Australia: ಬಿಕನಿ ತೊಟ್ಟು, ಬೀಚ್‌ನಲ್ಲಿ ಮಲಗಿದವಳ ಮೇಲೆ ಏಕಾಏಕಿ ಎಗರಿದ ನಾಯಿ ! ಹಿಂದಿನಿಂದ ಬಂದು ಏನು ಮಾಡಿತು ಗೊತ್ತೇ?

International news Australian wild dog attacks a young woman who was sleeping on the beach wearing bikini video goes viral

Dog attacks woman: ಪ್ರವಾಸಿಗರಿಗೆ(Tourist) ಸುಂದರ ತಾಣಗಳನ್ನು ಸುತ್ತೋದೆದಂರೆ ಬಲು ಇಷ್ಟ. ಅದರಲ್ಲೂ ಕೂಡ ಕೆಲವರಿಗೆ ಈ ಬೀಚ್(Beach) ಅಂದ್ರೆ ಪಂಚಪ್ರಾಣ. ಬಿಕನಿ ತೊಟ್ಟೋ, ತುಂಡುಡುಗೆ ಹಾಕಿಯೋ, ಕಣ್ಣಿಗೆ ಕೂಲಿಂಗ್ ಗ್ಲಾಸ್(Cooling glass) ಹಾಕಿ ಬಿಸಿಲಿಗೆ ಮೈ ಒಡ್ಡುತ್ತಾ ಕಾದ ಮರಳಿನ ಮೇಲೆ ಮಲಗಿದ್ರೆ ಏನೋ ಒಂತರಾ ಸುಖ. ಅಂತೆಯೇ ಇಲ್ಲೊಂದೆಡೆ ಯುವತಿಯೊಬ್ಬಳು ಬಿಕನಿ ತೊಟ್ಟು, ಬಿಂದಾಸ್ ಆಗಿ ಕಡಲ ತಡಿಯ ಮೇಲೆ ಮಲಗಿರುವಾಗ ಕಾಡು ನಾಯಿಯೊಂದು ಬಂದು ಏಕಾಏಕಿ ದಾಳಿ ಮಾಡಿದೆ.

ಹೌದು, ವಿದೇಶಗಳಲ್ಲಿ ಬಿಕನಿ(Bikini) ಹಾಕಿಯೋ ಇಲ್ಲ ಬರೀ ಒಳ ಉಡುಪಿನಲ್ಲಿ, ಕಡಲ ತಡಿಯಲ್ಲಿ ಮಲಗೋದು ಸರ್ವೇ ಸಾಮಾನ್ಯ. ಅಲ್ಲದು ಕಾಮನ್. ಅಂತೆಯೇ ಆಸ್ಟ್ರೇಲಿಯಾದ( Australia) ಕ್ವೀನ್ಸ್‌ಲ್ಯಾಂಡ್‌ನ ಕೆ’ಗಾರಿ (Fraser Island)ಐಲ್ಯಾಂಡ್‌ನಲ್ಲಿ ಯುವತಿಯೊಬ್ಬಳು ಬಿಕನಿ ಹಾಕಿ, ಕಡಲ ತಡಿಯಲ್ಲಿ ಕೌಚಿ ಮಲಗಿ ಖಾಸಗೀ ಕ್ಷಣಗಳನ್ನು ಅನುಭವಿಸುತ್ತಿರುವಾಗ ನಾಯಿಯೊಂದು ಏಕಾಏಕಿ ಆಕೆಯ ಮೇಲೆ ಎಗರಿ ದಾಳಿ (Dog attacks woman) ಮಾಡಿದೆ. ಬಳಿಕ ಎಚ್ಚೆತ್ತ ಆಕೆ ಕಿರುಚುತ್ತಾ ಓಡಿಹೋಗಿದ್ದಾಳೆ. ಸದ್ಯ ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ ಈ ವಿಡಿಯೋ ವೈರಲ್ ಆಗ್ತಿದೆ.

ಅಂದಹಾಗೆ ವೈರಲ್ ಆದ ಈ ವಿಡಿಯೋದಲ್ಲಿ ಮೂರು ಡಿಂಗೋಗಳ (dingo) ಗುಂಪು ತಮ್ಮತ್ತ ಬರುತ್ತಿದ್ದತೆ ಕಡಲತೀರದಲ್ಲಿ ಮರಳಿನಲ್ಲಿ ಮಲಗಿದ್ದ ಪ್ರವಾಸಿಗರು ಭಯಭೀತರಾಗುವುದನ್ನು ನೋಡಬಹುದು. ಡಿಂಗೊಗಳಲ್ಲಿ ಒಂದು ಮಹಿಳೆಯನ್ನು ಕಚ್ಚುವ ಮೊದಲು ಸಮುದ್ರತೀರದಲ್ಲಿ ಮಲಗಿದ್ದ ಆಕೆಯನ್ನು ಮೂಸುತ್ತಾ ಸಾಗಿದೆ. ಈ ವೇಳೆ ಭಯಗೊಂಡ ಮಹಿಳೆ ಓಡಲು ಮುಂದಾಗಿದ್ದು, ಈ ವೇಳೆ ಡಿಂಗೋ ಆಕೆಯನ್ನು ಬೆನ್ನಟ್ಟಿ ಹಿಂಭಾಗಕ್ಕೆ ಕಚ್ಚಿದೆ. ಇದೇ ವೇಳೆ ಅಲ್ಲೇ ಇದ್ದ ಇತರ ಪ್ರವಾಸಿಗರು ಆಗಮಿಸಿ ಡಿಂಗೋನನ್ನು ಓಡಿಸಿ ಆಕೆಯ ರಕ್ಷಣೆ ಮಾಡಿದ್ದಾರೆ.

ಇದನ್ನು ಕಂಡ ಒಬ್ಬರು ವೀಡಿಯೊದಲ್ಲಿ ಕಾಣಿಸಿದ ಡಿಂಗೊವನ್ನು ಅಧಿಕಾರಿಗಳು ಕೊಂದಿದ್ದಾರೆ ಎಂದು ಹೇಳಿದ್ದಾರೆ. ಇದರಲ್ಲಿ ದುಃಖದ ವಿಚಾರವೆಂದರೆ ಡಿಂಗೊಗೆ ದಯಾಮರಣ ನೀಡಲಾಗಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು ಡಿಂಗೊಗಳ ಸ್ನೇಹಪರ ಸ್ವಭಾವದ ಪರವಾಗಿ ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಸದ್ಯ ಇದೀಗ ಈ ವಿಡಿಯೋ ಒಂದು ಮಿಲಿಯನ್‌ಗೂ ಅಧಿಕ ವೀಕ್ಷಣೆ ಪಡೆದಿದೆ.

ಇದು ಕಡಲತಡಿಯಲ್ಲಿ ತಮ್ಮ ಖಾಸಗಿ ಕ್ಷಣಗಳನ್ನು ಆನಂದಿಸುತ್ತಿರುವವರು ಭಯಪಡುವಂತೆ ಮಾಡಿದೆ. ಆಸ್ಟ್ರೇಲಿಯಾದ ಕಾಡು ನಾಯಿಗಳಾದ ಈ ಡಿಂಗೊಗಳು ಬೀಚ್‌ನಲ್ಲಿ ಪ್ರವಾಸಿಗರ ಮೇಲೆ ದಾಳಿ ನಡೆಸಿದ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗಿದೆ ಎಂದು ಪ್ರವಾಸಿಗರು ದೂರಿದ್ದಾರೆ. ಕಾಡುನಾಯಿಗಳ ದಾಳಿ ಆಗಾಗ ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಬೀಚ್‌ಗಳಲ್ಲಿ ಅಧಿಕಾರಿಗಳು ಪ್ರವಾಸಿಗರಿಗೆ ಮುನ್ನೆಚ್ಚರಿಕೆ ಹಾಗೂ ಮಾರ್ಗಸೂಚಿಗಳನ್ನು ನೀಡುವಂತಹ ಸ್ಥಿತಿ ನಿರ್ಮಾಣವಾಗಿದೆ.

ಇನ್ನು ಜೂನ್ 16 ರಂದು ಇದೇ ಬೀಚ್‌ನಲ್ಲಿ 10 ವರ್ಷದ ಬಾಲಕನ ಮೇಲೆ ಡಿಂಗೋ ದಾಳಿ ಮಾಡಿ ಆತನನ್ನು ನೀರಿಗೆ ಎಳೆದಿತ್ತು. ಅದೃಷ್ಟವಶಾತ್, ಹುಡುಗನ 12 ವರ್ಷದ ಸಹೋದರಿ ಹತ್ತಿರದಲ್ಲಿದ್ದು ಆಕೆಯನ್ನು ಹೆಚ್ಚಿನ ದಾಳಿಯಿಂದ ರಕ್ಷಿಸಿದ್ದಳು. ಆದರೆ ಆತನಿಗೆ ಮತ್ತು ಅವಳು ಅವನನ್ನು ಹೆಚ್ಚಿನ ಹಾನಿಯಿಂದ ರಕ್ಷಿಸಿದ್ದಳು.

ಇದನ್ನೂ ಓದಿ: Mangalore university collage : ವಿವಾದದಕ್ಕೂ, ವಿರೋಧಕ್ಕೂ ಸೊಪ್ಪು ಹಾಕದ ವಿವಿ ಕಾಲೇಜು !! ಹಿಂದೂ ಮುಖಂಡನ ಆತಿಥ್ಯದಲ್ಲೇ ಜರುಗಿದ ಕಾರ್ಯಕ್ರಮ !!

Leave A Reply

Your email address will not be published.