Home International PM Modi -Joe biden: ಕರ್ನಾಟಕದ ಶ್ರೀಗಂಧ ಪೆಟ್ಟಿಗೆಯಲ್ಲಿ ಬೈಡನ್ ದಂಪತಿಗೆ ಮೋದಿ ಕೊಟ್ರು...

PM Modi -Joe biden: ಕರ್ನಾಟಕದ ಶ್ರೀಗಂಧ ಪೆಟ್ಟಿಗೆಯಲ್ಲಿ ಬೈಡನ್ ದಂಪತಿಗೆ ಮೋದಿ ಕೊಟ್ರು ಸ್ಪೇಷಲ್​ ಗಿಫ್ಟ್​​​ !! ಏನೇನಿದೆ ಗೊತ್ತಾ ಅದರಲ್ಲಿ?

PM Modi -Joe biden
Image source- ETV Bharat

Hindu neighbor gifts plot of land

Hindu neighbour gifts land to Muslim journalist

PM Modi -Joe biden: ಅಮೆರಿಕಾ(America) ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವರ ಕರ್ನಾಟಕದ ಶ್ರೀಗಂಧದ ಪೆಟ್ಟಿಗೆಯಲ್ಲಿ ಭಾರತೀಯ ಸಂಸ್ಕೃತಿಯನ್ನು(Indian culture) ಬಿಂಬಿಸುವ 10 ವಸ್ತುಗಳನ್ನು ಬೈಡನ್ (PM Modi -Joe biden) ದಂಪತಿಗೆ ಉಡುಗೊರೆಯಾಗಿ ನೀಡಿದ್ದಾರೆ.

ಹೌದು, ವಿದೇಶದ ಅತಿಥಿಗಳು(Foriegn guest) ಭಾರತಕ್ಕೆ ಆಗಮಿಸಿದಾಗ ಅಥವಾ ತಾವೇ ವಿದೇಶಕ್ಕೆ ಹೋದಾಗ ಮೋದಿ ಪ್ರತಿ ಬಾರಿ ಭಾರತೀಯ ಕಲೆ, ಸಂಸ್ಕೃತಿಗೆ ಸಂಬಂಧಿಸಿದ ವಸ್ತುಗಳನ್ನು ಉಡುಗೊರೆಯಾಗಿ ನೀಡುತ್ತಾರೆ. ಅದೇ ರೀತಿಯಾಗಿ ಈ ಬಾರಿಯೂ ಬೈಡನ್ ದಂಪತಿಗೆ ಹಲವು ಉಡುಗೊರೆಯನ್ನು ನೀಡಿದ್ದಾರೆ. ಈ ಫೋಟೋ-ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.

ಅಂದಹಾಗೆ ಪ್ರಧಾನಿ ನರೇಂದ್ರ ಮೋದಿ(PM modi) ಅವರು ಅಮೆರಿಕ ಅಧ್ಯಕ್ಷ ಜೋ ಬಿಡೆನ್‌ಗೆ(USA President Joe biden)10 ವಸ್ತುಗಳನ್ನು ದಾನಗಳನ್ನು ಹೊಂದಿರುವ ಕರಕುಶಲ ವಸ್ತುಗಳನ್ನಿಟ್ಟು ಶ್ರೀಗಂಧದ ಪೆಟ್ಟಿಗೆಯನ್ನು ಮತ್ತು ಪ್ರಥಮ ಮಹಿಳೆ ಜಿಲ್ ಬಿಡೆನ್(Jil biden) ಅವರಿಗೆ ಹಸಿರು ವಜ್ರವನ್ನು ಉಡುಗೊರೆಯಾಗಿ ನೀಡಿದ್ದಾರೆ. ಶ್ವೇತಭವನದಲ್ಲಿ(White house)ಪ್ರಧಾನಿ ಮೋದಿಗಾಗಿ ಕಳೆದ ರಾತ್ರಿ ಜೋ ಬೈಡನ್ ಮತ್ತು ಜಿಲ್ ಬೈಡನ್ ಆಯೋಜಿಸಿದ್ದ ಖಾಸಗಿ ಔತಣಕೂಟ ನಂತರ ಉಡುಗೊರೆಗಳನ್ನು ವಿನಿಮಯ ಮಾಡಿಕೊಳ್ಳಲಾಯಿತು.

ಏನೆಲ್ಲ ಉಡುಗೊರೆಗಳಿವೆ?
ರಾಜಸ್ಥಾನದ(Rajasthan) ಜೈಪುರದ ಕುಶಲಕರ್ಮಿಯೊಬ್ಬರು ಮೈಸೂರಿನಿಂದ(Mysore) ತಂದ ಶ್ರೀಗಂಧ ಮರದ ಕಟ್ಟಿಗೆಯಿಂದ ತಯಾರಿಸಿದ ಪೆಟ್ಟಿಗೆಯನ್ನು ಜೋ ಬೈಡನ್ ದಂಪತಿಗೆ ಉಡುಗೊರೆಯಾಗಿ ನೀಡಿದ್ದಾರೆ. ಈ ಪೆಟ್ಟಿಗೆ ಕಾರ್-ಎ-ಕಲಮ್ದಾನಿ ಎಂದು ಕರೆಯಲ್ಪಡುವ ಕಾಶ್ಮೀರದ ಪೇಪಿಯರ್ ಮಾಚೆ ಎಂಬ ಕಾಗದದ ತಿರುಳಿನಿಂದ ತಯಾರಿಸಲಾಗಿದೆ. ಈ ಹಸಿರು ಬಣ್ಣದ ಡೈಮಂಡ್ ಭಾರತದ 75 ವರ್ಷಗಳ ಸ್ವಾತಂತ್ರ್ಯವನ್ನು ಮತ್ತು ಸುಸ್ಥಿರ ಅಂತರಾಷ್ಟ್ರೀಯ ಸಂಬಂಧಗಳನ್ನು ಸಂಕೇತಿಸುತ್ತದೆ

ಹಸಿರು ಡೈಮಂಡ್​(Green diamond) ಅನ್ನು ಇರಿಸಿಲಾಗಿರುವ ಪೆಟ್ಟಿಗೆಯಾಗಿದೆ. ಕಾರ್ ಎ ಕಲಮ್ದಾನಿ ಎಂದು ಕರೆಯಲಾಗುತ್ತದೆ, ಕಾಶ್ಮೀರದ ಸೊಗಸಾದ ಪೇಪಿಯರ್ ಮಾಚೆ ಕಾಗದದ ತಿರುಳು ಹಾಗೂ ನಕ್ಖಾಶಿಯ ಸಕ್ತ್ಸಾಜಿಯರ್ ತಯಾರಿಕೆಯನ್ನು ಒಳಗೊಂಡಿದೆ. ಅಲ್ಲದೆ ಬೆಳ್ಳಿಯಿಂದ ತಯಾರಿಸಲ್ಪಟ್ಟ ಗಣೇಶನ ವಿಗ್ರಹವನ್ನು ಇರಿಸಿಲಾಗಿದೆ. ಅದರಲ್ಲಿ ದೀಪವೂ ಕೂಡ ಇದೆ.

ತಾಮ್ರಪತ್ರ ಎಂದೂ ಕರೆಯಲ್ಪಡುವ ತಾಮ್ರ ಫಲಕವನ್ನು ಉತ್ತರಪ್ರದೇಶದಿಂದ ತರಲಾಗಿದೆ. ಅದರ ಮೇಲೆ ಶ್ಲೋಕವನ್ನು ಕೆತ್ತಲಾಗಿದೆ. ಕೈಯಿಂದ ಮಾಡಿದ ಸೂಕ್ಷ್ಮವಾದ ಬೆಳ್ಳಿಯ ಪೆಟ್ಟಿಗೆಗಳು ’10 ಧಾನ್ಯಗಳು’ನ್ನು ಇರಿಸಲಾಗಿದೆ. ಸಹಸ್ರ ಪೂರ್ಣ ಚಂದ್ರೋದಯಂ ಆಚರಣೆಯ ಸಂದರ್ಭದಲ್ಲಿ ಹತ್ತು ವಿವಿಧ ರೀತಿಯ ದಾನಗಳನ್ನು ನೀಡುವ ‘ದಶ ದಾನ’ ಪದ್ಧತಿ ಇದೆ, ಅವುಗಳೆಂದರೆ – ಹಸು ದಾನ, ಭೂದಾನ, ಎಳ್ಳುದಾನ, ಚಿನ್ನ, ತುಪ್ಪ ಅಥವಾ ಬೆಣ್ಣೆ, ಆಹಾರ ಧಾನ್ಯಗಳು, ವಸ್ತ್ರದಾನ (ಬಟ್ಟೆಗಳು), ಬೆಲ್ಲ ದಾನ, ಬೆಳ್ಳಿ ಮತ್ತು ಉಪ್ಪು ದಾನ ಒಳಗೊಂಡಿದೆ. ಬೆಳ್ಳಿಯ ಪೆಟ್ಟಿಗೆಗಳು 10 ದಾನಗಳನ್ನು ಒಳಗೊಂಡಿವೆ.

ಇನ್ನು ಭೂದಾನಕ್ಕಾಗಿ ಭೂಮಿಯ ಬದಲು ಶ್ರೀಗಂಧದ ತುಂಡನ್ನು ಕೊಡಲಾಗಿದೆ. ತಮಿಳುನಾಡಿನಿಂದ ತಂದಿರುವ ಬಿಳಿ ಎಳ್ಳನ್ನು ಈ ಪೆಟ್ಟಿಗೆಯಲ್ಲಿ ಇರಿಸಲಾಗಿದೆ. ರಾಜಸ್ಥಾನದಲ್ಲಿ ಸಿದ್ಧಪಡಿಸಲಾದ 24ಕೆ ಶುದ್ಧ ಹಾಗೂ ಹಾಲ್ಮಾರ್ಕ್​ ಇರುವ ಚಿನ್ನದ ನಾಣ್ಯವನ್ನು ಹಿರಣ್ಯದಾನ ರೂಪದಲ್ಲಿ ನೀಡಲಾಗಿದೆ. ಪೆಟ್ಟಿಗೆಯು ಶೇ.99.5ರಷ್ಟು ಶುದ್ಧ ಮತ್ತು ಹಾಲ್​ಮಾರ್ಕ್​ ಬೆಳ್ಳಿಯ ನಾಣ್ಯವನ್ನು ಹೊಂದಿದೆ. ಇದರೊಂದಿಗೆ ಅಮೆರಿಕದ ಪ್ರಥಮ ಮಹಿಳೆ ಜಿಲ್ ಬೈಡನ್​ಗೆ ಮೋದಿ ಅವರು 7.5 ಕ್ಯಾರೆಟ್ ಹಸಿರು ವಜ್ರವನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ವಜ್ರವು ರಾಸಾಯನಿಕ ಹಾಗೂ ಆಪ್ಟಿಕಲ್ ಗುಣಲಕ್ಷಣಗಳನ್ನು ಪ್ರತಿಬಿಂಬಿಸುತ್ತದೆ.

ಇದನ್ನೂ ಓದಿ: Father-in-law and daughter-in-law fight: ಹಾಟ್ ಹಾಟ್ ಬಟ್ಟೆ ಹಾಕಿದ್ದಾಳೆಂದು ಹಾಟ್ ಇರೋ ಸೂಪನ್ನೇ ಸೊಸೆಯ ಮೇಲೆರಚಿದ ಮಾವ !! ನಂತರ ಆದದ್ದೇನು?