Medicines Price: ಕೇಂದ್ರ ಸರ್ಕಾರದಿಂದ ಸಿಹಿಸುದ್ದಿ ; ಈ ಔಷಧಿಗಳ ಬೆಲೆಯಲ್ಲಿ ಶೇ. 50 ಇಳಿಕೆ!!

Central government has reduced the price of medicines

Medicines price: ಕೇಂದ್ರ ಸರ್ಕಾರವು (Central government) ಕೆಲವು ಔಷಧಿಗಳ ಬೆಲೆಯನ್ನು ಶೇಕಡಾ 50 ಕ್ಕೆ ಇಳಿಕೆ ಮಾಡಿದೆ. ಔಷಧೀಯ ಉತ್ಪಾದನಾ ಕಂಪನಿಗಳ ಲಾಭಕೋರತನವನ್ನು ತಡೆಯುವ ಸಲುವಾಗಿ ಔಷಧಿಗಳ (medicines) ಬೆಲೆಯನ್ನು ಇಳಿಸಲಾಗಿದ್ದು, ಪೇಟೆಂಡ್ನಿಂದ ಹೊರಗುಳಿಯುವ ಔಷಧಿಗಳ ಬೆಲೆಯನ್ನು ಶೇಕಡಾ 50 ಕ್ಕೆ ಇಳಿಸಲಾಗುವುದು ಎಂದು ರಾಷ್ಟ್ರೀಯ ಔಷಧೀಯ ಬೆಲೆ ಪ್ರಾಧಿಕಾರ (NPPA) ತಿಳಿಸಿದೆ.

 

ಒಂದು ವರ್ಷದ ನಂತರ ಮಾರುಕಟ್ಟೆ ದತ್ತಾಂಶವನ್ನು ಪರಿಶೀಲಿಸಿದ ಮೇಲೆ ಹೊಸ ಬೆಲೆಯನ್ನು ನಿಗದಿಪಡಿಸಲಾಗುವುದು ಎಂದು ಎನ್ಸಿಪಿಎ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಹಾಗೇ ಫಿಕ್ಸೆಡ್ ಡೋಸ್ ಕಾಂಬಿನೇಷನ್ಸ್ (ಎಫ್ಟಿಸಿ) ಸಂದರ್ಭದಲ್ಲಿ ಒಂದು ಘಟಕವು ಪೇಟೆಂಟ್ಟಿಂದ ಹೊರಗುಳಿಯುತ್ತಿದ್ದರೆ, ಪ್ರಸ್ತುತ ಬೆಲೆಯನ್ನು (medicines price) ಶೇಕಡಾ 50 ರಷ್ಟು ಕಡಿಮೆ ಮಾಡುವ ಮೂಲಕ ಸೀಲಿಂಗ್ ಬೆಲೆಯನ್ನು ಪರಿಷ್ಕರಿಸಲಾಗುವುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

“ಪೇಟೆಂಟ್ ಅವಧಿ ಮುಗಿದ ನಂತರ ಕಂಪನಿಯು ಬೆಲೆಯನ್ನು 50% ಕ್ಕೆ ಇಳಿಸುವುದು ಈಗ ಕಡ್ಡಾಯವಾಗಲಿದೆ. ಈ ಮೊದಲು ಜೆನೆರಿಕ್ ಉತ್ಪನ್ನಗಳು ಮಾರುಕಟ್ಟೆಗೆ ಬರುವವರೆಗೆ ಅದೇ ಬೆಲೆಗಳೊಂದಿಗೆ ಮುಂದುವರಿಯುವ ಆಯ್ಕೆಯನ್ನು ಕಂಪನಿ ಹೊಂದಿತ್ತು” ಎಂದು ಫಾರ್ಮಾ ಕಾರ್ಯನಿರ್ವಾಹಕರೊಬ್ಬರು ಹೇಳಿದ್ದಾರೆ.

 

ಇದನ್ನು ಓದಿ: CM Siddaramaiah: ಸಿಎಂ ಸಿದ್ದರಾಮಯ್ಯ ಪ್ರಮಾಣವಚನಕ್ಕೆ ಭರ್ಜರಿ ಸಿದ್ದತೆ : ಕಂಠೀರವ ಸ್ಟೇಡಿಯಂ ಕಟೌಟ್‌ ಅಳವಡಿಕೆ 

Leave A Reply

Your email address will not be published.