Pressure Cooker: ಅಯ್ಯೋ ಕುಕ್ಕರ್​ನಿಂದ ನೀರು ಚೆಲ್ಲುತ್ತೆ ಅಂತಾ ಟೆನ್ಷನ್ ಬೇಡ! ಈ ಟಿಪ್ಸ್‌ ಹೆಣ್ಮಕ್ಕಳಿಗೆ ಖುಷಿ ಕೊಡುತ್ತೆ

Latest news life hack Follow these tips if water comes from the Pressure cooker

Pressure Cooker: ಕುಕ್ಕರ್ ಒಂದು ಇದ್ದರೆ ಅಡುಗೆ ಬೇಗ ಮಾಡಿ ಮುಗಿಸಬಹುದು. ಗ್ಯಾಸ್ ಉಳಿತಾಯ ಮಾಡಬಹುದು. ಸಮಯ ಉಳಿತಾಯ ಆಗುತ್ತೆ. ಆದರೆ ಪ್ರತಿ ಬಾರಿಯೂ ಕುಕ್ಕರ್ ವಿಸೆಲ್ ಕೂಗುವಾಗ ನೀರೆಲ್ಲಾ ಹೊರ ಬಂದು ಸ್ಟವ್ ಸುತ್ತಮುತ್ತ ಕೊಳಕಾಗಿ ಹೋದಾಗ ಎಲ್ಲವೂ ವ್ಯರ್ಥ ಅನಿಸುತ್ತೆ.

ಹೌದು, ಕುಕ್ಕರ್ ನಿಂದ ನೀರೆಲ್ಲಾ ಹೊರಗೆ ಬಂದರೆ ಆಹಾರ ಕೂಡ ಸರಿಯಾಗಿ ಬೇಯುವುದಿಲ್ಲ. ಕುಕ್ಕರ್ ನಲ್ಲಿ ಅಡುಗೆ ಮಾಡುವ ಪ್ರತಿಯೊಬ್ಬರಿಗೂ ಇದೊಂದು ದೊಡ್ಡ ಸಮಸ್ಯೆ(Pressure Cooker Hacks) ಆಗಿದೆ. ಇದನ್ನು ತಡೆಯಲು ಉತ್ತಮ ಟಿಪ್ಸ್ ಇಲ್ಲಿದೆ ನೋಡಿ.

ಮೊದಲು ಪ್ರೆಶರ್ ಕುಕ್ಕರ್ ವಾಷರ್ ಅನ್ನು ಸರಿಯಾಗಿ ಜೋಡಿಸದಿದ್ದರೆ ಅಥವಾ ಸಡಿಲವಾಗಿದ್ದರೆ, ಕುದಿಯುವ ಸಮಯದಲ್ಲಿ ನೀರು ಒಳಗಿನಿಂದ ಹೊರಬರುತ್ತದೆ. ಅದಕ್ಕಾಗಿ ಕುಕ್ಕರ್​ ಗ್ಯಾಸ್​ಗೆ ಇಡುವ ಮೊದಲು ವಾಷರ್ ಚೆಕ್ ಮಾಡಿಕೊಳ್ಳಿ.

ಪ್ರತಿ ಅಡುಗೆಯ ನಂತರ ಪ್ರೆಶರ್ ಕುಕ್ಕರ್ ಅನ್ನು ಚೆನ್ನಾಗಿ ತೊಳೆಯಿರಿ. ಕುಕ್ಕರ್ ಹುಡ್ ಅಥವಾ ಸ್ಟೀಮ್ ವಾಲ್ವ್ ಅನ್ನು ಆಗಾಗ ಸ್ವಚ್ಛಗೊಳಿಸುತ್ತಾ ಇರಬೇಕು.

ಇನ್ನು ಕುಕ್ಕರ್ ತೊಳೆಯುವಾಗ ಕುಕ್ಕರ್ ವಾಷರ್​ ಅಥವಾ ಸೈಡ್​ ಬಾರ್ಡರ್​ ಏನಾದರು ಹಾನಿಯಾಗಬಹುದು. ಇದರಿಂದ ಕೆಲವೊಮ್ಮೆ ಅಡುಗೆ ಮಾಡುವಾಗ ಕುಕ್ಕರ್​ನಿಂದ ಸಾರು, ನೀರು ಹೊರಗೆ ಚೆಲ್ಲುತ್ತದೆ. ಆದ್ದರಿಂದ ಕುಕ್ಕರ್ ತೊಳೆಯುವಾಗ ಜಾಗೃತವಾಗಿರಿ.

ಯಾವುದೇ ಅಡುಗೆಯನ್ನು ಸಹ ಕುಕ್ಕರ್​ನಲ್ಲಿ ಮಾಡಬೇಕಾದ್ರೆ ಸ್ವಲ್ಪ ಜಾಗವನ್ನು ಬಿಡಿ. ವಿಶೇಷವಾಗಿ ಧಾನ್ಯಗಳನ್ನು ಬೇಯಿಸುವಾಗ ಕುಕ್ಕರ್‌ನೊಳಗೆ ಕನಿಷ್ಠ ಮೂರನೇ ಒಂದು ಭಾಗದಷ್ಟು ಜಾಗ ಇದೆಯಾ ಎಂದು ನೋಡಿಕೊಳ್ಳಿ.

ತಣ್ಣೀರಿನ ಸಹಾಯದಿಂದ ನೀವು ಕುಕ್ಕರ್ ನಿಂದ ನೀರು ಬರದಂತೆ ತಡೆಯಬಹುದು. ಕುಕ್ಕರ್ ನಿಂದ ನೀರು ಬಂದರೆ ಮುಚ್ಚಳ ತೆರೆದು ತಣ್ಣೀರಿನಿಂದ ತೊಳೆದು ಮತ್ತೆ ಮುಚ್ಚಿದರೆ ನೀರು ಬರಲ್ಲ.

ಕುಕ್ಕರ್‌ಗೆ ಪದಾರ್ಥ ಸೇರಿಸಿದ ನಂತರ ನೀರು ಮಿಕ್ಸ್ ಮಾಡಿ. ನಂತರ ನಿಮ್ಮ ಕೈಯಿಂದ ಕುಕ್ಕರ್ ಒಳಗೆ ಅಳತೆ ಮಾಡಿ. ಇದರಲ್ಲಿ ನೀರು ಮುಚ್ಚಳದಿಂದ ನಾಲ್ಕು ಬೆರಳುಗಳ ಕೆಳಗೆ ಇರಬೇಕು. ಹೀಗೆ ಮಾಡದಿದ್ರೆ ಕುಕ್ಕರ್​ ಒಳಗೆ ತುಂಬಾ ಗಾಳಿ ಇರುತ್ತದೆ. ಇದರಿಂದ ನೀರು ಸೋರುವ ಭೀತಿ ಎದುರಾಗುತ್ತದೆ. ಹೆಚ್ಚು ನೀರು ಕೊಟ್ಟರೆ ಹೊರಗಡೆ ಚೆಲ್ಲುವ ಸಾಧ್ಯತೆ ಹೆಚ್ಚಿರುತ್ತದೆ. ಇಲ್ಲದಿದ್ದರೆ ಒಳಗೆ ತುಂಬಾ ಒತ್ತಡ ಬೀಳುತ್ತದೆ. ಇದರಿಂದ ನೀರು ಸೋರುವ ಸಾಧ್ಯತೆ ಹೆಚ್ಚಿರುತ್ತದೆ.

ಮುಖ್ಯವಾಗಿ ಮಧ್ಯಮ ಜ್ವಾಲೆಯಲ್ಲಿ ಬೇಯಿಸಿದರೆ ಕುಕ್ಕರ್ ನಲ್ಲಿರುವ ನೀರು ಹೊರಬರುವುದಿಲ್ಲ.

ಕುಕ್ಕರ್ ನಿಂದ ನೀರು ಬರದಂತೆ ತಡೆಯಲು ನೀವು ಎಣ್ಣೆಯನ್ನು ಬಳಸಬಹುದು. ಕುಕ್ಕರ್ ನ ಮುಚ್ಚಳದ ಸುತ್ತಲೂ ಎಣ್ಣೆಯನ್ನು ಹಚ್ಚಿ. ಇದು ಕುಕ್ಕರ್ ನಲ್ಲಿರುವ ನೀರು ಹೊರಹೋಗಲು ಬಿಡುವುದಿಲ್ಲ.

Leave A Reply

Your email address will not be published.