

Shocking video: ಬ್ಯಾಡ್ಮಿಂಟನ್ ಆಟವಾಡುತ್ತಿದ್ದಂತೆ ಹೃದಯಾಘಾತಗೊಂಡು ಸಾವನ್ನಪ್ಪಿದ ಘಟನೆಯೊಂದು ತೆಲಂಗಾಣದಲ್ಲಿ ನಡೆದಿದೆ ಎಂದು ವರದಿಯಾಗಿದೆ.
ತೆಲಂಗಾಣ ರಾಜ್ಯದ ಜಗಿತ್ಯಾಲ ಜಿಲ್ಲೆಯ ಜಗಿತ್ಯಾಲ ಕ್ಲಬ್‌ನಲ್ಲಿ ಶುಕ್ರವಾರ ಬೆಳಿಗ್ಗೆ ಬೂಸಾ ವೆಂಕಟ ರಾಜ ಗಂಗಾರಾಮ್ ಎಂಬ ಯುವಕ ತನ್ನ ಕೆಲವು ಸ್ನೇಹಿತರೊಂದಿಗೆ ವಾಕಿಂಗ್‌ಗೆ ಎಂದು ಬಂದಿದ್ದನು. ವಾಗಿಂಗ್ ಬಳಿಕ ಅಲ್ಲೇ ಸ್ನೇಹಿತರೊಂದಿಗೆ ಬ್ಯಾಡ್ಮಿಂಟನ್ ಆಡಲು ಶುರು ಮಾಡಿದ್ದಾನೆ, ಸ್ವಲ್ಪ ಹೊತ್ತಲ್ಲೇ ಬ್ಯಾಡ್ಮಿಂಟನ್ ಆಡುತ್ತಿರೋದನ್ನು ನೋಡ ನೋಡುತ್ತಿದ್ದಂತೆ ಆಟವಾಡುತ್ತಿದ್ದ ಯುವಕ ಕುಸಿದು ಬಿದ್ದಿನು. ಜೊತೆ ಆಟವಾಡುತ್ತಿದ್ದ ಗೆಳೆಯರೂ ಓಡೋಡಿ ಬಂದು ಮತ್ತೆ ಉಸಿರು ತರೋದಕ್ಕೆ ಎದೆಯನ್ನು ಒತ್ತುತ್ತಿರೋದನ್ನು ನೋಡಬಹುದಾಗಿದೆ.
ಉತ್ತಮ ಬ್ಯಾಡ್ಮಿಂಟನ್ ಆಟಗಾರನ ಜೀವ ಉಳಿಸಲು ಶತ ಪ್ರಯತ್ನ ಮಾಡಿದ್ದರೂ ಫಲಿಸಲಿಲ್ಲ ಎಂಬುವುದು ಅಘಾತಕಾರಿ ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣಬಹುದಾಗಿದೆ.
ಅಘಾತಕಾರಿ ವಿಡಿಯೋ(Shocking video) :













