Ileana D’cruz Pregnant: ತಾಯಿಯ ಬೆಂಬಲದಿಂದ ಮದ್ವೆ ಆಗ್ದೆ ಪ್ರೆಗ್ನೆಂಟ್​ ಆದ ಇಲಿಯಾನಾ! ತಂದೆ ಯಾರೆಂದು ಕೇಳಿದಕ್ಕೆ ನಟಿ ಹೇಳಿದ್ದೇನು?

Share the Article

Ileana D’cruz Pregnant : ಇತ್ತೀಚಿನ ದಿನಗಳಲ್ಲಿ ಸಿನಿ ಇಂಡಸ್ಟ್ರಿಯಲ್ಲಿ ಮದುವೆಗೂ ಮುಂಚೆ ಗರ್ಭಿಣಿ ಆಗುವುದು, ಮಗು ಪಡೆಯುವುದು ಒಂದು ಟ್ರೆಂಡ್ ಆಗಿದೆ. ಕೆಲ ನಟಿಯರು ಇದನ್ನು ಆರಂಭಿಸಿದರೆ, ಇನ್ನು ಕೆಲ ನಟಿಯರು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಅಂತೆಯೇ ಇದೀಗ ನಟಿ ಇಲಿಯಾನ(Iliana) ಕೂಡ ಇದೇ ಸಾಲಿಗೆ ಸೇರಿದರಾ ಎಂಬ ಗುಮಾನಿ ಹುಟ್ಟಿದ್ದು, ಅವರೇ ಮಾಡಿರುವ ಇನ್ಸ್ಟಾಗ್ರಾಮ್ ಪೋಸ್ಟ್ ಒಂದು ಈ ಪ್ರಶ್ನೆಗೆ ಕಾರಣವಾಗಿದೆ. ಇದನ್ನು ಕಂಡ ನೆಟ್ಟಿಗರು ಕೂಡ ಸಖತ್ ಆಗೇ ಇಲಿಯಾನಳ ಕಾಲೆಳೆಯುತ್ತಿದ್ದಾರೆ.

ಹೌದು, ಹಿಂದಿ, ಕನ್ನಡ, ತಮಿಳು, ತೆಲುಗು, ತಮಿಳು ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿ, ಕೆಲ ವರ್ಷಗಳಿಂದ ಸಿನಿಮಾ ರಂಗದಿಂದಲೇ ದೂರವಿದ್ದು ಇದೀಗ ಮತ್ತೆ ಚಿತ್ರರಂಗದಲ್ಲಿ ಸಕ್ರೀಯರಾಗಿರುವ ಖ್ಯಾತ ನಟಿ ಇಲಿಯಾನ ಇನ್ನೂ ಮದುವೆ (Marriage) ಆಗಿಲ್ಲ. ಆದರೂ ಕೂಡ ತಾನು ನಾನು ತಾಯಿ (Ileana D’cruz Pregnant) ಆಗ್ತಿದ್ದೀನಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದು ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದಾರೆ.

ಅಂದಹಾಗೆ ಕಮಿಂಗ್​ ಸೂನ್​.. ನಿನ್ನನ್ನು ನೋಡಲು ಕಾದಿದ್ದೇನೆ ಲಿಟ್ಲ್​ ಡಾರ್ಲಿಂಗ್​’ ಎಂದು ಇಲಿಯಾನಾ ಡಿಕ್ರೂಜ್​ ಅವರು ಬರೆದುಕೊಂಡಿದ್ದಾರೆ. ಅದರ ಜೊತೆ ಮಗುವಿನ ಬಟ್ಟೆ ಮತ್ತು ಅಮ್ಮ (Mama) ಎಂಬ ಡಾಲರ್​ ಇರುವ ಸರದ ಫೋಟೋವನ್ನು ಅವರು ಹಂಚಿಕೊಂಡಿದ್ದಾರೆ. ಇದಕ್ಕೆ ಇಲಿಯಾನಾ ಅವರ ತಾಯಿ ಸಮೀರಾ ಡಿಕ್ರೂಜ್​ ಕೂಡ ಕಮೆಂಟ್​ ಮಾಡಿದ್ದಾರೆ. ‘ನನ್ನ ಮೊಮ್ಮಗುವಿಗೆ ಶೀಘ್ರದಲ್ಲೇ ಈ ಪ್ರಪಂಚಕ್ಕೆ ಸ್ವಾಗತ ಕೋರುವೆ’ ಎಂದು ಅವರು ಬರೆದುಕೊಂಡಿದ್ದಾರೆ. ಶಿಬಾನಿ ದಾಂಡೇಕರ್​, ನಿಶಾ ಅಗರ್​ವಾಲ್​ ಮುಂತಾದ ಸೆಲೆಬ್ರಿಟಿಗಳು ಕೂಡ ಕಮೆಂಟ್​ ಮೂಲಕ ಅಭಿನಂದನೆ ತಿಳಿಸಿದ್ದಾರೆ.

ಇನ್ನು ಇಲಿಯಾನ ಪೋಸ್ಟ್‌ ಅನ್ನು ನೋಡಿದ ನೆಟ್ಟಿಗರು ಯಾವಾಗ ಮದುವೆಯಾಗಿದ್ದೀರಿ? ಮಗುವಿನ ತಂದೆ ಯಾರು? ಎಂದು ಪ್ರಶ್ನಿಸಿದ್ದಾರೆ. ನಿಮಗೆ ಮದುವೆ ಆಗಿದೆಯೇ? ಹಾಗಿದ್ದರೆ ಮಗುವಿನ ತಂದೆ ಯಾರು’ ಎಂದು ನೆಟ್ಟಿಗರು ಕಮೆಂಟ್​ ಮಾಡುತ್ತಿದ್ದಾರೆ. ಈ ಪ್ರಶ್ನೆಗೆ ಅವರು ಯಾವಾಗ ಉತ್ತರ ನೀಡಲಿದ್ದಾರೆ ಎಂಬುದನ್ನು ಕಾದು ನೋಡಬೇಕು.

ಇಲಿಯಾನಾ ಡಿಕ್ರೂಜ್​ ಅವರು ಈ ಹಿಂದೆ ಆಸ್ಟ್ರೇಲಿಯಾದ ಫೋಟೋಗ್ರಾಫರ್​ ಆ್ಯಂಡ್ರ್ಯೂ ನೀಬೋನ್​ ಜೊತೆ ಡೇಟಿಂಗ್​ ನಡೆಸುತ್ತಿದ್ದರು. ಇಬ್ಬರು ಮದುವೆ ಆದ ಬಗ್ಗೆ ಸೂಕ್ತ ಪರಾವೆ ಸಿಗಲಿಲ್ಲ. ನಂತರ ಈ ಜೋಡಿ ಬ್ರೇಕಪ್​ ಮಾಡಿಕೊಂಡಿತು ಎಂದು ವರದಿ ಆಯಿತು. ಇತ್ತೀಚೆಗೆ ಇಲಿಯಾನಾ ಡಿಕ್ರೂಜ್​ ಅವರು ನಟಿ ಕತ್ರಿನಾ ಕೈಫ್​ ಸಹೋದರ ಸೆಬ್ಬಾಸ್ಟಿಯನ್​ ಲೊರಾನ್​ ಮಿಶಾಲ್​ ಜೊತೆ ಡೇಟಿಂಗ್​ ಮಾಡುತ್ತಿದ್ದಾರೆ ಎಂದು ಕೂಡ ಗಾಸಿಪ್ ಹಬ್ಬಿತ್ತು. ಆದರೆ ಈಗ ತಾವು ಮಗು ಪಡೆಯುತ್ತಿರುವುದು ಯಾರ ಜೊತೆ ಎಂಬುದನ್ನು ಇಲಿಯಾನಾ ತಿಳಿಸಿಲ್ಲ.

ಇದನ್ನೂ ಓದಿ: Mahendra Singh Dhoni fan: ಅಬ್ಬಾಬ್ಬಾ! ಧೋನಿ IPL ಆಡೋದನ್ನು ನೇರವಾಗಿ ನೋಡಲು ಈ ಅಭಿಮಾನಿ ಮಾಡಿದ್ದೇನು ಗೊತ್ತಾ? ಕೇಳಿದ್ರೆ ಶಾಕ್ ಆಗ್ತೀರಾ!

Leave A Reply