One husband for 40 wives: 40 ಮಹಿಳೆಯರಿಗೆ ‘ರೂಪ್‌ಚಂದ್‌’ ಒಬ್ಬನೇ ಗಂಡ! ಬಿಹಾರ ರೆಡ್ ಲೈಟ್ ಏರಿಯಾದ ಕಥೆ ಕೇಳಿದ್ರೆ ನೀವೂ ಹೌಹಾರುತ್ತೀರ!

One husband-40 wives: ಸಾಮಾನ್ಯವಾಗಿ ಒಬ್ಬ ವ್ಯಕ್ತಿಗೆ ಒಬ್ಬಳೇ ಹೆಂಡತಿ ಇರೋದು ಕಾಮನ್. ಕೆಲವರು 2-3 ಜನರನ್ನು ಮದುವೆ ಆಗಿರ್ತಾರೆ. ಇನ್ನು ಕೆಲವರು ಯಾರಿಗೂ ತಿಳಿಯದಂತೆ ಹೊರಗಡೆಯೆಲ್ಲ ಹೊಸತು-ಹಳತು ಎಂದು ಹಲವಾರು ಬ್ರಾಂಚ್ ಓಪನ್ ಮಾಡಿರ್ತಾರೆ. ಆದರೂ ಇವರ್ಯಾರು ಹೆಂಡತಿಯರಾಗಲು ಸಾಧ್ಯವಿಲ್ಲ ಬಿಡಿ. ಆದರೆ ಇಲ್ಲೊಂದೆಡೆ ಒಬ್ಬ ಆಸಾಮಿಗೆ ಬರೋಬ್ಬರಿ 40 ಹೆಂಡತಿ (One husband-40 wives) ಯರಿದ್ದಾರಂತೆ.

ಹೌದು, ಸದ್ಯ ಬಿಹಾರ(Bihar) ದಲ್ಲಿ ನಡೆಯುತ್ತಿರುವ ಜಾತಿ ಗಣತಿಯಲ್ಲಿ ಗೊತ್ತಾಗಿರುವ ವಿಷಯ ಕೇಳಿದರೆ ನೀವು ಹೌಹಾರೋದು ಖಂಡಿತ. ಯಾಕೆಂದರೆ ಬಿರುಸಿನಿಂದ ನಡೆಯುತ್ತಿರುವ ಜಾತಿ ಗಣತಿಯಲ್ಲಿ ರೂಪ್‌ಚಂದ್‌ ಹೆಸರಿನ ವ್ಯಕ್ತಿ ಬರೋಬ್ಬರಿ 40 ಮಹಿಳೆಯರ ಗಂಡ ಎಂದು ನಮೂದಿಸಲಾಗಿದೆ! ಈಗಿನ ಕಾಲದಲ್ಲಿ ಇದು ನಂಬಲಾಗದ ವಿಷಯವಾದರೂ ಸದ್ಯದ ಮಟ್ಟಿಗೆ ಇದೇ ವಾಸ್ತವ. ಸದ್ಯ ಇದು ಇಡೀ ಬಿಹಾರದಲ್ಲಿ ಚರ್ಚೆಯ ವಿಚಾರವಾಗಿದೆ.

ಅಂದಹಾಗೆ ಬಿಹಾರದ ಅಗರ್ವಾಲ್(Agarwal) ಜಿಲ್ಲೆಯ ರೆಡ್‍ಲೈಟ್ ಏರಿಯಾದಲ್ಲಿ ಜಾತಿ ಗಣತಿ ನಡೆಸಲಾಗಿತ್ತು. ಈ ವೇಳೆ 40 ಮಹಿಳೆಯರು (Women) ಹೇಳಿದ ಉತ್ತರ ಕೇಳಿ ಅಧಿಕಾರಿಗಳು ಒಮ್ಮೆಲೇ ಶಾಕ್ ಆಗಿದ್ದಾರೆ. 40 ಮಹಿಳೆಯರು ರೂಪಚಂದ್ ಎಂಬಾತನನ್ನು ತಮ್ಮ ಪತಿ (Husband) ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಅವರ ಮಕ್ಕಳು ಕೂಡ ರೂಪಚಂದ್ ಹೆಸರನ್ನು ತಮ್ಮ ತಂದೆಯ ಹೆಸರಾಗಿ ಬರೆದಿದ್ದಾರೆ.

ವರದಿಗಳ ಪ್ರಕಾರ, ವಾರ್ಡ್ ಸಂಖ್ಯೆ 7 ರ ರೆಡ್ ಲೈಟ್ ಏರಿಯಾದಲ್ಲಿ ವಾಸಿಸುವ ಜನರು ತಮ್ಮ ಜೀವನೋಪಾಯಕ್ಕಾಗಿ ಹಾಡುತ್ತಾರೆ ಮತ್ತು ನೃತ್ಯ ಮಾಡುತ್ತಾರೆ ಮತ್ತು ಅವರಿಗೆ ಯಾವುದೇ ಸ್ಥಿರ ವಿಳಾಸವಿಲ್ಲ. ಆದ್ದರಿಂದ, ಈ ಮಹಿಳೆಯರು ತಮ್ಮ ಪತಿಯ ಹೆಸರನ್ನು ರೂಪಚಂದ್ ಎಂದು ಹೇಳಿಕೊಂಡಿದ್ದು, ಈ ಘಟನೆ ಸುತ್ತಮುತ್ತಲ ಪ್ರದೇಶದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಜಾತಿ ಗಣತಿ ಮಾಡುತ್ತಿರುವ ಅಧಿಕಾರಿ ರಾಜೀವ್‌ ರಂಜನ್‌ ಶುಕ್ಲಾ ಕೂಡ ಈ ಬಗ್ಗೆ ಮಾತನಾಡಿದ್ದು, ರೂಪ್‌ಚಂದ್‌ ಯಾರು ಅನ್ನೋದು ಈವರೆಗೂ ಯಾರಿಗೂ ತಿಳಿದಿಲ್ಲ. ಸರ್ಕಾರಿ ದಾಖಲೆಗಳಿಗೆ ಮಾತ್ರವೇ ಅವರು ಪತಿಯ ಹೆಸರನ್ನು ರೂಪ್‌ಚಂದ್‌ ಎಂದು ನೀಡಿರುತ್ತಾರೆ. ಜಾತಿ ಗಣತಿಯ ವೇಳೆ ಅಂದಾಜು 40ಕ್ಕೂ ಅಧಿಕ ಮಹಿಳೆಯರು ರೂಪ್‌ಚಂದ್‌ ಎನ್ನುವವನೇ ತಮ್ಮ ಪತಿ ಎಂದಿರುವಾಗ, ಅಧಿಕಾರಿಗಳು ಕುಡ ಈ ರೂಪ್‌ ಚಂದ್‌ ಯಾರು ಎನ್ನುವ ಕುತೂಹಲಕ್ಕೆ ಬಿದ್ದಿದ್ದಾರೆ.

ಇನ್ನೂ ಕೆಲವು ಮಾಧ್ಯಮಗಳು ಈ ರೂಪ್‌ಚಂದ್‌ ಯಾರು ಎನ್ನುವ ಕುತೂಹಲವನ್ನು ತಿಳಿಯಲು ಪ್ರಯತ್ನಿಸಿದಾಗ ಹೆಚ್ಚಿವರು, ರೂಪ್‌ಚಂದ್‌ ಎನ್ನುವುದು ಯಾವುದೇ ವ್ಯಕ್ತಿಯಲ್ಲ. ತಮ್ಮ ಜೀವನದಲ್ಲಿ ಅತ್ಯಂತ ಅಮೂಲ್ಯವಾದ ವಿಚಾರ ಏನಾದರೂ ಇದ್ದರೆ ಅದು ರೂಪಾಯಿ ಮಾತ್ರ. ಆದ ಕಾರಣಕ್ಕೆ ತಮ್ಮ ಗಂಡನ ಹೆಸರನ್ನು ರೂಪ್‌ಚಂದ್‌ ಆಗಿ ಇರಿಸಿಕೊಂಡಿದ್ದೇವೆ ಎಂದು ಇದೇ ಮಹಿಳೆಯರು ತಿಳಿಸಿದ್ದಾರೆ.

ಅಂದಹಾಗೆ ನಿತೀಶ್ ಕುಮಾರ್ ಸರ್ಕಾರವು ಜನವರಿ 7ರಂದು ಬಿಹಾರದಲ್ಲಿ ಜಾತಿ ಆಧಾರಿತ ಜನಗಣತಿಯನ್ನು ಪ್ರಾರಂಭಿಸಿತು. ಇದರ ಎಣಿಕೆ ಯೋಜನೆಗೆ 500 ಕೋಟಿ ವೆಚ್ಚವಾಗಲಿದೆ. ಬಿಹಾರ ಸರ್ಕಾರ ಎರಡು ಹಂತಗಳಲ್ಲಿ ಈ ಎಣಿಕೆಯನ್ನು ನಡೆಸುತ್ತಿದೆ. ಮೊದಲ ಹಂತದಲ್ಲಿ, ಎಲ್ಲಾ ಮನೆಗಳ ಸಂಖ್ಯೆಯನ್ನು ಎಣಿಕೆ ಮಾಡಬೇಕಾಗಿತ್ತು. ಎರಡನೇ ಹಂತದಲ್ಲಿ ಎಲ್ಲ ಜಾತಿ, ಉಪಜಾತಿ ಮತ್ತು ಧರ್ಮದ ಜನರಿಗೆ ಸಂಬಂಧಿಸಿದ ಮಾಹಿತಿ ಸಂಗ್ರಹಿಸಬೇಕಿತ್ತು. ಗಣತಿದಾರರು ಡಿಸೆಂಬರ್ 15 ರಂದು ತರಬೇತಿಯನ್ನು ಪ್ರಾರಂಭಿಸಿದ್ದು, ಎಲ್ಲಾ ಜನರ ಆರ್ಥಿಕ ಸ್ಥಿತಿಯ ಬಗ್ಗೆ ಮಾಹಿತಿಯನ್ನು ದಾಖಲು ಮಾಡಲಿದ್ದಾರೆ.

ಇದನ್ನೂ ಓದಿ: Sumalatha ambreesh : ಆ ಒಂದು ಕುಟುಂಬ ಮಾತ್ರ ಈ ಚುನಾವಣೆಯಲ್ಲೂ ಅತಂತ್ರ ಸ್ಥಿತಿ ಬರಲಿ ಎಂದು ಕಾಯುತ್ತಾ ಕುಳಿತಿದೆ : ಮತ್ತೆ ಎಚ್ಡಿಕೆ ವಿರುದ್ಧ ಹರಿಹಾಯ್ದ ಸುಮಲತಾ ಅಂಬರೀಷ್

Leave A Reply

Your email address will not be published.