Home News ಅಶ್ಲೀಲ ಫೋಟೋ ಅಪ್ಲೋಡ್ ಮಾಡಿದವನ ಮೇಲೆ ದೂರು ಕೊಡಲು ಬಂದವಳು ಪತಿ – ಪೊಲೀಸರ ಎದುರಲ್ಲೇ...

ಅಶ್ಲೀಲ ಫೋಟೋ ಅಪ್ಲೋಡ್ ಮಾಡಿದವನ ಮೇಲೆ ದೂರು ಕೊಡಲು ಬಂದವಳು ಪತಿ – ಪೊಲೀಸರ ಎದುರಲ್ಲೇ ಆರೋಪಿಯ ಬೈಕೇರಿ ಎಸ್ಕೇಪ್ !

Uttar Pradesh
Image source :OrrisaPOST

Hindu neighbor gifts plot of land

Hindu neighbour gifts land to Muslim journalist

 

Uttar Pradesh : ಉತ್ತರ ಪ್ರದೇಶ(Uttar Pradesh)ದಲ್ಲಿ ವಿಚಿತ್ರ ಪ್ರೇಮ ಪ್ರಕರಣವೊಂದು ವರದಿಯಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ತನ್ನ ಅಶ್ಲೀಲ ಫೋಟೋಗಳನ್ನು ಪೋಸ್ಟ್ ಮಾಡಿದ್ದಕ್ಕಾಗಿ ದೂರು ನೀಡಲು ಆಮ್ಲಾ ಪೊಲೀಸ್ ಠಾಣೆಗೆ ಬಂದಿದ್ದ ಮಹಿಳೆಯು ಏಕಾಏಕಿ ಆರೋಪಿ ಯುವಕನೊಂದಿಗೆ ಪೊಲೀಸ್ ಠಾಣೆಯ ಗೇಟ್‌ನಿಂದಲೇ ಓಡಿ ಹೋದ ಘಟನೆ ನಡೆದಿದೆ.

 

ಆ ಹುಡುಗಿ ಓಡಿ ಹೋಗುತ್ತಿರುವಾಗ ಮಹಿಳೆಯ ಮಾವ ಮತ್ತು ಪತಿ ಹಾಗೂ ಅಕ್ಕಪಕ್ಕದ ಜನರು ಕೂಗಾಡುತ್ತಿದ್ದರೂ ವಿವಾಹಿತ ಮಹಿಳೆಯು ತನ್ನ ಪೋಷಕರು, ಮಾವ ಹಾಗೂ ಪತಿಯನ್ನು ನಿರ್ಲಕ್ಷಿಸಿ ಆರೋಪಿ ಯುವಕನ ಮೋಟಾರ್ ಸೈಕಲ್ ಏರಿ ಪರಾರಿಯಾಗಿದ್ದಾಳೆ. ಜನರು ನೋಡುತ್ತಲೇ ಇರುವಂತೆ ಮಹಿಳೆ ಯಾರ ಮಾತನ್ನೂ ಕೇಳದೇ ಅಲ್ಲಿ ನಿಂತಿದ್ದ ಎಲ್ಲಾ ಪೋಲೀಸರ ಸಮ್ಮುಖದಲ್ಲಿ ಎಸ್ಕೇಪ್ ಆಗಿದ್ದಾಳೆ.

 

ಉತ್ತರ ಪ್ರದೇಶದ ಫರೀದ್‌ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ವಾಸಿಸುತ್ತಿರುವ ಮಹಿಳೆಗೆ 2 ವರ್ಷಗಳ ಹಿಂದೆ ಬದೌನ್ ಜಿಲ್ಲೆಯ ದತಗಂಜ್ ಪ್ರದೇಶದ ವ್ಯಕ್ತಿಯೊಬ್ಬರ ಜೊತೆ ಮದುವೆಯಾಗಿತ್ತು. ಆಗ ತಮ್ಮ ಪಕ್ಕದ ಮನೆಯಲ್ಲಿ ವಾಸಿಸುತ್ತಿದ್ದ ಯುವಕನೊಬ್ಬ ಈ ಮಹಿಳೆಯ ಕೆಲವು ಅಶ್ಲೀಲ ಫೋಟೋಗಳನ್ನು ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದ. ಇದರಿಂದ ಕುಪಿತಗೊಂಡ ಮಾವ ಮಹಿಳೆಯನ್ನು ನಿಂದಿಸಿದ್ದಾನೆ. ಇದರಿಂದ ಬೇಸತ್ತ a ತನ್ನ ಆಕ್eವರು ಮನೆಗೆ ತೆರಳಿ ಪೋಷಕರಿಗೆ ನಡೆದ ಎಲ್ಲಾ ವಿಷಯಗಳನ್ನು ತಿಳಿಸಿದ್ದಾಳೆ. ಅಲ್ಲಿ ಪೋಷಕರ ಸಲಹೆಯಂತೆ ಯುವಕನ ವಿರುದ್ಧ ಕೇಸು ದಾಖಲಿಸಲು ನಿರ್ಧರಿಸಿದ್ದಾರೆ.

 

ಅಂದು ಆತನ ವಿರುದ್ಧ ಕೇಸು ನೀಡಲಿ ಅವಳ ಗಂಡ, ಅತ್ತೆ ಮತ್ತು ಪೋಷಕರೊಂದಿಗೆ ಪೊಲೀಸ್ ಠಾಣೆಗೆ ಆಗಮಿಸಿ ದೂರು ದಾಖಲಿಸಿದ್ದಾರೆ. ಅಷ್ಟರಲ್ಲಿ ಆರೋಪಿ ಯುವಕ ಕೂಡ ಸ್ಥಳದಲ್ಲಿ ಪ್ರತ್ಯಕ್ಷ ಆಗಿದ್ದಾನೆ. ಅಲ್ಲಿದ್ದವರು ಏನಾಗುತ್ತಿದೆ ಎನ್ನುವ ಮೊದಲೇ, ವಿವಾಹಿತ ಮಹಿಳೆ ಆರೋಪಿ ಯುವಕನ ಮೋಟಾರ್‌ ಸೈಕಲ್ ಏರಿ ಕುಳಿತು ಆತನೊಂದಿಗೆ ಎಸ್ಕೇಪ್ ಆಗಿದ್ದಾಳೆ. ಎಲ್ಲವೂ ಫಿಲ್ಮಿ ಸ್ಟೈಲ್ ನಲ್ಲಿ ನಡೆದು ಹೋಗಿದೆ. ಆಗ ಆಕೆಯ ಮನೆಯವರು ಆ ದ್ವಿಚಕ್ರವಾಹನವನ್ನು ಬಹಳ ದೂರ ಹಿಂಬಾಲಿಸಿದರೂ ಏನೂ ಪ್ರಯೋಜನ ಆಗಿಲ್ಲ. ಸ್ಥಳೀಯ ಜನರು ಕೂಡ ಬೈಕ್ ಏರಿ ಚೇಸ್ ಮಾಡಲು ಓಡಿ ಬಂದರೂ ಆರೋಪಿ ಯುವಕ ಅತಿವೇಗದಲ್ಲಿ ಬೈಕ್‌ ಓಡಿಸಿಕೊಂಡು ಪರಾರಿಯಾಗಿದ್ದಾರೆ. ಈಗ ಆಕೆಯ ತಾಯಿ ಪೊಲೀಸರಿಗೆ ತನ್ನ ಮಗಳಿಗೆ ಆಮಿಷ ಒಡ್ಡಿ ಅಪಹರಣ ಮಾಡಿಕೊಂಡು ಹೋಗಿದ್ದಾರೆ ಎಂದು ದೂರು ನೀಡಿದ್ದಾರೆ.

ಇದನ್ನೂ ಓದಿ : ತಾಯಿಯನ್ನು ಕೊಂದು ಸೂಟ್ ಕೇಸ್’ಗೆ ನುಗ್ಗಿಸಿ, ಮೇಲೆ ತಂದೆಯ ಫೋಟೋ ಹಚ್ಚಿ ಪೊಲೀಸ್ ಸ್ಟೇಷನ್ ಗೆ ಬಂದ ಮಗಳು