Actor Darshan: ದರ್ಶನ್ ಎದೆಯ ಮೇಲಿರೋ ‘ನನ್ನ ಪ್ರೀತಿಯ ಸೆಲೆಬ್ರಿಟೀಸ್’ ಟ್ಯಾಟೂ ಹಾಕಿದ್ದಕ್ಕೆ ನಟ ಕೊಟ್ಟ ಮೊತ್ತವೆಷ್ಟು?

How much Actor Darshan paid for tattoo on his chest

Actor Darshan: ಸ್ಯಾಂಡಲ್ ವುಡ್ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ (Actor Darshan) ಇತ್ತೀಚೆಗೆ ಹೆಚ್ಚು ಸುದ್ದಿಯಲ್ಲಿದ್ದಾರೆ. ಸಿನಿಮಾ ಮೂಲಕ ಮಾತ್ರವಲ್ಲದೆ ಇತರೆ ಉತ್ತಮ ಕಾರ್ಯಗಳಿಂದಲೂ ಜನಮನ ಗೆದ್ದಿರುವ ನಟ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಅಭಿಮಾನಿಗಳು ತಮ್ಮ ಮೇಲೆ ಇಟ್ಟಿರುವ ಪ್ರೀತಿಗೆ ಪ್ರತೀಕವಾಗಿ ನಟ ಈ ಹಿಂದೆ ತಮ್ಮ ಎದೆಯ ಮೇಲೆ ‘ನನ್ನ ಸೆಲೆಬ್ರಿಟೀಸ್‌’ (nanna celebrities) ಎಂದು ಹಚ್ಚೆ ಹಾಕಿಸಿಕೊಂಡಿದ್ದರು. ಇದಕ್ಕೆ ದರ್ಶನ್ ಅಭಿಮಾನಿಗಳು ಭಾರೀ ಖುಷಿಪಟ್ಟು ತಾವೂ ತಮ್ಮ ನೆಚ್ಚಿನ ನಟ ಹೆಸರನ್ನು ಹಚ್ಚೆ ಹಾಕಿಸಿಕೊಂಡಿದ್ದರು. ಸದ್ಯ ದರ್ಶನ್ ಎದೆಯ ಮೇಲಿರೋ ‘ನನ್ನ ಪ್ರೀತಿಯ ಸೆಲೆಬ್ರಿಟೀಸ್’ ಟ್ಯಾಟೂ ಹಾಕಿದ್ದಕ್ಕೆ ನಟ ಕೊಟ್ಟ ಮೊತ್ತವೆಷ್ಟು ಗೊತ್ತಾ?

“ನನ್ನ ಪ್ರೀತಿಯ ಸೆಲೆಬ್ರೀಟಿಸ್” ಟ್ಯಾಟೂವನ್ನು ಬ್ರಹ್ಮ ಟ್ಯಾಟೂ ಸ್ಟುಡಿಯೋ ಆರ್ಟಿಸ್ಟ್ ಗಿರೀಶ್ ಹಾಕಿದ್ದಾರೆ. ಇನ್ನು ದರ್ಶನ್ ಅವರು ಹಾಕಿಸಿಕೊಂಡಿರುವ “ನನ್ನ ಪ್ರೀತಿಯ ಸೆಲೆಬ್ರೀಟಿಸ್” ಟ್ಯಾಟೂ ಬೆಲೆ ಎಷ್ಟು ಗೊತ್ತಾ? ದರ್ಶನ್ ಎಷ್ಟು ಕೊಟ್ಟರು ಎನ್ನುವ ಪ್ರಶ್ನೆಗೆ ಗಿರೀಶ್ ನಿಖರವಾದ ಉತ್ತರ ಕೊಟ್ಟಿಲ್ಲ. ಮೊದಲಿಗೆ ಯಾವುದೇ ಹಣ ಬೇಡ ಎಂದಿದ್ದರಂತೆ. ಅದಕ್ಕೆ ದರ್ಶನ್ ಕೇಳದೆ, ಅವರು ಹೇಳಿದ್ದಕ್ಕಿಂತ 3 ಪಟ್ಟು ಹೆಚ್ಚು ಹಣ ಕೊಟ್ಟರು ಎಂದು ಗಿರೀಶ್ ಹೇಳಿದ್ದಾರೆ. ಆ ಟ್ಯಾಟೂವಿನ ಬೆಲೆ 1500 ರೂನಿಂದ 2000 ರೂ. ಆಗಿತ್ತು. ಆದರೆ, ದರ್ಶನ್ ಆ ಟ್ಯಾಟೂಗೆ ಹೇಳಿದ್ದಕ್ಕಿಂತ 3 ಪಟ್ಟು ಹೆಚ್ಚು ಹಣ ಕೊಟ್ಟರು ಎಂದರೆ, 6ರಿಂದ 7 ಸಾವಿರ ರೂ. ಹಣ ಕೊಟ್ಟಿದ್ದಾರೆ ಎಂದು ಅಂದಾಜಿಸಲಾಗಿದೆ.

ಇತ್ತೀಚೆಗೆ ದರ್ಶನ್ (Darshan Thoogudeepa) ಹಚ್ಚೆ ವಿಚಾರವಾಗಿ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ. ಹೌದು, ಡಿ ಕಂಪನಿ ಯೂಟ್ಯೂಬ್‌ ಚಾನೆಲ್‌ನಲ್ಲಿ (YouTube channel) ದರ್ಶನ್‌ ವರ್ಕೌಟ್‌ ವಿಡಿಯೋವೊಂದನ್ನು ಹಂಚಿಕೊಳ್ಳಲಾಗಿದ್ದು, ವಿಡಿಯೋದಲ್ಲಿ ದರ್ಶನ್‌ ಜಿಮ್‌ನಲ್ಲಿ ವರ್ಕೌಟ್ (Darshan workout video) ಮಾಡುವ ದೃಶ್ಯ‌ ಸೆರೆಯಾಗಿದೆ. ಈ ವಿಡಿಯೋದಲ್ಲಿ ದರ್ಶನ್ ಎದೆಯ ಮೇಲಿದ್ದ ಹಚ್ಚೆ ಇರಲಿಲ್ಲ. ಹಾಗಾಗಿ ಆದಿ ಎಂಬವರು ಈ ವಿಡಿಯೋದ ಸ್ಕ್ರೀನ್‌ ಶಾಟ್‌ ಅನ್ನು ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದು, ”ಯಾರಾದರೂ ಗಮನಿಸಿದ್ದೀರಾ? ಕೆಲವು ದಿನಗಳ ಹಿಂದೆ ‘ನನ್ನ ಸೆಲೆಬ್ರಿಟೀಸ್‌’ ಎಂದು ದರ್ಶನ್‌ ಹಾಕಿಸಿಕೊಂಡಿದ್ದ ಟ್ಯಾಟೂ ಏನಾಯ್ತು? ಅವರ ಅಸಲಿ ಮುಖ ಈಗ ಗೊತ್ತಾಗುತ್ತಿದೆ. ಅಭಿಮಾನಿಗಳಿಗೆ ದರ್ಶನ್‌ ಮೋಸ ಮಾಡಿದ್ದಾರೆ” ಎಂದು ಬರೆದುಕೊಂಡಿದ್ದರು.

ನಂತರ ಇದಕ್ಕೆ ಸ್ಪಷ್ಟೀಕರಣ ಸಿಕ್ಕಿದ್ದು, ಆ ವಿಡಿಯೋ ಟ್ಯಾಟೂ ಹಾಕಿಸಿಕೊಳ್ಳುವ ಮುಂಚಿನದು ಎಂದು ತಿಳಿದುಬಂದಿದೆ. ಈ ಹಿಂದೆ ಟ್ಯಾಟೂ ಬಗ್ಗೆ ಗಿರೀಶ್ ಮಾತನಾಡಿದ್ದರು. ದರ್ಶನ್ ನಮ್ಮ‌ ಬಳಿ ಬಂದು ಬಂದು ಪರ್ಮನೆಂಟ್‌ ಟ್ಯಾಟೂ ಹಾಕಿ, ಇದು ಸದಾ ನನ್ನ ಜೊತೆಯಲ್ಲೇ ಇರಬೇಕು. ಯಾವುದೇ ಕಾರಣಕ್ಕೂ ಟ್ಯಾಟೂ ಫೇಡ್‌ ಕೂಡಾ ಆಗಬಾರದು ಎಂದು ಕೇಳಿಕೊಂಡರು. ನಾವು ಹಾಕಿರುವ ಟ್ಯಾಟೂವನ್ನು ತೆಗೆಯುವುದು ಕಷ್ಟ. ನಾವು ಲಂಡನ್‌ನಿಂದ ತರಿಸಿಕೊಂಡ ಹೈ ಗ್ರೇಡ್‌ ಇಂಕ್‌ ಬಳಸುತ್ತೇವೆ. ಲೇಸರ್‌ನಿಂದ ತೆಗೆಯುವುದು ಕೂಡಾ ಕಷ್ಟ ಎಂದು ಗಿರೀಶ್‌ ಹೇಳಿದ್ದರು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ದರ್ಶನ್‌ ಟ್ಯಾಟೂ ವಿಚಾರಕ್ಕೆ ತೆರೆ ಬಿದ್ದಂತಾಗಿದೆ.

 

ಇದನ್ನು ಓದಿ: Children under 13 years: 13 ವರ್ಷದೊಳಗಿನ ಮಕ್ಕಳಿಗೆ 10 ವಿಷಯಗಳನ್ನು ಕಲಿಸಬೇಕು, ಇದು ಅವರ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ! 

Leave A Reply

Your email address will not be published.