Fake Account: ನಕಲಿ ಖಾತೆ ತೆರೆದು ಪೊಲೀಸರಿಗೂ ಹ್ಯಾಕರ್ಸ್ ಕಿರಿಕಿರಿ : ಸಂದೇಶ ಕಳಿಸಿ ಹಣಕ್ಕೆ ಬೇಡಿಕೆಯಿಟ್ಟ ಖದೀಮರು
Hackers also annoy police by opening fake account
Fake Account: ಆಧುನಿಕ ಜಗತ್ತಿನಲ್ಲಿ ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚಳವಾದಂತೆ ಹ್ಯಾಕರ್ಸ್ಗಳ (Fake Account) ಕಿರಿಕಿರಿ ಕಮ್ಮಿಯಾಗಿಲ್ಲ, ಅದರಲ್ಲೂ ಜನಸಾಮಾನ್ಯರು ಇಂತಹ ಬಲೆಗೆ ಬೀಳುವುದು ಸಹಜ ಆದ್ರೆ ಇದೀಗ ವಿಜಯನಗರದಲ್ಲಿ ಪೊಲೀಸರಿಗೂ ಬಲೆ ಬೀಸಿದ ಘಟನೆಯೊಂದು ಬೆಳಕಿಗೆ ಬಂದಿದೆ.
ಎಸ್ಪಿ ವಿಜಯನಗರ ಎಂಬ ಹೆಸರಿನಲ್ಲಿ ನಕಲಿ ಖಾತೆ ತೆರೆದು ಎಸ್ಪಿ ಹರಿಬಾಬು ಅವರ ಫೋಟೋವನ್ನು ಡಿಪಿಗೆ ಬಳಸಿಕೊಂಡು ಖಾತೆಯಿಂದ ಸಂದೇಶ ಕಳಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಸಂದೇಶವನ್ನು ತಿಳಿದ ವ್ಯಕ್ತಿಯೊಬ್ಬರು ಮಾಹಿತಿ ನೀಡಿದ್ದು ಕೂಡಲೇ ಎಚ್ಚೆತ್ತಕೊಂಡು ಖತರ್ನಾಕ್ ಹ್ಯಾಕರ್ಸ್ಗಳ ಹೆಡೆಮುರಿಕಟ್ಟಲು ಮುಂದಾಗಿದ್ದಾರೆ. ಅಲ್ಲದೇ ಕೂಡಲೇ ಸೈಬರ್ ದರೋಡೆಕೋರರಿಗೆ ಬುದ್ದಿಕಲಿಸಲು ಎಚ್ಚೆತ್ತುಕೊಂಡು ನನ್ನ ಹೆಸರಿನ ನಕಲಿ ಖಾತೆಯನ್ನು ತೆರೆದ ಹಣದ ಬೇಡಿಕೆ ಇಡಲಾಗುತ್ತಿದೆ ಎಂದು ಸೂಚನೆ ನೀಡಿದ್ದಾರೆ ಅಲ್ಲದೇ ನಕಲಿ ಖಾತೆಯನ್ನು ಸ್ಥಗಿತ ಗೊಳಿಸಲು ಪೊಲೀಸರಿಗೆ ದೂರು ನೀಡಲಾಗಿದೆ ಎಂದು ತಿಳಿಯಲಾಗಿದೆ. ಈ ಕೇಸ್ ಸಂಬಂಧಿಸಿ ಓರ್ವ ಆರೋಪಿಯನ್ನು ಬಂಧನ ಮಾಡಲಾಗಿದೆ ಎಂದು ವರದಿಯಾಗಿದೆ.
ಇದನ್ನು ಓದಿ: Bengaluru: ಬೆಂಗಳೂರು ಮಹಾ ಮಳೆಗೆ ಅಂಡರ್ಪಾಸ್ ಅವಘಡ : ನಿರ್ಲಕ್ಷ್ಯವಹಿಸಿದ ಕಾರು ಚಾಲಕ ಬಂಧನ