IPL 2023 final: IPL ಫೈನಲ್ ವೇಳೆ 2,000ಕ್ಕೂ ಅಧಿಕ ಕಾಂಡೋಮ್ ಡೆಲಿವರಿ! ಗ್ರೌಂಡಲ್ಲಿ ಹೆಚ್ಚು ಸೇಲ್ ಆಗಿದ್ದೇ ಕಾಂಡೋಮ್‌, ಬಿರಿಯಾನಿ!

Delivery of over 2,000 condoms during IPL final

IPL 2023 final: 2023ರ ಐಪಿಎಲ್(IPL 2023 final) ಮುಕ್ತಾಯವಾಗಿದ್ದು, CSK ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ. 215 ರನ್‌ಗಳ ಗುರಿಯೊಂದಿಗೆ ಕಣಕ್ಕೆ ಇಳಿದ ಸಿಎಸ್‌ಕೆ(CSK) 15 ಓವರ್‌ಗಳಲ್ಲಿ ಐದು ವಿಕೆಟ್‌ಗಳ ನಷ್ಟಕ್ಕೆ 171 ರನ್ ಗಳಿಸಿತು. ಈ ಮೂಲಕ ಚೆನ್ನೈ ಸೂಪರ್​ ಕಿಂಗ್ಸ್ 5ನೇ ಬಾರಿಗೆ ಐಪಿಎಲ್​ ಟ್ರೋಫಿ(Trophy) ಎತ್ತಿ ಹಿಡಿದು ದಾಖಲೆ ನಿರ್ಮಿಸಿತು. ಅಚ್ಚರಿ ಎಂದರೆ ಈ ಪಂದ್ಯವನ್ನು ವೀಕ್ಷಿಸಲು ಬಂದ ಜನರು ಕ್ರಿಡಾಂಗಣಕ್ಕೇ ಅತೀ ಹೆಚ್ಚು ಕಾಂಡೋಮ್(Condoms) ಹಾಗೂ ಬಿರಿಯಾನಿ(Biryani)ಯನ್ನು ಆರ್ಡರ್ ಮಾಡಿ ದಾಖಲೆ ನಿರ್ಮಿಸಿದ್ದಾರೆ.

ಹೌದು, ಕಳೆದ ರಾತ್ರಿಯ ಪಂದ್ಯವನ್ನು 75 ಸಾವಿರ ಮಂದಿ ಸ್ಟೇಡಿಯಂಗೆ ಬಂದು ವೀಕ್ಷಿಸಿದ್ದಾರೆ. ಆದರೆ ಪಂದ್ಯದ ನಡುವೆ ಫುಡ್‌ ಡೆಲಿವರಿ ಸ್ವಿಗ್ಗಿ(Swiggy) ಮೂಲಕ ವಿವಿದ ಖಾದ್ಯಗಳನ್ನು, ಬೇರೆ ಬೇರೆ ವಸ್ತುಗಳನ್ನು ವೀಕ್ಷಕರು ಆರ್ಡರ್ ಮಾಡಿ ಪಡೆದಿದ್ದಾರೆ. ಆದರೆ ಇದರಲ್ಲಿ ಹೆಚ್ಚು ಕಾಂಡೋಮ್ ಇರೋದು ವಿಶೇಷ. ಈ ಕುರಿತು ಸ್ವಿಗ್ಗಿ ಮಾಡಿರುವ ಟ್ವೀಟ್‌ ಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್‌ ಆಗಿದೆ.

ಅಂದಹಾಗೆ ಪಂದ್ಯ ನಡೆಯುತ್ತಿರುವಾಗ ಫುಡ್‌ ಡೆಲಿವರಿ ಸ್ವಿಗ್ಗಿ ಆಯಪ್(Swiggy aap)ಮೂಲಕವಾಗಿ, ಪಂದ್ಯದ ವೇಳೆ ಪ್ರತಿ ನಿಮಿಷಕ್ಕೆ 212 ಬಿರಿಯಾನಿಗಳು ಆರ್ಡರ್‌ ಆಗಿದೆ. ಒಟ್ಟಾಗಿ ಹೇಳುವುದಾದರೆ 12 ಮಿಲಿಯನ್‌ ಬಿರಿಯಾನಿಗಳು ಫೈನಲ್‌ ಪಂದ್ಯದ ವೇಳೆ ಆರ್ಡರ್‌ ಆಗಿವೆ. ಇದರೊಂದಿಗೆ ಸ್ವಿಗ್ಗಿ ಇನ್‌ಸ್ಟಾಮಾರ್ಟ್ ನಲ್ಲಿ ನೇರವಾಗಿ ಕ್ರಿಡಾಂಗಣಕ್ಕೆ ಬರೋಬ್ಬರಿ 2423 ಕಾಂಡೋಮ್‌ಗಳನ್ನು ಆರ್ಡರ್‌ ಮಾಡಿದ್ದಾರೆ ಎಂದು ಸ್ವಿಗ್ಗಿ ಟ್ವೀಟ್‌ ಮಾಡಿದೆ.

ಆಹಾರ ವಿತರಣಾ ಅಪ್ಲಿಕೇಶನ್ ಸ್ವಿಗ್ಗಿ ಟ್ವೀಟ್‌ನಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು, ಈ ಸೀಸನ್ ವೇಳೆ ಬಿರಿಯಾನಿಯ 12 ಮಿಲಿಯನ್ ಆರ್ಡರ್‌ಗಳನ್ನು ಪಡದಿರುವುದಾಗಿ, ತನ್ನ ಅಪ್ಲಿಕೇಶನ್‌ನಲ್ಲಿ ನಿಮಿಷಕ್ಕೆ 212 ಬಿರಿಯಾನಿಗಳನ್ನು ವಿತರಿಸಿರುವುದಾಗಿದೆ ಎಂದು ಬಹಿರಂಗಪಡಿಸಿದೆ.

ಇದಕ್ಕೂ ಮುನ್ನ 2020 ರ ಐಪಿಎಲ್ ಫೈನಲ್​ ಪಂದ್ಯದ ವೇಳೆ ಸ್ವಿಗ್ಗಿಯಿಂದ ಇದೇ ರೀತಿ ಆರ್ಡರ್​ಗಳು ಹರಿದುಬಂದಿದ್ದವು. ಆ ವೇಳೆ ಚಿಕನ್ ಬಿರಿಯಾನಿ, ಬಟರ್ ನಾನ್ ಮತ್ತು ಮಸಾಲಾ ದೋಸೆ ಶೇ.30ರಷ್ಟು ಏರಿಕೆ ಕಂಡಿತ್ತು ಎಂದು ಟ್ವೀಟ್​ ಮಾಡಿದೆ. ಒಟ್ಟಿನಲ್ಲಿ ಫೈನಲ್​ ಪಂದ್ಯದ ವೇಳೆ ಆಹಾರಗಳನ್ನು ಸೇವಿಸಲು ಕ್ರಿಕೆಟ್​ ಅಭಿಮಾನಿಗಳು ಇಷ್ಟೊಂದು ದೊಡ್ಡಮಟ್ಟದಲ್ಲಿ ಆರ್ಡರ್​ ಮಾಡಿದ್ದಾರೆ ಎಂದು ತಿಳಿದುಬರುತ್ತಿದೆ. ಪ್ರತಿ ವರ್ಷವೂ ಐಪಿಎಲ್​ ವೇಳೆ ಈ ರೀತಿ ಫುಡ್​ ಡಿಲೇವರಿ ಆಗುವುದು ಸಹಜವಾಗಿದೆ.

 

 

ಇದನ್ನು ಓದಿ: Bangalore City Police Commissioner: ಬೆಂಗಳೂರು ನಗರ ಪೊಲೀಸ್ ಕಮಿಷನರ್ ಆಗಿ ಬಿ ದಯಾನಂದ ನೇಮಕ 

Leave A Reply

Your email address will not be published.