PAN Card: ಎಷ್ಟು ಪ್ಯಾನ್ ಕಾರ್ಡ್ ಹೊಂದಬಹುದು? ಉಲ್ಲಂಘನೆಗೆ ದಂಡವೆಷ್ಟು ಗೊತ್ತಾ? ಇಲ್ಲಿದೆ ಓದಿ
PAN Card: ಪ್ಯಾನ್ ಕಾರ್ಡ್ ಯಾವುದೇ ಭಾರತೀಯ ನಾಗರಿಕರಿಗೆ ಅಗತ್ಯವಾದ ಗುರುತಿನ ದಾಖಲೆಯಾಗಿದ್ದು. ನಿಮ್ಮ ಎಲ್ಲಾ ತೆರಿಗೆ ನಿರ್ವಹಣಾ ಉದ್ದೇಶಗಳಿಗಾಗಿ ಇದು ಬಹಳ ಮುಖ್ಯವಾದ ದಾಖಲೆಯಾಗಿದೆ. ಪ್ಯಾನ್ ಇಲ್ಲದೆ, ನೀವು ಯಾವುದೇ ಹಣಕಾಸಿನ ವಹಿವಾಟು ನಡೆಸಲು ಸಾಧ್ಯವಾಗುವುದಿಲ್ಲ. ಒಬ್ಬ ವ್ಯಕ್ತಿಯು ಎಷ್ಟು ಪ್ಯಾನ್ ಕಾರ್ಡ್ಗಳನ್ನು ಹೊಂದಬಹುದು? ನಾವು ಒಂದಕ್ಕಿಂತ ಹೆಚ್ಚು ಪ್ಯಾನ್ ಕಾರ್ಡ್ (PAN Card) ಹೊಂದಬಹುದೇ? ಉಲ್ಲಂಘನೆಗೆ ದಂಡ ಎಷ್ಟು? ಈ ಕುರಿತ ಕಂಪ್ಲೀಟ್ ಮಾಹಿತಿ ಇಲ್ಲಿದೆ ಓದಿ.
ಪ್ಯಾನ್ ಕಾರ್ಡ್ ಮುಖ್ಯ ಗುರುತಿನ ಚೀಟಿಯಾಗಿರುವ ಪ್ಯಾನ್ ಕಾರ್ಡ್ ಅನ್ನು ಆದಾಯ ತೆರಿಗೆ ಪಾವತಿಸಲು ಮತ್ತು ವೈಯಕ್ತಿಕ ಆದಾಯವನ್ನು ಮೇಲ್ವಿಚಾರಣೆ ಮಾಡಲು ವ್ಯಾಪಕವಾಗಿ ಬಳಸಲಾಗುತ್ತದೆ. ನಗದು ವಹಿವಾಟುಗಳನ್ನು ಮೇಲ್ವಿಚಾರಣೆ ಮಾಡಲು ಪ್ಯಾನ್ ಕಾರ್ಡ್ನಲ್ಲಿರುವ ಶಾಶ್ವತ ಗುರುತಿನ ಸಂಖ್ಯೆ (ಪಿನ್) ಸಹ ಅಗತ್ಯವಿದೆ.
ಪ್ರತಿಯೊಬ್ಬರಿಗೂ ಕೇವಲ ಒಂದು ಪ್ಯಾನ್ ಕಾರ್ಡ್ ಹೊಂದಲು ಅವಕಾಶವಿದೆ. ಪ್ಯಾನ್ ಕಾರ್ಡ್ ಮೂಲಕ ವ್ಯಕ್ತಿಯ ಎಲ್ಲಾ ಖಾತೆಗಳನ್ನು ಟ್ರ್ಯಾಕ್ ಮಾಡಬಹುದು. ಆದ್ದರಿಂದ, ಒಂದಕ್ಕಿಂತ ಹೆಚ್ಚು ಪ್ಯಾನ್ ಕಾರ್ಡ್ಗಳನ್ನು ಬಳಸುವುದು ಶಿಕ್ಷೆಗೆ ಕಾರಣವಾಗುತ್ತದೆ.
ಆದಾಯ ತೆರಿಗೆ ಕಾಯ್ದೆಯ ನಿಬಂಧನೆಗಳ ಪ್ರಕಾರ, ಒಂದಕ್ಕಿಂತ ಹೆಚ್ಚು ಪ್ಯಾನ್ ಕಾರ್ಡ್ಗಳನ್ನು ಹೊಂದಿರುವುದು ಅಪರಾಧವಾಗಿದೆ. ಆದ್ದರಿಂದ ಅನಗತ್ಯ ಶಿಕ್ಷೆಯನ್ನು ತಪ್ಪಿಸಲು ವ್ಯಕ್ತಿಯ ಹೆಸರಿನಲ್ಲಿ ಕೇವಲ ಒಂದು ಪ್ಯಾನ್ ಕಾರ್ಡ್ ಹೊಂದಿರುವುದು ಸೂಕ್ತ.
ಒಂದಕ್ಕಿಂತ ಹೆಚ್ಚು ಪ್ಯಾನ್ ಕಾರ್ಡ್ ಇರುವುದು ಕಂಡುಬಂದರೆ ಆದಾಯ ತೆರಿಗೆ ಕಾಯ್ದೆ, 1961 ರ ಸೆಕ್ಷನ್ 272 ಬಿ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು. 10,000 ರೂ.ವರೆಗೆ ದಂಡ ವಿಧಿಸಲಾಗುತ್ತದೆ.
ಪ್ಯಾನ್ ಕಾರ್ಡ್ ಅನ್ನು ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಮಾಡುವುದು ಸಹ ಕಡ್ಡಾಯವಾಗಿದೆ. ಇದಕ್ಕಾಗಿ ಕೇಂದ್ರ ಸರ್ಕಾರವು ಕಾಲಮಿತಿಯನ್ನು ವಿಸ್ತರಿಸುತ್ತಲೇ ಇದೆ. ಈಗ ಜೂನ್ ೩೦ ರವರೆಗೆ ಗಡುವನ್ನು ನಿಗದಿಪಡಿಸಲಾಗಿದೆ. ಅದರೊಳಗೆ ಲಿಂಕ್ ಮಾಡದಿದ್ದರೆ, ಪ್ಯಾನ್ ಕಾರ್ಡ್ ಅಮಾನ್ಯವಾಗುತ್ತದೆ.
ಪ್ಯಾನ್ ಕಾರ್ಡ್ ಅಪರಾಧದಲ್ಲಿ ಸಿಲುಕಿಕೊಂಡರೆ, ಬ್ಯಾಂಕ್ ಸಾಲ ಪಡೆಯುವುದು, ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವುದು ಸೇರಿದಂತೆ ಅನೇಕ ವಿಷಯಗಳಲ್ಲಿ ಸಮಸ್ಯೆ ಉಂಟಾಗುತ್ತದೆ.