Free bus travel Scheme: ರಾಜ್ಯದಲ್ಲಿ ಮಹಿಳೆಯರಂತೆ ಪುರುಷರಿಗೂ ಉಚಿತ ಬಸ್ ಪ್ರಯಾಣ!?? ಏನಿದು ಹೊಸ ಸಮಾಚಾರ?

Kalburgi news Congress guarantee Shakti scheme men like women want free bus travel vatal Nagaraj said

Free bus travel Scheme: ರಾಜ್ಯದಲ್ಲಿ ಜಾರಿಯಾಗಿರೋ ಶಕ್ತಿ ಯೋಜನೆಗೆ(Shakti yojana) (ಮಹಿಳೆಯರ ಉಚಿತ ಬಸ್ ಪ್ರಯಾಣ) ಭರ್ಜರಿಯಾದ ರೆಸ್ಪಾನ್ಸ್ ಸಿಗುತ್ತಿದೆ. ರಾಜ್ಯಾದ್ಯಂತ ಮಹಿಳೆಯರು ಇದರ ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ. ಆದರೆ ಈ ಬೆನ್ನಲ್ಲೇ ಪುರುಷರಿಗೂ ಉಚಿತ ಬಸ್ ಪ್ರಯಾಣ ಅನ್ನುವ ಕೂಗು ಕೇಳಿಬರುತ್ತಿದ್ದು, ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಈ ಕುರಿತು ಧ್ವನಿಯೆತ್ತಿದ್ದಾರೆ.

ಹೌದು, ಪುರುಷರಿಗೂ ಉಚಿತ ಬಸ್ ಸೌಲಭ್ಯ ಯೋಜನೆ (Free bus travel Scheme) ಜಾರಿಗೆ ತರುವಂತೆ ನಾನು ಶೀಘ್ರದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ(CM Siddaramaiah) ಅವರನ್ನು ಭೇಟಿಯಾಗಿ ಮನವಿ ಮಾಡುತ್ತೇನೆ ಎಂದು ವಾಟಾಳ್​ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್​(Vatal nagraj) ಭರವಸೆ ನೀಡಿದ್ದಾರೆ.

ಅಂದಹಾಗೆ ಕಲಬುರಗಿ(Kalaburgi) ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಮಹಿಳೆಯರಂತೆ, ಪುರುಷರೂ ಮತದಾನ ಮಾಡಿದ್ದಾರೆ. ಅವರಿಗ್ಯಾಕೆ ಅನ್ಯಾಯ. ಕೇವಲ ಮಹಿಳೆಯರಿಗೆ ಉಚಿತ ಬಸ್ ಸೌಲಭ್ಯ(Free bus facility) ನೀಡಿರುವುದು ಎಷ್ಟು ಸೂಕ್ತ? ಹೀಗಾಗಿ ಮಹಿಳೆಯರಿಗೆ ನೀಡಿದಂತೆ ಪುರುಷರಿಗೂ ಉಚಿತ ಬಸ್ ಪ್ರಯಾಣದ ವ್ಯವಸ್ಥೆ ಕಲ್ಪಿಸಬೇಕು. ಪುರುಷರಿಗೂ ಉಚಿತ ಬಸ್ ಸೌಲಭ್ಯ ಯೋಜನೆ ಜಾರಿಗೆ ತರುವಂತೆ ನಾನು ಶೀಘ್ರದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಭೇಟಿಯಾಗಿ ಮನವಿ ಮಾಡುತ್ತೇನೆ” ಎಂದು ಹೇಳಿದ್ದಾರೆ.

ಬಳಿಕ ಮಾತನಾಡಿದ ಅವರು ನಿರುದ್ಯೋಗಿಗಳಿಗೆ ಭತ್ಯೆ ಕೊಡುವ ಬದಲು ಉದ್ಯೋಗ ಸೃಷ್ಟಿಸುವ ಕೆಲಸವಾಗಬೇಕು. ರಾಜ್ಯದಲ್ಲಿ ಸುಮಾರು ಎರಡೂವರೆ ಲಕ್ಷ ಉದ್ಯೋಗ ಖಾಲಿ ಇದ್ದು, ಅವುಗಳನ್ನು ಭರ್ತಿ ಮಾಡಬೇಕು. ರಾಜ್ಯದ ಬಹುರಾಷ್ಟಿಯ (ಐಟಿ, ಬಿಟಿ) ಕಂಪನಿಗಳಿಗೆ ಸಾವಿರಾರು ಎಕರೆ ನಿವೇಶನ ನೀಡುವ ಸರ್ಕಾರಗಳು ಅಲ್ಲಿ ಕನ್ನಡಿಗರಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಕ್ರಮವಹಿಸಿಲ್ಲ. ಪ್ರಸ್ತುತ ಕಾಂಗ್ರೆಸ್ ಐಟಿ, ಬಿಟಿ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಕೊಡಿಸುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು.

ಅಲ್ಲದೆ ರಾಜ್ಯದಲ್ಲಿ ವ್ಯಾಪಕ ಮರಳು ಮಾಫಿಯಾ ನಡೆಯುತ್ತಿದೆ. ಸರ್ಕಾರ ಈ ಅಕ್ರಮ ಮರಳು ಮಾಫಿಯಾ ತಡೆಗಟ್ಟಲು ಅಗತ್ಯ ಕ್ರಮಕೈಗೊಳ್ಳಬೇಕು. ಎಲ್ಲ ಪಕ್ಷದ ರಾಜಕೀಯ ನಾಯಕರ(Political leaders) ಅಕ್ರಮ ಮರಳು ದಂಧೆ ನಡೆಸುತ್ತಿದ್ದಾರೆ. ರಾಜಕಾರಣಿಗಳ ಕೈವಾಡ ಇಲ್ಲದೆ, ಪೊಲೀಸರ ಸಹಕಾರವಿಲ್ಲದೆ ಮರಳು ಮಾಫಿಯಾ ನಡೆಯುವುದಿಲ್ಲ.ಸಿಎಂ ಸಿದ್ದರಾಮಯ್ಯ ಮತ್ತು ಗೃಹಮಂತ್ರಿ ಜಿ. ಪರಮೇಶ್ವರ್​​ ಈ ಮರಳು ಮಾಫಿಯಾ ತಡೆಗಟ್ಟಲು ಕಾಯ್ದೆ ರೂಪಿಸಬೇಕು” ಎಂದು ಒತ್ತಾಯಿಸಿದರು.

ಇದನ್ನೂ ಓದಿ: Adipurush: ರಾಮಾಯಣಕ್ಕೂ ‘ಆದಿಪುರುಷ್’ ಸಿನಿಮಾಗೂ ಸಂಬಂಧವಿಲ್ಲ : ಸಿಕ್ಕಾಪಟ್ಟೆ ಟ್ರೋಲ್ ಬೆನ್ನಲ್ಲೇ ಉಲ್ಟಾ ಹೊಡೆದ ಚಿತ್ರ ತಂಡ

Leave A Reply

Your email address will not be published.