India’s Happiest State: ಭಾರತದ ಸಂತೋಷದಿಂದ ತುಂಬಿ ತುಳುಕೋ ರಾಜ್ಯ ಇದು!

India’s Happiest State : ಮಿಜೋರಾಂ ರಾಜ್ಯದ(state) ಬಗ್ಗೆ ನಿಮಗೆ ಎಷ್ಟು ತಿಳಿದಿದೆ? ಈ ಮಿಜೋರಾಂ ಎಂಬ ರಾಜ್ಯ ಎಲ್ಲಿದೆ. ಇದರ ವಿಶೇಷತೆ ಏನೆಂದು ನಿಮಗೆ ಗೊತ್ತಿದೆಯಾ? ಇಂದು ನಮ್ಮ ಈ ಲೇಖನದಲ್ಲಿ ಮಿಜೋರಾಂ ರಾಜ್ಯದ (Mizoram state) ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಿದ್ದೇವೆ ನೋಡಿ

ಹೌದು, ಮಿಜೋರಾಂ ಈಶಾನ್ಯ ಭಾರತದ(Northeast India) ಒಂದು ರಾಜ್ಯವಾಗಿದೆ. ಮಿಜೋರಾಂ(Mizoram) ಅನ್ನೋ ರಾಜ್ಯವನ್ನು “ಮಿಜೋಸ್ ಭೂಮಿ” ಅನ್ನೋ ಹೆಸ್ರಲ್ಲಿ ಕರಿತಾರಂತೆ ಯಾಕೆ ಅಂತ ನೀವು ಯಾವಾಗಲಾದರೂ ಯೋಚಿಸಿದ್ದೀರಾ? ಯಾಕಪ್ಪ ಅಂದ್ರೆ ಇದನ್ನು “ಮಿಜೋ” ಮತ್ತು “ರಾಮ್” ಅಂತ ವಿಂಗಡಿಸಲಾಗಿದೆ ಏಕೆಂದರೆ ಮಿಜೋ ಭಾಷೆಯಲ್ಲಿ “ಭೂಮಿ” ಎಂದರ್ಥ. ಆದ್ದರಿಂದ “ಮಿಜೋ-ರಾಮ್” (Mizoram) ಎಂದರೆ “ಮಿಜೋಸ್ ಭೂಮಿ” ಅಂತ ಎಲ್ಲಾರೂ ಕರೀತಾರೆ.

ಇನ್ನೂ ಮಿಜೋರಾಂ ರಾಜ್ಯ ಭಾರತದಲ್ಲಿ ಅತೀ ಹೆಚ್ಚು ಸಂತೋಷವನ್ನು (India’s happiest state) ಹೊಂದಿರುವ ರಾಜ್ಯ ಎಂದು ಸಮೀಕ್ಷೆಯೊಂದರಲ್ಲಿ ಪರಿಗಣಿಸಲಾಗಿದೆ. ಗುರುಗ್ರಾಮ್‌ ನ ಮ್ಯಾನೇಜ್‌ ಮೆಂಟ್‌ ಡೆವಲಪ್‌ ಮೆಂಟ್‌ ಇನ್ಸ್‌ ಟಿಟ್ಯೂಟ್‌ ನ ಪ್ರೊ.ರಾಜೇಶ್‌ ಕೆ.ಪಿಲ್ಲಾನಿಯಾ( Rajesh K pillania) ಅವರು ತೆಗೆದುಕೊಂಡಂತಹ ಅಧ್ಯಯನ ಒಂದರಲ್ಲಿ ಈ ಮಾಹಿತಿಯನ್ನು ಕಲೆ ಹಾಕಿದ್ದಾರೆ.

ಈ ರಾಜ್ಯವನ್ನು(state) ಯಾಕೆ ಸಂತೋಷ ಬರಿತ ರಾಜ್ಯ ಎಂದು ಕರೆಯುತ್ತಾರೆ. ಸಾಮಾನ್ಯವಾಗಿ ಬಾಕಿ ರಾಜ್ಯದಲ್ಲಿ ಇರುವ ಸಾಕ್ಷರತೆಗಿಂತ ಮಿಜೋರಾಂ (Mizoram) ರಾಜ್ಯದಲ್ಲಿ ಪ್ರತಿಶತ 100 ಶೇಕಡ ಸಾಕ್ಷರತೆಯ ಪ್ರಮಾಣ ಇದ್ದು ಭಾರತದಲ್ಲಿ ಮಿಜೋರಾಂ ರಾಜ್ಯ ಎರಡನೇ ಸ್ಥಾನವನ್ನು ಗಿಟ್ಟಿಸಿಕೊಂಡಿದೆ. ಈ ರಾಜ್ಯದಲ್ಲಿ ಏನೇ ಕೆಳಮಟ್ಟದ ಪರಿಸ್ಥಿತಿ ಇದ್ದರೂ ವಿದ್ಯಾರ್ಥಿಗಳ (student) ಬೆಳವಣಿಗೆಗೋಸ್ಕರ ಎಲ್ಲಾ ರೀತಿಯ ಅವಕಾಶಗಳನ್ನು ಒದಗಿಸಲಾಗುತ್ತದೆ.

ಮಿಜೋರಾಂ ರಾಜ್ಯ ಸಂತೋಷವಾಗಿರಲು(happiness) ಆರು ಪ್ರಮುಖ ಅಂಶಗಳನ್ನು ಒಳಗೊಂಡಿದೆ. ಅದರಲ್ಲಿ ಕೌಟುಂಬಿಕ ಸಂಬಂಧಗಳ ವಿಷಯ ಆಗಿರಬಹುದು ಅಥವಾ ಕೆಲಸಕ್ಕೆ ಸಂಬಂಧಿಸಿದ ಸಮಸ್ಯೆಗಳು, ಸಾಮಾಜಿಕವಾಗಿ ಕಾಡುವ ಸಮಸ್ಯೆಗಳು, ಯಾವುದೇ ರೀತಿಯಲ್ಲಿ ಮಾಡುವ ದಾನ-ಧರ್ಮ, ಕೋವಿಡ್‌ 19(covid-19) ನಂತರ ಬಂದ ಬದಲಾವಣೆಗಳು, ಆರೋಗ್ಯವನ್ನು ಒಳಗೊಂಡಿರುವುದು ಆಗಿರಬಹುದು ಈ ಎಲ್ಲಾ ವಿಷಯಗಳಲ್ಲಿ ಸಂತೋಷವನ್ನು(happiness) ಕಾಣುತ್ತಿದ್ದಾರೆ ಎಂದು ಮಾಹಿತಿಯ ಪ್ರಕಾರ ವರದಿಯಾಗಿದೆ.

ನಮಗೆ ಬೋಧನೆ ಮಾಡುವ ನಮ್ಮ ಶಿಕ್ಷಕರೇ(teachers) ನಮ್ಮ ಬೆನ್ನೆಲುಬಾಗಿ ನಿಂತಿದ್ದಾರೆ. ಹಾಗಾಗಿ ಅವರೊಂದಿಗೆ ಮುಕ್ತವಾಗಿ ಮಾತನಾಡಲು ನಮಗೆ ಯಾವುದೇ ಅಂಜಿಕೆ ಇಲ್ಲ. ಯಾವುದೇ ವಿಷಯ ಇದ್ದರೂ ಅವರೊಂದಿಗೆ ನಾವು ಹಂಚಿಕೊಳ್ಳುತ್ತೇವೆ. ಎಂದು ಸಮೀಕ್ಷೆಯ ವೇಳೆಯಲ್ಲಿ ವಿದ್ಯಾರ್ಥಿಯೊಬ್ಬಳು(student) ತನ್ನ ಅಭಿಪ್ರಾಯವನ್ನು ತಿಳಿಸಿದ್ದಾಳೆ. ಈಗೆಲ್ಲಾ ಅಂಶಗಳನ್ನು ಆಧರಿಸಿದ ನಂತರ ಮಿಜೋರಾಂ ರಾಜ್ಯ ಬಹಳಷ್ಟು ಸಂತೋಷವಾದ ರಾಜ್ಯವಾಗಿದೆ ಎಂದು ಪರಿಗಣಿಸಲಾಗಿದೆ. ಹಾಗೆಯೇ ಪ್ರೊ ಪಿಲ್ಲಾನಿಯಾ(pro pillania) ಅವರು ಈ ರೀತಿಯ ಮಾಹಿತಿಯನ್ನು ತಿಳಿಸಿಕೊಟ್ಟಿದ್ದಾರೆ.

 

ಇದನ್ನು ಓದಿ : Adhar card update: UIDAI ವಿಶೇಷ ಉಡುಗೊರೆ, ನೀವು ಆಧಾರ್ ನವೀಕರಿಸಲು ಶುಲ್ಕ ಕಟ್ಟುವ ಅವಶ್ಯಕತೆ ಇಲ್ಲ!

Leave A Reply

Your email address will not be published.