Mirror Vastu Tips: ಮನೆಯ ಈ ದಿಕ್ಕಿನಲ್ಲಿ ಕನ್ನಡಿ ಇಟ್ಟರೆ, ಅದೃಷ್ಟ ನಿಮ್ಮ ಬಾಗಿಲಿದೆ ಬರುತ್ತೆ!

Vastu tips for mirror directions

Vastu Tips for Mirror: ಕನ್ನಡಿಯನ್ನು ಸಿಕ್ಕ ಸಿಕ್ಕಲೆಲ್ಲಾ ಹಾಕಬಾರದು. ಅದಕ್ಕೂ ಒಂದು ಸರಿಯಾದ ದಿಕ್ಕಿದೆ. ಮನೆಯಲ್ಲಿ ಇಡುವಂತಹ ಪುಟ್ಟ ಕನ್ನಡಿಯೂ ಕೂಡ ನಿಮ್ಮ ಮನೆ, ಜೀವನದಲ್ಲಿ ಬದಲಾವಣೆಗೆ ಕಾರಣವಾಗುತ್ತದೆ. ಹೌದು, ವಾಸ್ತು ಶಾಸ್ತ್ರದಲ್ಲಿ ಕನ್ನಡಿಗೆ ಬಹಳಷ್ಟು ಮಹತ್ವವನ್ನು ನೀಡಲಾಗುತ್ತದೆ. ಕನ್ನಡಿ ಎಂದರೆ ಮುಖ ನೋಡಿಕೊಳ್ಳಲು ಮಾತ್ರ ಎಂಬ ಭಾವನೆ ಕೆಲವರಿಗಿರಬಹುದು. ಕನ್ನಡಿಯು ನಕಾರಾತ್ಮಕ ಶಕ್ತಿಯನ್ನು ಹೀರಿಕೊಂಡು, ಸಕಾರಾತ್ಮಕ ಶಕ್ತಿಯನ್ನು ಬಿಡುಗಡೆಗೊಳಿಸಿ, ಸಂಪತ್ತನ್ನು ಆಕರ್ಷಿಸುತ್ತದೆಂದು ವಾಸ್ತು ಶಾಸ್ತ್ರದಲ್ಲಿ (Vastu Tips for Mirror) ಹೇಳಲಾಗುತ್ತದೆ.

ಮುಖ್ಯವಾಗಿ ಮನೆಯಲ್ಲಿರುವ ಎಲ್ಲಾ ಕನ್ನಡಿಗಳನ್ನು ಸ್ವಚ್ಛವಾಗಿ ಮತ್ತು ಹೊಳೆಯುವಂತೆ ಇಟ್ಟುಕೊಳ್ಳುವುದು ಬಹಳ ಮುಖ್ಯ. ಕನ್ನಡಿಯ ಮೇಲೆ ಯಾವುದೇ ಕಲೆಗಳು ಅಥವಾ ಕೊಳೆ ಇರಬಾರದು. ಇದು ವಾಸ್ತು ಪ್ರಕಾರ ಒಳ್ಳೆಯದಲ್ಲ.

ಅದಲ್ಲದೆ ಒಡೆದ ಕನ್ನಡಿಯಲ್ಲಿ ಮುಖವನ್ನು ನೋಡುವುದು ಅಶುಭವೆಂದು ಪರಿಗಣಿಸಲಾಗುತ್ತದೆ. ಹಾಗಾಗಿ ಒಡೆದ ಕನ್ನಡಿಯನ್ನು ಎಂದಿಗೂ ಮನೆಯಲ್ಲಿ ಇಡಬೇಡಿ. ಇದು ನಿಮ್ಮ ಮನೆಯಲ್ಲಿ ಕೆಟ್ಟ ಶಕ್ತಿಗಳು ಸೇರಿಕೊಳ್ಳಲು ಕಾರಣವಾಗುತ್ತದೆ.

ಇನ್ನು ಕನ್ನಡಿಯನ್ನು ನೀರಿನ ಅಂಶ ಎಂದು ಕರೆಯಲಾಗುತ್ತದೆ ಮತ್ತು ವಾಸ್ತು ಶಾಸ್ತ್ರದ ಪ್ರಕಾರ, ಮಲಗುವ ಕೋಣೆಯಲ್ಲಿ ಕನ್ನಡಿಗಳನ್ನು ಇಡಬಾರದು. ಏಕೆಂದರೆ ಕನ್ನಡಿಯಲ್ಲಿ ನೀವು ಮಲಗುವುದು ಕಾಣಿಸಿದರೆ ಅದು ಸಮಸ್ಯೆಗೆ ಕಾರಣವಾಗುತ್ತದೆ.

ಮನೆಯ ಕಿಟಕಿಯ ಮುಂದೆ ಸುಂದರವಾದ ಹಸಿರು ತೋಟ, ಗಾರ್ಡನ್‌ ಇದ್ದಲ್ಲಿ ಕಿಟಕಿಯ ವಿರುದ್ಧ ದಿಕ್ಕಿನಲ್ಲಿ ಹಸಿರು ತೋಟ ಪ್ರತಿಫಲಿಸುವಂತೆ ಕನ್ನಡಿಯನ್ನು ಇಟ್ಟರೆ ಒಳ್ಳೆಯದು. ಇದು ಧನಾತ್ಮಕ ಶಕ್ತಿಯನ್ನು ಹಾಗೂ ಮನೆಯಲ್ಲಿ ಸಂತೋಷ ನೆಲೆಸುವಂತೆ ಮಾಡುವುದು.

ಊಟದ ಕೋಣೆಯಲ್ಲಿ ಕನ್ನಡಿಯನ್ನು ಇಡುವುದು ಉತ್ತಮ. ಇದರಿಂದ ಕುಟುಂಬವು ಡೈನಿಂಗ್ ಟೇಬಲ್‌ನಲ್ಲಿ ತಿನ್ನಲು ಕುಳಿತಾಗ, ಕನ್ನಡಿಯಲ್ಲಿ ಪ್ರತಿಫಲಿಸುತ್ತದೆ ಅದು ಸಂತೋಷ ಮತ್ತು ಸಮೃದ್ಧಿಯನ್ನು ಹೆಚ್ಚಿಸುತ್ತದೆ.

ಕನ್ನಡಿಯನ್ನು ಯಾವಾಗಲೂ ಮನೆಯ ಪೂರ್ವ ಅಥವಾ ಉತ್ತರ ಗೋಡೆಯ ಮೇಲೆ ಹಾಕಬೇಕು ಎನ್ನಲಾಗುತ್ತದೆ. ಹಾಗೆಯೇ ಕನ್ನಡಿಯನ್ನು ದಕ್ಷಿಣ ಅಥವಾ ಪಶ್ಚಿಮ ಗೋಡೆಯ ಮೇಲೆ ಯಾವುದೇ ಕಾರಣಕ್ಕೂ ಹಾಕಬಾರದಂತೆ. ಇದರಿಂದ ಸಮಸ್ಯೆಗಳಾಗುತ್ತದೆ.

ಕನ್ನಡಿಯನ್ನು ಬೀರು ಲಾಕರ್‌ನಲ್ಲಿ ಹಾಕಬಹುದು. ಆದರೆ ಲಾಕರ್‌ನ ವಿರೂಪಗೊಂಡ ಚಿತ್ರವು ಅದರಲ್ಲಿ ಪ್ರತಿಫಲಿಸದಂತೆ ನೋಡಿಕೊಳ್ಳಿ ಲಾಕರ್‌ನಲ್ಲಿ ಕನ್ನಡಿಯನ್ನು ಇಡುವುದರಿಂದ ಕುಟುಂಬದಲ್ಲಿ ಮತ್ತು ಮನೆಯಲ್ಲಿ ಸಂಪತ್ತು ಹೆಚ್ಚಾಗುತ್ತದೆ.

ಉತ್ತಮ ಆರೋಗ್ಯವನ್ನು ಪಡೆಯಲು ಸ್ನಾನದ ಮನೆಯಲ್ಲಿರುವ ಕನ್ನಡಿಯು ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿ ಇರಬೇಕು. ಇದು ಋಣಾತ್ಮಕ ಅಂಶಗಳನ್ನು ನಿವಾರಣೆ ಮಾಡುವುದಲ್ಲದೇ ಬೆಳಕನ್ನು ನೀಡುತ್ತದೆ.

ಆಗ್ನೇಯವು ಬೆಂಕಿಯ ದಿಕ್ಕು ಆಗಿರುವುದರಿಂದ ಈ ದಿಕ್ಕಿನಲ್ಲಿ ಕನ್ನಡಿಯನ್ನು ಇರಿಸಿದರೆ ಜಗಳಗಳಾಗುವ ಸಾಧ್ಯತೆ ಹೆಚ್ಚು. ಆದ್ದರಿಂದ ಈ ದಿಕ್ಕಿನಲ್ಲಿ ಕನ್ನಡಿಯನ್ನು ಇಡಬಾರದು.

ಇದನ್ನೂ ಓದಿ:Ramya : ಅಂಬರೀಶ್ ಅಂತಿಮ ಸಂಸ್ಕಾರಕ್ಕೆ ರಮ್ಯಾ ತಪ್ಪಿಸಿಕೊಂಡದ್ದು ಯಾಕೆ ಗೊತ್ತೇ, ಸತ್ಯ ಬಹಿರಂಗ !

Leave A Reply

Your email address will not be published.