Cadbury chocolate: ಕ್ಯಾಡ್ಬರಿ ಪ್ರಿಯರೇ ಎಚ್ಚರ! ಮಾರಿದ್ದನ್ನು ಹಿಂಪಡೆದು, ಕೊಂಡದ್ದನ್ನು ತಿನ್ನದಂತೆ ಎಚ್ಚರಿಕೆ ನೀಡಿದ ಕಂಪೆನಿ! ಕಾರಣವೇನು ಗೊತ್ತಾ?

Share the Article

Cadbury chocolate : ನೀವು ಕ್ಯಾಡ್ಬರಿ ಚಾಕೊಲೇಟ್‌ (Cadbury chocolate) ಪ್ರಿಯರೇ? ಹಾಗಿದ್ರೆ ಈ ಸ್ಟೋರಿ ನೋಡಿ. ಯಾಕೆಂದ್ರೆ ಕ್ಯಾಡ್ಬರಿ ಚಾಕೊಲೇಟ್‌ ಕಂಪನಿಯು ತನ್ನ ಸಾವಿರಾರು ಉತ್ಪನ್ನ ಹಿಂಪಡೆದಿದ್ದು, ಖರೀದಿಸಿದ್ದನ್ನು ತಿನ್ನದಂತೆ ಕೂಡ ಎಚ್ಚರಿಕೆ ನೀಡಿದೆ! ಅರೆ ಇದ್ಯಾಕೆ ಹೀಗೆ?

ಹೌದು, ಲಿಸ್ಟೀರಿಯಾ ಆತಂಕದಿಂದ ಸಾವಿರಾರು ಕ್ಯಾಡ್ಬರಿ ಉತ್ಪನ್ನಗಳನ್ನು ಹಿಂತೆಗೆದುಕೊಳ್ಳಲಾಗುತ್ತಿದೆ. ಅಲ್ಲದೆ, ಉತ್ಪನ್ನಗಳನ್ನು ಖರೀದಿಸಿದ ಜನರಿಗೆ ಅವುಗಳನ್ನು ತಿನ್ನದಂತೆ ಎಚ್ಚರಿಕೆ ನೀಡಲಾಗಿದೆ. ಅಲ್ಲದೆ, ಆ ಉತ್ಪನ್ನಗಳನ್ನು ಹಿಂತಿರುಗಿಸಿದರೆ ಹಣ ವಾಪಸ್‌ ನೀಡೋದಾಗಿಯೂ ಎಚ್ಚರಿಕೆ ನೀಡಿದೆ ಎಂಬುದರ ಬಗ್ಗೆ ಸ್ಕೈ ನ್ಯೂಸ್‌ ವರದಿ ಮಾಡಿದೆ. ಆದರೆ, ಇಂತಹ ಆತಂಕಕಾರಿ ಘಟನೆ ನಡೆದಿರೋದು ಭಾರತದ್ದಲ್ಲ.

ಅಂದಹಾಗೆ UKಯ ಆಹಾರ ಗುಣಮಟ್ಟ ಏಜೆನ್ಸಿ (FSA) ಗ್ರಾಹಕರನ್ನು ತಮ್ಮ ವೆಬ್‌ಸೈಟ್‌ನಲ್ಲಿ ಉತ್ಪನ್ನಗಳ ಎಕ್ಸ್‌ಪೈರಿ ದಿನಾಂಕವನ್ನು ಪರಿಶೀಲಿಸುವಂತೆ ಮನವಿ ಮಾಡಿಕೊಳ್ಳುತ್ತಿದೆ. ಈ ಆಹಾರ ಗುಣಮಟ್ಟ ಏಜೆನ್ಸಿ ಕ್ರಂಚಿ, ಡೈಮ್, ಫ್ಲೇಕ್, ಡೈರಿ ಮಿಲ್ಕ್ ಬಟನ್‌ಗಳು ಮತ್ತು ಡೈರಿ ಮಿಲ್ಕ್ ಚಂಕ್ಸ್ 75 ಗ್ರಾಂ ಚಾಕೊಲೇಟ್ ಡೆಸರ್ಟ್‌ಗಳ ಬಗ್ಗೆ ಎಚ್ಚರಿಕೆಯನ್ನು ನೀಡಿದೆ. ಈ ಎಲ್ಲವನ್ನೂ ಸೂಪರ್‌ಮಾರ್ಕೆಟ್‌ಗಳಲ್ಲಿ ಪ್ರತ್ಯೇಕವಾಗಿ ಮಾರಾಟ ಮಾಡಲಾಗುತ್ತದೆ ಎಂದು ಸ್ಕೈ ನ್ಯೂಸ್ ವರದಿ ಮಾಡಿದೆ. ಕ್ರಂಚಿ ಮತ್ತು ಫ್ಲೇಕ್ ಡೆಸರ್ಟ್‌ಗಳಿಗೆ ಮೇ 17 ಎಕ್ಸ್‌ಪೈರಿ ಡೇಟ್‌ ಇರುವ ಹಾಗೂ ಉಳಿದವುಗಳಿಗೆ ಮೇ 18 ರಂದು ಎಕ್ಸ್‌ಪೈರಿ ಡೇಟ್‌ ಇರುವ ಚಾಕೊಲೇಟ್‌ಗಳು ಆತಂಕಕಾರಿ ಎಂದು ವರದಿಯಾಗಿದೆ.

ಅಲ್ಲದೆ ಲಿಸ್ಟಿರಿಯೋಸಿಸ್‌ನ ಲಕ್ಷಣಗಳು ಫ್ಲೂಗೆ ಹೋಲುತ್ತವೆ. ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಪ್ರಕಾರ ಜ್ವರ, ಸ್ನಾಯು ನೋವು ಅಥವಾ ನೋವು, ಶೀತ, ಭಾವನೆ ಅಥವಾ ಅನಾರೋಗ್ಯ ಮತ್ತು ಅತಿಸಾರ ಸೇರಿವೆ. ಸೋಂಕಿತ ವ್ಯಕ್ತಿ ಮತ್ತು ದೇಹದ ಭಾಗವನ್ನು ಅವಲಂಬಿಸಿ ಲಿಸ್ಟೀರಿಯಾ ಸೋಂಕಿನ ಚಿಹ್ನೆಗಳು ಮತ್ತು ಲಕ್ಷಣಗಳು ಬದಲಾಗುತ್ತವೆ ಎಂದೂ ಆರೋಗ್ಯ ಸಂಸ್ಥೆ ಹೇಳಿದೆ.

ಸೋ, ಚಾಕೊಲೇಟ್‌ ಬ್ಯಾಕ್ಟೀರಿಯಾದಿಂದ ಕಂಟ್ಯಾಮಿನೇಟ್‌ ಆಗಿದೆ ಎಂದು ಎಚ್ಚರಿಕೆ ನೀಡಿದ ನಂತರ ಸೂಪರ್‌ಮಾರ್ಕೆಟ್ ಚೈನ್‌ ಮುಲ್ಲರ್ ಚಾಕೊಲೇಟ್‌ಗಳ ಬ್ಯಾಚ್‌ಗಳನ್ನು ಹಿಂಪಡೆಯುತ್ತಿದೆ ಎಂದು ಮೆಟ್ರೋ ವರದಿ ಮಾಡಿದೆ. “ಲಿಸ್ಟೀರಿಯಾ ಮಾನೋಸೈಟೋಜೆನ್‌ಗಳ ಸಂಭವನೀಯ ಉಪಸ್ಥಿತಿಯಿಂದಾಗಿ ವಿವಿಧ ಕ್ಯಾಡ್‌ಬರಿ ಬ್ರ್ಯಾಂಡ್‌ ಡೆಸರ್ಟ್ ಉತ್ಪನ್ನಗಳ ಕೆಲವು ಬ್ಯಾಚ್‌ಗಳನ್ನು ಹಿಂಪಡೆಯಲು ಮುಲ್ಲರ್ ಮುನ್ನೆಚ್ಚರಿಕೆ ಕ್ರಮವನ್ನು ತೆಗೆದುಕೊಂಡಿದ್ದಾರೆ” ಎಂದು ಎಫ್‌ಎಸ್‌ಎ ಸಹ ಹೇಳಿಕೆಯಲ್ಲಿ ತಿಳಿಸಿದೆ.

ಇದನ್ನೂ ಓದಿ:Bajarang Dal ban issue : ನಮ್ಮದು ಬಜರಂಗದಳ ಮನೆ, ಕಾಂಗ್ರೆಸ್‌ನವರು ಓಟ್ ಕೇಳೋಕೆ ಬಂದ್ರೆ ನಾಯಿ ಬಿಡ್ತೀವಿ – ಕಾಂಗ್ರೆಸ್ ವಿರುದ್ಧ ಮಲೆನಾಡಿಗರ ಆಕ್ರೋಶ!

Leave A Reply