Lubna Amir: ಈ ಖ್ಯಾತ ನಟಿ ತನ್ನದೇ ಅಶ್ಲೀಲ ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಿದ್ದಳು!! ಪ್ರಿಯಕರ ಬಿಚ್ಚಿಟ್ಟ ರೋಚಕ ಸತ್ಯ!!

Lubna Amir uploading her own obscene video

Lubna Amir : ಈ ಹಿಂದೆ ಬಂಧನವಾಗಿ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಐಟಿ ಉದ್ಯೋಗಿ(IT Employ), ಇದೀಗ ಬೆದರಿಕೆ ಹಾಕುತ್ತಿದ್ದಾನೆ ಎಂದು ಆರೋಪಿಸಿ ತಮಿಳು ನಟಿ ಲುಬ್ನಾ ಆಮೀರ್(Lubna Amir) ​ ಇತ್ತಿಚೆಗಷ್ಟೇ ದೂರು ನೀಡಿದ್ದರು. ಇದೀಗ ಆಕೆಯ ವಿರುದ್ಧವೇ ಐಟಿ ಉದ್ಯೋಗಿ ಗಂಭೀರ ಆರೋಪ ಮಾಡಿ ಸರಣಿ ದೂರುಗಳನ್ನ ದಾಖಲಿಸಿದ್ದಾನೆ.

 

ಹೌದು, ಆಕೆ ತನ್ನದೇ ಅಶ್ಲೀಲ ವಿಡಿಯೋಗಳನ್ನು (Porn Video) ನಾನಾ ಸೆಟ್ ಗಳಲ್ಲಿ ಅಪ್ ಲೋಡ್ ಮಾಡುತ್ತಿದ್ದಳು. ಹಾಗಾಗಿ ಆಕೆಯಿಂದ ದೂರವಾದೆ ಎಂದು ತಮಿಳು (Tamil) ನಟಿ ಲುಬ್ನಾ ಆಮೀರ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾನೆ ಆಕೆಯ ಮಾಜಿ ಪ್ರಿಯಕರ ಮಸಿಉಲ್ಲ ಖಾನ್ (Masiullah Khan).

ಲುಬ್ನಾ ಆಮೀರ್​(Lubna Aamir )ತಮಿಳಿನ ಕೆಕ್ಕರಾನ್​ ಮೀಕ್ಕರಾನ್​ ಸಿನಿಮಾದಲ್ಲಿ ತನ್ನ ಪಾತ್ರದ ಮೂಲಕವೇ ಪ್ರಸಿದ್ಧಿ ಪಡೆದಿದ್ದಾರೆ. ಅಲ್ಲದೆ, ಅನೇಕ ವೆಬ್​ ಸರಣಿಗಳಲ್ಲಿ ನಟಿಸಿದ್ದಾರೆ. ಮ್ಯಾಟ್ರಿಮೋನಿಯಲ್ ವೆಬ್ ಸೈಟ್ ಮೂಲಕ ಐಟಿ ಉದ್ಯೋಗಿ ಮಸಿಉಲ್ಲ ಖಾನ್(Masiula Khan), ನಟಿ ಲುಬ್ನಾಗೆ ಪರಿಚಯವಾಗಿದ್ದ. ನಂತರದ ದಿನಗಳಲ್ಲಿ ಪರಿಚಯವು ಪ್ರೇಮಕ್ಕೆ ತಿರುಗಿತ್ತು. ಇಬ್ಬರೂ ಡೇಟ್ ಕೂಡ ಮಾಡುತ್ತಿದ್ದರು. ನಂತರ ಮಸಿಉಲ್ಲಗೆ ಮದುವೆ ಆಗಿರುವ ವಿಚಾರ ಗೊತ್ತಾಗಿ, ಅವನಿಂದ ದೂರವಾಗಿದ್ದಳು. ಈ ಸಮಯದಲ್ಲಿ ಆತನೊಂದಿಗೆ ಕಳೆದ ಖಾಸಗಿ ಕ್ಷಣಗಳ ಫೋಟೋಗಳನ್ನು ತೋರಿಸಿ ಲುಬ್ನಾ (Lubna Aamir), ಮೊನ್ನೆಯಷ್ಟೇ ತನ್ನ ಪ್ರಿಯಕರನ ವಿರುದ್ಧ ದೂರು ದಾಖಲಿಸಿದ್ದರು. ಬಂಧಿತನಾಗಿದ್ದ ಮಸಿಉಲ್ಲ, ಇದೀಗ ಜಾಮೀನಿನ ಮೇಲೆ ಬಿಡುಗಡೆ ಆಗಿದ್ದಾನೆ.

ಮಸಿಉಲ್ಲ ಖಾನ್ ಜೈಲಿನಿಂದ ಆಚೆ ಬಂದ ನಂತರ ಮತ್ತೆ ತನಗೆ ತೊಂದರೆ ನೀಡುತ್ತಿದ್ದಾನೆ ಎಂದು ನಟಿ ಆರೋಪ ಮಾಡಿದ್ದಾಳೆ. ಅವನಷ್ಟೇ ಅಲ್ಲ, ಕೊಟ್ಟಿರುವ ದೂರನ್ನು ವಾಪಸ್ಸು ಪಡೆದುಕೊಳ್ಳುವಂತೆ ಆತನ ಪತ್ನಿಯೂ ಬೆದರಿಕೆ ಹಾಕುತ್ತಿದ್ದಾಳೆ ಎಂದು ಲುಬ್ನಾ ಮತ್ತೊಂದು ದೂರನ್ನು ದಾಖಲಿಸಿದ್ದಾಳೆ. ಚೆನ್ನೈ ಪೊಲೀಸ್ ಕಮಿಷನರ್ ಕಚೇರಿಗೆ ಆಗಮಿಸಿ, ಕಮಿಷನರಿಗೆ ದೂರು ನೀಡಿದ್ದಾಳೆ ನಟಿ.

ಇದೀಗ ಮತ್ತೊಂದು ದೂರು ದಾಖಲಿಸಿರುವ ಲುಬ್ನಾ, ದೂರು ಹಿಂಪಡೆಯುವಂತೆ ಮಸಿಉಲ್ಲನ ಪತ್ನಿ ಬೆದರಿಕೆ ಹಾಕುತ್ತಿದ್ದಾಳೆ ಎಂದು ಚೆನ್ನೈ ಪೊಲೀಸ್​(Chennai Police) ಕಮಿಷನರ್​ಗೆ ದೂರು ನೀಡಿದ್ದಾಳೆ. ಇನ್ನೊಂದೆಡೆ ಮುಸಿಉಲ್ಲ ಕೂಡ ಪೆರವಳ್ಳೂರು, ವೆಲ್ಲೂರು ಮತ್ತು ವಿನಿಯಂಪಾಡಿ ಪೊಲೀಸ್​ ಠಾಣೆಗಳಲ್ಲಿ ಲುಬ್ನಾ ವಿರುದ್ಧ ಸರಣಿ ದೂರುಗಳನ್ನು ದಾಖಲಿಸಿದ್ದಾನೆ.

ಅಲ್ಲದೆ ಮಸಿಉಲ್ಲನ ಪ್ರಕಾರ 2020ರಲ್ಲಿ ಆತ ತನ್ನ ಮೊದಲ ಪತ್ನಿಯಿಂದ ದೂರವಾಗಿದ್ದಾನೆ. ಇಬ್ಬರ ನಡುವೆ ಡಿವೋರ್ಸ್​ ಪ್ರಕರಣ ನಡೆಯುತ್ತಿದೆ. ಇದರ ನಡುವೆ ಮ್ಯಾಟ್ರಿಮೋನಿಯಲ್​ ವೆಬ್​ಸೈಟ್​ ಮೂಲಕ ಲುಬ್ನಾಳ ಪರಿಚಯ ಆಯಿತು ಮತ್ತು ಆಕೆಯನ್ನು ಮದುವೆ ಆಗಲು ಉದ್ದೇಶಿಸಿದ್ದೆ. ಆದಾಗ್ಯೂ, ಆಕೆ ಭಾರತದಲ್ಲಿ ನಿಷೇಧಗೊಂಡಿರುವ ಆನ್​ಲೈನ್​ ವೇದಿಕೆಗಳಲ್ಲಿ ತನ್ನ ಅಶ್ಲೀಲ ವಿಡಿಯೋಗಳನ್ನು ಪೋಸ್ಟ್​ ಮಾಡಿ ಹಣ ಸಂಪಾದಿಸುತ್ತಿರುವುದು ಗೊತ್ತಾಯಿತು. ಇದರಿಂದ ನಾನು ಆಕೆಯಿಂದ ಪ್ರತ್ಯೇಕವಾದೆ. ಇಬ್ಬರು ಸಂಬಂಧದ್ದಲ್ಲಿದ್ದ ಸಮಯದಲ್ಲಿ ನನ್ನ ಸಾಕಷ್ಟು ಹಣವನ್ನು ಆಕೆ ವ್ಯಯಿಸಿದ್ದಾಳೆ ಎಂದು ಮಸಿಉಲ್ಲ ಆರೋಪ ಮಾಡಿದ್ದಾನೆ.

ಇದನ್ನೂ ಓದಿ: Love Tattoo: ಹಣೆ ಮೇಲೆಯೇ ಗಂಡನ ಹೆಸರನ್ನು ಟ್ಯಾಟೂ ಹಾಕಿಸಿಕೊಂಡ ಬೆಂಗ್ಳೂರು ಲೇಡಿ! ಟ್ರೂ ಲವ್ ಎನ್ನುತ್ತಾ ಸ್ವಲ್ಪ ಓವರ್ ಆಯ್ತು ಎಂದ ನೆಟ್ಟಿಗರು!!

Leave A Reply

Your email address will not be published.