Yellow Teeth: ಹಳದಿ ಬಣ್ಣದ ಹಲ್ಲುಗಳನ್ನು ತಕ್ಷಣ ಬಿಳಿ ಆಗಿ ಪರಿವರ್ತಿಸಿ: ಈ ಸಿಂಪಲ್ ಟಿಪ್ಸ್ ನಿಮಗಾಗಿ
Health Tips for yellow Teeth problem
Yellow Teeth Problem: ಜನರು ಮೊದಲು ಗಮನಿಸುವುದೇ ನಮ್ಮ ನಗು. ನಗುವಾಗ, ಮಾತನಾಡುವಾಗ ಬಾಯಿಯ ಒಳಗಿಂದ ಹಲ್ಲು ಇಣುಕುತ್ತದೆ. ಹಲ್ಲು ಹಳದಿ ಬಣ್ಣ (Yellow Teeth) ಇದ್ದರೆ ಮಾತನಾಡಲು ಬಿಡಿ ಮುಗುಳ್ನಗೆ ಬೀರಲು ಸಹ ಮುಜುಗರವಾಗುತ್ತದೆ. ಹಾಗಾಗಿ ಅದೆಷ್ಟೋ ಜನರು ಹಳದಿ ಹಲ್ಲಿನ ಸಮಸ್ಯೆಯಿಂದ (Yellow Teeth Problem) ಮುಕ್ತರಾಗಲು ಹಲವು ಪ್ರಯತ್ನಗಳನ್ನು ಮಾಡುತ್ತಾರೆ. ಆದರೆ, ಕೆಲವರ ಪ್ರಯತ್ನ ವಿಫಲವಾಗುತ್ತದೆ. ಇದಕ್ಕೆ ನೀವು ಚಿಂತಿಸುವ ಅಗತ್ಯವಿಲ್ಲ. ಹೌದು, ನಿಮ್ಮ ಹಲ್ಲು ಹಳದಿ ಬಣ್ಣದಿಂದ ಮುಕ್ತವಾಗಿ, ಶುಭ್ರವಾಗಿ ಮುತ್ತಿನಂತ ಹೊಳಪು ಪಡೆಯಲು ಈ ಸಿಂಪಲ್ ಟಿಪ್ಸ್ (yellow Teeth remedy) ಫಾಲೋ ಮಾಡಿ.
ಹಣ್ಣುಗಳು ಮತ್ತು ತರಕಾರಿಗಳು: ಹಲ್ಲಿನ ಹಳದಿಯಾಗುವುದನ್ನು ತಡೆಯಲು ನೀವು ಪ್ರತಿದಿನ ಹಸಿರು ತರಕಾರಿಗಳು ಮತ್ತು ಹಣ್ಣುಗಳನ್ನು ಸೇವಿಸಿ. ಹಸಿರು ತರಕಾರಿಗಳು ಮತ್ತು ಹಣ್ಣುಗಳು (fruit) ಹಲ್ಲುಗಳನ್ನು ಹೊಳೆಯುವಂತೆ ಮಾಡುವುದಲ್ಲದೆ ಅನೇಕ ರೋಗಗಳಿಂದ ರಕ್ಷಿಸುತ್ತದೆ. ಹೆಚ್ಚು ನೀರಿನ ಅಂಶ ಇರುವ ಹಣ್ಣು ಮತ್ತು ತರಕಾರಿಗಳನ್ನು ಸೇವಿಸುವುದರಿಂದ ಹಲ್ಲುಗಳು ಆರೋಗ್ಯಕರವಾಗಿರುತ್ತದೆ. ಫೈಬರ್ ಅಂಶವನ್ನು ಒಳಗೊಂಡಿರುವ ಹಸಿತರಕಾರಿಗಳು ಮತ್ತು ಹಣ್ಣುಗಳ ಸೇವನೆಯನ್ನು ಮಾಡಿದರೂ ಒಳ್ಳೆಯದು. ಇವುಗಳನ್ನು ಸೇವಿಸುವುದೂ ಕೂಡ ಹಲ್ಲಿನ ಹಳದಿ ಕರೆಯನ್ನು ದೂರಮಾಡಲು ಸಹಕಾರಿಯಾಗಿದೆ.
ಅಡಿಗೆ ಸೋಡಾ: ಟೂತ್ ಪೇಸ್ಟ್’ನೊಂದಿಗೆ (tooth paste) ಅಡಿಗೆ ಸೋಡಾವನ್ನು ಮಿಶ್ರಣ ಮಾಡಿ ನಿಮ್ಮ ಹಲ್ಲುಗಳನ್ನು ಉಜ್ಜುವುದರಿಂದ ನಿಮ್ಮ ಹಲ್ಲುಗಳು ತಕ್ಷಣವೇ ಬಿಳಿಯಾಗುತ್ತವೆ. ಬೇಕಿಂಗ್ ಸೋಡಾ ಕ್ಷಾರೀಯ ಗುಣವನ್ನು ಹೊಂದಿದೆ. ಇದು ಬ್ಯಾಕ್ಟೀರಿಯಾವನ್ನು ಬೆಳೆಯದಂತೆ ತಡೆಯುತ್ತದೆ. ಇದಕ್ಕಾಗಿ, ಬೆಳಿಗ್ಗೆ ಮತ್ತು ರಾತ್ರಿಯಲ್ಲಿ ನಿಮ್ಮ ಹಲ್ಲುಗಳನ್ನು ಅಡಿಗೆ ಸೋಡಾದಿಂದ ಸ್ವಚ್ಛಗೊಳಿಸಿ.
ನಿಂಬೆ ಹಣ್ಣು: ನಿಂಬೆ ಹಣ್ಣನ್ನು (lemon) ಸಾಮಾನ್ಯವಾಗಿ ಆಹಾರದ ರುಚಿಯನ್ನು ಹೆಚ್ಚಿಸಲು ಬಳಸಲಾಗುತ್ತದೆ. ಇದರಿಂದ ಆರೋಗ್ಯಕ್ಕೂ ಸಾಕಷ್ಟು ಪ್ರಯೋಜನಗಳೂ ಇವೆ. ಆಯಾಸದ ಸಮಸ್ಯೆ, ಅಜೀರ್ಣ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳಿಗೆ ನಿಂಬೆ ಪಾನೀಯ ರಾಮಬಾಣವಾಗಿದೆ. ನಿಂಬೆಯನ್ನು ವಿವಿಧ ಜೀವಸತ್ವಗಳು ಮತ್ತು ಖನಿಜಗಳ ನಿಧಿ ಎಂದೇ ಪರಿಗಣಿಸಲಾಗುತ್ತದೆ. ಸದ್ಯ ಈ ನಿಂಬೆ ಹಣ್ಣಿನಿಂದ ಹಳದಿ ಹಲ್ಲನ್ನು ಹೋಗಲಾಡಿಸಬಹುದಾಗಿದೆ.
ನೀರು ಹಾಗೂ ಲಿಂಬೆ ಹಣ್ಣಿನ ರಸ ಚೆನ್ನಾಗಿ ಮಿಶ್ರಣಮಾಡಿ ಬಾಯಿ ತೊಳೆದುಕೊಳ್ಳಬೇಕು. ಈ ರೀತಿ ಮಾಡುವುದರಿಂದ ಹುಲ್ಲು ಕ್ರಮೇಣ ಬಿಳಿ ಬಣ್ಣಕ್ಕೆ ತಿರುಗುತ್ತದೆ. ಆದರೆ ವಾರದಲ್ಲಿ ಎರಡಕ್ಕಿಂತ ಹೆಚ್ಚು ಬಾರಿ ಹೀಗೆ ಮಾಡಬಾರದು.
ಸ್ಟ್ರಾಬೆರಿ ಹಣ್ಣು: ಇದು ಅತ್ಯುತ್ತಮ ಪೌಷ್ಠಿಕಾಂಶದಿಂದ ಕೂಡಿದೆ. ಈ ಹಣ್ಣು ಹಲ್ಲುಗಳನ್ನು ಹೊಳೆಯುವಂತೆ ಮಾಡುತ್ತದೆ. ಸ್ಟ್ರಾಬೆರಿ ಹಣ್ಣು (strawberry) ಮೊಲಿಕ್ ಆಮ್ಲವನ್ನು ಹೊಂದಿರುತ್ತದೆ. ಇದು ಹಲ್ಲಿನ ಪ್ಲೇಕ್ ಅನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಹಲ್ಲುಗಳನ್ನು ಬೆಳ್ಳಗಾಗಿಸಲು, ಸ್ಟ್ರಾಬೆರಿ ಹಣ್ಣುಗಳನ್ನು ಚೆನ್ನಾಗಿ ಜಜ್ಜಿ, ಅದರಿಂದ ರಸ ತೆಗೆದು ಅದನ್ನು ನಿಮ್ಮ ಹಲ್ಲುಗಳ ಮೇಲೆ ಮೂರು ನಿಮಿಷಗಳ ಕಾಲ ಚೆನ್ನಾಗಿ ಉಜ್ಜಿರಿ. ನಂತರ ನೀವು ನೀರಿನಿಂದ ಬಾಯಿ ಮುಕ್ಕಳಿಸಿ.
ಬೇವಿನ ಕಡ್ಡಿಯಿಂದ ಹಲ್ಲು ಉಜ್ಜಿದರೆ ನಿಮ್ಮ ಹಲ್ಲು ಪಳ ಪಳನೇ ಹೊಳೆಯುತ್ತದೆ. ಆದರೆ ನಿಮಗೆ ಈ ಕಡ್ಡಿಯನ್ನು ಹುಡುಕಲು ಕಷ್ಟ ಆಗಬಹುದು. ಹಾಗಾಗಿ ಆನ್ಲೈನ್ನಲ್ಲಿ ಸಿಗುವ ಕರಿ ( Charcoal ) ಬಳಸಬಹುದು. ಇದನ್ನು ಬಳಸಿದರೆ ಕೇವಲ 1 ತಿಂಗಳಲ್ಲಿ ನಿಮ್ಮ ಹಲ್ಲು ಬಿಳಿ ಬಣ್ಣಕ್ಕೆ ತಿರುಗುತ್ತದೆ.
ಪೇರಲ ಎಲೆಗಳ ರಸದಿಂದ ಕೂಡ ಹಲ್ಲುಜ್ಜಿದರೆ, ಹಲ್ಲುಗಳು ಬಿಳಿಯಾಗಿರುತ್ತವೆ. ಜೊತೆಗೆ ವಸಡಿನ ಸಮಸ್ಯೆಯೂ ನಿವಾರಣೆಯಾಗುತ್ತದೆ. ಹಾಗೇ ಸಾಸಿವೆ ಎಣ್ಣೆಯನ್ನು ಸ್ವಲ್ಪ ಉಪ್ಪು ಬೆರೆಸಿ ಹಲ್ಲುಗಳ ಮೇಲೆ ಚೆನ್ನಾಗಿ ಉಜ್ಜಿಕೊಳ್ಳಿ. ಕಪ್ಪು ಕಲೆಗಳು ಅಥವಾ ಹಳದಿ ಬಣ್ಣವು ಮಾಯವಾಗುತ್ತದೆ.
ಇದನ್ನೂ ಓದಿ: Road Accident: ಭೀಕರ ರಸ್ತೆ ಅಪಘಾತ, 7 ಮಂದಿ ಅಸ್ಸಾಂ ಇಂಜಿನೀಯರಿಂಗ್ ವಿದ್ಯಾರ್ಥಿಗಳ ಸಾವು!