Home Health Benefits of growing a beard : ಪುರುಷರೇ, ಗಡ್ಡ-ಮೀಸೆ ಬೆಳೆಸೋದ್ರಿಂದ ನಿಮಗಿದೆ ಅನೇಕ ಲಾಭ!...

Benefits of growing a beard : ಪುರುಷರೇ, ಗಡ್ಡ-ಮೀಸೆ ಬೆಳೆಸೋದ್ರಿಂದ ನಿಮಗಿದೆ ಅನೇಕ ಲಾಭ! ಇಲ್ಲಿದೆ ನೋಡಿ ನೀವರಿಯದ ಇಂಟ್ರೆಸ್ಟಿಂಗ್ ವಿಚಾರ

Benefits of growing a beard
Image Source- Zee news

Hindu neighbor gifts plot of land

Hindu neighbour gifts land to Muslim journalist

Benefits of growing a beard: ಇಂದು ಹುಡುಗಿಯರನ್ನು ಸೆಳೆಯುವಲ್ಲಿ ಹುಡುಗರಿಗೆ ಇರೋ ಪ್ರಮುಖ ಮಾರ್ಗ ಅಂದ್ರೆ ಅದು ಗಡ್ಡ-ಮೀಸೆ. ಹೌದು, ಇತ್ತೀಚೆಗಂತೂ ಯುವಜನತೆ ಉದ್ದನೆಯ ಗಡ್ಡ ಮತ್ತು ಮೀಸೆಯನ್ನು ಬಿಟ್ಟು ಆಕರ್ಷಕವಾಗಿ, ಸ್ಮಾರ್ಟ್ ಆಗಿ ಕಾಣಲು ಬಯಸುತ್ತಾರೆ. ಅದರಲ್ಲೂ ಕೂಡ ಇಂದು ಡಿಸೈನ್ ಡಿಸೈನ್ ಆಗಿ, ಡಿಫ್ರೆಂಟ್ ಡಿಫ್ರೆಂಟ್ ಬಿಯರ್ಡ್ (Benefits of growing a beard) ಗಳು ಟ್ರೆಂಡ್ ಆಗುತ್ತಿವೆ. ಸದ್ಯ ನಟರಾಗಲಿ, ಆಟಗಾರರಾಗಲಿ ಎಲ್ಲರೂ ಈ ಟ್ರೆಂಡ್ ಫಾಲೋ ಮಾಡುತ್ತಿದ್ದಾರೆ.

ಅಂದಹಾಗೆ ಈ ಗಡ್ಡ ಮೀಸೆಗಳು ಪುರುಷರು ಚಂದಕಾಣುವಂತೆ ಮಾಡಿ, ಕೇವಲ ಸ್ಟೈಲಿಶ್ ಲುಕ್ ನೀಡುವುದಲ್ಲದೇ ಅನೇಕ ಕಾಯಿಲೆಗಳಿಂದ ರಕ್ಷಿಸುತ್ತದೆ. ನಿಜ, ಮುಖ ಕೂದಲು ಬೆಳೆಸೋದ್ರಿಂದ ಅನೇಕ ಲಾಭಗಳಿವೆ. ಇದು ಚರ್ಮದ ಕ್ಯಾನ್ಸರ್ ತಡೆಯುವುದಷ್ಟೇ ಅಲ್ಲದೆ ಸಾಕಷ್ಟು ಆರೋಗ್ಯ ಲಾಭಗಳನ್ನು ನೀಡುತ್ತದೆ. ಹಾಗಾದರೆ ಇದರಿಂದ ಏನೆಲ್ಲಾ ಉಪಯೋಗ ಎಂದು ತಿಳಿಯೋಣ ಬನ್ನಿ.

ಅಲರ್ಜಿ ಮತ್ತು ಸೋಂಕು: ನಿಮ್ಮ ಗಡ್ಡ ಮತ್ತು ಮೀಸೆಗಳು ಫಿಲ್ಟರ್ನಂತೆ ಕೆಲಸ ಮಾಡಿ ಅಲರ್ಜಿಕಾರಕಗಳು ನಿಮ್ಮ ಮೂಗು ಹಾಗೂ ಬಾಯಿಯ ಮೂಲಕ ಪ್ರವೇಶಿಸದಂತೆ ತಡೆಯುತ್ತವೆ. ಈ ರೀತಿಯಾಗಿ ನಿಮ್ಮ ನಿಮಗೆ ರಕ್ಷಣೆ ನೀಡುತ್ತದೆ.

ನೈಸರ್ಗಿಕ ಮಾಯಿಶ್ಚರೈಸರ್: ವ್ಯಕ್ತಿ ನಿಯಮಿತವಾಗಿ ಶೇವ್ ಮಾಡುವುದರಿಂದ ಋತುಮಾನದ ಬದಲಾವಣೆಯಿಂದ ಉಷ್ಣತೆ, ಚರ್ಮದ ಶುಷ್ಕತೆ ಉಂಟಾಗಬಹುದು. ಅಲ್ಲದೇ ತ್ವಚೆಯಲ್ಲಿ ತೇವಾಂಶ ಉಳಿಯಬಹುದೆಂದು ಕಾಸ್ಮೆಟಿಕ್ಗಳನ್ನು ಹೆಚ್ಚಾಗಿ ಬಳಸುವುದರಿಂದ ಚರ್ಮದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಬಹುದು. ನಿಮ್ಮ ಮುಖದಲ್ಲಿ ಅಂತರ್ನಿರ್ಮಿತ ತೇವಾಂಶ ಕಾಪಾಡಿಕೊಳ್ಳುವ ವ್ಯವಸ್ಥೆ ಇರುತ್ತದೆ. ಅದು ಜಿಡ್ಡನ್ನು ಉತ್ಪಾದಿಸಿ ಚರ್ಮದ ತೇವವನ್ನು ಕಾಪಾಡುತ್ತದೆ. ಆದರೆ ನಿರಂತರ ರೇಜರ್ ಬಳಕೆಯಿಂದ ಈ ಗ್ರಂಥಿಗಳು ನಾಶವಾಗಬಹುದು. ಗಡ್ಡ ಬೆಳೆಸುವುದರಿಂದ ಈ ಗ್ರಂಥಿಗಳು ಸಹಜವಾಗಿ ಕೆಲಸ ಮಾಡುತ್ತವೆ ಮತ್ತು ನಿಮ್ಮ ಚರ್ಮ ಮೃದುವಾಗಿ ಯೌವನಭರಿತವಾಗಿ ಉಳಿಯುತ್ತದೆ.

ಕಾಯಿಲೆಗಳನ್ನು ತಡೆಗಟ್ಟುತ್ತೆ: ಹವಾಮಾನ ಬದಲಾವಣೆಯಿಂದ ಉಂಟಾಗುವ ಅನಾರೋಗ್ಯವನ್ನು ತಡೆಗಟ್ಟಬಹುದು. ನಿಮ್ಮ ಗಡ್ಡ ಕೆಲವು ಬಾರಿ ನಿಮ್ಮ ಚರ್ಮವನ್ನು ಹೊರಗಿನ ತಾಪಮಾನದಿಂದ ರಕ್ಷಿಸುತ್ತದೆ. ದೇಹದ ಬಿಸಿ ಹೊರಗೆ ಹೋಗದಂತೆ ತಡೆದು ಮುಖ ಮತ್ತು ಕುತ್ತಿಗೆಯನ್ನು ಬೆಚ್ಚಗಿರಿಸುತ್ತದೆ.

ನಿಮ್ಮ ತ್ವಚೆಯನ್ನು ಕೋಮಲವಾಗಿಸುತ್ತೆ: ಪ್ರತಿದಿನ ಶೇವ್ ಮಾಡಿಕೊಳ್ಳುವವರಿಗೆ ಮುಖದಲ್ಲಿ ಕೆಲ ಮತ್ತು ಗಾಯಗಳು ಆಗಾಗ ಆಗುತ್ತಿರುತ್ತದೆ. ಇದರಿಂದ ಚರ್ಮ ಕೂಡ ಒರಟಾಗುತ್ತದೆ. ಆದರೆ ಗಡ್ಡ ಬೆಳೆಸುವುದರಿಂದ ಮುಖದಲ್ಲಿ ಕಲೆಗಳಾಗದಂತೆ ತಡೆಯಬಹುದು. ಜೊತೆಗೆ ತ್ವಚೆಯ ಮುಖದಲ್ಲಿ ಕಲೆಗಳಾಗದಂತೆ ತಡೆಯಬಹುದು.

ಗಡ್ಡ ಅಲ್ಟ್ರಾವಯಲೆಟ್ ಕಿರಣಗಳಿಂದ ರಕ್ಷಿಸುತ್ತೆ: ನಮ್ಮ ದೇಹದ ಬಹುತೇಕ ಭಾಗಗಳನ್ನು ಬಟ್ಟೆ ಮುಚ್ಚಿರುತ್ತದೆ ಹೀಗಾಗಿ ಸೂರ್ಯನ ಅಲ್ಟ್ರಾ ವಯಲೆಟ್ ಕಿರಣಗಳಿಂದ ರಕ್ಷಣೆ ದೊರೆಯುತ್ತೆ. ಆದರೆ ಮುಖ ಮಾತ್ರ ತೆರೆದಿರುತ್ತದೆ. ಮುಖದ ಚರ್ಮವು ಅಲ್ಟ್ರಾ ವಯಲೆಟ್ ಕಿರಣಗಳಿಗೆ ತೆರೆದಿಟ್ಟುಕೊಂಡಿರುವುದರಿಂದ ಚರ್ಮದ ಕಜ್ಜಿಗಳು ಅಥವಾ ಚರ್ಮದ ಕ್ಯಾನ್ಸರ್‌ ಕೂಡ ಬರುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗೂ ಗಡ್ಡವು ಮುಖದ ಕೆಳಭಾಗ ಮತ್ತು ಕುತ್ತಿಗೆಯನ್ನೂ ಮುಚ್ಚಿ ಬಿಸಿಲಿನಿಂದ ರಕ್ಷಿಸುತ್ತದೆ.

ಇದನ್ನೂ ಓದಿ: Sharukh khan: ಯಾರೋ ಕೈ ಕತ್ತರಿಸ್ತಾರೆ ಅನ್ನೋ ವಿಚಿತ್ರ ಭಯದಲ್ಲಿ ಒದ್ದಾಡುತ್ತಿದ್ದಾರೆ ಶಾರುಖ್‌ ಖಾನ್, ಅಯ್ಯೋ! ಬಾಲಿವುಡ್ ಬಾದ್‌ಷಾಗೆ ಆದದ್ದೇನು?