದಾಣಕ್ಕೆ 10 (ಕ್ಯೂಆರ್‌ ಕೋಡ್‌ .9.5) ಇದೆ. ಒಂದು ದಿನದ ಪಾಸ್‌ಗೆ 150+ 50 ಕೊಡಬೇಕಾಗುತ್ತದೆ. ಆದರೆ, ಹೊಸ ಸರ್ಕಾರದ ಆಶ್ವಾಸನೆಯಂತೆ ಬಸ್‌ನಲ್ಲಿ ಉಚಿತ ಪ್ರಯಾಣ(Free travel) ಜಾರಿಯಾದರೆ ಮಹಿಳೆಯರು ಮೆಟ್ರೋ ಬಿಟ್ಟು ಬಸ್ಸನ್ನು ಏರುತ್ತಿದ್ದಾರೆ. ಬಿಎಂಟಿಸಿ(BMTC) ಮೆಟ್ರೋದ ಮಹಿಳಾ ಪ್ರಯಾಣಿಕರನ್ನು ಒಂದಿಷ್ಟರ ಮಟ್ಟಿಗೆ ಕಸಿದಿದೆ. ಈ ಬೆನ್ನಲ್ಲೇ ಮೆಟ್ರೋದಲ್ಲೂ ಮಹಿಳೆಯರಿಗೆ ಉಚಿತ ಪ್ರಯಾಣ ನೀಡಿಯೆಂದು(Free Metro Travel) ಮನವಿಯೊಂದು ಬಂದಿದೆ.

ಹೌದು, ಮಹಿಳೆಯರಿಗೆ ಶಕ್ತಿ ಯೋಜನೆ ನೀಡಿರುವ ಬಗ್ಗೆ ಈಗಾಗಲೇ ಇನ್ನು ಅನೇಕ ಚರ್ಚೆಗಳು ನಡೆಯುತ್ತಿದ್ದು, ವಿರೋಧಗಳೂ ಕೇಳಿಬರುತ್ತಿದ್ದರೂ ಈ ನಡುವೆ ಇದೀಗ ಈ ಹೊಸ ಬೇಡಿಕೆ ಇನ್ನೊಂದು ಸಮಸ್ಯೆಗೆ ಆಹ್ವಾನ ನೀಡಿದಂತಿದೆ.ಬೆಂಗಳೂರಿನ ನಮ್ಮ ಮೆಟ್ರೋದಲ್ಲಿಯೂ ಉಚಿತ ಸೇವೆ (Free Metro Travel) ನೀಡುವಂತೆ ಬೆಂಗಳೂರಿನಲ್ಲೇ ವೈದ್ಯೆಯಾಗಿರುವ ಮಹಿಳೆಯೊಬ್ಬರು ಸರಕಾರಕ್ಕೆ ಈ ಮನವಿಯನ್ನು ಮಾಡಿದ್ದಾರೆ.

ಅಂದಹಾಗೆ ರಾಜ್ಯದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಸರಕಾರಿ ಬಸ್ ನಷ್ಟೇ ನಮ್ಮ ಮೆಟ್ರೋ ಕೂಡ ಫೇಮಸ್ ಆಗಿದ್ದು ಮಹಿಳೆಯರ ಅನುಕೂಲಕ್ಕಾಗಿ ಈ ವೈದ್ಯರು ಈ ರೀತಿ ಟ್ವಿಟ್ ಮಾಡಿದ್ದಾರೆಂದು ಕೆಲವರು ಹೇಳಿದರೆ ಇನ್ನು ಕೆಲವರು ಇದೆಲ್ಲ ಸುಮ್ಮನೆ ಗಿಮಿಕ್(Gimmick) ಅಷ್ಟೇ ಎಂದು ಅಲ್ಲೆಗೆಳೆದಿದ್ದಾರೆ. ಶಕ್ತಿಯೋಜನೆಯನ್ನು ಅಷ್ಟೊಂದು ಸೀರಿಯಸ್ ಆಗಿ ತೆಗೆದುಕೊಂಡ ರಾಜ್ಯ ಸರಕಾರ ಈಗ ಬಂದ ಮನವಿಗೆ ಸ್ಪಂದನೆ ನೀಡುತ್ತಾ ಇಲ್ಲವೇ ಎಂದು ಕಾದುನೋಡಬೇಕು.

ಇದನ್ನೂ ಓದಿ: Tamanna bhatia: ಪೋರ್ನ್ ಸೈಟ್ ಗಳಲ್ಲಿ ತಮನ್ನಾ ವಿಡಿಯೋ ಲೀಕ್ – ಮಿಲ್ಕಿ ಬ್ಯೂಟಿಗೆ ಮುಳುವಾದ ಹಸಿಬಿಸಿ ಸೀನ್ಸ್ !!

Leave A Reply

Your email address will not be published.