Home Karnataka State Politics Updates 4th list of JDS candidates released: ಜೆಡಿಎಸ್ ಅಭ್ಯರ್ಥಿಗಳ 4ನೇ ಪಟ್ಟಿ ಬಿಡುಗಡೆ! 13...

4th list of JDS candidates released: ಜೆಡಿಎಸ್ ಅಭ್ಯರ್ಥಿಗಳ 4ನೇ ಪಟ್ಟಿ ಬಿಡುಗಡೆ! 13 ಅಭ್ಯರ್ಥಿಗಳ ಹೆಸರು ಘೋಷಿಸಿದ ದಳಪತಿಗಳು!

4th list of JDS candidates released

Hindu neighbor gifts plot of land

Hindu neighbour gifts land to Muslim journalist

JDS candidates 4th list : ಕರ್ನಾಟಕ ವಿಧಾನಸಭಾ ಚುನಾವಣೆಗೆ (Assembly Election) ಇನ್ನು ಕಲವೇ ದಿನಗಳು ಬಾಕಿಯಿದ್ದು, ಅಭ್ಯರ್ಥಿಗಳ ನಾಮಪತ್ರ ಸಲ್ಲಿಸಲು ಗುರುವಾರ ಕೊನೆಯ ದಿನವಾಗಿತ್ತು. ಈ ಹಿನ್ನೆಲೆಯಲ್ಲಿ ಜೆಡಿಎಸ್ ತನ್ನ ಅಭ್ಯರ್ಥಿಗಳ 4ನೇ ಪಟ್ಟಿ ಪಟ್ಟಿಯನ್ನು (JDS candidates 4th list) ಬಿಡುಗಡೆ ಮಾಡಿದ್ದು, 13 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಘೋಷಿಸಿದೆ.

ಹೌದು, ಅಭ್ಯರ್ಥಿಗಳನ್ನು ಅಳೆದು ತೂಗಿ ದಳಪತಿಗಳು 4ನೇ ಪಟ್ಟಿ ಬಿಡುಗಡೆ ಮಾಡಿದ್ದಾರೆ. ಅಂದಹಾಗೆ ಶಿಗ್ಗಾಂವಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಶಶಿಧರ್​ ಚನ್ನಬಸಪ್ಪ ಯಲಿಗಾರ್​ (Shashidhar Channabasappa Yaligar) ಅವರು ಕಣಕ್ಕಿಳಿದಿದ್ದಾರೆ. ಇನ್ನುಳಿದ ಕ್ಷೇತ್ರಗಳಿಗೆ ಜೆಡಿಎಸ್ ಅಭ್ಯರ್ಥಿಗಳು ಯಾರೆಂದು ನೋಡೋಣ ಬನ್ನಿ.

ಗೋಕಾಕ್ – ಚನ್ನಬಸಪ್ಪ ಬಾಳಪ್ಪ ಗಿದ್ದಣ್ಣನವರ
ಕಿತ್ತೂರು – ಅಶ್ವಿನಿ ಸಿಂಗಯ್ಯ ಪೂಜೆರಾ
ಯಾದಗಿರಿ – ಎಬಿ ಮಾಲಕರೆಡ್ಡಿ
ಭಾಲ್ಕಿ – ರೌಫ್ ಪಟೇಲ್
ಶಿಗ್ಗಾಂವಿ – ಶಶಿಧರ್ ಚನ್ನಬಸಪ್ಪ ಯಲಿಗಾರ
ಮೊಳಕಾಲ್ಮೂರು – ಮಹಾದೇವಪ್ಪ
ಪುಲಕೇಶಿನಗರ – ಅನುರಾಧ
ಶಿವಾಜಿನಗರ – ಅಬ್ದುಲ್ ಜಫರ್ ಅಲಿ
ಶಾಂತಿನಗರ – ಮಂಜುನಾಥ್ ಗೌಡ
ಬೆಳ್ತಂಗಡಿ – ಅಶ್ರಫ್ ಅಲಿ ಕುಂಞ
ಮಂಗಳೂರು ನಗರ ಉತ್ತರ – ಮೊಹೀನುದ್ದಿನ್ ಬಾವ
ಮಂಗಳೂರು – ಅಲ್ತಾಪ್ ಕುಂಪಾಲ
ಬಂಟ್ವಾಳ – ಪ್ರಕಾಶ ರಫಾಯಲ್ ಗೋಮ್ಸ್

ಇನ್ನು 7 ಕ್ಷೇತ್ರಗಳಲ್ಲಿ ಜೆಡಿಎಸ್ ಬೇರೆ ಪಕ್ಷದ ಅಭ್ಯರ್ಥಿಳಿಗೆ ಬೆಂಬಲ ನೀಡಲು ಮುಂದಾಗಿದ್ದು, ಅವುಗಳೆಂದರೆ
1. ಗುಲ್ಬರ್ಗ ಗ್ರಾಮಾಂತರ – ಸಿಪಿಎಂ
2. ಬಾಗೆಪಲ್ಲಿ – ಸಿಪಿಎಂ
3. ಕೆ ಆರ್ ಪುರ – ಸಿಪಿಎಂ
4. ಸಿ ವಿ ರಾಮನ್ ನಗರ – ಆರ್‌ಪಿಐ
5. ವಿಜಯನಗರ – ಆರ್‌ಪಿಐ
6. ಮಹದೇವಪುರ – ಆರ್‌ಪಿಐ

ಇದರೊಂದಿಗೆ ಜೆಡಿಎಸ್ ತನ್ನ ಪಕ್ಷದ ಸ್ಟಾರ್​ ಪ್ರಚಾರಕರ ಹೆಸರನ್ನು ಬಿಡುಗಡೆಗೊಳಿಸಿದೆ. ಅವರೆಂದರೆ ಮಾಜಿ ಪ್ರಧಾನಿ ಹೆಚ್​.ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿ ಹೆಚ್​.ಡಿ. ಕುಮಾರಸ್ವಾಮಿ, ಸಿ.ಎಂ. ಇಬ್ರಾಹಿಂ, ಎಹೆಚ್​.ಡಿ. ರೇವಣ್ಣ, ನಿಖಿಲ್​ ಕುಮಾರಸ್ವಾಮಿ, ಪ್ರಜ್ವಲ್​ ರೇವಣ್ಣ, ಅನಿತಾ ಕುಮಾರಸ್ವಾಮಿ, ಕುಪೇಂದ್ರ ರೆಡ್ಡಿ, ಟಿ.ಎ. ಶರವಣ, ತಿಪ್ಪೇಸ್ವಾಮಿ, ಭೋಜೇಗೌಡ, ಬಿ.ಎಂ. ಫಾರೂಖ್​, ಜಫ್ರುಲ್ಲಾ ಖಾನ್​, ಭವಾನಿ ರೇವಣ್ಣ, ಅಪ್ಪಾಜಿಗೌಡ​ ಸೇರಿದಂತೆ ಹಲವರು ಜೆಡಿಎಸ್ ಸ್ಟಾರ್​ ಪ್ರಚಾರಕರ ಪಟ್ಟಿಯಲ್ಲಿದ್ದಾರೆ.

ಇದನ್ನೂ ಓದಿ: D K Suresh: ಆರ್ ಅಶೋಕ್ ಗೆ ‘ಅಯ್ಯೋ ಪಾಪ’ ಎಂದ ಡಿ ಕೆ ಸುರೇಶ್, ಪದ್ಮನಾಭ ನಗರ ಸ್ಪರ್ಧೆ ಏನಂದ್ರು ಗೊತ್ತಾ?