Physical relationship: ನಿಮ್ಮ ದೇಹಗಳಿಗೆ ಸಂಭೋಗ ಬೇಕೆನಿಸಿದಾಗ ಕಾಣೋ ಸೂಚನೆಗಳಿವು! ನಿಮಗೂ ಹೀಗಾಗುತ್ತಾ?
Physical relationship: ನಮ್ಮ ದೇಹ ತನಗೇನು ಬೇಕು ಅನ್ನೋದನ್ನ ತನ್ನ ದೇಹ ಭಾಷೆಯ ಮೂಲಕವೇ ನಮಗೆ ತಿಳಿಯ ಪಡಿಸುತ್ತದೆ. ಆದರೆ ಕೆಲವೊಮ್ಮೆ ಇವುಗಳನ್ನು ಅರಿಯುವಲ್ಲಿ ನಾವೇ ಫೇಲ್ ಆಗ್ತೆವೆ. ಈ ಬಯಕೆಗಳು ನಮ್ಮ ಮನಸ್ಸನ್ನು, ನಮ್ಮ ದೇಹವನ್ನು ಸದಾ ನೆಮ್ಮದಿಯಿಂದ ಇರಿಸಲು ಪ್ರಯತ್ನಿಸುತ್ತವೆ. ಅಂತೆಯೇ ಸಂಭೋಗ ಕೂಡ ನಮ್ಮ ಬದುಕಿನ ಮೇಲೆ, ಮನೋಸ್ಥಿತಿಯ ಮೇಲೆ ಗಾಢವಾದ ಪ್ರಭಾವ ಬೀರುತ್ತದೆ. ಆದರೆ ಸದ್ಯದ ದಿನಗಳಲ್ಲಿ ಇದನ್ನು ನಾವು ಅಪರಾಧದಂತೆ ನೋಡುತ್ತೇವೆ. ಇದರ ಸೂಚನೆಗಳನ್ನು ಕೂಡ ಗಮನಿಸುವುದೇ ಇಲ್ಲ. ಆದರೆ ಈ ಸಂಭೋಗವು (Physical relationship) ಸದ್ಯ ತನಗೆ ಅತೀ ಅಗತ್ಯ ಎಂದು ನಮ್ಮ ದೇಹವು ನಮಗೆ ತೋರಿಸುವ ಕೆಲವು ಸೂಚನೆಗಳು ಇಲ್ಲಿವೆ ನೋಡಿ.
ಏನೇನೋ ಕಲ್ಪನೆಗಳು: ಕಣ್ಣುಮುಚ್ಚಿದರೆ ಬರೀ ರೊಮ್ಯಾಂಟಿಕ್ ಕಲ್ಪನೆಗಳು, ಏನೇನೆಲ್ಲ ಕನಸು. ಕೈಯಲ್ಲಿರೋ ಮೊಬೈಲಲ್ಲೂ ಅದೇ ಥರದ ದೃಶ್ಯಗಳನ್ನು ನೋಡಬೇಕು ಅನಿಸುತ್ತೆ. ಆ ಥರದ ಸಂಗತಿಗಳನ್ನು ತೀವ್ರವಾಗಿ ಓದಬೇಕು, ನೋಡಬೇಕು ಅನಿಸುತ್ತೆ. ಇದರಿಂದ ನಿದ್ರೆ ಬರದೇ ಹೋಗಬಹುದು.
ವಿರುದ್ಧ ಲಿಂಗದವರ ಬಗ್ಗೆ ಆಕರ್ಷಣೆ: ಕಣ್ಣು ಪದೇ ಪದೇ ವಿರುದ್ಧ ಲಿಂಗದವರ ಆಕರ್ಷಣೆಯಲ್ಲಿ ಬೀಳುತ್ತದೆ. ಅವರನ್ನು ಕದ್ದು ಮುಚ್ಚಿ ಗಮನಿಸಲು ಶುರು ಮಾಡುತ್ತದೆ. ಹ್ಯಾಂಡ್ಸಮ್ ಅನಿಸೋ ಹುಡುಗ, ಕ್ಯೂಟ್ ಅನಿಸೋ ಹುಡುಗಿ ಎದುರಾದಾಗ ಮನಸ್ಸಲ್ಲಿ ಏನೇನೋ ಭಾವನೆಗಳು ಮೂಡಬಹುದು. ಇದು ದೇಹ ಬಯಸೋದೇನನ್ನು ಅನ್ನೋದರ ಸೂಚನೆ ನೀಡುತ್ತದೆ.
ಸುಮ್ಮನಿದ್ದರೂ ಏದುಸಿರು: ದೇಹ ಹೆಚ್ಚು ಎಕ್ಸೈಟ್ ಆಗುತ್ತದೆ. ಬೇಗ ಬೇಗ ಉಸಿರಾಡಬೇಕು ಅನಿಸುತ್ತದೆ. ಉಸಿರಾಟ ತೀವ್ರವಾಗುತ್ತಿರುವ ಹಾಗೆ ಏದುಸಿರು ಬರಲು ಶುರುವಾಗುತ್ತದೆ. ಹೃದಯ ಬಡಿತ ಹೆಚ್ಚಾಗುತ್ತದೆ. ದೇಹ ಆ ಕ್ರಿಯೆಗೆ ಸಜ್ಜಾಗುತ್ತಿರುವಾಗ ಅಂಗಾಗಗಳಿಗೆ ಹೆಚ್ಚಿನ ಆಮ್ಲಜನಕದ ಅಗತ್ಯ ಇರುತ್ತದೆ. ಹೀಗಾಗಿ ಹೆಚ್ಚು ಆಮ್ಲಜನಕಕ್ಕಾಗಿ ದೇಹ ಹಾತೊರೆಯುತ್ತದೆ. ಆಗ ಈ ಎಲ್ಲ ದೈಹಿಕ ಸೂಚನೆಗಳೂ ಕಾಣಬಹುದು. ಯಾಕೋ ಉಸಿರಾಡಲು ಕಷ್ಟ ಪಡ್ತಾ ಇದೀನಿ ಅನ್ನೋ ಫೀಲ್ ಬರಬಹುದು. ಹೃದಯ ಬಡಿತ ಹೆಚ್ಚಾಗೋದು, ಉಸಿರಾಟ ತೀವ್ರವಾಗೋದು ಇತ್ಯಾದಿಗಳು ಸೆಕ್ಸ್ಗೆ ದೇಹ ಎದುರು ನೋಡುತ್ತಿದೆ ಅನ್ನೋದರ ಸೂಚನೆ.
ಸಂಗಾತಿಗೆ ಹೆಚ್ಚು ಹತ್ತಿರಾಗೋದು: ಅಗತ್ಯ ಇರಲಿ, ಇಲ್ಲದಿರಲಿ ಸಂಗಾತಿಯನ್ನು ಮುಟ್ಟೋದು, ಹೆಚ್ಚೆಚ್ಚು ಮುಟ್ಟಿ ಮಾತಾಡಿಸೋದು, ಅವರ ಮೈ ಮೇಲೆ ಬೀಳೋದು, ಕಣ್ಣುಗಳಲ್ಲೇ ಆಟ ಆಡೋದು ಹೀಗೆ ಹಲವು ಸೂಚನೆಗಳನ್ನು ಸಂಗಾತಿಯ ಎದುರು ತೋರ್ಪಡಿಸಿದರೆ ಅದು ದೇಹ ಮನಸ್ಸು ಸೆಕ್ಸ್ ಗಾಗಿ ಒದ್ದಾಡುತ್ತಿರುವುದರ ಸೂಚನೆ.
ಸಂಭೋಗದಿಂದ ದೇಹಕ್ಕೆ ಆಗೋ ಲಾಭಗಳು: ಇಷ್ಟೆಲ್ಲ ಸೂಚನೆ ಸಿಕ್ಕಿದ ಮೇಲೂ ಸೆಕ್ಸ್ ಮಾಡದಿದ್ದರೆ ಒಂದಿಷ್ಟು ಸಮಸ್ಯೆ ಬರಬಹುದು. ಒಂದು ವೇಳೆ ಸೆಕ್ಸ್ ಮಾಡಿದರೆ ಅದರಿಂದ ದೈಹಿಕ ಮಾನಸಿಕ ಪ್ರಯೋಜನಗಳು ಹೆಚ್ಚುತ್ತವೆ. ವಾರಕ್ಕೆರಡು ಬಾರಿ ಲೈಂಗಿಕ ಚಟುವಟಿಕೆಯಲ್ಲಿ ಭಾಗವಹಿಸುವ ಮಂದಿಯಲ್ಲಿ ಹಾರ್ಟ್ ಅಟ್ಯಾಕ್ ಸಮಸ್ಯೆ ಕಡಿಮೆ. ನಿಯಮಿತವಾಗಿ ಲೈಂಗಿಕ ಕ್ರಿಯೆ ನಡೆಸಿದರೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ವೈರಸ್ ಆಧಾರಿತ ಸಾಮಾನ್ಯ ರೋಗಗಳಾದ ಜ್ವರ ಶೀತ ನೆಗಡಿಗಳಿಂದ ರಕ್ಷಿಸಿಕೊಳ್ಳಲು ದೇಹ ಇನ್ನಷ್ಟು ಸಬಲವಾಗುತ್ತದೆ.
ಅಂದಹಾಗೆ ಲೈಂಗಿಕ ಕ್ರಿಯೆಯಲ್ಲಿ(Sex activity) ತೊಡಗಿದಾಗ ಶರೀರದಲ್ಲಿ ಆಗುವಂತಹಾ ಬದಲಾವಣೆಗಳು ವರ್ಕ್ಔಟ್(Workout) ಮಾಡುವಾಗಲೂ ಆಗುತ್ತದೆ. ನಿತ್ಯ ಕಾಡುವ ತಲೆನೋವು ಥರದ ಸಮಸ್ಯೆಗಳು ನಿವಾರಣೆ ಆಗುತ್ತದೆ. ಕಾಮೋತ್ಕಟತೆಯ ಸಮಯದಲ್ಲಿ ದೇಹದಲ್ಲಿ ಆಕ್ಸಿಟೋಸಿನ್ ಎಂಬ ರಸದೂತ ಸ್ರವಿಸುವ ಪ್ರಮಾಣ ಐದು ಪಟ್ಟು ಹೆಚ್ಚುತ್ತದೆ. ಇದು ಮನೋಭಾವವನ್ನು ಉತ್ತಮಗೊಳಿಸುತ್ತದೆ ಹಾಗೂ ನರಗಳನ್ನು ಸಡಿಲಿಸಿ ಹೆಚ್ಚಿನ ರಕ್ತಸಂಚಾರ ಹರಿಸುವ ಮೂಲಕ ತಲೆನೋವಿನ ಸಹಿತ ಹಲವಾರು ನೋವುಗಳನ್ನು ಕಡಿಮೆ ಮಾಡುತ್ತದೆ. ಲೈಂಗಿಕತೆ ವೇಳೆ ಹೃದಯದ ಬಡಿತ(Heartbeat) ಹೆಚ್ಚಿ ಮೆದುಳು ಮತ್ತು ಜನನಾಂಗಗಳಿಗೆ ತಲುಪುವ ರಕ್ತದ ಪ್ರಮಾಣವೂ ಹೆಚ್ಚುತ್ತದೆ. ಹೊಸರಕ್ತ ದೇಹದ ಎಲ್ಲಾ ಜೀವಕೋಶಗಳಿಗೆ ತಲುಪುತ್ತದೆ. ಒಳ್ಳೆಯ ನಿದ್ದೆಯೂ ಬರುತ್ತದೆ. ಮನಸ್ಸಿಗೆ ಖುಷಿ, ದೇಹಕ್ಕೆ ಸುಖ.
ಇದನ್ನೂ ಓದಿ: ಎಲ್ಲಾ ಶಾಂಪೂಗಳು ಕೂದಲಿಗೆ ಒಳ್ಳೆಯದಲ್ಲ! ಅಡ್ಡ ಪರಿಣಾಮಗಳನ್ನು ತಪ್ಪಿಸಲು ಇದನ್ನು ಮಾಡಿ