Home Social A hand bag made from rice bag: ಗೋಣಿಚೀಲದ ಪ್ಯಾಂಟ್ ಬೆನ್ನಲ್ಲೇ ಅಕ್ಕಿ ಚೀಲದಿಂದ...

A hand bag made from rice bag: ಗೋಣಿಚೀಲದ ಪ್ಯಾಂಟ್ ಬೆನ್ನಲ್ಲೇ ಅಕ್ಕಿ ಚೀಲದಿಂದ ರೆಡಿ ಆಯ್ತು ಸ್ಟೈಲಿಶ್ ಬ್ಯಾಗ್! ಬ್ಯಾಗ್ ತಯಾರಿಯ ವಿಡಿಯೋ ವೈರಲ್

A hand bag made from rice bag
Image Source- Indiatimes.com

Hindu neighbor gifts plot of land

Hindu neighbour gifts land to Muslim journalist

Hand bag: ಖಾಲಿಯಾದ ಅಕ್ಕಿ ಚೀಲದಲ್ಲಿ ತಯಾರಿಸಿದ ಸುಂದರವಾದ ಹ್ಯಾಂಡ ಬ್ಯಾಗ್ (Hand Bag) ಒಂದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಬಾರೀ ವೈರಲ್ ಆಗಿ ಎಲ್ಲರ ಮನ ಸೆಳೆಯುತ್ತಿದೆ.

ಹೌದು, ಇಂದಿನ ದಿನಗಳಲ್ಲಿ ಯಾವ ನಾಮೂನೆಯ ಹೊಸ ಹೊಸ ಫ್ಯಾಷನ್ ಬರುತ್ತದೆಯೋ ಬಲಲ್ಲವರಾರು ಮರ್ರೆ ಅಲ್ವಾ? ಬಂದದ್ದೆಲ್ಲವು ಕೆಲವೇ ನಿಮಿಷಗಳಲ್ಲಿ ಟ್ರೆಂಡ್ ಆಗಿ ಜನ ಅದನ್ನ ಒಪ್ಪಿಕೊಂಡುಬಿಡುತ್ತಾರೆ. ಕಳೆದ ಕೆಲವು ತಿಂಗಳ ಹಿಂದೆ ಗೋಣಿಚೀಲದಿಂದ ತಯಾರಿಸಿದ, ದುಬಾರಿ ಬೆಲೆ ಹೊತ್ತ ಪ್ಯಾಂಟೊಂದು ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ಸದ್ದು ಮಾಡಿತ್ತು. ಅದರಂತೆ ಇದೀಗ ನಟಿ ಹಾಗೂ ಸೋಶಿಯಲ್ ಮೀಡಿಯಾ ಸ್ಟಾರ್ ಒಬ್ಬರು ಖಾಲಿಯಾದ ಅಕ್ಕಿ ಚೀಲದಲ್ಲಿ ಸುಂದರವಾದ ಹ್ಯಾಂಡ ಬ್ಯಾಗ್ ತಯಾರಿಸಿದ್ದು, ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿ ಎಲ್ಲರ ಮನ ಸೆಳೆಯುತ್ತಿದೆ.

https://www.instagram.com/reel/CqUyKRYIdwC/?igshid=MDJmNzVkMjY=

ನಟಿ ಶ್ವೇತಾ ಮಹಾದಿಕ್ (Shweta Mahadik) ಅವರು ಇನ್ಸ್ಟಾಗ್ರಾಮ್‌ನಲ್ಲಿ(Instagram) ಈ ಬ್ಯಾಗ್ ತಯಾರಿಸಿದ ರೀತಿಯ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ನೀಲಿ ಬಣ್ಣದ ಅಕ್ಕಿ ಚೀಲವನ್ನು ಈ ಬ್ಯಾಗ್ ತಯಾರಿಸಲು ಬಳಸಿದ್ದು, ಅದನ್ನು ತುಂಡು ತುಂಡುಗಳಾಗಿ ಕತ್ತರಿಸಿ ನಂತರ ನೆರಿಗೆ ನೆರಿಗೆಯಾಗಿ ಹೊಲಿದು ಮಧ್ಯದಲ್ಲಿ ಜಿಪ್ ಕೂರಿಸಿ ಎರಡು ಕೈಗಳನ್ನು ಅಳವಡಿಸಿ ಸುಂದರವಾದ ಬ್ಯಾಗ್ ನಿರ್ಮಿಸಲಾಗಿದೆ. ನಂತರ ಸ್ಟೈಲಿಶ್‌ ಆಧುನಿಕ ಧಿರಿಸಿನ ಜೊತೆ ಈ ಬ್ಯಾಗ್ ಹಿಡಿದು ಶ್ವೇತಾ ಮಹಾದಿಕ್ ಫೋಸ್ ನೀಡಿದ್ದಾರೆ.

ಸಮಾನ್ಯವಾಗಿ ಭಾರತೀಯರ ಮನೆಗಳಲ್ಲಿ ಅಕ್ಕಿ ಚೀಲ ಇದ್ದೇ ಇರುತ್ತದೆ. ಅಕ್ಕಿ ಭಾರತದ ಪ್ರಮುಖ ಧಾನ್ಯವಾಗಿರುವುದರಿಂದ ಇರಲೇ ಬೇಕಲ್ವಾ? ಅಕ್ಕಿ ಖಾಲಿಯಾದ ಬಳಿಕ ಅನೇಕರು ಬೇಡದ ವಸ್ತುಗಳನ್ನು ತುಂಬಿಸಿ ಮೇಲೆ ಎಸೆಯಲು, ಮಣ್ಣು ತುಂಬಿಸಿ ತರಕಾರಿ ಬೆಳೆಯಲು ಹೀಗೆ ವಿವಿಧ ರೀತಿಯಲ್ಲಿ ಈ ಅಕ್ಕಿ ಚೀಲಗಳನ್ನು ಬೇರೆ ಯಾವುದಾದರೂ ಅಗತ್ಯಗಳಿಗೆ ಬಳಸುತ್ತಾರೆ. ಆದರೆ ಈ ನಟಿ ಮಾತ್ರ ಅಕ್ಕಿ ಚೀಲದಲ್ಲಿ ಒಂದು ಸುಂದರವಾದ ಹ್ಯಾಂಡ್ ಬ್ಯಾಗ್ ತಯಾರಿಸಿದ್ದು ಎಲ್ಲರ ಮನ ಸೆಳೆಯುತ್ತಿದೆ.

ಅಂದಹಾಗೆ ಈ ವಿಡಿಯೋ ಅಪ್ಲೋಡ್ ಆದ ಕೆಲವೇ ನಿಮಿಷಗಳಲ್ಲಿ 5 ಮಿಲಿಯನ್‌ಗೂ ಹೆಚ್ಚು ವೀವ್ಸ್ ಪಠೆದುಕೊಂಡಿದ್ದು, ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನು ಉರ್ಪಿ ಜಾವೇಧ್ (Urfi Javed) ನೋಡಿದರೆ ಇದರಲ್ಲೊಂದು ಲಂಗ ಹೊಲಿಸಿಕೊಳ್ಳೋದು ಪಕ್ಕಾ ಎಂದು ಕಾಮೆಂಟ್ ಮಾಡಿದ್ದಾರೆ. ನಿಮಗೆ ಈ ಜಗತ್ತಿನ ಪರಿಸರ ಪ್ರೇಮಿ ಕಲಾವಿದೆ ಎಂದು ಪ್ರಶಸ್ತಿ ನೀಡಬಹುದು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

ಇನ್ನು ವಿಶೇಷ ಎಂದರೆ ತಾವು ತೊಡುವ ಉಡುಗೆಗಳಿಂದಲೇ ಸದಾ ಸುದ್ಧಿಯಾಗೋ ಬಾಲಿವುಡ್ ಬೆಡಗಿ ಉರ್ಫಿ ಜಾವೇದ್ ಕೂಡ ಈ ವಿಡಿಯೋ ನೋಡಿ ಇಂಪ್ರೆಸ್ ಆಗಿದ್ದು ಕಾಮೆಂಟ್ ಮಾಡಿದ್ದಾರೆ. ಹಾಗಾದ್ರೆ ಇನ್ನು ಕೆಲವೇ ದಿನಗಳಲ್ಲಿ ಈಕೆಯೂ ಈ ಚೀಲವನ್ನು ಬಟ್ಟೆಯಾಗೋ, ಅಥವಾ ಬ್ಯಾಗನ್ನೋ ಧರಿಸಿ ವಿಡಿಯೋ ಹರಿಬಿಡೋದಂತೂ ಪಕ್ಕ.

ಇದನ್ನೂ ಓದಿ: Actress Sridevi’s death mystery : ಕೊನೆಗೂ ನಟಿ ಶ್ರೀದೇವಿ ಸಾವಿನ ರಹಸ್ಯ ಬಿಚ್ಚಿಟ್ಟ ಬಾಲ್ಯದ ಗೆಳತಿ! ಆಕೆಯ ಜೀವನ ಹಾಳಾಗಲು ತಾಯಿಯೇ ಕಾರಣ ಎಂದ ಕುಟ್ಟಿ ಪದ್ಮಿನಿ ಹೇಳಿದ್ದೇನು?