Mumbai: ಹುಡುಗಿಯರಿಗೆ ಮಾಡೆಲಿಂಗ್ ಆಸೆ ತೋರಿಸಿ ವೇಶ್ಯಾವಾಟಿಕೆ, ಗಿರಾಕಿಗಳ ರೂಪದಲ್ಲಿ ಹೋದ ಪೊಲೀಸರು

Mumbai: ಸದ್ಯ ಸಿನಿರಂಗದಲ್ಲಿ ಲೈಂಗಿಕ ಕಿರುಕುಳದ (sexual harrasment) ಪ್ರಕರಣ ಸಾಮಾನ್ಯವಾಗಿಬಿಟ್ಟಿದೆ. ಹೌದು, ಇತ್ತೀಚೆಗೆ ನಟಿಯರು (actress) ಸಿನಿರಂಗದಲ್ಲಿ ತಮಗಾದ ಕೆಟ್ಟ ನಡವಳಿಕೆಗಳ ಅನುಭವಗಳನ್ನು ಬಿಚ್ಚಿಡುತ್ತಿದ್ದಾರೆ. ಈ ಹಿಂದೆ ಹಾಗೂ ಇಂದು ತಮಗಾದ ಲೈಂಗಿಕ ಕಿರುಕುಳದ ಮಾಹಿತಿ ಬಯಲು ಮಾಡುತ್ತಿದ್ದಾರೆ. ಈ ಮಧ್ಯೆ ಮುಂಬೈ ನಲ್ಲಿ (Mumbai) ಹುಡುಗಿಯರಿಗೆ ಮಾಡೆಲಿಂಗ್ ಆಸೆ ತೋರಿಸಿ ಮಹಿಳಾ ನಿರ್ದೇಶಕರು ವೇಶ್ಯಾವಾಟಿಕೆ (Prostitution) ದಂಧೆ ನಡೆಸುತ್ತಿರುವ ವಿಚಾರ ಬೆಳಕಿಗೆ ಬಂದಿದ್ದು, ಸದ್ಯ ನಿರ್ದೇಶಕರು ಪೊಲೀಸರ ಅತಿಥಿಯಾಗಿದ್ದಾರೆ.

ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಮತ್ತು ಗ್ರಾಹಕರಿಗೆ ಮಾಡೆಲ್‌ಗಳನ್ನು ಪೂರೈಕೆ ಮಾಡುತ್ತಿದ್ದ ಆರೋಪದಡಿ 27 ವರ್ಷದ ಮಹಿಳಾ ಕಾಸ್ಟಿಂಗ್ ನಿರ್ದೇಶಕರನ್ನು ಮುಂಬೈ ದಿಂಡೋಶಿ ಪೊಲೀಸರು ಬಂಧಿಸಿದ್ದಾರೆ.

ಈ ಜಾಲವನ್ನು ಪತ್ತೆ ಹಚ್ಚಲು ಮುಂಬೈ ಪೊಲೀಸರ (Mumbai police) ಸಾಮಾಜಿಕ ಸೇವಾ ವಿಭಾಗವು ಮಹಿಳಾ ನಿರ್ದೇಶಕರ ಬಳಿಗೆ ಇಬ್ಬರು ಡಮ್ಮಿ ಗ್ರಾಹಕರನ್ನು ಕಳುಹಿಸಿದ್ದು, ಈ ಮೂಲಕ ಇಬ್ಬರು ಮಾಡೆಲ್‌ಗಳನ್ನು ರಕ್ಷಿಸಿದೆ. ಸದ್ಯ ಅವರನ್ನು ಪುನರ್ವಸತಿ ಕೇಂದ್ರಕ್ಕೆ ಕಳುಹಿಸಲಾಗಿದೆ. ಸಂಪೂರ್ಣ ತನಿಖೆಯನ್ನು ಸಮಾಜ ಸೇವಾ ಇಲಾಖೆ ನಡೆಸಿದೆ ಎಂದು ಹೇಳಲಾಗಿದೆ.

ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಆರೋಪಿಯ ಹೆಸರು ಅರತಿ ಹರಿಶ್ಚಂದ್ರ ಮಿತ್ತಲ್ (Arati Harishchandra Mittal) ಎಂದು ಹೇಳಲಾಗಿದ್ದು, ಈಕೆ ಓಶಿವಾರದ ಆರಾಧನಾ ಅಪಾರ್ಟ್‌ಮೆಂಟ್‌ನ ನಿವಾಸಿ ಎನ್ನಲಾಗಿದೆ. ಇವರು ಓರ್ವ ನಟಿ ಹಾಗೂ ಚಲನಚಿತ್ರಗಳಿಗೆ ಕಾಸ್ಟಿಂಗ್ ನಿರ್ದೇಶಕರಾಗಿದ್ದಾರೆ. ವಿವಿಧ ಪ್ರಾಜೆಕ್ಟ್‌ಗಳ ಸಂದರ್ಭದಲ್ಲಿ ಭೇಟಿಯಾದ ರೂಪದರ್ಶಿಗಳಿಗೆ ಉತ್ತಮ ಹಣ ನೀಡಿ ವೇಶ್ಯಾವಾಟಿಕೆಗೆ ಮನವೊಲಿಸುತ್ತಿದ್ದರು ಎಂಬ ಬಗ್ಗೆ ಪೊಲೀಸ್ ಇನ್ಸ್‌ಪೆಕ್ಟರ್ ಮನೋಜ್ ಸುತಾರ್ ಅವರಿಗೆ ಮಾಹಿತಿ ದೊರಕಿದ್ದು, ಕೂಡಲೇ ಕಾರ್ಯಪ್ರವೃತ್ತರಾದ ಮನೋಜ್ ಸುತಾರ್ ಅವರು ಒಂದು ತಂಡವನ್ನು ರಚಿಸಿದರು. ಬುದ್ಧಿವಂತಿಕೆಯಿಂದ ವೇಶ್ಯಾವಾಟಿಕೆ ಜಾಲವನ್ನು ಭೇದಿಸಿದರು. ಆರತಿ ಮಿತ್ತಲ್ ಬಳಿಗೆ ಗಿರಾಕಿಗಳಂತೆ ಇಬ್ಬರು ಗ್ರಾಹಕರನ್ನು ಕಳುಹಿಸಿ ಹುಡುಗಿಯರನ್ನು ಕೇಳಿದರು. ಆಗ ಮಿತ್ತಲ್ ಅವರಿಗೆ 60,000 ರೂ. ಹಣವನ್ನು ಬೇಡಿಕೆ ಇಟ್ಟಿದ್ದು, ಇದಕ್ಕೆ ಒಪ್ಪಿಗೆ ಸೂಚಿಸಿ, ಡಮ್ಮಿ ಗ್ರಾಹಕರು ಹುಡುಗಿಯರ ಫೋಟೋ ಕೇಳಿದ್ದಾರೆ. ಪೊಲೀಸರ ಮಾಸ್ಟರ್ ಪ್ಲ್ಯಾನ್ ತಿಳಿಯದೆ ಆರತಿ ಮಿತ್ತಲ್ ಇಬ್ಬರು ಮಹಿಳೆಯರ ಫೋಟೋಗಳನ್ನು ಇನ್ಸ್‌ಪೆಕ್ಟರ್ ಮನೋಜ್ ಸುತಾರ್ ಅವರ ಫೋನ್‌ಗೆ ಕಳುಹಿಸಿದ್ದಾರೆ.

ಅಲ್ಲದೆ, ಮಾಡೆಲ್‌ಗಳು (models) ಜುಹು ಅಥವಾ ಗೋರೆಗಾಂವ್‌ನಲ್ಲಿರುವ ಹೋಟೆಲ್‌ಗೆ ಬರುತ್ತಾರೆ ಎಂದು ತಿಳಿಸಿದ್ದರು. ಅದರಂತೆ ಪೊಲೀಸರು ಗೋರೆಗಾಂವ್‌ನಲ್ಲಿ ಎರಡು ಕೊಠಡಿಗಳನ್ನು ಬುಕ್ ಮಾಡಿ ಇಬ್ಬರು ಡಮ್ಮಿ ಗ್ರಾಹಕರನ್ನು ಅಲ್ಲಿಗೆ ಕಳುಹಿಸಿದರು. ನಂತರ ಇಬ್ಬರು ಯುವತಿಯರೊಂದಿಗೆ ಮಿತ್ತಲ್ ಕೂಡ ಅಲ್ಲಿಗೆ ಬಂದರು. ಈ ವೇಳೆ ಸಾಮಾಜಿಕ ಸೇವಾ ವಿಭಾಗದ ಅಧಿಕಾರಿಗಳು ಹೋಟೆಲ್ ಮೇಲೆ ದಾಳಿ ನಡೆಸಿ, ಆರೋಪಿಯನ್ನು ಸೆರೆಹಿಡಿದಿದ್ದಾರೆ. ನಂತರ ಅಧಿಕಾರಿಗಳು ದಿಂಡೋಶಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಮಿತ್ತಲ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ತನಿಖೆ ವೇಳೆ ಮಿತ್ತಲ್ ತಮಗೆ ತಲಾ 15,000 ರೂಪಾಯಿ ನೀಡುತ್ತೇನೆ ಎಂದು ಪೊಲೀಸರಿಗೆ ಹೇಳಿದ್ದರು ಎಂದು ಹೇಳಲಾಗಿದೆ. ಸದ್ಯ ಈ ಎಲ್ಲಾ ಚಟುವಟಿಕೆಗಳು ಕ್ಯಾಮರಾದಲ್ಲಿ ಸೆರೆಯಾಗಿದೆ.

ಈ ಬಗ್ಗೆ ದಿಂಡೋಶಿ ಠಾಣೆಯ ಪೊಲೀಸ್ ಅಧಿಕಾರಿಯೊಬ್ಬರು ಮಾತನಾಡಿದ್ದು, “ಚಿತ್ರರಂಗದಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಮತ್ತು ಗ್ರಾಹಕರಿಂದ ಹಣ ಪಡೆದು ಮಾಡಲ್‌ಗಳನ್ನು ಸರಬರಾಜು ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಿದ್ದೇವೆ. ನಾವು ಆರತಿ ಮಿತ್ತಲ್ ವಿರುದ್ಧ ಸೆಕ್ಷನ್ 370 ಮತ್ತು ಇತರ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಹೆಣ್ಣುಮಕ್ಕಳ ಕಳ್ಳಸಾಗಣೆಗಾಗಿ ಪ್ರಕರಣ ದಾಖಲಿಸಿದ್ದೇವೆ. ಹೆಚ್ಚಿನ ತನಿಖೆಗಾಗಿ ಪ್ರಕರಣವನ್ನು ಅಪರಾಧ ವಿಭಾಗದ ಕೊಠಡಿ 11 ಕ್ರೈಂ ಬ್ರಾಂಚ್‌ಗೆ ವರ್ಗಾಯಿಸಲಾಗಿದೆ. ಇಂದು ಆರೋಪಿ ಆರತಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಈ ಮೂಲಕ ಆಕೆ ನಡೆಸುತ್ತಿದ್ದ ವೇಶ್ಯಾವಾಟಿಕೆ ದಂಧೆ ಅಂತ್ಯವಾಗಲಿದೆ” ಎಂದು ಹೇಳಿದರು.

 

View this post on Instagram

 

A post shared by Artist Aarti (@aartimittalofficial)

 

View this post on Instagram

 

A post shared by Artist Aarti (@aartimittalofficial)

ಇದನ್ನೂ ಓದಿ:  ಉಡುಪಿಗೆ ಹೆಲಿಕಾಪ್ಟರ್ ನಲ್ಲಿ ಬಂದಿಳಿದ ಮೂಟೆ ಮೂಟೆ ಹಣ

 

Leave A Reply

Your email address will not be published.