Silk saree care: ಈ ರೀತಿ ನಿಮ್ಮ ಸಿಲ್ಕ್ ಸೀರೆ ಒಗೆದರೆ ವರ್ಷಾನುಗಟ್ಟಲೆ ಸೀರೆ ಹಾಳಾಗುವುದಿಲ್ಲ!

Lifestyle silk saree care tips for easy ways of wash silk sarees and keep long life sarees

Share the Article

Silk Saree care: ಭಾರತೀಯ ಸಂಸ್ಕೃತಿ, ಸಂಪ್ರದಾಯದಲ್ಲಿ ಸೀರೆ ಉಡುಗೆಗೆ ಅಗ್ರ ಸ್ಥಾನ ನೀಡಲಾಗಿದೆ. ಅದರಲ್ಲೂ ಭಾರತೀಯ ಮಹಿಳೆಯರಿಗೆ ಸೀರೆ ಎಂದರೆ ಪಂಚಪ್ರಾಣ. ಇನ್ನು ರೇಷ್ಮೆ ಸೀರೆಗಳನ್ನು ತೊಟ್ಟುಕೊಂಡು ಸಮಾರಂಭಗಳಿಗೆ ಹೋಗುವ ಮಹಿಳೆಯರ ಗಾಂಭೀರ್ಯವೇ (Traditional Look) ಡಿಫರೆಂಟ್. ಆದರೆ ರೇಷ್ಮೆಸೀರೆಗಳು ವರ್ಷಗಳು ಕಳೆದಂತೆ ಬಣ್ಣ ಮಾಸುತ್ತದೆ, ಹೊಳಪು ಹೋಗುತ್ತವೆ. ಆ ಕಾರಣಕ್ಕೆ ಇವುಗಳನ್ನು ಜೋಪಾನ ಮಾಡುವುದು ಅವಶ್ಯಕ.
ಆದ್ರೆ ಅವನ್ನು ಜೋಪಾನ ಮಾಡಲು ಈ ಟಿಪ್ಸ್ (Silk saree care) ಫಾಲೋ ಮಾಡಿ.

ಒಟ್ಟಿನಲ್ಲಿ ಯಾವತ್ತಿಗೂ ರೇಷ್ಮೆ ಸೀರೆ ಡಿಮ್ಯಾಂಡ್ ಮಾತ್ರ ಕಡಿಮೆ ಆಗೋಕೆ ಚಾನ್ಸ್ ಇಲ್ಲ ಬಿಡಿ. ಆದರೆ, ಈ ಸೀರೆಗಳನ್ನು ಸ್ವಚ್ಛಗೊಳಿಸುವುದು ಮತ್ತು ಅವುಗಳನ್ನು ಮೇಂಟೇನ್ ಮಾಡುವುದು ಅಷ್ಟು ಸುಲಭವಲ್ಲ.

ಮೊದಲು ಸೀರೆಯ ಲೇಬಲ್ ಅನ್ನು ಸಂಪೂರ್ಣವಾಗಿ ಓದಬೇಕು, ಏಕೆಂದರೆ ತೊಳೆಯುವ ಸರಿಯಾದ ವಿಧಾನವನ್ನು ಸೀರೆಯ ತಯಾರಕರು ಲೇಬಲ್‌ನಲ್ಲಿ ನೀಡಿರುತ್ತಾರೆ. ಡಿಟರ್ಜೆಂಟ್ ಬಳಸಿ ಸಿಲ್ಕ್ ಸೀರೆಯನ್ನು ತೊಳೆಯಬೇಡಿ.

ರೇಷ್ಮೆ ಸೀರೆಗಳನ್ನು ಐರನ್ ಮಾಡುವಾಗ ಎಚ್ಚರ ವಹಿಸಿರಬೇಕು. ಕಡಿಮೆ ಕಾವಿನಲ್ಲಿ ಇಸ್ತ್ರಿ ಮಾಡಬೇಕು. ಹಳೆ ಕಾಲದ ಇಸ್ತ್ರೀ ಪೆಟ್ಟಿಗೆ ಅಥವಾ ಇದ್ದಿಲು ಇಸ್ತ್ರಿ ಪೆಟ್ಟಿಗೆಗಲಾದ್ರೆ ಒಳ್ಳೆಯದು. ಇಲ್ಲವೇ ಐರಾನ್ ಮಾಡೋ ಕೆಲಸ ಮಾಡೋರಿಗೆ ಕೊಟ್ಟು, ನಿಮ್ಮ ರೇಷ್ಮೆ ಸೀರೆ ಜೋಪಾನ ಮಾಡಿಕೊಳ್ಳಿ.

ಸಿಲ್ಕ್ ಸೀರೆಯನ್ನು ನಾಲ್ಕೈದು ಬಾರಿ ಉಟ್ಟ ನಂತರ ಒಗೆಯುವುದು ಒಳ್ಳೆಯದು. ಸಿಲ್ಕ್ ಸೀರೆಗಳನ್ನು ಪದೇ ಪದೇ ನೀರಿನಲ್ಲಿ ತೊಳಯುವುದರಿಂದ ಸೀರೆಗಳು ಕುಗ್ಗುವ ಸಾಧ್ಯತೆಯಿರುತ್ತದೆ.

ಸಿಲ್ಕ್ ಸೀರೆಗಳನ್ನು ತೊಳೆಯಲು ತಣ್ಣೀರು ಬಳಸಲು ಸಲಹೆ ನೀಡಲಾಗುತ್ತದೆ. ನೀವು ರೇಷ್ಮೆ ಸೀರೆಗಳನ್ನು ಬಿಸಿ ನೀರಿನಲ್ಲಿ ಸ್ವಚ್ಛಗೊಳಿಸಲು ಪ್ರಯತ್ನಿಸಿದರೆ, ಸೀರೆಗಳ ಬಣ್ಣ ಮತ್ತು ಹೊಳಪು ಮಸುಕಾಗುತ್ತದೆ, ಇದು ಕಳಪೆ ನೋಟಕ್ಕೆ ಕಾರಣವಾಗುತ್ತದೆ.

ಬಣ್ಣ ಕಳೆದುಕೊಳ್ಳುವುದನ್ನು ತಪ್ಪಿಸಲು, ನೀವು ಮೊದಲು ಸೀರೆಯನ್ನು ನೀರು ತುಂಬಿದ ಬಕೆಟ್‌ನಲ್ಲಿ ನೆನೆಸಿಡಬೇಕು. ನಂತರ ಸ್ವಲ್ಪ ಸಮಯ ಬಿಟ್ಟು ಸೀರೆಯನ್ನು ತಣ್ಣೀರು ಬಳಸಿ ತೊಳೆಯಬೇಕು.

ಮೊದಲು ನಿಮ್ಮ ಸಿಲ್ಕ್ ಸೀರೆಯನ್ನು ನೀರು ತುಂಬಿದ ಬಕೆಟ್‌ನಲ್ಲಿ ನೆನೆಸಿ. ಕೆಲವು ನಿಮಿಷಗಳ ನಂತರ, ಇನ್ನೊಂದು ಬಕೆಟ್ ಶುದ್ಧ ನೀರನ್ನು ತೆಗೆದುಕೊಳ್ಳಿ ಮತ್ತು ಅದಕ್ಕೆ ಎರಡು ಸ್ಪೂನ್ ವಿನೆಗರ್ ಸೇರಿಸಿ. ನಂತರ ಸೀರೆಯನ್ನು ವಿನೆಗರ್-ನೀರಿನ ಮಿಶ್ರಣದಲ್ಲಿ 10 ನಿಮಿಷಗಳ ನೆನೆಸಿ ನಂತರ ತೊಳೆಯಿರಿ. ಇದು ಕಲೆಗಳನ್ನು ತೆಗೆದುಹಾಕಲು ಸಹ ಸಹಾಯ ಮಾಡುತ್ತದೆ.

ಸಿಲ್ಕ್ ಸೀರೆಗಳನ್ನು ತೊಳೆದ ನಂತರ ತುಂಬಾ ಗಟ್ಟಿಯಾಗಿ ಹಿಂಡಬೇಡಿ, ಏಕೆಂದರೆ ಸೀರೆಗಳ ವಿನ್ಯಾಸವು ಹಾಳಾಗುತ್ತದೆ. ನೀರು ತನ್ನಿಂತಾನೇ ಹರಿದು ಹೋಗಲಿ. ನಂತರ, ಅವುಗಳನ್ನು ನೆರಳಿನ ಒಣಗಳು ಬಿಡಿ. ಅವುಗಳನ್ನು ಒಣಗಿಸಲು ನೇರ ಸೂರ್ಯನ ಬೆಳಕಿನಲ್ಲಿ ಇಡಬೇಡಿ ಏಕೆಂದರೆ ಹೊಳಪು ಮಸುಕಾಗುತ್ತದೆ.

ರೇಷ್ಮೆ ಸೀರೆ ಅಥವಾ ಬಟ್ಟೆಗೆ ಯಾವುದೇ ರೀತಿಯ ಸುಗಂಧ ದ್ರವ್ಯ ಅಥವಾ ಡಿಯೋಡ್ರೆಂಟ್‌ಗಳನ್ನು ತಾಕಿಸಬೇಡಿ. ಇದು ಕೂಡ ಜರಿಯ ಹೊಳಪು ಹಾಗೂ ಬಣ್ಣ ಮಾಸಲು ಕಾರಣವಾಗುತ್ತದೆ.

ಸಿಲ್ಕ್ ಸೀರೆಗಳನ್ನು ಇತರ ಸೀರೆಗಳಿಂದ ಪ್ರತ್ಯೇಕವಾಗಿ ಇಡುವುದು ಉತ್ತಮ ಏಕೆಂದರೆ ಕೆಲವೊಮ್ಮೆ ಇತರ ಸೀರೆಗಳ ವಿನ್ಯಾಸಗಳು ಮತ್ತು ಪ್ರಿಂಟ್‌ಗಳು ಅವುಗಳ ನಯವಾದ ವಿನ್ಯಾಸದಿಂದಾಗಿ ಸಿಲ್ಕ್ ಸೀರೆಗಳಿಗೆ ಅಂಟಿಕೊಳ್ಳಬಹುದು.

ಪ್ರತ್ಯೇಕ ವಾರ್ಡ್ರೋಬ್ ಬಳಸಿ. ಆಗಾಗ ಮಡಿಕೆಗಳನ್ನು ಬದಲಾಯಿಸೋದನ್ನ ಮರೆಯಬೇಡಿ. ಇಲ್ಲದಿದ್ದರೆ ಸೀರೆ ಇಟ್ಟಲ್ಲಿಯೇ ಕಟ್‌ ಆಗುವ ಅಥವಾ ಹರಿದುಹೋಗಬಹುದು.

ನಾಲ್ಕೈದು ತಿಂಗಳಿಗೊಮ್ಮೆ ರೇಷ್ಮೆ, ಮೈಸೂರು ರೇಷ್ಮೆ ಸೀರೆಯನ್ನ ಬಿಸಿಲಿನಲ್ಲಿ ಒಣಗಿಸಿ ಮಡಚಿಡಬೇಕು. ತೇವಾಂಶ ಹೆಚ್ಚು ಇರುವಂತಹ ಪ್ರದೇಶದಲ್ಲಿ ಕನಿಷ್ಠ ಎರಡು-ಮೂರು ತಿಂಗಳಿಗೊಮ್ಮೆಯಾದರೂ ನೆರಳಿನಲ್ಲಿ ಒಣಗಿಸಬೇಕು. ಇನ್ನು ನೀರಿನಲ್ಲಿ ತೊಳೆದಾಗ ತಂತಿಗಳಿಗೆ ಇಳಿಬಿಡುವ ಬದಲು ನೆಲದ ಮೇಲೆಯೇ ಹಾಕಿ ಒಣಗಿಸಬೇಕು.

ಇನ್ನು ಸ್ವೆಟಿಂಗ್ ಪ್ಯಾಡ್ ಬಳಸಿ ಕೆಲವರು ತುಂಬಾ ಬೇಗನೆ ಬೆವೆತು ಬಿಡುತ್ತಾರೆ. ಅಂತವರು ರೇಷ್ಮೆ ಸೀರೆ ಧರಿಸಿದಾಗ, ಅದರ ಬ್ಲೌಸ್‍ಗಳಿಗೆ ಸ್ವೆಟ್ಟಿಂಗ್ ಪ್ಯಾಡ್ ಬಳಸಿ. ಆಗ ಕುಪ್ಪಸಗಳು ಹಾಳಾಗುವುದಿಲ್ಲ.

ಇದನ್ನೂ ಓದಿ: Footwear: ಚಪ್ಪಲ್-ಸ್ಯಾಂಡಲ್ ಗಳಿಗೆ July 1 ರಿಂದ ಈ ನಿಯಮಗಳು ಅನ್ವಯ! ಬಿ ಕ್ಯಾರ್ ಫುಲ್

Leave A Reply