Pakistan: ಹಲ್ಲಿಗಳ ಬಾಲಕ್ಕಿದೆ ಲೈಂಗಿಕ ಸಾಮರ್ಥ್ಯ ಹೆಚ್ಚಿಸುವ ಶಕ್ತಿ! ವಯಾಗ್ರ ನಿಷೇದದ ಬೆನ್ನಲ್ಲೇ ಪಾಕಿಸ್ತಾನದಲ್ಲಿ ಜೋರಾಯ್ತು ಹಲ್ಲಿ ತೈಲದ ಬೇಡಿಕೆ!

Lizard Oil: ಸಂಭೋಗ ನಡೆಸುವಾಗ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಅನೇಕರು ವಯಾಗ್ರ ಮಾತ್ರೆಗಳನ್ನು ಬಳಸುತ್ತಾರೆ. ಇಂದಂತೂ ಇಂಜೆಕ್ಷನ್ ಇಂದ ಹಿಡಿದು ಜೆಲ್, ಸ್ಪ್ರೇ ತರದ ಹೊಸ ಮಾದರಿಗಳೆಲ್ಲ ಬಂದಿವೆ. ಆದರೆ ವಿಚಿತ್ರ ಎನ್ನುವಂತೆ ಪಾಕಿಸ್ತಾನಿಗಳು ಇದೀಗ ತಮ್ಮ ಲೈಂಗಿಕ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಹಲ್ಲಿಗಳ ಮೊರೆ ಹೋಗಿದ್ದಾರೆ.

ಹೌದು, ಪಾಕಿಸ್ತಾನದಲ್ಲಿ ವಯಾಗ್ರಾ ನಿಷೇಧ ಮಾಡಿರುವುದರಿಂದ ಹಲ್ಲಿಗಳಿಂದ ಕಾಮೋತ್ತೇಜಕ ಉತ್ಪನ್ನವನ್ನು ಪಡೆದುಕೊಳ್ಳುವುದು ಜನಪ್ರಿಯತೆ ಗಳಿಸಿದೆ. ಇದಕ್ಕಾಗಿ ಮುಳ್ಳು ಬಾಲದ ಹಲ್ಲಿಯ ಎಣ್ಣೆಯಿಂದ ಮಸಾಜ್ ಮಾಡಿಕೊಂಡರೆ ಲೈಂಗಿಕ ಸಾಮರ್ಥ್ಯ ಹೆಚ್ಚುತ್ತದೆ ಎಂದು ಪಾಕಿಗಳು ನಂಬುತ್ತಿದ್ದಾರೆ. ಅದೇನು ವಿಚಿತ್ರವೋ ಗೊತ್ತಿಲ್ಲ, ಮುಳ್ಳು ಬಾಲದ ಹಲ್ಲಿಯಿಂದ ತೆಗೆದ ಎಣ್ಣೆ ಅಲ್ಲೀಗ ಭಾರೀ ಪ್ರಮಾಣದಲ್ಲಿ ಮಾರಾಟವಾಗುತ್ತಿದೆ. ಜನಪ್ರಿಯತೆ ಗಳಿಸಿಕೊಂಡಿದೆ. ಮುಖ್ಯವಾಗಿ ರಾವಲ್ಪಿಂಡಿ ಪ್ರದೇಶದ ಪುರುಷರು ಇದನ್ನು ಹೆಚ್ಚು ಪ್ರಮಾಣದಲ್ಲಿ ಬಳಕೆ ಮಾಡುತ್ತಿರುವುದಾಗಿ ಸುದ್ದಿಸಂಸ್ಥೆಗಳು ವರದಿ ಮಾಡಿವೆ.

ಅಂದಹಾಗೆ ರಾವಲ್ಪಿಂಡಿಯ (Rawalpindi) ರಾಜಾ ಮಾರುಕಟ್ಟೆಯಲ್ಲಿ (Raza Market) ಹಲ್ಲಿಯ ತೈಲಕ್ಕೆ ಭಾರೀ ಬೇಡಿಕೆ ಸೃಷ್ಟಿಯಾಗಿದೆ. “ಬಿಸಿ ರಕ್ತದ ಪಾಕಿಸ್ತಾನಿ ಪುರುಷರು (Pakistani Men) ತಮ್ಮ ಲೈಂಗಿಕ (Sexual) ಕೊರತೆಗಳನ್ನು ಹಾಗೂ ಕಾಮ ತೃಷೆಗಳನ್ನು ತೀರಿಸಿಕೊಳ್ಳಲು ಶೀತ ರಕ್ತದ (Cold Blood) ಹಲ್ಲಿನ ತೈಲದಿಂದ (Lizard Oil) ನಿವಾರಣೆ ಮಾಡಿಕೊಳ್ಳುತ್ತಿದ್ದಾರೆ’ ಎಂದು ಎಎಫ್ ಪಿ ಸುದ್ದಿಸಂಸ್ಥೆ ಹೇಳಿದೆ. ಹಾಸಿಗೆಯಲ್ಲಿ ತಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವುದಕ್ಕಾಗಿ ರಾವಲ್ಪಿಂಡಿ ಪುರುಷರು ಹೊಸ ಮಾರ್ಗ ಕಂಡುಕೊಂಡಿದ್ದಾರೆ ಎಂದು ಹೇಳಲಾಗಿದೆ. ವೈಜ್ಞಾನಿಕವಾಗಿ ಇದು ಸಾಬೀತಾಗಿಲ್ಲ. ಆದರೂ ಬೇಡಿಕೆ ಮಾತ್ರ ವಿಪರೀತವಾಗಿದೆ.

ಉದ್ದನೆಯ ಬಾಲದ ಹಲ್ಲಿಯ ರಕ್ತದಲ್ಲಿ ಪುರುಷರ ಕಾಮದ ಶಕ್ತಿಯನ್ನು ವೃದ್ಧಿಸುವ ಅಂಶವಿದೆ ಎಂಬುದು ಬಲವಾದ ನಂಬಿಕೆ. ಅದಕ್ಕಾಗಿ ಕಪ್ಪು ಮಾರುಕಟ್ಟೆಯಲ್ಲಿ ಹಲ್ಲಿ ತೈಲಕ್ಕೆ ಭಾರಿ ಬೇಡಿಕೆ ಇದೆ. ಇದಕ್ಕೆ ವೈಜ್ಞಾನಿಕ ಪುರಾವೆ ಇಲ್ಲದಿದ್ದರೂ ಗಂಟೆಗಟ್ಟಲೆ ಲೈಂಗಿಕ ಕ್ರಿಯೆ ನಡೆಸಿದರೂ ಆಯಾಸವಾಗುವುದಿಲ್ಲ. ಹಾಗೆಯೇ ಕಾಮದ ಬಯಕೆ ಸಂಪೂರ್ಣ ತಣಿಯುತ್ತದೆ ಎಂಬ ನಂಬಿಕೆ ಜನರಲ್ಲಿದೆ. ಇದಕ್ಕಾಗಿ ಹಲ್ಲಿಗಳನ್ನು ವ್ಯಾಪಕವಾಗಿ ಬೇಟೆಯಾಡುತ್ತಾರೆ.

ಹಲ್ಲಿಯ ಕೊಬ್ಬಿನಿಂದ ತೆಗೆದ ಎಣ್ಣೆ, ಚೇಳಿನ ತೈಲವನ್ನು ಕಟುವಾದ ಮಸಾಲೆಯೊಂದಿಗೆ ಬೆರೆಸಲಾಗುತ್ತದೆ. ಇದನ್ನು ಸಾಂಡಾ ತೈಲ ಎಂದೂ ಕರೆಯಲ್ಪಡುತ್ತದೆ. ರಾಜಾ ಮಾರುಕಟ್ಟೆಯಲ್ಲಿ ನಾಲ್ಕು ವ್ಯಾಪಾರಿಗಳು ಇದನ್ನು ಮಾರಾಟ ಮಾಡುತ್ತಾರೆ. ಇವರಲ್ಲಿ ಒಬ್ಬರಾಗಿರುವ ಯಾಸಿರ್ ಅಲಿ ಎಂಬುವರು ‘ಕೇವಲ ಐದು ಹನಿಗಳನ್ನು ಪುರುಷರ ಜನನಾಂಗಕ್ಕೆ ಹಚ್ಚಿ ಮಸಾಜ್ ಮಾಡಬೇಕು. ಲೈಂಗಿಕ ಸಾಮರ್ಥ್ಯ ಹೆಚ್ಚಿಸುತ್ತದೆ’ ಎಂದು ಹೇಳುತ್ತಾರೆ.

ಅಲ್ಲದೆ ನಮ್ಮ ದೇಶದ ಪಂಜಾಬ್ ಮತ್ತು ಸಿಂಧ್ ಪ್ರಾಂತ್ಯಗಳಲ್ಲಿ ಈ ಹಲ್ಲಿಯನ್ನು ಕಳ್ಳ ಬೇಟೆ, ಸಾಗಾಟ ಮಾಡಲಾಗುತ್ತದೆ. ತಮ್ಮ ಗೂಡುಗಳಿಂದ ಹೊರಬಂದು ಬಿಸಿಲಿಗೆ ಕೂರುವ ಸಮಯದಲ್ಲಿ ಅವುಗಳನ್ನು ಹಿಡಿಯಲಾಗುತ್ತದೆ. ಇಸ್ಲಾಮಾಬಾದ್ ಸಮೀಪದ 25 ವರ್ಷದ ಮಹಮ್ಮದ್ ನಾಸೀರ್ ಎಂಬಾತ ಮೀನುಗಾರಿಕೆಗೆ ಬಳಕೆ ಮಾಡುವ ತಂತಿ ಬಲೆಗಳ ಮೂಲಕ ಈ ಹಲ್ಲಿಗಳನ್ನು ಹಿಡಿಯುತ್ತಾನೆ. ಈತನ ವಂಶ ಇದರಲ್ಲಿ ಪಳಗಿದ್ದು, ಈತ ನಾಲ್ಕನೇ ತಲೆಮಾರಿನ ಕಳ್ಳ ಬೇಟೆಗಾರನಾಗಿದ್ದಾನೆ.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ನಾಸಿರ್ “ಯಾವುದೇ ಪ್ರಾಣಿ ಪ್ರಾಣಿ ಭಯದಲ್ಲಿರುವಾಗ ಬುಲೆಟ್ ವೇಗದಲ್ಲಿ ಓಡುತ್ತದೆ, ಹೀಗಾಗಿ ಅವುಗಳನ್ನು ಹಿಡಿಯಲು ಪ್ರಾಣಿ ಓಡಿ ಹೋಗದಿರಲು ತಂತಿಬಲೆ ಬಳಕೆ ಮಾಡುತ್ತೇವೆ. ಕೆಲವೊಮ್ಮೆ ಈ ಹಲ್ಲಿಗಳನ್ನು ಹಿಡಿಯಲು ನೋವಾಗುತ್ತದೆ. ಅವು ತಮ್ಮ ಸ್ಥಳದಲ್ಲೇ ಬದುಕಬೇಕು. ಆದರೆ, ಅವುಗಳನ್ನು ಹಿಡಿದು ಮಾರುವುದು ನಮ್ಮ ಕಾಯಕವಾಗಿದೆ. ಜೀವನ ಅದರಿಂದಲೇ ನಡೆಯುತ್ತದೆ’ ಎನ್ನುತ್ತಾನೆ.

ಸಾಂಪ್ರದಾಯಿಕ (Conservative) ದೇಶದ ಎನಿಸಿರುವ ಪಾಕಿಸ್ತಾನದಲ್ಲಿ ಸಾಮಾನ್ಯವಾಗಿ ದಂಪತಿಗಳು ಹೆಚ್ಚು ಮಕ್ಕಳನ್ನು ಹೊಂದುವ ಒತ್ತಡದಲ್ಲಿರುತ್ತಾರೆ. ಆದರೆ, ಸಹಜವಾಗಿ ಹೆಚ್ಚುತ್ತಿರುವ ಬಂಜೆತನದಿಂದಾಗಿ ಹಾಗೂ ವಯಾಗ್ರದಂತಹ (Viagra) ಉತ್ಪನ್ನಗಳು ಕಾನೂನುಬಾಹಿರ (Outlaw) ಎನಿಸಿರುವುದರಿಂದ ಇಂತಹ ಕಳ್ಳ ದಂಧೆಗಳು ಹೆಚ್ಚುತ್ತಿವೆ.

ಈ ಬಗ್ಗೆ ಟ್ವೀಟ್ ಮಾಡಿದ ನಾಸೀಮ್ ಎಂಬುವವರು “ಪುರಾಣಗಳಲ್ಲಿ ಲೈಂಗಿಕ ದೇವತೆಯನ್ನು ಅಫ್ರೊಡೈಸಿಯಾಕ್ ಎಂದು ಹೇಳಲಾಗುತ್ತದೆ. ಅದನ್ನು ಆರಾಧಿಸಿದರೆ ಲೈಂಗಿಕ ಶಕ್ತಿ ಹೆಚ್ಚುತ್ತದೆ ಎನ್ನಲಾಗುತ್ತಿತ್ತು. ಇದೂ ಸಹ ಅಷ್ಟೇ ಪರಿಣಾಮಕಾರಿ ಎನಿಸಿದೆ” ಎಂದಿದ್ದಾರೆ.

 

 

ಇದನ್ನು ಓದಿ: Menstrual Card: ಶಾಲಾ ಹೆಣ್ಣುಮಕ್ಕಳಿಗೆ ಋತುಮತಿ ಕಾರ್ಡ್ ಜಾರಿಗೆ ತಂದ ರಾಜ್ಯ ಸರ್ಕಾರ 

Leave A Reply

Your email address will not be published.