Uttar pradesh: ಕಾಲೇಜಿನಲ್ಲಿ ವಿದ್ಯಾರ್ಥಿನಿಯರಿಗೆ ನಮಾಜ್​ ಮಾಡಲು ತರಬೇತಿ ನೀಡುತ್ತಿರೋ ಶಿಕ್ಷಕಿ! ವೈರಲ್ ಆಯ್ತು ವಿಡಿಯೋ!!

Uttar Pradesh Teacher instructs college girls how to perform namaz in classroom

Teacher instructs Namaz to-Student :ಇತ್ತೀಚಿನ ದಿನಗಳಲ್ಲಿ ಶಾಲಾ ಕಾಲೇಜು(School- Collages) ಗಳಲ್ಲಿ ವಿದ್ಯಾರ್ಥಿಗಳನ್ನು ಧಾರ್ಮಿಕ ವಿಚಾರದ ಪ್ರಚೋದನೆಗೆ ಬಳಸಿಕೊಳ್ಳುವ ಪ್ರಕರಣಗಳು ಹೆಚ್ಚಾಗುತ್ತಿವೆ. ಅಂತೆಯೇ ಇದೀಗ ಕಾಲೇಜಿನಲ್ಲಿ ಶಿಕ್ಷಕಿಯೊಬ್ಬರು ವಿದ್ಯಾರ್ಥಿನಿಯರಿಗೆ ನಮಾಜ್​ ಮಾಡುವುದನ್ನು ಹೇಳಿಕೊಡುತ್ತಿರುವ (Teacher instructs Namaz to-Student) ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ಹೌದು, ಉತ್ತರಪ್ರದೇಶದ(Uttar pradesh) ಭಾಗ್​ಪತ್​ ಜಿಲ್ಲೆಯ(Bhagpat district) ಕಾಲೇಜೊಂದರಲ್ಲಿ ಶಿಕ್ಷಕಿಯೊಬ್ಬರು ವಿದ್ಯಾರ್ಥಿನಿಯರಿಗೆ ನಮಾಜ್​ ಮಾಡುವುದನ್ನು ಹೇಳಿಕೊಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​(Viral) ಆಗಿದೆ. ಇದರಿಂದ ಕೆರಳಿದ ಹಿಂದೂ ಪರ ಸಂಘಟನೆಗಳು ಕಠಿಣ ಕಾನೂನು ಕ್ರಮ ಜರುಗಿಸುವಂತೆ ಹಿಂದೂ ಆಗ್ರಹಿಸಿವೆ. ಈ ಹಿನ್ನೆಲೆಯಲ್ಲಿ ಭಾಗ್​ಪತ್​ ಪೊಲೀಸರು(Bhagpath Police) ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಅಂದಹಾಗೆ ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು ಇದರಲ್ಲಿ ಶಿಕ್ಷಕಿ ಕುಳಿತುಕೊಂಡು ವಿದ್ಯಾರ್ಥಿನಿಯರಿಗೆ ಸೂಚನೆ ನೀಡಬಹುದನ್ನು ಕಾಣಬಹುದಾಗಿದೆ. ಅಲ್ಲದೆ ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಶಾಲಾ ಆಡಳಿತ ಮಂಡಳಿ ಸದಸ್ಯರು ನಾಟಕದ ರಿಹರ್ಸಲ್​ ವೇಳೆ ಹಾಗೆ ಮಾಡಲಾಗಿತ್ತು ಎಂದು ವಿವರಣೆ ನೀಡಿದ್ಧಾರೆ.

ಇನ್ನು ಹೋಶಿಯಾರಿ ದೇವಿ ಗರ್ಲ್ಸ್ ಇಂಟರ್ ಕಾಲೇಜ್​ ಮುಖ್ಯೋಪಾಧ್ಯಾಯ ಮುನೇಶ್ ಚೌಧರಿ ಕಳೆದ ವರ್ಷ ಅಕ್ಟೋಬರ್​ ಸಮಯದಲ್ಲಿ ನಾಟಕದ ಅಭ್ಯಾಸದ ವೇಳೆ ಹುಡುಗಿಯರು ನಮಾಜ್​ ಮಾಡುವುದಿತ್ತು. ಅಂತಿಮವಾಗಿ ಆ ದೃಶ್ಯವನ್ನು ನಾಟಕದಿಂದ ತೆಗೆದುಹಾಕಲಾಯಿತು ವೈರಲ್​ ಆಗಿರುವ ವಿಡಿಯೋ ಆ ಸಮಯದಲ್ಲಿ ತೆಗೆದಿದ್ದು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Kuvempu University: ಮಗಳ ಹುಟ್ಟುಹಬ್ಬಕ್ಕೆ ಲೆಟರ್ ಹೆಡ್ ಬಳಸಿ ಸುತ್ತೋಲೆ ಹೊರಡಿಹಿದ ಕುವೆಂಪು ವಿ.ವಿ ಕುಲಪತಿ!! ನೆಟ್ಟಿಗರಿಂದ ಕ್ಲಾಸ್

Leave A Reply

Your email address will not be published.