Uttar Pradesh: ಪತ್ನಿಯೊಂದಿಗಿನ ಜಗಳ ಬೀದಿಗೆ, ಆಕೆಯ ಅಶ್ಲೀಲ ಫೋಟೋಗೆ ಫೋನ್ ನಂಬರ್ ಹಾಕಿ ಬೀದಿಯಲ್ಲಿ ಪೋಸ್ಟರ್ ಹಚ್ಚಿದ ಪತಿರಾಯ

Uttar Pradesh Wife and Husband quarrel husband puts up a poster of his wife nude photo on the road

Uttar Pradesh: ಲಕ್ನೋ: ಪತಿ ಪತ್ನಿ ( Husband & Wife) ಜಗಳ ಇಲ್ಲೊಂದು ಕಡೆ ಬೀದಿಗೆ ಬರೋದಲ್ಲದೆ, ಬೀದಿಯ ಪೋಸ್ಟರ್ ಕೂಡಾ ಆಗಿಬಿಟ್ಟಿದೆ. ಪತ್ನಿಯೊಂದಿಗೆ ಜಗಳವಾಡಿ ಕೋಪಗೊಂಡ ವ್ಯಕ್ತಿಯೊಬ್ಬ ಆಕೆಯ ಮೇಲೆ ಸೇಡು ತೀರಿಸಿಕೊಳ್ಳಲು ಆಕೆಯ ಮಾನವನ್ನು ಸಾರ್ವಜನಿಕವಾಗಿ ಹರಾಜು ಹಾಕಿದ್ದಾನೆ. ಆತ ಪತ್ನಿಯ ಅಶ್ಲೀಲ ಫೋಟೋದೊಂದಿಗೆ ( Nude Photo) ಆಕೆಯ ಪರ್ಸನಲ್ ಫೋನ್ ನಂಬರ್ ಅನ್ನು ಬರೆದು ಬೀದಿಗಳಲ್ಲಿ ಪೋಸ್ಟರ್ (Poster) ಮಾಡಿ ಹಚ್ಚಿರುವ ವಿಕ್ಷಿಪ್ತ ಘಟನೆ ಉತ್ತರಪ್ರದೇಶದಲ್ಲಿ (Uttar Pradesh) ನಡೆದಿದೆ.

 

ಉತ್ತರಪ್ರದೇಶದ ಆಗ್ರಾದ ಈ ವ್ಯಕ್ತಿ ತನ್ನ ಪತ್ನಿಯ ಜತೆ ಜಗಳವಾಡಿಕೊಂಡಿದ್ದಾನೆ. ನಂತರ ತನ್ನಲ್ಲಿರುವ ತನ್ನ ಪತ್ನಿಯ ಅಶ್ಲೀಲ ಫೋಟೋಗಳನ್ನು ಪೋಸ್ಟರ್‌ ಮಾಡಿ ಅದನ್ನು ಬೀದಿಗಳಲ್ಲಿ ಅಂಟಿಸಿದ್ದಾನೆ. ಜತೆಗೆ, ಆ ಪೋಸ್ಟರ್ ಗಳ ಮೇಲೆ ಆಕೆಯ ಫೋನ್ ನಂಬರ್ ಅನ್ನು ಬರೆದು ಹಾಕಿದ್ದಾನೆ.

ಪತ್ನಿಗೆ ಅನಾಮಿಕ ಕರೆಗಳು ಬರುವಲು ಶುರುವಾದ ಹಿನ್ನೆಲೆಯಲ್ಲಿ ಪತಿಯ ಈ ಘನ ಕಾರ್ಯದ ಪತ್ನಿಗೆ ತಿಳಿದು ಬಂದಿದೆ. ಘಟನೆ ಬಗ್ಗೆ ಬಗ್ಗೆ ಮಹಿಳೆ ತನ್ನ ಪತಿಯ ವಿರುದ್ಧ ಕಮಲನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಮಾತ್ರವಲ್ಲದೇ ತಾನು ಈ ಘಟನೆಯಿಂದ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಿಳಿಸಿದ್ದಾಳೆ.

ಪೊಲೀಸರು ಸಿಸಿಟಿವಿಗಳಲ್ಲಿ ಪರಿಶೀಲನೆ ನಡೆಸುವ ಸಂದರ್ಭ ಆತನೇ ಪೋಸ್ಟರ್ ಅಂಟಿಸಿದ್ದು ಎಂದು ರುಜುವಾತಾಗಿದೆ. ಕಳೆದ 6 ವರ್ಷಗಳಿಂದ ಪತಿ ಹಾಗೂ ಪತ್ನಿ ಜಗಳವಾಡುತ್ತಿದ್ದು, ವ್ಯಕ್ತಿ ಪತ್ನಿಯ ಮೇಲೆ ಸೇಡು ತೀರಿಸಿಕೊಳ್ಳಲು ಇಂತಹ ಕೃತ್ಯ ಮಾಡಿದ್ದಾನೆ ಎಂದು ವರದಿಯಾಗಿದೆ.

 

ಇದನ್ನು ಓದಿ: Nail Cutting: ಉಗುರನ್ನು ಯಾವಾಗ ಕತ್ತರಿಸಬೇಕು, ಎಲ್ಲಿ ಹಾಕ್ಬೇಕು ಅಂತ ತಿಳ್ಕೊಳ್ಳಿ, ಹಣ ನಿಮ್ಮತ್ತ ಆಕರ್ಷಿತವಾಗುವಂತೆ ಮಾಡ್ಕೊಳ್ಳಿ! 

Leave A Reply

Your email address will not be published.