Toe silver ring: ವಿವಾಹಿತ ಮಹಿಳೆಯರು ಬೆಳ್ಳಿ ಕಾಲುಂಗರ ಯಾಕೆ ಧರಿಸುತ್ತಾರೆ? ಇದರ ಮಹತ್ವವೇನು?
Why do married women wear silver anklets
Silver anklets: ಭಾರತೀಯ ಸಂಪ್ರದಾಯದ ಪ್ರಕಾರ, ವಿವಾಹವಾದ ಸ್ತ್ರೀಯರು (married women) ಧರಿಸುವ ಒಂದೊಂದು ಆಭರಣಕ್ಕೂ ಅದರದ್ದೇ ಆದ ಮಹತ್ವವಿದೆ. ಹಾಗೇ ಈ ಆಭರಣಗಳು ಸೌಭಾಗ್ಯದ ಸಂಕೇತವೂ ಹೌದು. ವಿವಾಹವಾದ ಸ್ತ್ರೀಯರು ಧರಿಸುವ ಆಭರಣಗಳಲ್ಲಿ ಕಾಲುಂಗುರವೂ ಒಂದು. ಮದುವೆ (marriage) ಸಂದರ್ಭದಲ್ಲಿ ಸಂಪ್ರದಾಯದ ಭಾಗವಾಗಿ ಪತಿ, ಪತ್ನಿಗೆ ಕಾಲುಂಗುರ ತೊಡಿಸುತ್ತಾನೆ. ಕಾಲುಂಗುರ ವಿವಾಹಿತೆ ಅನ್ನೋದರ ಸಂಕೇತ ಕೂಡ ಹೌದು. ಆದರೆ ವಿವಾಹಿತರು ಬೆಳ್ಳಿ ಕಾಲುಂಗರ (Silver anklets) ಧರಿಸಲು ಕಾರಣವೇನು ಗೊತ್ತಾ? ಇದರ ಮಹತ್ವವೇನು? ಬನ್ನಿ ತಿಳಿಯೋಣ.
ಮದುವೆಯ ನಂತರ ಬೆಳ್ಳಿ ಕಾಲುಂಗರ ಧರಿಸಿರುವುದು ವಧು ಮತ್ತು ವರನ ಆನಂದದಾಯಕ ದಾಂಪತ್ಯ ಜೀವನದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಜ್ಯೋತಿಷ್ಯದ ಪ್ರಕಾರ, ಪತಿ-ಪತ್ನಿಯರ ನಡುವೆ ಉತ್ತಮ ಬಾಂಧವ್ಯ ಹೊಂದಲು ಎರಡು ಅಥವಾ ಮೂರು ಬೆಳ್ಳಿ ಕಾಲುಂಗರಗಳನ್ನು ಎರಡೂ ಪಾದಗಳಿಗೆ ಧರಿಸಬೇಕು.
ಮಹಿಳೆಯರು ಮಧ್ಯದ ಬೆರಳಿಗೆ ಬೆಳ್ಳಿ ಕಾಲುಂಗರಗಳನ್ನು ಧರಿಸಬೇಕು. ಈ ಬೆರಳು ನೇರವಾಗಿ ಹೃದಯಕ್ಕೆ ಸಂಬಂಧಿಸಿದೆ. ಈ ಬೆರಳಿಗೆ ಬೆಳ್ಳಿಯ ಕಡಗಗಳನ್ನು ಧರಿಸುವುದರಿಂದ ಜಾತಕದಲ್ಲಿ ಚಂದ್ರನು ಬಲಗೊಳ್ಳುತ್ತಾನೆ. ಪತಿ ಪತ್ನಿಯರ ಜೀವನದಲ್ಲಿ ಶಾಂತಿ ನೆಲೆಸುತ್ತದೆ ಎಂದು ಹೇಳಲಾಗಿದೆ.
ಕಾಲಿನ ಎರಡನೇ ಬೆರಳು, ನಾಡಿ ಗರ್ಭಕೋಶಕ್ಕೆ ಸಂಬಂಧಪಟ್ಟಿರುವುದರಿಂದ ನಿರ್ದಿಷ್ಟ ಪ್ರಮಾಣದ ಶಾಖ ಅಥವಾ ಉಷ್ಣದ ನಾಡಿಯನ್ನು ನಿಯಂತ್ರಣದಲ್ಲಿಡಲು ಕಾಲುಂಗುರ ಸಹಾಯ ಮಾಡುತ್ತದೆ ಎನ್ನಲಾಗುತ್ತದೆ. ಕಾಲುಂಗುರ ಋತು ಚಕ್ರ ಸಮಸ್ಯೆಯನ್ನು ಪರಿಹರಿಸುವಲ್ಲಿ ಸಹಕಾರಿಯಾಗಿದೆ. ಸಂತಾನ ಸಮಸ್ಯೆಯನ್ನು ದೂರಮಾಡುತ್ತದೆ. ಕಾಲುಂಗುರ ನರಕ್ಕೆ ತಾಗುವುದರಿಂದ ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ.
ಇನ್ನು ಬೆಳ್ಳಿ ಕಾಲುಂಗುರ ಯಾಕೆ ಧರಿಸುತ್ತಾರೆ ಎಂದರೆ, ಬೆಳ್ಳಿ ಎಲ್ಲ ಲೋಹಗಳಿಗಿಂತಲೂ ಹೆಚ್ಚು ಉಷ್ಣವಾಹಕ. ದೇಹದಲ್ಲಿನ ಅಧಿಕ ಉಷ್ಣತೆಯನ್ನು ಬೆಳ್ಳಿ ತಗ್ಗಿಸುತ್ತದೆ. ದೇಹದಲ್ಲಿ ರಕ್ತ ಪರಿಚಲನೆ ಸುಲಭವಾಗಿಸುತ್ತದೆ. ದೇಹದ ಆರೋಗ್ಯ ಹೆಚ್ಚಿಸಲು ಬೆಳ್ಳಿ ಸಹಾಯ ಮಾಡುತ್ತದೆ. ಬೆಳ್ಳಿ ಕಾಲುಂಗುರ, ಭೂಮಿಯಿಂದ ಸಿಗುವ ಧ್ರುವ ಶಕ್ತಿಯನ್ನು ದೇಹಕ್ಕೆ ನೀಡುತ್ತದೆ. ಕಾಲುಂಗುರಗಳಿಂದ ಸ್ತ್ರೀಯರ ದೇಹ ಶುದ್ಧಿಯಾಗಿರುತ್ತದೆ ಎಂದು ಹೇಳಲಾಗುತ್ತದೆ. ಅಲ್ಲದೆ, ಬೆಳ್ಳಿಯನ್ನು ದೇಹಕ್ಕೆ ಉತ್ತಮವಾದ ಲೋಹವೆಂದು ಪರಿಗಣಿಸಲಾಗಿದೆ. ಈ ಲೋಹವು ನಕಾರಾತ್ಮಕ ಶಕ್ತಿಯನ್ನು ತೆಗೆದುಹಾಕುತ್ತದೆ.
ಇದಿಷ್ಟೇ ಅಲ್ಲ, ಮಹಿಳೆಯರು ಬೆಳ್ಳಿ ಕಾಲುಂಗರ, ಗೆಜ್ಜೆಗಳನ್ನು ಧರಿಸುವ ಈ ಸಂಪ್ರದಾಯವು ರಾಮಾಯಣದೊಂದಿಗೆ ಸಂಬಂಧಿಸಿದೆ. ರಾವಣ ಸೀತೆಯನ್ನು ಅಪಹರಿಸಿದಾಗ, ಅವಳು ತನ್ನ ವಸ್ತುಗಳನ್ನು ದಾರಿಯಲ್ಲಿ ಎಸೆಯುತ್ತಾಳೆ. ರಾಮನು ತನ್ನನ್ನು ಸುಲಭವಾಗಿ ಕಂಡುಕೊಳ್ಳುವಂತೆ ಸೀತೆ ಹೀಗೆ ಮಾಡಿದಳು ಎಂಬ ಮಾತಿದೆ. ಇನ್ನು ಲಕ್ಷ್ಮಣನು ತನ್ನ ಅತ್ತಿಗೆ ಸೀತೆಯ ಬೆಳ್ಳಿ ಕಾಲುಂಗರಗಳನ್ನು ನೋಡಿ ಆಕೆಯನ್ನು ನೆನಪಿಸಿಕೊಂಡನು ಎನ್ನಲಾಗಿದೆ.
ಇದನ್ನು ಓದಿ: Tulasi Vastu: ಯಾವತ್ತಿಗೂ ತುಳಸಿ ಗಿಡದ ಪಕ್ಕದಲ್ಲಿ ಇವುಗಳನ್ನು ಇರಿಸಬೇಡಿ! ದಾರಿದ್ರ್ಯ ಕಟ್ಟಿಟ್ಟ ಬುತ್ತಿ