Mango: ಮಾವಿನ ಸೀಸನ್​ ಮುಗಿದ ಮೇಲೂ ಈ ಹಣ್ಣನ್ನು ತಿನ್ಬೋದು, ಹೇಗಿದು ಸಾಧ್ಯ?

How it is possible to eat mango after season over

Mango :ಮಾವಿನ(mango) ಹಣ್ಣುಗಳನ್ನು ಎಲ್ಲರೂ ಇಷ್ಟಪಡುತ್ತಾರೆ. ತುಂಬಾ ಸಿಹಿಯಾಗಿರುವ ಈ ಮಾವಿನಹಣ್ಣು ಆರೋಗ್ಯಕ್ಕೂ ಒಳ್ಳೆಯದು. ಆದರೆ ಮಾವು ಬೇಸಿಗೆಯಲ್ಲಿ ಮಾತ್ರ ಕಂಡುಬರುತ್ತದೆ. ಆಮೇಲೆ ನೋಡಿದರೂ ಕಾಣುವುದಿಲ್ಲ. ಮಳೆಗಾಲ ಮತ್ತು ಚಳಿಗಾಲದಲ್ಲಿ ನಮಗೆ ಸಿಗುವುದಿಲ್ಲ. ಆದರೆ ಬೇಸಿಗೆಯ ಹೊರತಾಗಿ ಬೇರೆ ಸೀಸನ್ ನಲ್ಲೂ ಮಾವಿನ ಹಣ್ಣನ್ನು ತಿನ್ನಬೇಕೆಂದಿದ್ದರೆ. ಹೀಗೆ ಮಾಡಿ.

ಮಾರುಕಟ್ಟೆಯಿಂದ ತಂದ ಮಾವು ಸ್ವಲ್ಪ ಸಮಯದ ನಂತರ ಹಾಳಾಗುತ್ತದೆ. ಫ್ರಿಜ್ ನಲ್ಲಿಟ್ಟರೆ ಒಂದೋ ಎರಡೋ ವಾರ ಶೇಖರಣೆಯಾಗುತ್ತದೆ. ಆದರೆ ಹೆಚ್ಚು ದಿನ ಸಂಗ್ರಹಿಸಲು ಸಾಧ್ಯವಿಲ್ಲ. ಆದರೆ ಕೆಲವು ಸರಳ ವಿಧಾನಗಳ ಮೂಲಕ ಮಾವಿನ ಹಣ್ಣಿನ ರುಚಿಯನ್ನು ಆಫ್ ಸೀಸನ್ ನಲ್ಲಿ ಸವಿಯಬಹುದು.

ನೀವು ಮಾವಿನ ಹಣ್ಣನ್ನು ದೀರ್ಘಕಾಲ ಸಂಗ್ರಹಿಸಲು ಬಯಸಿದರೆ,ಮಾವಿನ ಹಣ್ಣಿನ ಸಿಪ್ಪೆ ತೆಗಿಯಿರಿ. ಅದರ ನಂತರ, ಮಾವಿನ ಹಣ್ಣಿನ ಮೇಲೆ ಸ್ವಲ್ಪ ಸಕ್ಕರೆಯನ್ನು ಸಿಂಪಡಿಸಿ ಮತ್ತು ಅದನ್ನು ಎರಡು ಮೂರು ಗಂಟೆಗಳ ಕಾಲ ಫ್ರೀಜರ್ನಲ್ಲಿಡಿ. ನಂತರ ಅದನ್ನು ಜಿಪ್ ಲಾಕ್ ಪಾಲಿಥಿನ್ ಬ್ಯಾಗ್ ಅಥವಾ ಗಾಳಿಯಾಡದ ಕಂಟೇನರ್ ನಲ್ಲಿ ಫ್ರೀಜರ್ ನಲ್ಲಿ ಶೇಖರಿಸಿಡಬಹುದು.

ಮಾವಿನಹಣ್ಣನ್ನು ಆಫ್-ಸೀಸನ್‌ನಲ್ಲಿ ಆನಂದಿಸಲು ಐಸ್ ಕ್ಯೂಬ್‌ಗಳ ರೂಪದಲ್ಲಿ ಸಂಗ್ರಹಿಸಬಹುದು. ಇದಕ್ಕಾಗಿ ಮಾವಿನ ಹಣ್ಣಿನ ತಿರುಳಿನಿಂದ ಪ್ಯೂರೀಯನ್ನು ತಯಾರಿಸಿ ಐಸ್ ಟ್ರೇಗೆ ಹಾಕಿ. ಅದು ಹೆಪ್ಪುಗಟ್ಟಿದ ನಂತರ ಈ ಕ್ಯೂಬ್‌ಗಳನ್ನು ಜಿಪ್ ಲಾಕ್ ಬ್ಯಾಗ್‌ನಲ್ಲಿ ಹೆಚ್ಚು ಕಾಲ ಶೇಖರಿಸಿಡಬಹುದು.

ಮಾವಿನ ಹಣ್ಣನ್ನು ತಿಂಗಳುಗಟ್ಟಲೆ ಶೇಖರಿಸಿಡಬೇಕೆಂದರೆ, ಅದರ ತಿರುಳನ್ನು ತೆಗೆದು ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಇದನ್ನು ಗಾಜಿನ ಬಾಟಲಿ ಅಥವಾ ಪಾತ್ರೆಯಲ್ಲಿ ತುಂಬಿ ಫ್ರಿಜ್ ನಲ್ಲಿಡಬೇಕು. ಮಳೆಗಾಲದಲ್ಲೂ ಇದನ್ನು ಬಳಸಬಹುದು. ಮ್ಯಾಂಗೋ ಶೇಕ್, ಶ್ರೀಖಂಡ್, ಐಸ್ ಕ್ರೀಂನಲ್ಲಿ ಬಳಸಬಹುದು.

ಬೇಸಿಗೆಯ ಕೊನೆಯಲ್ಲಿ ಪೂರ್ತಿ ಹಣ್ಣಾಗದ ಮಾವಿನ ಹಣ್ಣುಗಳನ್ನು ತಂದು ಕತ್ತಲೆಯ ಜಾಗದಲ್ಲಿ ಇಡಬೇಕು. ಹೀಗೆ ಮಾಡಿದರೆ ಸುಮಾರು ಒಂದು ತಿಂಗಳವರೆಗೆ ಮಾವಿನಹಣ್ಣು ಕೆಡುವುದಿಲ್ಲ. ಮೇ ಅಂತ್ಯದಲ್ಲಿ ಹೀಗೆ ಮಾಡಿದರೆ ಜೂನ್ ಅಂತ್ಯದವರೆಗೂ ಮಾವಿನ ರುಚಿಯನ್ನು ಸವಿಯಬಹುದು. ಮಾವಿನ ಹಣ್ಣನ್ನು ದೀರ್ಘಕಾಲದವರೆಗೆ ತಾಜಾವಾಗಿಡಲು, ಅವುಗಳನ್ನು ಕಾಗದದಲ್ಲಿ ಸುತ್ತಿ ಕತ್ತಲೆಯ ಸ್ಥಳದಲ್ಲಿ ಸಂಗ್ರಹಿಸಬೇಕು. ಈ ರೀತಿ ಮಾಡುವುದರಿಂದ ಮಾವು ಬೇಗ ಹಾಳಾಗುವುದು ತಪ್ಪುತ್ತದೆ. ಹೆಚ್ಚು ಕಾಲ ಫ್ರೆಶ್ ಆಗಿರುತ್ತದೆ.

ಇದನ್ನೂ ಓದಿ:  ಹೆಚ್ಚಿನ ಪಿಂಚಣಿ’ಗೆ ಅರ್ಜಿ ಸಲ್ಲಿಸಲು ಗಡುವು ವಿಸ್ತರಣೆ!

Leave A Reply

Your email address will not be published.