Odisha: ಒಡಿಶಾ ರೈಲು ದುರಂತ: ಬರೋಬ್ಬರಿ 230 ಕಿ.ಮೀ ಆ್ಯಂಬುಲೆನ್ಸ್‌ನಲ್ಲಿ ಬಂದು, ಶವಗಾರದಲ್ಲಿ ಬಿಸಾಕಿದ್ದ ಮಗನ ಪ್ರಾಣ ಉಳಿಸಿದ ತಂದೆ!

Horrible Odisha Train Accident

Odisha: ಇಡೀ ದೇಶವೇ ಕಂಡು ಕೇಳರಿಯದ ಭೀಕರ ರೈಲು ಅಪಘಾತ ಮೊನ್ನೆ ಮೊನ್ನೆ ಒಡಿಶಾ(Odisha)ದಲ್ಲಿ ಸಂಭವಿಸಿದ್ದು ಅನೇಕ ಕುಟುಂಬಗಳು ಅನಾಥವಾಗಿ ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ. ಈನಡುವೆ ತಂದೆಯೊಬ್ಬ ತನ್ನ ಮಗನನ್ನು ಶವಾಗಾರದಿಂದ ಹೊರತಂದು ಬದುಕಿಸಿರುವ ವಿಚಿತ್ರ ಘಟನೆ ನಡೆದಿದೆ.

ಇಡೀ ದೇಶವನ್ನೇ ತಲ್ಲಣಗೊಳಿಸಿದ್ದ ಒಡಿಶಾ ರೈಲು ದುರಂತದ(odisha train accident) ದಿನ ತಂದೆಯೊಬ್ಬ ಕಣ್ಣೀರು ಸುರಿಸುತ್ತಾ, ಮಗನೆ ಎಲ್ಲಿದ್ದೀಯೋ ಎಂದು ತನ್ನ ಮಗನ ಬದುಕಿರಲಿ ದೇವರೇ ಎಂದು ಪ್ರಾರ್ಥಿಸುತ್ತ ಶವಗಳ ಹೊದಿಕೆಯನ್ನು ತೆರೆತೆರೆದು ನೋಡುತ್ತಿದ್ದ ಮನಮಿಡಿಯುವ ದೃಶ್ಯ ವೈರಲ್ ಆಗಿತ್ತು. ಆದರೆ ಈ ಬೆನ್ನಲ್ಲೇ ತಂದೆಯೊಬ್ಬ ತನ್ನ ಮಗನನ್ನು ಶವಾಗಾರದಿಂದ ಹೊರತಂದು ಬದುಕಿಸಿರುವ ವಿಚಿತ್ರ ಘಟನೆ ನಡೆದಿದೆ.

ಹೌದು, ಹೌರಾದ ಅಂಗಡಿ ಮಾಲೀಕ(Houra shop owner) ಹೆಲರಾಮ್(Helaram) ತನ್ನ 24 ವರ್ಷದ ಮಗ ಬಿಸ್ವಜೀತ್ ಮಲಿಕ್‌ನನ್ನ(Biswajit mallik) ಉಳಿಸಿದ ರೋಚಕ ಕತೆ ಇಲ್ಲಿದೆ. ಕೊರಮಂಡಲ್ ಎಕ್ಸ್‌ಪ್ರೆಸ್ ರೈಲಿಗೆ ಮಗನ ಹತ್ತಿಸಿ ಮನಗೆ ಮರಳಿದ ತಂದೆಗೆ ಕೆಲ ಹೊತ್ತಲ್ಲೇ ಅಪಘಾತದ ಸುದ್ದಿ ಬಂದಿದೆ. ತಕ್ಷಣವೇ ಮಗನಿಗೆ ಕರೆ ಮಾಡಿದ್ದಾರೆ. ಕರೆ ಸ್ವೀಕರಿಸಿದ ಬಿಸ್ವಜಿತ್ ತೀವ್ರವಾಗಿ ಗಾಯಗೊಂಡಿದ್ದೇನೆ ಎಲ್ಲಿದ್ದೇನೆ ಎಂದು ತಿಳಿಯುತ್ತಿಲ್ಲ ಎಂದಷ್ಟೇ ಹೇಳಿದ್ದಾನೆ. ಮತ್ತೆ ಫೋನ್ ಕಟ್ ಮಾಡಿಲ್ಲ. ಆದರೆ ಮಾತಿಲ್ಲ. ಇತ್ತ ತಂದೆ ಮತ್ತಷ್ಟು ಆಘಾತಗೊಂಡಿದ್ದಾರೆ.

ಈ ಕಡೆಯಿಂದ ಹೆಲರಾಮ್​ ತನ್ನ ಮಗನ ಜತೆಗೆ ಹೆಚ್ಚು ಮಾತನಾಡಲು ಪ್ರಯತ್ನಿಸಿದರೂ ಅದು ಸಾಧ್ಯವಾಗಿರಲಿಲ್ಲ. ಕೂಡಲೇ ಹೆಲರಾಮ್​ ಖಾಸಗಿ ಆ್ಯಂಬುಲೆನ್ಸ್​​(Ambulance) ಬುಕ್​ ಮಾಡಿ 230 ಕಿ.ಮೀ. ದೂರದಲ್ಲಿರುವ ಘಟನಾ ಸ್ಥಳಕ್ಕೆ ಹೋಗಿ ಮಗನನ್ನು ಹುಡುಕಾಡಿದ್ದ. ಆದರೆ, ಮಗನು ಗಾಯಾಳುಗಳ ನಡುವೆ ಸಿಗದಿದ್ದಾಗ ದಿಕ್ಕುತೋಚದ ಹೆಲರಾಮ್​ ಅಧಿಕಾರಿಗಳಿಗೆ ಮಗನ ಕುರಿತು ಹೇಳಿದ್ದಾನೆ. ಅದಕ್ಕೆ ಉತ್ತರವಾಗಿ ಅವರು, ಮಗನನ್ನು ಶವಾಗಾರದಲ್ಲಿ ಹುಡುಕುವಂತೆ ಹೇಳಿದ್ದಾರೆ. ಕೂಡಲೇ ತಾತ್ಕಾಲಿಕ ಶವಾಗಾರಕ್ಕೆ ತೆರಳಿದ ಹೆಲರಾಮ್​ ಅಲ್ಲಿನ ಸಿಬ್ಬಂದಿಗೆ ನಡೆದ ಘಟನೆ ಬಗ್ಗೆ ತಿಳಿಸಿ ಒಳ ನಡೆದು ಮಗನಿಗಾಗಿ ತಡಕಾಡಿದ್ದಾನೆ.

ಅಂದಹಾಗೆ ಬಹನಗರದ ಸರ್ಕಾರಿ ಶಾಲೆಯಯನ್ನು(Bahanagar Government school) ತಾತ್ಕಾಲಿಕ ಶವಗಾರವಾಗಿ ಮಾಡಲಾಗಿತ್ತು. ರೈಲು ದುರಂತದಲ್ಲಿ ಮೃತಪಟ್ಟವರನ್ನು ಇದೇ ಶವಗಾರಕ್ಕೆ ಸಾಗಿಸಲಾಗಿತ್ತು. ತ್ವರಿತ ಕಾರ್ಯಾಚರಣೆಯಲ್ಲಿ ಪ್ರಜ್ಞಾಹೀನನಾಗಿದ್ದ ಬಿಸ್ವಜಿತ್ ಮಲಿಕ್‌ನನ್ನು ರಕ್ಷಣಾ ಸಿಬ್ಬಂದಿಗಳು ಶವಗಾರಕ್ಕೆ ಕಳುಹಿಸಿದ್ದಾರೆ. ಶವಗಾರದಲ್ಲಿ ಶವಗಳ ರಾಶಿ ನಡುವೆ ಬಿಸ್ವಜಿತ್ ಮಲಿಕ್ ಬಿದ್ದಿದ್ದ. ಆದರೆ ಸಾರ್ವಜನಿಕರಿಗೆ ಈ ಶವಗಾರಕ್ಕೆ ಪ್ರವೇಶ ಇರಲಿಲ್ಲ.

ಮೂಲೆಯೊಂದರಲ್ಲಿ ಯಾರದ್ದೋ ಕೈ ಅಲುಗಾಡಿದಂತೆ ಹೆಲರಾಮ್​ನಿಗೆ ಭಾಸವಾಗಿದೆ. ತಕ್ಷಣವೇ ಹೆಲರಾಮ್​ ಆ ಕಡೆ ಹೋಗಿದ್ದು, ಮಗನ ಕೈಯನ್ನು ನೋಡಿದ್ದಾನೆ. ಕೂಡಲೇ ಹೆಲರಾಮ್​, ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಮಗನ ಬಗ್ಗೆ ಅಲ್ಲಿನ ಸಿಬ್ಬಂದಿಗೆ ತಿಳಿಸಿ ತಾನು ಆಗಮಿಸಿದ ಆ್ಯಂಬುಲೆನ್ಸ್​ ಮೂಲಕ ಮಗನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾನೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬಿಸ್ವಜಿತ್​ನನ್ನು ಕೋಲ್ಕತಾಗೆ ರವಾನಿಸಿದ್ದು ಅಲ್ಲಿ​ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

 

ಇದನ್ನು ಓದಿ: Bidar: ಊರಿಗೆ ಹೋಗಲು ಬಸ್ಸಿಲ್ಲ ಅಂತ ಬಸ್ ಸ್ಟ್ಯಾಂಡ್ ನಲ್ಲಿ ನಿಲ್ಲಿಸಿದ್ದ KSRTC ಬಸ್ ಚಲಾಯಿಸಿಕೊಂಡು ಹೊರಟ ಭೂಪ

Leave A Reply

Your email address will not be published.