Mumbai: ಹುಡುಗರೇ ಎಚ್ಚರ..! ಹುಡ್ಗಿಯರಿಗಿನ್ನು ‘ಒಳ್ಳೆ ಫಿಗರ್’ ಅಂದ್ರೆ ಲೈಂಗಿಕ ಕಿರುಕುಳ ಕೊಟ್ಟಂತೆ! ಕೋರ್ಟ್ ಅಭಿಪ್ರಾಯ

Calling women a good figure is harrasment say Mumbai Court

Mumbai court: ಹದಿಹರಯದ ಪ್ರಾಯದಲ್ಲಿ(Teenage) ಆಕರ್ಷಣೆ ಎಂಬುದು ಸಹಜ. ಆದರೆ ಇದನ್ನು ಜಾಸ್ತಿ ತೋರ್ಪಡಿಸುವುದು ಹಡುಗುರೆಂದೇ ಹೇಳಬಹುದು. ಕೆಲವೊಮ್ಮೆ ಸುಂದರ ಹುಡುಗಿಯರು ಕಂಡರಂತೂ ಬಗೆಯಾಗಿ ಕಮೆಂಟ್ ಹಾಕುತ್ತಾ, ರೇಗಿಸುತ್ತಿ ಸೂಪರ್, ಬ್ಯೂಟಿಫುಲ್(Beautiful)ಎಂದೆಲ್ಲಾ ಚುಡಾಯಿಸುತ್ತಾರೆ. ಅದರಲ್ಲಿ ಒಳ್ಳೆ ಫಿಗರ್(Good figure) ಅನ್ನೋದು ಕೂಡ ಸೇರಿದೆ. ಆದರೆ ಹುಡುಗರೇ ಇನ್ನು ಹುಡುಗಿಯರಿಗೆ ಹಾಗೆ ಹೇಳುವಹಾಗಿಲ್ಲ. ಹಾಗೇನಾದರೂ ಅಂದ್ರೆ ಅದು ಲೈಂಗಿಕ ಕಿರುಕುಳಕ್ಕೆ ಸಮವಂತೆ!!

 

ಹೌದು, ಇನ್ನು ಮುಂದೆ ಮಹಿಳೆಯರಿಗಾಗಲಿ ಅಥವಾ ಮಹಿಳಾ ಸಹೋದ್ಯೋಗಿಗಳಿಗೆ ಅವರನ್ನು ಮೆಚ್ಚಿಸಲೋ, ರೇಗಿಸಲೋ ‘ನೀನು ಒಳ್ಳೆಯ ಫಿಗರ್‌, ಉತ್ತಮವಾಗಿ ಫಿಗರ್‌ ಮೇಂಟೇನ್‌ ಮಾಡಿದ್ದೀಯಾ, ನಮ್ಮೊಂದಿಗೆ ಆಚೆ ಬರುತ್ತೀಯಾ?’ ಎಂದು ಕೇಳಿ ಯಾಮಾರಿದ್ರೆ, ಜೈಲು ಪಾಲಾಗೋದಂತೂ ಗ್ಯಾರಂಟಿ. ಯಾಕೆಂದರೆ ಇನ್ನು ಒಳ್ಳೆ ಫಿಗರ್ ಅನ್ನೋದು ಕೂಡ ಲೈಂಗಿಕ ಕಿರುಕುಳಕ್ಕೆ ಸಮ ಎಂದು ಮುಂಬೈ ಸೆಷನ್ಸ್‌ ಕೋರ್ಟ್(Mumbai sessions court)ಹೇಳಿದೆ.

ಅಂದಹಾಗೆ ರಿಯಲ್ ಎಸ್ಟೇಟ್‌(Real estate) ಸಂಸ್ಥೆಯೊಂದರ ಕಚೇರಿಯಲ್ಲಿ ಅಸಿಸ್ಟಂಟ್‌ ಮ್ಯಾನೇಜರ್‌(Assistant manger)ಆಗಿರುವ 42 ವರ್ಷದ ಪುರುಷನೊಬ್ಬ ,30 ವರ್ಷದ ಮಹಿಳಾ ಸಹೋದ್ಯೋಗಿಯೊಬ್ಬರಿಗೆ ಇದೇ ರೀತಿ ಹೇಳಿದ್ದರು. ಇದರ ಸಲುವಾಗಿ ಆಕೆ ಏಪ್ರಿಲ್ 22ರಂದು ಮ್ಯಾನೇಜರ್‌ ವಿರುದ್ಧ ದೂರು ದಾಖಲಿಸಿದ್ದರು. ಈ ವಿಚಾರಣೆಯನ್ನು ಕೈಗೆತ್ಥಿಕೊಂಡ ಕೋರ್ಟ್, ಈ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿ ಹೀಗೆ ಅಭಿಪ್ರಾಯ ಪಟ್ಟಿದೆ.

ಅಲ್ಲದೇ ಆರೋಪಿಯನ್ನು ನಿರೀಕ್ಷಣಾ ಜಾಮೀನಿನ ಮೇಲೆ ಬಿಡುಗಡೆ ಮಾಡಲು ಇದು ಸೂಕ್ತ ಪ್ರಕರಣವಲ್ಲ. ಇದು ಗಂಭೀರ ಪ್ರಕರಣವಾಗಿದ್ದು ಆರೋಪಿಯ ವಿಚಾರಣೆ ಅಗತ್ಯವಿದೆ ಎಂದಿದೆ. ಜೊತೆಗೆ ಮಾ.1 ರಿಂದ ಏ.14ರ ವರೆಗೆ ಆರೋಪಿಯು ಮಹಿಳೆಗೆ ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ಸಾಕ್ಷಿಗಳು ಹಾಗೂ ದಾಖಲೆಗಳನ್ನು ಸಲ್ಲಿಸಲಾಗಿದೆ.

ಇದನ್ನೂ ಓದಿ: Bihar: 2ನೇ ಬಾರಿಗೆ ಕುಸಿದುಬಿತ್ತು ಬಿಹಾರದಲ್ಲಿ ನಿರ್ಮಾಣ ಆಗಾತಿರೋ ಬೃಹತ್ ಸೇತುವೆ! ವೈರಲ್ ಆಯ್ತು ಭಯಾನಕ ವಿಡಿಯೋ!!

Leave A Reply

Your email address will not be published.