Home Interesting Husband – Wife: ಮಧುಚಂದ್ರ ದಿನವೇ ವರನಿಗೆ ವಧು ಹೆಣ್ಣಲ್ಲ ಎಂಬ ಶಾಕ್! ಆದ್ರೆ ...

Husband – Wife: ಮಧುಚಂದ್ರ ದಿನವೇ ವರನಿಗೆ ವಧು ಹೆಣ್ಣಲ್ಲ ಎಂಬ ಶಾಕ್! ಆದ್ರೆ 7 ವರ್ಷದ ನಂತರ ಸಿಕ್ತು ಬಿಡುಗಡೆ ಭಾಗ್ಯ!

Husband - Wife
Image source: Kannada news

Hindu neighbor gifts plot of land

Hindu neighbour gifts land to Muslim journalist

Husband – Wife: ಸಾವಿರಾರು ಕನಸುಗಳನ್ನು ಹೊತ್ತು ಸಪ್ತಪದಿ ತುಳಿದು, ಇನ್ನೇನು ಮಧುಚಂದ್ರ ಆಚರಿಸಬೇಕು ಅನ್ನುವಷ್ಟರಲ್ಲಿ ವರನಿಗೆ ಆಘಾತಕಾರಿ ವಿಷಯವೊಂದು ಗಮನಕ್ಕೆ ಬಂದಿದೆ. ಹೌದು, ವರನಿಗೆ ತನ್ನ ಪತ್ನಿ ಪರಿಪೂರ್ಣ ಮಹಿಳೆಯಲ್ಲ ಎಂದು ಮಧುಚಂದ್ರದ ದಿನವೇ ತಿಳಿದು ಹೃದಯವೇ ನುಚ್ಚು ನೂರಾಗಿದ್ದು ಅಲ್ಲದೆ, ಮಾನ, ಮರ್ಯಾದೆಗೆ ಅಂಜಿ ಗೊಂದಲಕ್ಕೆ ಒಳಗಾಗಿ ಏಳು ವರ್ಷ ಸುಮ್ಮನಿದ್ದು ನಂತರ ವಿಚ್ಚೇದನ ಪಡೆದ ವಿಚಾರ ಬೆಳಕಿಗೆ ಬಂದಿದೆ.

ಹೌದು, ಏಳು ವರ್ಷಗಳ ಹಿಂದೆ ಅಂದರೆ 2016ರ ಜನವರಿ 27ರಂದು ವಿವಾಹವು ವಿಜೃಂಭಣೆಯಿಂದ ನಡೆಸಿ, ಅದ್ದೂರಿ ಮೆರವಣಿಗೆಯಲ್ಲಿ ಮರು ದಿನ ನವ ವಧು ತನ್ನ ಗಂಡನ ಮನೆಗೆ ಬಂದಿದ್ದಳು. ಇದಾದ ಬಳಿಕ ಮೊದಲ ರಾತ್ರಿಗೆಂದು ಯುವಕ ತನ್ನ ಪತ್ನಿಯೊಂದಿಗೆ (Husband – Wife) ಕೋಣೆ ಸೇರಿದ್ದ. ಆದರೆ, ಮಧುಚಂದ್ರದಲ್ಲಿ ವಧು ಸಂಪೂರ್ಣ ಮಹಿಳೆ ಅಲ್ಲ ಎಂದು ಗೊತ್ತಾಗಿದೆ.

ಆದರೆ ಬಡಪಾಯಿ ವರ ಮಧುಚಂದ್ರದ ದಿನವೇ ಪತ್ನಿಯ ಬಗ್ಗೆ ಸತ್ಯ ತಿಳಿದಿದ್ದರೂ ಕುಟುಂಬಸ್ಥರಿಗೆ ಏನನ್ನೂ ಹೇಳಿರಲಿಲ್ಲ. ಈ ವಿಷಯ ಗೊತ್ತಾದರೆ ತನಗೇ ಅವಮಾನವಾಗುತ್ತದೆ ಎಂದು ಭಾವಿಸಿದ್ದು, ಮಾನಕ್ಕೆ ಕಟ್ಟುಬಿದ್ದು ಯುವಕ ಯಾರಿಗೂ ವಿಷಯವನ್ನು ಬಹಿರಂಗ ಪಡಿಸಲಿಲ್ಲ. ಬದಲಿಗೆ ತನ್ನ ಹೆಂಡತಿಗೆ ರಹಸ್ಯವಾಗಿ ಚಿಕಿತ್ಸೆ ಕೊಡಿಸಲು ಯತ್ನಿಸುತ್ತಿದ್ದ. ಆದರೆ, ಅದು ಯಾವುದೂ ಪ್ರಯೋಜನವಾಗಿಲ್ಲ.

ಕೊನೆಗೆ ತನ್ನ ಪತ್ನಿ ಪರಿಪೂರ್ಣ ಮಹಿಳೆ ಅಲ್ಲ ಎಂದು ಆರೋಪಿ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು,
ಯುವಕನ ಆರೋಪದ ಪ್ರಕಾರ, ವೈದ್ಯರು ಪತ್ನಿಗೆ ಚಿಕಿತ್ಸೆ ನೀಡಲು ನಿರಾಕರಿಸಿದ್ದು, ಪತ್ನಿಯೂ ಇದುವರೆಗೆ ಮುಟ್ಟಾಗಿಲ್ಲ, ನಮ್ಮ ಮದುವೆಯನ್ನು ಅನೂರ್ಜಿತಗೊಳಿಸಲು ಯುವಕ ಕೋರ್ಟ್ ನಲ್ಲಿ ಅರ್ಜಿ ಕೋರಿದ್ದ. ಈ ಅರ್ಜಿ ವಿಚಾರಣೆ ನಡೆಸಿದ ಕೌಟುಂಬಿಕ ನ್ಯಾಯಾಲಯವು ವಿವಾಹವನ್ನು ಅನೂರ್ಜಿತ ಎಂದು ಘೋಷಿಸುವ ಮೂಲಕ ವಿಚ್ಛೇದನದ ಆದೇಶ ನೀಡಿದೆ.

ಇದನ್ನೂ ಓದಿ: ಇಲ್ಲಿದೆ ನೋಡಿ ವಿಶ್ವದ ಅತ್ಯಂತ ಚಿಕ್ಕ ರೆಸ್ಟೋರೆಂಟ್! ಆದರೆ ಬೆಲೆ ಮಾತ್ರ ಚಿಕ್ಕದಾಗಿಲ್ಲ!!!