Home National Brother kills Sister: ಮೊದಲ ಬಾರಿ ಪೀರಿಯಡ್ ಆದ ತಂಗಿ! ರಕ್ತ ನೋಡಿ ಅನುಮಾನಿಸಿ, ಬರ್ಬರವಾಗಿ...

Brother kills Sister: ಮೊದಲ ಬಾರಿ ಪೀರಿಯಡ್ ಆದ ತಂಗಿ! ರಕ್ತ ನೋಡಿ ಅನುಮಾನಿಸಿ, ಬರ್ಬರವಾಗಿ ಕೊಲೆಗೈದ ಪಾಪಿ ಅಣ್ಣ!

Brother kills Sister
Image source- Altos

Hindu neighbor gifts plot of land

Hindu neighbour gifts land to Muslim journalist

Brother kills Sister: ಇತ್ತೀಚೆಗೆ ಅದೊಂದು ಮನೆಯ ಹೆಣ್ಣುಮಗಳು ಋತುಮತಿ(Menstruation) ಆದಾಗ ಗಂಡ ಹಾಗೂ ಮಕ್ಕಳೆಲ್ಲ ಆಕೆಯನ್ನು ಎಷ್ಟು ಚೆನ್ನಾಗಿ ಆರೈಕೆ ಮಾಡುತ್ತಾರೆ ಅನ್ನೋ ವಿಚಾರ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿ ಭಾರೀ ಮೆಚ್ಚುಗೆ ಗಳಿಸಿತ್ತು. ಆದರೆ ಇದರ ಬೆನ್ನಲ್ಲೇ ಇಲ್ಲೊಂದೆಡೆ ತನ್ನ ತಂಗಿಗೆ ಮೊದಲ ಬಾರಿ ಪೀರಿಯಡ್ ಆದಾಗ ಆಕೆಯನ್ನು ಅನುಮಾನಿಸಿದ ಅಣ್ಣ, ತನ್ನ ತಂಗಿಯನ್ನು ಬರ್ಬರವಾಗಿ (Brother kills Sister) ಕೊಂದುಹಾಕಿದ್ದಾನೆ.

ಹೌದು, ಮಹಾರಾಷ್ಟ್ರ (Maharastra) ದ ಥಾಣೆ(Thane) ಯಲ್ಲಿ ತನ್ನ ಅಣ್ಣ ಹಾಗೂ ಅತ್ತಿಗೆ ಜೊತೆ ವಾಸವಾಗಿರೋ 12 ವರ್ಷದ ಹುಡುಗಿಗೆ ಕೆಲವು ದಿನಗಳ ಹಿಂದೆ ಋತುಸ್ರಾವ ಆರಂಭವಾಗಿದೆ. ಆದರೆ ಇದು ಅವಳ ಗಮನಕ್ಕೆ ಬಂದಿರಲಿಲ್ಲ. ಅಲ್ಲದೆ ಅವಳ ಬಟ್ಟೆಯಲ್ಲಿ ರಕ್ತದ ಕಲೆಗ(blood stain)ಳು ಕಾಣುತ್ತಿದ್ದವು. ಇದನ್ನು ಗಮನಿಸಿದ ಸಹೋದರ ಆಕೆಯನ್ನು ಪ್ರಶ್ನಿಸಿದ್ದಾನೆ. ಪಾಪ ಇದರ ಬಗ್ಗೆ ಕಿಂಚಿತ್ತೂ ಅರಿವಿಲ್ಲದ ಆ ಬಾಲಕಿ ಏನೂ ಗೊತ್ತಿಲ್ಲದೆ ಸುಮ್ಮನಿದ್ದಾಳೆ.

ಅಲ್ಲದೆ ತನಗೆ ಏನಾಗುತ್ತಿದೆ ಎಂಬುದನ್ನು ತನ್ನ ಅಣ್ಣ ಹಾಗೂ ಅತ್ತಿಗೆಯರ ಜೊತೆ ಹೇಳಿಕೊಳ್ಳಲು ಹಿಂಜರಿದಿದ್ದಾಳೆ. ಜೊತೆಗೆ ಋತುಸ್ರಾವದ ಬಗ್ಗೆ ಅವಳಿಗೆ ಯಾವುದೇ ಜ್ಞಾನ ಕೂಡ ಇರಲಿಲ್ಲ. ಆದರೆ ಇದನ್ನು ಅನುಮಾನದಿಂದ ಕಂಡ ಪಾಪಿ ಅಣ್ಣ ಈಕೆ ಯಾರ ಜೊತೆಗೋ ಸಂಭೋಗ ನಡೆಸಿದ್ದಾಳೆ ಎಂದು ಆರೋಪಿಸಿದ್ದಾನೆ.

ಸಹೋದರಿ ಬಟ್ಟೆಯಲ್ಲಿ ರಕ್ತದ ಕಲೆಗಳನ್ನು ಕಂಡು ಅನುಮಾನದಿಂದ ಸಿಟ್ಟುಗೊಂಡ ಆತ, ಆಕೆಯ ಬಾಯಿ, ನಾಲಿಗೆ ಹಾಗೂ ದೇಹದ ಇತರೆ ಭಾಗಗಳನ್ನು ಸುಟ್ಟಿದ್ದಾನೆ. ನಂತರ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ ಅದಾಗಲೇ ಆಕೆ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಘಟನೆ ಸಂಬಂಧ ಸಹೋದರನ ವಿರುದ್ಧ ಉಲ್ಲಾಸ್‍ನಗರ ಪೊಲೀಸ್ ಠಾಣೆ (Ulhasnagar police station) ಯಲ್ಲಿ ಕೊಲೆ ಪ್ರಕರಣ ದಾಖಲಿಸಲಾಗಿದೆ.

ಇದನ್ನೂ ಓದಿ: The doctor applied Feviquik to the wound : ಅಯ್ಯಯ್ಯೋ… ಗಾಯಕ್ಕೆ ಹೊಲಿಗೆ ಹಾಕುವ ಬದಲು ಫೆವಿಕ್ವಿಕ್ ಹಾಕಿದ ಡಾಕ್ಟರ್​​!