Love Tattoo: ಹಣೆ ಮೇಲೆಯೇ ಗಂಡನ ಹೆಸರನ್ನು ಟ್ಯಾಟೂ ಹಾಕಿಸಿಕೊಂಡ ಬೆಂಗ್ಳೂರು ಲೇಡಿ! ಟ್ರೂ ಲವ್ ಎನ್ನುತ್ತಾ ಸ್ವಲ್ಪ ಓವರ್ ಆಯ್ತು ಎಂದ ನೆಟ್ಟಿಗರು!!

Bengaluru women tattooed her husband name on forehead

Women tattooed on forehead : ಜೀವನದಲ್ಲಿ ತಮಗೆ ಪ್ರೀತಿ ಪಾತ್ರರೆನಿಸದವರ ಹೆಸರನ್ನು ಕೈ, ಕತ್ತು, ಎದೆ, ತೋಳು ಸೇರಿ ದೇಹದ ಕೆಲ ಭಾಗಗಳಲ್ಲಿ ಟ್ಯಾಟೂ(Tattoo) ಹಾಕಿಸಿಕೊಳ್ಳುವುದು ರೂಢಿ. ಇದನ್ನು ನಾವೆಲ್ಲರೂ ನೋಡಿದ್ದೇವೆ. ಆದರೆ, ಬೆಂಗಳೂರಿನ(Bangalore)ಮಹಿಳೆಯೊಬ್ಬರು ತಮ್ಮ ಗಂಡನ ಹೆಸರನ್ನು ಹಣೆಯ ಮೇಲೆಯೇ (Women tattooed on forehead) ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಈ ವಿಡಿಯೊ ಈಗ ವೈರಲ್‌ (Viral Video) ಆಗಿದ್ದು, ಜನ ತರಹೇವಾರಿ ಕಮೆಂಟ್‌ಗಳ ಮೂಲಕ ಪ್ರತಿಕ್ರಿಯಿಸಿದ್ದಾರೆ.

 

ಹೌದು, ಅಂದದ ಚಂದದ ಮಾತುಗಳ ಮೂಲಕ ಪ್ರೇಮಿಸೋರನ್ನು ನಾವು ನೋಡಿದ್ದೇವೆ. ಕೆಲವರು ಇದನ್ನು ಕೊನೇ ವರೆಗೂ ಉಳಿಸಿಕೊಂಡರೆ ಕೆಲವರು ಅರ್ಧಕ್ಕೇ ಮೊಟಕುಗೊಳಿಸುತ್ತಾರೆ. ಆದರೆ ಬೆಂಗಳೂರಿನ ಮಹಿಳೆಯೊಬ್ಬಳು ಒಂದು ಹೆಜ್ಜೆ ಮುಂದೆ ಹೋಗಿ ಪತಿಯ ಹೆಸರನ್ನ ಹಣೆಯ ಮೇಲೆ ಹಚ್ಚೆ ಹಾಕಿಸಿಕೊಂಡು ಪ್ರೀತಿಯನ್ನು ವ್ಯಕ್ತಪಡಿಸಿದ್ದಾಳೆ. ಈ ಫೋಟೋವನ್ನ ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, `ಮುಂದಿನ ರೀಲ್‌ನಲ್ಲಿ ಅಂತಿಮ ಪ್ರೀತಿ’ ಎಂದೂ ಬರೆದುಕೊಂಡಿದ್ದಾಳೆ.

ಅಂದಹಾಗೆ ಬೆಂಗಳೂರಿನ ಕಿಂಗ್‌ ಮೇಕರ್‌ ಟ್ಯಾಟೂ ಸ್ಟುಡಿಯೊ(King maker Tattoo Studio)ಮಹಿಳೆಯ ವಿಡಿಯೊವನ್ನು ಇನ್‌ಸ್ಟಾಗ್ರಾಂನಲ್ಲಿ(Instagram) ಶೇರ್‌ ಮಾಡಿದೆ. ಸ್ಟುಡಿಯೊಗೆ ತೆರಳಿದ ಮಹಿಳೆಯು ತಮ್ಮ ಪತಿಯ ಹೆಸರಾದ ಸತೀಶ್‌(Satish) ಎಂಬುದನ್ನು ಇಂಗ್ಲಿಷ್‌ನಲ್ಲಿ ಹಣೆಯ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದಾರೆ. ಸತೀಶ್‌ ಎಂಬ ಅಕ್ಷರಗಳನ್ನು ಟ್ಯಾಟೂ ಕಲಾವಿದ ಮೊದಲು ಮಹಿಳೆ ತಲೆ ಮೇಲೆ ಸ್ಟಿಕ್ಕರ್‌ ಮೂಲಕ ಅಂಟಿಸುತ್ತಾರೆ. ಸ್ಟಿಕ್ಕರ್‌ ತೆಗೆದ ಬಳಿಕ Satish ಎಂದು ಟ್ಯಾಟೂ ಹಾಕಿದ್ದಾರೆ.

ಸದ್ಯ ಈ ವಿಡಿಯೋ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಫೋಟೋದಲ್ಲಿನ ಮಹಿಳೆ ತನ್ನ ಪತಿ ಸತೀಶ್ ಹೆಸರನ್ನ ಹಣೆಯ ಮೇಲೆ ಹಚ್ಚೆ ಹಾಕಿಸಿಕೊಳ್ಳುತ್ತಿದ್ದಾಳೆ. 2.68 ಲಕ್ಷಕ್ಕೂ ಅಧಿಕ ಮಂದಿ ಫೋಟೋವನ್ನ ಲೈಕ್ ಮಾಡಿದ್ದಾರೆ.

ವಿಡಿಯೊ ವೈರಲ್‌ ಆಗುತ್ತಲೇ ಜನ ಹಲವು ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಮಹಿಳೆಯ ಫೋಟೋವನ್ನು ನೋಡಿ ಕೆಲವರು ಇದು ಪಕ್ಕಾ ಟ್ರೂ ಲವ್ ಅಂತಾ ಹೊಗಳಿದರೆ, ಇನ್ನೂ ಕೆಲವರು ಇದು ಓವರ್ ಆಕ್ಷನ್, ನಾನು ನನ್ನ ಲೈಕ್ ಅನ್ನು ಕ್ಯಾನ್ಸಲ್ ಮಾಡ್ತೀನಿ. ಇದು ಮೂರ್ಖತನ, ನಿಜವಾದ ಪ್ರೀತಿಯನ್ನ ಈ ರೀತಿ ಸಾಬೀತು ಮಾಡುವ ಅಗತ್ಯವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಲ್ಲದೆ ಟ್ಯಾಟೂ ಹಾಕಿಸಿಕೊಂಡ ಮಹಿಳೆಯು ಹೊರಗೆ ಹೇಗೆ ತಿರುಗಾಡುತ್ತಾರೆ ಎಂದು ಜನ ಶಂಕೆ ವ್ಯಕ್ತಪಡಿಸಿದ್ದಾರೆ. ಮತ್ತೊಬ್ಬರು ಪ್ರತಿಕ್ರಿಯಿಸಿ, “ಇದು ದಡ್ಡತನದ ಪರಮಾವಧಿ. ನಿಜವಾದ ಪ್ರೀತಿಯನ್ನೂ ಯಾರೂ ತೋರ್ಪಡಿಸುವುದಿಲ್ಲ ಹಾಗೂ ಪ್ರೂವ್‌ ಮಾಡುವ ಅಗತ್ಯವೇ ಇಲ್ಲ” ಎಂದಿದ್ದಾರೆ. ಹೀಗೆ ಒಬ್ಬೊಬ್ಬರು ಒಂದೊಂದು ರೀತಿ ಪ್ರತಿಕ್ರಿಯಿಸಿದ್ದಾರೆ.

https://www.instagram.com/reel/Cp8KrEdDJLw/?igshid=MTc4MmM1YmI2Ng==

 

ಇದನ್ನೂ ಓದಿ: Shocking news: ಒಂದೇ ಕಾಲೇಜಲ್ಲಿ ಕಲಿತ 65 ಹುಡುಗಿಯರಿಗೆ ಯೂಸ್ ಮಾಡಿದ ಕಾಂಡೋಮ್, ಲೈಂಗಿಕತೆಯ ಲೆಟರ್ ಕಳಿಸಿ ವಿಕೃತಿ! ಯಾರು ಕಳಿಸಿದ್ದು ಗೊತ್ತಾ?

Leave A Reply

Your email address will not be published.