Vishwaprasanna Theertha Swamiji: 40 ಅಡಿ ಆಳದ ಬಾವಿಗೆ ಕೇವಲ ಹಗ್ಗ ಬಳಸಿ ಇಳಿದು ಬೆಕ್ಕಿನ ಮರಿ ರಕ್ಷಿಸಿದ ಪೇಜಾವರ ಸ್ವಾಮೀಜಿ

Latest Udupi news rescued a cat by Sri VishwaPrasanna teertha Swamiji in Udupi

Vishwaprasanna Theertha Swamiji: ಉಡುಪಿ ಮಠದ ಪೇಜಾವರ ಶ್ರೀಗಳು (Vishwaprasanna Theertha Swamiji) ಸುಮಾರು 40 ಅಡಿ ಆಳದ ಬಾವಿಗಿಳಿದು ಬೆಕ್ಕಿನ ಮರಿಯ ರಕ್ಷಣೆ ಮಾಡಿದ ಘಟನೆ ಉಡುಪಿಯಲ್ಲಿ (Udupi) ನಡೆದಿದೆ. ಬೆಕ್ಕನ್ನು ರಕ್ಷಿಸಲು ಸ್ವತಃ ಸ್ವಾಮೀಜಿ ಬಾವಿಗೆ ಇಳಿದಿರುವುದು ಸಾರ್ವಜನಿಕರ ಪ್ರಶಂಸೆಗೆ ಕಾರಣವಾಗಿದೆ.

ನಗರದ ಹೊರವಲಯದಲ್ಲಿರುವ ಮುಚ್ಲಕೋಡು ದೇವಸ್ಥಾನಕ್ಕೆ ಪೇಜಾವರ ಮಠಾಧೀಶ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು (Pejawar Sri) ಭೇಟಿ ಮಾಡಿದ್ದರು. ಆಗ ಅಲ್ಲಿ ಬೆಕ್ಕೊಂದು ಬಾವಿಗೆ ಬಿದ್ದ ವಿಷಯ ಸ್ವಾಮೀಜಿಗೆ ತಿಳಿಯುತ್ತೆ. ಕೂಡಲೇ ಕಾರ್ಯ್ರಪ್ರವೃತ್ತರಾದ ಸ್ವಾಮೀಜಿ, ತಾವೇ ಸ್ವತಃ ಬಾವಿಗಿಳಿದು ಬೆಕ್ಕನ್ನು ರಕ್ಷಿಸಿದ್ದಾರೆ.

ತಾವು ಅಂಜದೆ, ಹಿಂದೆ ಮುಂದೆ ನೋಡದೆ ಹಗ್ಗದ ಸಹಾಯದಿಂದ ಸ್ವಾಮೀಜಿ ಬಾವಿಗಿಳಿದಿದ್ದಾರೆ. ಗೋವಿನ ರಕ್ಷಣೆಗೆ ಕೂಗು ಹಾಕಿರುವ ಪೇಜಾವರ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಗಳ, ಆಗಿಂದೀಗ್ಗೆ ಹಾವು, ಹದ್ದು ಜಲಚರಗಳು ಇತ್ಯಾದಿ ಪ್ರಾಣಿಗಳ ಪಕ್ಷಿಗಳ ರಕ್ಷಣೆ ಮಾಡುತ್ತಿರುತ್ತಾರೆ.

ಇವರೇ, ಇತ್ತೀಚೆಗೆ ಎತ್ತರದ ಮರ ಹತ್ತಿ ಹಲಸು ಕೊಯ್ದು ಹಾಕಿದ ಫೋಟೋಗಳು ಹರಿದಾಡಿದ್ದವು. ಫಿಟ್ನೆಸ್ ಜತೆಗೆ ಅತಿಯಾದ ಜೀವನೋತ್ಸಾಹವನ್ನು ಹೊಂದಿರುವ ಸ್ವಾಮೀಜಿಯವರ ಈ ಪ್ರಾಣಿ ಪ್ರೀತಿಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಅದರ ವೀಡಿಯೋ – ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಇದನ್ನೂ ಓದಿ: Babita Phogat : ಬ್ರಿಜ್ ಭೂಷಣ್ ವಿರೋಧಿ ಕುಸ್ತಿ ಹೋರಾಟಗಾರರಿಗೆ ಭಾರೀ ಹಿನ್ನಡೆ, ಸಾಕ್ಷಿ ಕಾಂಗ್ರೆಸ್ ಕೈಗೊಂಬೆ ಎಂದ ಬಬಿತಾ ಪೊಗಟ್ !

Leave A Reply

Your email address will not be published.