Home Interesting Madhyapradesh: ನನಗೀಗ ಮಗು ಪಡೆಯೋ ಬಯಕೆ, ಸೋ.. ನನ್ನ ಗಂಡನನ್ನು ಪೆರೋಲ್ ಮೇಲೆ ಮನೆಗೆ ಕಳಿಸಿ!...

Madhyapradesh: ನನಗೀಗ ಮಗು ಪಡೆಯೋ ಬಯಕೆ, ಸೋ.. ನನ್ನ ಗಂಡನನ್ನು ಪೆರೋಲ್ ಮೇಲೆ ಮನೆಗೆ ಕಳಿಸಿ! ಜೈಲು ಅಧಿಕಾರಿಗಳಿಗೆ ಪತ್ರ ಬರೆದ ಖೈದಿಯ ಹೆಂಡ್ತಿ!!!

Madhyapradesh
Image source- Vijaya karnataka, Pexels

Hindu neighbor gifts plot of land

Hindu neighbour gifts land to Muslim journalist

Madhyapradesh: ಗಂಡನಿಗೋಸ್ಕರ ಮಹಿಳೆಯೊಬ್ಬಳು ಜೈಲು ಅಧಿಕಾರಿಗಳಿಗೆ(Jail Officer’s) ಪತ್ರವೊಂದನ್ನು ಬರೆದಿದ್ದು, ಸದ್ಯ ಆ ಪತ್ರವೀಗ ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗ್ತಿದೆ.

ಹೌದು, ಮಧ್ಯಪ್ರದೇಶದ(Madhyapradesh) ಶಿವಪುರ(Shivpura) ಮೂಲದ ಮಹಿಳೆಯೊಬ್ಬಳು ತನ್ನ ಗಂಡನ ಪರವಾಗಿ ಜೈಲು ಅಧಿಕಾರಿಗಳಿಗೆ ಪತ್ರವೊಂದನ್ನು ಬರೆದಿದ್ದು, ಮದುವೆಯಾದ ಸಂದರ್ಭದಲ್ಲಿ ಗಂಡ ಜೈಲು ಸೇರಿದ್ದರಿಂದ ನನಗೆ ಗರ್ಭ ಧರಿಸಲು ಸಾಧ್ಯವಾಗಿಲ್ಲ. ಆದರೀಗ ನನಗೆ ಆ ಬಯಕೆ ಉಂಟಾಗಿದೆ. ಮಗುವನ್ನು ಪಡೆಯಬೇಕೆನಿಸುತ್ತಿದೆ. ಹೀಗಾಗಿ ನನ್ನ ಗಂಡನನ್ನು ಪೆರೋಲ್ ಮೇಲೆ ಕಳುಹಿಸಿಕೊಡಬೇಕು ಎಂದು ಕೇಳಿಕೊಂಡಿದ್ದಾಳೆ.

ಅಂದಹಾಗೆ ದಾರಾ ಸಿಂಗ್ ಜಾತವ್(Dhara Singh Javat) ಎಂಬಾತ ಮದುವೆಯಾದ ಸಂದರ್ಭದಲ್ಲಿ ಕೊಲೆ ಪ್ರಕರಣದ ಮೂಲಕ ಜೈಲು ಸೇರಿದ್ದು, ಕಳೆದ ಏಳು ವರ್ಷಗಳಿಂದ ಗ್ವಾಲಿಯರ್ ಸೆಂಟ್ರಲ್ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾನೆ. ಇದರಿಂದ ಹೆಂಡತಿ ಒಬ್ಬಂಟಿಯಾಗಿ ಜೀವನ ದೂಡಬೇಕಾದ ಸ್ಥಿತಿ ಬಂದೊದಗಿತ್ತು. ಇದೀಗ ಈತನ ಪತ್ನಿ, ಮದುವೆಯಾಗಿ ಏಳು ವರ್ಷಗಳು ಕಳೆದರೂ ನನಗೆ ಮಕ್ಕಳಿಲ್ಲ. ನಾನೀಗ ಗರ್ಭ ಧರಿಸಬೇಕು. ಇದಕ್ಕಾಗಿ ನನ್ನ ಗಂಡನನ್ನು ಪೆರೋಲ್ ಮೂಲಕ ಜೈಲಿನಿಂದ ಕಳುಹಿಸಿಕೊಡಿ ಎಂದು ಅರ್ಜಿ ಸಲ್ಲಿಸಿದ್ದಾಳೆ.

ಇನ್ನು ಕೇವಲ ಹೆಂಡತಿ ಮಾತ್ರವಲ್ಲದೆ ಕೈದಿ ದಾರಾ ಸಿಂಗ್ ತಂದೆ ಕರೀಂ ಸಿಂಗ್ ಜಾತವ್(Kareem Singh Javat) ಅವರು ಕೂಡ ಪತ್ರದಲ್ಲಿ ಮನವಿ ಮಾಡಿದ್ದು “ಮಗನ ಬಂಧನದಿಂದ ನಮಗೆ ಮದುವೆಯ ಸಂತಸವನ್ನು ಸಂಭ್ರಮಿಸಲು ಸಾಧ್ಯವಾಗಿಲ್ಲ. ಇದೀಗ ನಮಗೆ ವಯಸ್ಸಾಗಿದೆ. ಪತ್ನಿ ಅನಾರೋಗ್ಯ ಪೀಡಿತಳಾಗಿದ್ದು, ಮೊಮ್ಮಗ ಬೇಕೆಂದು ಬಯಸಿದ್ದಾಳೆ. ಹೀಗಾಗಿ ಮಗನನ್ನು ಕೆಲ ದಿನಗಳ ಕಾಲ ಜೈಲಿನಿಂದು ಕಳುಹಿಸಿಕೊಡು”ವಂತೆ ಹೇಳಿಕೊಂಡಿದ್ದಾರೆ.

ಮಹಿಳೆಯ ಈ ಪತ್ರಕ್ಕೆ ಗ್ವಾಲಿಯರ್(Gwaliyar) ಸೆಂಟ್ರಲ್ ಜೈಲ್(Central Jail) ಸೂಪರಿಂಟೆಂಡೆಂಟ್(Superdent) ವಿದಿತ್ ಸಿರ್ವಯ್ಯ(Vidhit Sirvayya) ಪ್ರತಿಕ್ರಿಯಿಸಿ, “ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳ ಶಿಕ್ಷೆ ಎರಡು ವರ್ಷ ಪೂರ್ಣಗೊಂಡ ಬಳಿಕ ನಡವಳಿಕೆಯು ಆಧಾರದ ಮೇಲೆ ಪೆರೋಲ್‌ ಪಡೆಯಲು ಅರ್ಹರಾಗಿರುತ್ತಾರೆ. ಪೆರೋಲ್ ನೀಡುವುದು ಅಥವಾ ನೀಡದಿರುವ ಬಗ್ಗೆ ಜಿಲ್ಲಾಧಿಕಾರಿ ಅಂತಿಮ ನಿರ್ಧಾರ ಕೈಗೊಳ್ಳುತ್ತಾರೆ” ಎಂದು ಹೇಳಿದ್ದಾರೆ.

ಅಲ್ಲದೆ ಈ ನಡುವೆ ಕೈದಿಯ ಬಿಡುಗಡೆಗೆ ಸಂಬಂಧಿಸಿದ ಮನವಿ ಪತ್ರವನ್ನು ಸದ್ಯ ಶಿವಪುರಿ ಎಸ್​ಪಿ(Shivpuri SP) ಅವರ ಪರಿಶೀಲನೆಗೆ ಕಳುಹಿಸಿಕೊಡಲಾಗಿದೆ ಎಂದು ವರದಿಯಾಗಿದೆ.

 

ಇದನ್ನು ಓದಿ: Roopesh shetty: ದೊಡ್ಡಪರದೆಯಲ್ಲಿ ಮಿಂಚಲು ರೂಪೇಶ್‌ ಶೆಟ್ಟಿ ರೆಡಿ! ಯಾವ ಸಿನಿಮಾ, ಪಾತ್ರವೇನು? ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್‌